For Quick Alerts
  ALLOW NOTIFICATIONS  
  For Daily Alerts

  ಒಂದು ವಾರ 'ಬಿಗ್ ಬಾಸ್' ಮನೆಯಲ್ಲಿದ್ದ ರವಿ ಬೆಳಗೆರೆಗೆ ಸಿಕ್ಕ ಸಂಭಾವನೆ ಎಷ್ಟು.?

  |

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದ ಮೊದಲ ವಾರ ಅತಿ ದೊಡ್ಡ ಹೈಲೈಟ್ ಆಗಿದ್ದವರು ಹಿರಿಯ ಪತ್ರಕರ್ತ, 'ಹಾಯ್ ಬೆಂಗಳೂರು' ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳಗೆರೆ. 'ಒಂಟಿ ಮನೆ'ಯೊಳಗೆ ಇದ್ದಷ್ಟು ದಿನ ಸಂಚಿಕೆಯ ಕಂಟೆಂಟ್ ವಿಷಯದಲ್ಲಿ ಕಿಂಗ್ ಆಗಿದ್ದ ರವಿ ಬೆಳಗೆರೆ ಅನಾರೋಗ್ಯದ ಕಾರಣದಿಂದ ಒಂದೇ ವಾರಕ್ಕೆ ಶೋದಿಂದ ನಿರ್ಗಮಿಸಿದರು.

  ಒಂದು ವಾರ ಪೇಪರ್ ಇಲ್ಲದೆ, ಏನ್ನನ್ನೂ ಬರೆಯದೆ ಕಾಲ ಕಳೆಯುವುದೇ ರವಿ ಬೆಳಗೆರೆ ಅವರಿಗೆ ದೊಡ್ಡ ಟಾಸ್ಕ್ ಆಗಿತ್ತು. ಏಳು ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿ ಇರಲು ರವಿ ಬೆಳಗೆರೆ ದೊಡ್ಡ ಅಮೌಂಟ್ ಚಾರ್ಜ್ ಮಾಡಿದ್ದಾರಂತೆ. ಒಂದುವರೆ ಲಕ್ಷಕ್ಕೂ ಹೆಚ್ಚು ರೂಪಾಯಿಗಳನ್ನ ರವಿ ಬೆಳಗೆರೆ ಅವರಿಗೆ 'ಬಿಗ್ ಬಾಸ್' ನೀಡಿದ್ದಾರಂತೆ ಎಂಬ ಅಂತೆ-ಕಂತೆ ಕೇಳಿಬಂದಿತ್ತು.

  ಆದರೆ ಇದು ಸುಳ್ಳು ಅಂತಾರೆ ರವಿ ಬೆಳಗೆರೆ. 'ಬಿಗ್ ಬಾಸ್' ಮನೆಯೊಳಗೆ ಹೋಗಲು ರವಿ ಬೆಳಗೆರೆ ಸಂಭಾವನೆ ಪಡೆದಿಲ್ಲ. ಹಾಗಂತ ಖುದ್ದು ರವಿ ಬೆಳಗೆರೆ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ಸಂಭಾವನೆ ಕೇಳಲಿಲ್ಲ.!

  ಸಂಭಾವನೆ ಕೇಳಲಿಲ್ಲ.!

  ''ನನಗೆ ಸಂಭಾವನೆ ಕೊಡಲಿಲ್ಲ. ನಾನೂ ಕೇಳಲಿಲ್ಲ. ಪರಮೇಶ್ವರ್ ಗುಂಡ್ಕಲ್ ನನಗೆ ಒಳ್ಳೆಯ ಸ್ನೇಹಿತ. 'ಬಿಗ್ ಬಾಸ್' ಮೂಲಕ ಕರ್ನಾಟಕದ ಜನತೆಗೆ ನನ್ನ ಇನ್ನೊಂದು ಮುಖ ಪರಿಚಯ ಆಗುತ್ತೆ ಎಂಬ ಕಾರಣಕ್ಕೆ ನಾನು ದುಡ್ಡು ಕೇಳಲಿಲ್ಲ. ನನ್ನ ಬಳಿಯೇ ಸಾಕಷ್ಟು ದುಡ್ಡು ಇದೆ'' ಎಂದು ಸಂದರ್ಶನವೊಂದರಲ್ಲಿ ರವಿ ಬೆಳಗೆರೆ ಹೇಳಿಕೊಂಡಿದ್ದಾರೆ.

  ಕಣ್ಣೀರಿಡುತ್ತ 'ಬಿಗ್ ಬಾಸ್' ಮನೆಯಿಂದ ಹೊರಬಂದ ರವಿ ಬೆಳಗೆರೆಕಣ್ಣೀರಿಡುತ್ತ 'ಬಿಗ್ ಬಾಸ್' ಮನೆಯಿಂದ ಹೊರಬಂದ ರವಿ ಬೆಳಗೆರೆ

  ಕಮ್ಮಿಟ್ ಆಗಿದ್ದು ಒಂದು ವಾರಕ್ಕೆ ಮಾತ್ರ.!

