Just In
Don't Miss!
- News
ಕೇಂದ್ರ ಬಜೆಟ್ 2021:ಬೆಂಗಳೂರಿನ ನಿರೀಕ್ಷೆಗಳೇನು?
- Sports
ಟೆಸ್ಟ್ ಪದಾರ್ಪಣೆ ಹಾಗೂ ಸರಣಿ ಗೆಲುವು, ಕನಸು ನನಸಾದ ಸಂದರ್ಭ: ವಾಶಿಂಗ್ಟನ್ ಸುಂದರ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕುರಿ ಪ್ರತಾಪ್ ಗೆ 'ಬಿಗ್ ಬಾಸ್' ಕೊಡುತ್ತಿರುವ ಸಂಭಾವನೆ ಇಷ್ಟೊಂದಾ.?
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮ ಶುರುವಾಗಿ ಸರಿಯಾಗಿ ಒಂದು ವಾರ ಮುಗಿದಿದೆ. ಈ ಒಂದು ವಾರದಲ್ಲಿ 'ಬಿಗ್ ಬಾಸ್' ಮನೆ ಬಹುತೇಕ ಶಾಂತವಾಗಿತ್ತು. ಹಿರಿಯ ಪತ್ರಕರ್ತ ರವಿ ಬೆಳಗೆರೆಯಂತೂ 'ದೊಡ್ಮನೆ'ಯಲ್ಲಿ ಎಲ್ಲರ ಮನಸ್ಸು ಗೆದ್ದರು. ಮೊದಲ ವಾರ ರವಿ ಬೆಳಗೆರೆ ಮೇಲೆ ಫೋಕಸ್ ತುಸು ಹೆಚ್ಚೇ ಇತ್ತು. ಇದೀಗ 'ಬಿಗ್ ಬಾಸ್' ಮನೆಯಿಂದ ರವಿ ಬೆಳಗೆರೆ ಹೊರಗೆ ಬಂದಿದ್ದಾರೆ. ಫೋಕಸ್ ಎಲ್ಲರ ಮೇಲೂ ಶಿಫ್ಟ್ ಆಗುವ ಈ ಹೊತ್ತಲ್ಲಿ ವೀಕ್ಷಕರಿಗೆ ಕುರಿ ಪ್ರತಾಪ್ ಮೇಲೆ ನಿರೀಕ್ಷೆಯ ಮೂಟೆಯೇ ಇದೆ.
ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಕುರಿ ಪ್ರತಾಪ್ ಹೋಗಬೇಕು ಎಂಬುದು ವೀಕ್ಷಕರ ಹೆಬ್ಬಯಕೆ ಆಗಿತ್ತು. 'ಕುರಿಗಳು ಸಾರ್..' ಮತ್ತು 'ಮಜಾ ಟಾಕೀಸ್' ಕಾರ್ಯಕ್ರಮಗಳಿಂದ ಕಿರುತೆರೆ ವೀಕ್ಷಕರ ಮನೆಮಾತಾಗಿದ್ದ ಕುರಿ ಪ್ರತಾಪ್ 'ಬಿಗ್ ಬಾಸ್' ಮನೆಯೊಳಗೆ ಹೋದರೆ ಮನರಂಜನೆ ಗ್ಯಾರೆಂಟಿ ಅಂತಲೇ ನೋಡುಗರು ಭಾವಿಸಿದ್ದರು.
ವೀಕ್ಷಕರ ಒತ್ತಾಯದ ಮೇರೆಗೆ ಕುರಿ ಪ್ರತಾಪ್ 'ಬಿಗ್ ಬಾಸ್ ಕನ್ನಡ-7'ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಒಂದು ವಾರದಲ್ಲಿ ನಿರೀಕ್ಷೆ ಮಟ್ಟ ತಲುಪಿಲ್ಲ ಅಂದ್ರೂ, ಕುರಿ ಪ್ರತಾಪ್ ಸಾಧ್ಯವಾದಷ್ಟು ಮನರಂಜನೆ ಕೊಟ್ಟಿದ್ದಾರೆ.
ಡಿಮ್ಯಾಂಡ್ ಜಾಸ್ತಿ ಇದ್ದಿದ್ರಿಂದ 'ಬಿಗ್ ಬಾಸ್' ಮನೆಯೊಳಗೆ ಬಂದ ಕುರಿ ಪ್ರತಾಪ್ ಗೆ 'ಬಿಗ್ ಬಾಸ್' ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಕುರಿ ಪ್ರತಾಪ್ ಸಂಭಾವನೆ ಎಷ್ಟು.?
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಪಡೆಯುತ್ತಿರುವ ಸಂಭಾವನೆ 25 ಸಾವಿರ ರೂಪಾಯಿ. ಅದು ದಿನವೊಂದಕ್ಕೆ. ಹಾಗಂತ ಮೂಲಗಳು ತಿಳಿಸಿವೆ.
ಬಿಗ್ ಬಾಸ್ ಮನೆಗೆ 'ಈ ವ್ಯಕ್ತಿ' ಹೋಗಲೇಬೇಕು ಅಂತಿದ್ದಾರೆ ವೀಕ್ಷಕರು!

