For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಧನುಶ್ರೀ ಯಾರು, ಹಿನ್ನೆಲೆ ಏನು?

  |

  ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯಲ್ಲಿ ಮೊದಲನೇ ಸ್ಪರ್ಧಿಯಾಗಿ ಟಿಕ್ ಟಾಕ್ ಸುಂದರಿ ಧನುಶ್ರೀ ಪ್ರವೇಶವಾಗಿದೆ. ಈ ಸಲ ದೊಡ್ಮನೆಯಲ್ಲಿ ಟಿಕ್‌ಟಾಕ್ ವಿಭಾಗದಲ್ಲಿ ಗುರುತಿಸಿಕೊಂಡಿದ್ದ ಹಲವರು ಹೆಸರು ಚರ್ಚೆಯಾಗಿತ್ತು. ಆದರೆ, ಧನುಶ್ರೀ ಕುರಿತು ಯಾರು ಪ್ರಸ್ತಾಪಿಸಿರಲಿಲ್ಲ.

  ಧನುಶ್ರೀ ಬಿಗ್ ಮನೆಗೆ ಹೋಗಲಿದ್ದಾರೆ ಎಂದು ಈ ಮೊದಲೇ 'ಫಿಲ್ಮಿಬೀಟ್ ಕನ್ನಡ' ಬ್ರೇಕ್ ಮಾಡಿತ್ತು. ಫಿಲ್ಮಿಬೀಟ್ ತಿಳಿಸಿದಂತೆ ಧನುಶ್ರೀ ಮೊದಲ ಸ್ಪರ್ಧಿಯಾಗಿ ಬಲಗಾಲಿಟ್ಟು ದೊಡ್ಮನೆ ಪ್ರವೇಶ ಮಾಡಿದ್ದಾರೆ. ಅಂದ್ಹಾಗೆ, ಧನುಶ್ರೀ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಟಿಕ್‌ಟಾಕ್ ಕ್ಷೇತ್ರದಲ್ಲಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ, ಧನುಶ್ರೀ ಯಾವ ಊರಿನ ಹುಡುಗಿ? ಅವರ ಹಿನ್ನೆಲೆ ಏನು?

  ಹಾಸನ ಹುಡುಗಿ ಧನುಶ್ರೀ

  ಹಾಸನ ಹುಡುಗಿ ಧನುಶ್ರೀ

  ಧನುಶ್ರೀ ಮೂಲತಃ ಹಾಸನ ಜಿಲ್ಲೆಯವರು. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 20 ವರ್ಷದ ಧನುಶ್ರೀ ಮಂಗಳೂರಿನಲ್ಲಿ ಶಿಕ್ಷಣ ಪಡೆದುಕೊಂಡಿದ್ದರು. 5.4 ಅಡಿ ಎತ್ತರವಿದ್ದು, ಒಬ್ಬ ಸಹೋದರ ಇದ್ದಾರೆ.

  ಸಂಜೆ 6 ಗಂಟೆಗೆ ಬಿಗ್ ಬಾಸ್-8 ಆರಂಭ: 17 ಸ್ಪರ್ಧಿಗಳು ಯಾರು?

  ಟಿಕ್‌ಟಾಕ್ ಏಂಜಲ್

  ಟಿಕ್‌ಟಾಕ್ ಏಂಜಲ್

  ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಫೇಮಸ್ ಆಗಿರುವ ಧನುಶ್ರೀ ಟಿಕ್ ಟಾಕ್ ಫಾಲೋವರ್ಸ್ ಪಾಲಿಗೆ ದೇವತೆ, ಏಂಜಲ್ ಎನಿಸಿಕೊಂಡಿದ್ದಾರೆ. ಧನುಶ್ರೀ ಅವರ ಪ್ರತಿಯೊಂದು ಟಿಕ್ ಟಾಕ್ ವಿಡಿಯೋ ಸಹ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದೆ. ಈ ಸಲ ಬಿಗ್ ಮನೆಗೆ ಧನುಶ್ರೀ 'ಗ್ಲಾಮರ್ ಕ್ವೀನ್' ಎನಿಸಿಕೊಳ್ಳಲಿದ್ದಾರೆ.

  ಹೆಚ್ಚು ಫಾಲೋವರ್ಸ್ ಹೊಂದಿರುವ ಪ್ರತಿಭೆ

  ಹೆಚ್ಚು ಫಾಲೋವರ್ಸ್ ಹೊಂದಿರುವ ಪ್ರತಿಭೆ

  ಧನುಶ್ರೀ ಭಾರತೀಯ ಟಿಕ್‌ಟಾಕ್ ಸ್ಟಾರ್. ಡ್ಯಾನ್ಸರ್ ಸಹ ಹೌದು. ಸಣ್ಣ ಸಣ್ಣ ವಿಡಿಯೋ ತುಣುಕುಗಳು ಹಾಗೂ ಟಿಕ್‌ಟಾಕ್ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿರುವ ಪ್ರತಿಭೆ. ಟಿಕ್‌ಟಾಕ್‌ನಲ್ಲಿ 1.2 ಮಿಲಿಯನ್ ಫಾಲೋವರ್ಸ್ ಹೊಂದಿದ್ದರು. ವಿಶೇಷ ಅಂದ್ರೆ ಟಿಕ್‌ಟಾಕ್‌ನಲ್ಲಿ 26.4 ಮಿಲಿಯನ್ ಲೈಕ್ಸ್ ಹೊಂದಿದ್ದರು.

  ಗ್ಲಾಮರ್ ಕ್ವೀನ್

  ಗ್ಲಾಮರ್ ಕ್ವೀನ್

  ಧನುಶ್ರೀ ಅವರ ಎಂಟ್ರಿಯಿಂದ ಬಿಗ್ ಬಾಸ್‌ನಲ್ಲಿ ಈ ಸಲ ಗ್ಲಾಮರ್ ಹೆಚ್ಚಾಗಲಿದೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಧನುಶ್ರೀ ಪ್ರವೇಶ ನಿಮಗೆ ಇಷ್ಟ ಆಗಿದ್ಯಾ? ನಿಮ್ಮ ಅಭಿಪ್ರಾಯ ಏನೆಂದು ಕಾಮೆಂಟ್ ಬಾಕ್ಸ್‌ನಲ್ಲಿ ಕಾಮೆಂಟ್ ಮಾಡಿ ತಿಳಿಸಿ.

  English summary
  Here is the Bigg Boss Kannada Season 8 contestant Dhanushree detailed profile, biography, photos and video. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X