For Quick Alerts
  ALLOW NOTIFICATIONS  
  For Daily Alerts

  ಎರಡನೇ ವಾರ 'ಬಿಗ್ ಬಾಸ್' ಮನೆಯಿಂದ ಹೊರಬಂದ ಚೈತ್ರ ವಾಸುದೇವನ್

  |
  Bigg Boss kannada 7 : Chaitra Vasudevan gets evicted after 2 weeks | FILMIBEAT KANNADA

  ಬಿಗ್ ಬಾಸ್ ಕನ್ನಡ ಸೀಸನ್ 7ರ ಮೂರನೇ ಸ್ಪರ್ಧಿ ಹೊರ ಬಂದಿದ್ದಾರೆ. ಗುರುಲಿಂಗ ಸ್ವಾಮೀಜಿ, ರವಿ ಬೆಳಗೆರೆ (ಅತಿಥಿ ಸ್ಪರ್ಥಿ) ನಂತರ ಚೈತ್ರ ವಾಸುದೇವನ್ ಮನೆಯಿಂದ ಆಚೆ ಬಂದಿದ್ದಾರೆ.

  ಎರಡನೇ ವಾರ ಚಂದನ್, ಚೈತ್ರ ಕೊಟ್ಟೂರು, ಚೈತ್ರ ವಾಸುದೇವನ್, ಸುಜಾತಾ, ದೀಪಿಕಾ ದಾಸ್ ನಾಮಿನೇಟ್ ಆಗಿದ್ದರು. ವಾರದ ಕ್ಯಾಪ್ಟನ್ ಆಗಿದ್ದ ದುನಿಯಾ ರಶ್ಮಿ ನೇರವಾಗಿ ನಾಮಿನೇಟ್ ಮಾಡಿದ ಕಾರಣ ಪ್ರಿಯಾಂಕಾ ಕೂಡ ಲಿಸ್ಟ್ ಗೆ ಸೇರಿಕೊಂಡಿದ್ದರು.

  ಚಂದನ್ ಆಚಾರ್ ಗೆ ಡೀಸೆನ್ಸಿ ಪಾಠ ಮಾಡಿದ 'ಪೈಲ್ವಾನ್' ಸುದೀಪ್ಚಂದನ್ ಆಚಾರ್ ಗೆ ಡೀಸೆನ್ಸಿ ಪಾಠ ಮಾಡಿದ 'ಪೈಲ್ವಾನ್' ಸುದೀಪ್

  ಈ ಆರು ಜನರ ಪೈಕಿ ಚೈತ್ರ ವಾಸುದೇವನ್ ಎಲಿಮಿನೇಷನ್ ಆಗಿದ್ದಾರೆ. ಚೈತ್ರ ವಾಸುದೇವನ್ ಗೆ ಅತಿ ಕಡಿಮೆ ಮತಗಳು ಬಿದ್ದಿವೆ ಎಂದು ಕಾರಣ ನೀಡಿದ ಮನೆಯಿಂದ ಗೇಟ್ ಪಾಸ್ ನೀಡಲಾಗಿದೆ.

  ಶನಿವಾರ 4 ಸ್ಪರ್ಧಿಗಳು ಸೇಫ್ ಎಂದು ಘೋಷಣೆ ಮಾಡಿದ್ದ ಸುದೀಪ್, ಚಂದನ್ ಹಾಗೂ ಚೈತ್ರ ವಾಸುದೇವನ್ ಇಬ್ಬರ ಹೆಸರನ್ನು ಹಾಗೆ ಉಳಿಸಿಕೊಂಡಿದ್ದರು. ಭಾನುವಾರ ಈ ಇಬ್ಬರಲ್ಲಿ ಚಂದನ್ ಸೇಫ್ ಆಗಿದ್ದು, ಚೈತ್ರ ವಾಸುದೇವನ್ ಔಟ್ ಆದರು.

  ತಪ್ಪಿನ ಅರಿವಾದ ಮೇಲೆ ಸುದೀಪ್ ಮುಂದೆ ಚೈತ್ರಗೆ ಕ್ಷಮೆ ಕೇಳಿದ ಸುಜಾತ.!ತಪ್ಪಿನ ಅರಿವಾದ ಮೇಲೆ ಸುದೀಪ್ ಮುಂದೆ ಚೈತ್ರಗೆ ಕ್ಷಮೆ ಕೇಳಿದ ಸುಜಾತ.!

  ಚೈತ್ರ ವಾಸುದೇವನ್ ಬಗ್ಗೆ

  ಚೈತ್ರ ವಾಸುದೇವನ್ ಈಗಾಗಲೇ ಅನೇಕ ವಾಹಿನಿಗಳ ಮನರಂಜನೆ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಸದ್ಯ, 'ಕಲರ್ಸ್ ಕನ್ನಡ ಸಿನಿಮಾ' ವಾಹಿನಿಯ 'ಒಂದು ಸಿನಿಮಾ ಕತೆ' ಕಾರ್ಯಕ್ರಮವನ್ನು ಚೈತ್ರ ವಾಸುದೇವನ್ ನಿರೂಪಣೆ ಮಾಡುತ್ತಿದ್ದಾರೆ. ಜೀ ಕನ್ನಡ, ಕಲರ್ಸ್ ವಾಹಿನಿ, ಉದಯ ಟಿವಿ ವಾಹಿನಿಗಳಲ್ಲಿ ಚೈತ್ರ ವಾಸುದೇವನ್ ಕೆಲಸ ಮಾಡಿದ್ದಾರೆ. ಕೆಪಿಎಲ್ ಹಾಗೂ ಕೆಸಿಸಿ ಕ್ರಿಕೆಟ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದೀಗ ಈ ನಿರೂಪಕಿ ಬಿಗ್ ಬಾಸ್ ಮನೆಗೂ ಹೋಗಿ ಬಂದಿದ್ದಾರೆ.

  English summary
  Bigg Boss Kannada 7: Week 2: Chaitra Vasudevan eliminated.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X