ಲಕ್ಷಾಧಿಪತಿ ಗ್ಯಾರೆಂಟಿ
ದಿನಕ್ಕೆ 25 ಸಾವಿರ ಸಿಗುವುದು ಖಚಿತವೇ ಆಗಿದ್ದರೆ, 'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮ ಗೆಲ್ಲದೇ ಹೋದರೂ, ನೂರು ದಿನಗಳ ಕಾಲ 'ದೊಡ್ಮನೆ'ಯೊಳಗೆ ಬಂಧಿಯಾಗಿದ್ದರೆ ಕುರಿ ಪ್ರತಾಪ್ ಲಕ್ಷಾಧಿಪತಿ ಆಗುವುದು ಖಚಿತ.
'ಬಿಗ್ ಬಾಸ್ 7'ನಲ್ಲಿ ಕನ್ನಡದ ಈ ಹಾಸ್ಯ ನಟ ಸ್ಪರ್ಧಿಯಾಗುವುದು ಪಕ್ಕಾ

ಸಂಭಾವನೆ ಅಂದ್ರೆ ದುಡ್ಡು ಅಷ್ಟೇ ಅಲ್ಲ.!
'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕೆಲ ಸ್ಪರ್ಧಿಗಳು ದುಡ್ಡಿಗಾಗಿ ಕಾಂಟ್ರ್ಯಾಕ್ಟ್ ಗೆ ಸಹಿ ಹಾಕಿದರೆ, ಹಲವರು ಕಲರ್ಸ್ ಕುಟುಂಬದ ಬೇರೆ ಶೋಗಳಲ್ಲಿ ಭಾಗವಹಿಸಲು ಕಮ್ಮಿಟ್ ಆಗುತ್ತಾರೆ. ಹೀಗಾಗಿ ಕುರಿ ಪ್ರತಾಪ್ ಸಂಭಾವನೆಯನ್ನ ಡಿಮ್ಯಾಂಡ್ ಮಾಡಿದ್ದಾರೋ, ಇಲ್ಲ ಬೇರೆ ಶೋ ಒಪ್ಪಿಕೊಂಡಿದ್ದಾರೋ ಎಂಬುದಕ್ಕೆ ಸದ್ಯ ಸ್ಪಷ್ಟನೆ ಸಿಕ್ಕಿಲ್ಲ.
ಅರೆಸ್ಟ್ ಆಗಿದ್ದು ಡಿಕೆಶಿ, ಆದ್ರೆ ಪರದಾಡಿದ್ದು ಮಾತ್ರ ಕುರಿ ಪ್ರತಾಪ್

ಕುರಿ ಇನ್ನೂ ಕಮಾಲ್ ಮಾಡಿಲ್ಲ
ಪಂಚಿಂಗ್ ಡೈಲಾಗ್ ಹೊಡೆಯುವುದರಲ್ಲಿ ನಿಸ್ಸೀಮನಾಗಿರುವ ಕುರಿ ಪ್ರತಾಪ್ 'ಬಿಗ್ ಬಾಸ್' ಶೋನಲ್ಲಿ ಮೊದಲ ವಾರ ಅಷ್ಟೇನು ಕಮಾಲ್ ಮಾಡಲಿಲ್ಲ. ಇನ್ನಾದರೂ ಕುರಿ ಪ್ರತಾಪ್ ಎಚ್ಚೆತ್ತುಕೊಂಡರೆ ಅವರ ಅಭಿಮಾನಿಗಳಿಗೇ ಖುಷಿ.
ಚಿತ್ರಕೃಪೆ: ಕಲರ್ಸ್ ಕನ್ನಡ/ವೂಟ್