  ಕಮ್ಮಿಟ್ ಆಗಿದ್ದು ಒಂದು ವಾರಕ್ಕೆ ಮಾತ್ರ.!

  ಪತ್ರಿಕೆ, ಶಾಲೆ ಮತ್ತು ಪುಸ್ತಕ ಬರೆಯುತ್ತಿರುವ ರವಿ ಬೆಳಗೆರೆಗೆ ಅದನ್ನೆಲ್ಲ ಬಿಟ್ಟು 'ಬಿಗ್ ಬಾಸ್' ಮನೆಯೊಳಗೆ ನೂರು ದಿನ ಇರುವುದು ಕಷ್ಟಸಾಧ್ಯ. ಹೀಗಾಗಿ ಹೋಗುವಾಗಲೇ ಒಂದೇ ವಾರ ಮಾತ್ರ ಇರೋದು ಅಂತ ರವಿ ಬೆಳಗೆರೆ ಹೇಳಿದ್ರಂತೆ. ಒಂದು ವಾರಕ್ಕೆ ಮಾತ್ರ 'ಬಿಗ್ ಬಾಸ್'ಗೆ ರವಿ ಬೆಳಗೆರೆ ಕಮಿಟ್ ಆಗಿದ್ರಂತೆ.

  ಒಂದು ವಾರದ 'ಬಿಗ್ ಬಾಸ್': ರವಿ ಬೆಳಗೆರೆ ಕಿಂಗ್, ಮಿಕ್ಕವರೆಲ್ಲ ಠುಸ್.!ಒಂದು ವಾರದ 'ಬಿಗ್ ಬಾಸ್': ರವಿ ಬೆಳಗೆರೆ ಕಿಂಗ್, ಮಿಕ್ಕವರೆಲ್ಲ ಠುಸ್.!

  ಹಾಗಿದ್ರೆ, ಸ್ಪರ್ಧಿ ಅಂತ ತೋರಿಸಿದ್ದು ಯಾಕೆ.?

  ಹಾಗಿದ್ರೆ, ಸ್ಪರ್ಧಿ ಅಂತ ತೋರಿಸಿದ್ದು ಯಾಕೆ.?

  ಒಂದು ವಾರಕ್ಕೆ ಮಾತ್ರ ಕಮಿಟ್ ಆಗಿದ್ದ ರವಿ ಬೆಳಗೆರೆರವರನ್ನ 'ಬಿಗ್ ಬಾಸ್' ಮೊದಲು ಸ್ಪರ್ಧಿ ಅಂತ ಯಾಕೆ ಪರಿಚಯ ಮಾಡಿದ್ದರು ಎಂಬುದು ಸದ್ಯ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ.

  380 ರೂಪಾಯಿಯನ್ನ ಇಟ್ಟುಕೊಂಡು ಬೆಂಗಳೂರಿಗೆ ಬಂದ ರವಿ ಬೆಳಗೆರೆ ಇಂದು ಕೋಟ್ಯಧೀಶ್ವರ.!380 ರೂಪಾಯಿಯನ್ನ ಇಟ್ಟುಕೊಂಡು ಬೆಂಗಳೂರಿಗೆ ಬಂದ ರವಿ ಬೆಳಗೆರೆ ಇಂದು ಕೋಟ್ಯಧೀಶ್ವರ.!

  ವೈಲ್ಡ್ ಕಾರ್ಡ್ ಎಂಟ್ರಿಕೊಡ್ತಾರಾ ರವಿ ಬೆಳಗೆರೆ.?

  ವೈಲ್ಡ್ ಕಾರ್ಡ್ ಎಂಟ್ರಿಕೊಡ್ತಾರಾ ರವಿ ಬೆಳಗೆರೆ.?

  ಇದೀಗಷ್ಟೇ 'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದಿರುವ ರವಿ ಬೆಳಗೆರೆ ವೈಲ್ಡ್ ಕಾರ್ಡ್ ಎಂಟ್ರಿ ಬಗ್ಗೆ ಅಷ್ಟು ಗಮನ ಕೊಟ್ಟಿಲ್ಲ. ಮುಂದೊಂದು ದಿನ ರವಿ ಬೆಳಗೆರೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟರೂ ಆಶ್ಚರ್ಯ ಪಡಬೇಕಿಲ್ಲ.

  English summary
  Bigg Boss Kannada 7: Ravi Belagere reveals about his remuneration in Bigg Boss.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X