For Quick Alerts
  ALLOW NOTIFICATIONS  
  For Daily Alerts

  ವಯಸ್ಕರ ಚಿತ್ರದಲ್ಲಿ ಪೃಥ್ವಿ ನಟಿಸಿದ್ದ ರಹಸ್ಯ 'ಬಿಗ್ ಬಾಸ್' ಮನೆಯಲ್ಲಿ ಬಯಲು.!

  |

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಮೂರು ವಾರಗಳು ಕಳೆದ ಮೇಲೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟವರು ರೇಡಿಯೋ ಜಾಕಿ ಪೃಥ್ವಿ. ''ಮೆನ್ಸ್ ಫ್ಯಾಶನ್ ಅಂದ್ರೆ ನನಗೆ ಸಿಕ್ಕಾಪಟ್ಟೆ ಬೋರು'' ಅಂತ ಹೇಳ್ತಾ 'ನೈಟಿ' ತರಹದ ಬಟ್ಟೆ (ಕಫ್ತಾನ್) ಧರಿಸಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟವರು ಪೃಥ್ವಿ.

  ಫೀವರ್ 104 ಎಫ್.ಎಂ ನಲ್ಲಿ 'ಮ್ಯಾಡ್ ಮಾರ್ನಿಂಗ್ಸ್' ಕಾರ್ಯಕ್ರಮ ನಡೆಸಿಕೊಡುವ ಪೃಥ್ವಿ ರೇಡಿಯೋ ಜಾಕಿ ಆಗಿ ನಿಮಗೆ ಪರಿಚಯ ಇರಬಹುದು. ಅದನ್ನ ಹೊರತು ಪಡಿಸಿದರೆ ಪೃಥ್ವಿ ಓರ್ವ ನಟ ಕೂಡ ಹೌದು.

  ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ... ರೇಡಿಯೋ ಜಾಕಿ, ಟೆನ್ನಿಸ್ ಪ್ಲೇಯರ್ ಮತ್ತು ಸರ್ಟಿಫೈಡ್ ಪೈಲಟ್ ಆಗಿರುವ ಪೃಥ್ವಿ ನಟ ಕೂಡ. ಕನ್ನಡದ ಮೂರು ಸಿನಿಮಾಗಳಲ್ಲಿ ಪೃಥ್ವಿ ಅಭಿನಯಿಸಿದ್ದಾರೆ. ವಯಸ್ಕರ ಚಿತ್ರವೊಂದರಲ್ಲೂ ಪೃಥ್ವಿ ಕಾಣಿಸಿಕೊಂಡಿದ್ದಾರೆ ಅನ್ನೋದು ನಿಮ್ಮ ಗಮನದಲ್ಲಿರಲಿ. ಮುಂದೆ ಓದಿರಿ...

  ಯಾರೀ ಪೃಥ್ವಿ.?

  ಯಾರೀ ಪೃಥ್ವಿ.?

  ಫೀವರ್ 104 ಎಫ್.ಎಂ ನಲ್ಲಿ ಪೃಥ್ವಿ ರೇಡಿಯೋ ಜಾಕಿ. ಈವೆಂಟ್ ಗಳಲ್ಲಿ ಪೃಥ್ವಿ ಆಂಕರಿಂಗ್ ಮಾಡ್ತಾರೆ. ಇವರಿಗೆ ಟೆನ್ನಿಸ್ ಅಂದ್ರೆ ಪಂಚಪ್ರಾಣ. 18 ವರ್ಷಗಳ ಕಾಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಟೆನ್ನಿಸ್ ಪಂದ್ಯಗಳನ್ನು ಪೃಥ್ವಿ ಆಡಿದ್ದಾರೆ. ಪೈಲಟ್ ಟ್ರೇನಿಂಗ್ ಪಡೆದುಕೊಂಡು ಸರ್ಟಿಫೈಡ್ ಪೈಲಟ್ ಕೂಡ ಆಗಿದ್ದಾರೆ. ಕನ್ನಡದ ಮೂರು ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಇಷ್ಟೆಲ್ಲ ಮಾಡಿರುವ ಪೃಥ್ವಿ ಸದ್ಯಕ್ಕೆ 'ಬಿಗ್ ಬಾಸ್ ಕನ್ನಡ 7' ಸ್ಪರ್ಧಿ.

  ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಆರ್ ಜೆ ಪೃಥ್ವಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳುವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಆರ್ ಜೆ ಪೃಥ್ವಿ ಬಗ್ಗೆ ನಿಮಗೆ ಗೊತ್ತಿರದ ಸಂಗತಿಗಳು

  ಎರಡು ಮದುವೆ, ಸದ್ಯಕ್ಕೆ ಸಿಂಗಲ್.!

  ಎರಡು ಮದುವೆ, ಸದ್ಯಕ್ಕೆ ಸಿಂಗಲ್.!

  42 ವರ್ಷ ವಯಸ್ಸಿನ ಪೃಥ್ವಿಗೆ ಈಗಾಗಲೇ ಎರಡು ಮದುವೆ ಆಗಿದೆ. ಆ ಎರಡೂ ಮದುವೆ ಮುರಿದು ಬಿದ್ದಿದ್ದು ಸದ್ಯಕ್ಕೆ ಪೃಥ್ವಿ ರವರ ರಿಲೇಶನ್ ಶಿಪ್ ಸ್ಟೇಟಸ್ ಸಿಂಗಲ್. ಪೃಥ್ವಿಗೆ ಮಕ್ಕಳು ಇದ್ದಾರಾ ಅಂತ ನೀವು ಕೇಳ್ಬಹುದು. ಆ ಪ್ರಶ್ನೆಗೆ ಉತ್ತರ 'ಇಲ್ಲ'. ಎರಡೂ ಬಾರಿ ಲವ್ ಮ್ಯಾರೇಜ್ ಮಾಡಿಕೊಂಡ ಪೃಥ್ವಿಗೆ ಮಕ್ಕಳಿಲ್ಲ. ಮಕ್ಕಳು ಬೇಡ ಎಂಬುದು ಪೃಥ್ವಿ ರವರ ನಿರ್ಧಾರವಂತೆ.!

  ವಯಸ್ಕರ ಚಿತ್ರದಲ್ಲಿ ಪೃಥ್ವಿ ನಟನೆ

  ವಯಸ್ಕರ ಚಿತ್ರದಲ್ಲಿ ಪೃಥ್ವಿ ನಟನೆ

  ರಾಜೇಶ್ ಮೂರ್ತಿ ನಿರ್ದೇಶನ ಮಾಡಿರುವ ಮೂರು ಚಿತ್ರಗಳಲ್ಲಿ ಪೃಥ್ವಿ ನಟಿಸಿದ್ದಾರೆ. 'ಮನಿ ಹನಿ ಶನಿ', 'ರೆಡ್' ಮತ್ತು 'ಬ್ಲೂ ಐಸ್' ಚಿತ್ರಗಳಲ್ಲಿ ಪೃಥ್ವಿ ಅಭಿನಯಿಸಿದ್ದಾರೆ. ಅಸಲಿಗೆ 'ಬ್ಲೂ ಐಸ್' ಎಂಬುದು ವಯಸ್ಕರ ಚಿತ್ರ. ಈ ಚಿತ್ರದ ಟ್ರೈಲರ್ ಗೆ ಯೂಟ್ಯೂಬ್ ನಲ್ಲಿ 2 ಮಿಲಿಯನ್ ಗೂ ಅಧಿಕ ವ್ಯೂಸ್ ಲಭಿಸಿದೆ.

  ಪುರುಷರ ಫ್ಯಾಶನ್ ಅಂದ್ರೆ ಅಲರ್ಜಿ

  ಪುರುಷರ ಫ್ಯಾಶನ್ ಅಂದ್ರೆ ಅಲರ್ಜಿ

  ಪೃಥ್ವಿಗೆ ಪುರುಷರ ಫ್ಯಾಶನ್ ಅಂದ್ರೆ ಅಲರ್ಜಿ. ಚಡ್ಡಿ, ಟಿ-ಶರ್ಟ್, ಶರ್ಟ್, ಪ್ಯಾಂಟ್ ಮಾತ್ರ ಧರಿಸುವ ಪೃಥ್ವಿಗೆ ಜೀನ್ಸ್ ಪ್ಯಾಂಟ್ ಅಂದ್ರೆ ಆಗಲ್ಲ. ಹೀಗಾಗಿ, ಅವರ ಬಳಿ ಒಂದೂ ಜೀನ್ಸ್ ಇಟ್ಟುಕೊಂಡಿಲ್ಲವಂತೆ. ಕಫ್ತಾನ್ ಸೇರಿದಂತೆ ಮಹಿಳೆಯರ ಉಡುಪು ಧರಿಸುವ ಪೃಥ್ವಿ ಮೂಗು ಚುಚ್ಚಿಸಿಕೊಂಡಿರುವುದು ಮತ್ತೊಂದು ವಿಶೇಷ.

  English summary
  Bigg Boss Kannada 7: Wild Card Contestant RJ Pruthvi has acted in Kannada Adult Movie Blue eyes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X