For Quick Alerts
  ALLOW NOTIFICATIONS  
  For Daily Alerts

  ದೊಡ್ಮನೆ ಟಿಕೆಟ್ ಪಡೆದ 'ಹುಲಿರಾಯ' ಖ್ಯಾತಿಯ ನಟಿ ದಿವ್ಯಾ ಉರುಡುಗ

  |

  ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ರಿಯಾಲಿಟಿ ಶೋಗೆ 15ನೇ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದಾರೆ.

  ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ದಿವ್ಯಾ ಶಾಲಾದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರು. ಶಿಕ್ಷಣಕ್ಕಾಗಿ ಮಂಗಳೂರಿನಲ್ಲಿದ್ದಾಗ ಇವರಿಗೆ ಕಿರುತೆರೆಯಲ್ಲಿ ನಟಿಸಲು ಆಫರ್ ಬಂತು. ಕಿರುತೆರೆಯಲ್ಲಿ ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ, ಸೀರಿಯಲ್‌ಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು.

  2017ರ ಅತ್ಯುತ್ತಮ ಉದಯೋನ್ಮುಖ ನಟಿ ದಿವ್ಯ ಉರುಡುಗ

  ಉದಯ ಟಿವಿಯಲ್ಲಿ ಪ್ರಸಾರವಾದ 'ಸೂಪರ್ ಕಬ್ಬಡ್ಡಿ' ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು. 2017 ರಲ್ಲಿ ತೆರೆಕಂಡ ಅರವಿಂದ್ ಕೌಶಿಕ್ ನಿರ್ದೇಶನದ 'ಹುಲಿರಾಯ' ಚಿತ್ರದಿಂದ ಸಿನಿಪಯಣ ಆರಂಭಿಸಿದ ದಿವ್ಯಾ ಈ ಚಿತ್ರದ ನಟನೆಗಾಗಿ ಸೈಮಾಗೆ ನಾಮ ನಿರ್ದೇಶನಗೊಂಡಿದ್ದರು. ರಾಜಕೀಯ ಆಧಾರಿತ 'ಧ್ವಜ' ಮತ್ತು ಫೇಸ್ 2 ಪೇಸ್' ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

  2017ನೇ ಸಾಲಿನಲ್ಲಿ ಫಿಲ್ಮಿಬೀಟ್ ಕನ್ನಡ ಆಯೋಜಿಸಿದ್ದ ಪೋಲ್‌ನಲ್ಲಿ ಹುಲಿರಾಯ ಚಿತ್ರದ ನಟನೆಗಾಗಿ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ ಪಡೆದುಕೊಂಡಿದ್ದರು.

  ಅಂದ್ಹಾಗೆ, ದಿವ್ಯಾ ಅವರು ಮಲ್ಟಿಮೀಡಿಯಾ ಮತ್ತು ಆನಿಮೇಷನ್‌ ವಿಷಯದಲ್ಲಿ ಬಿಎಸ್‌ಸಿ ಮಾಡಿದ್ದಾರೆ. ಪದವಿ ಮೂರನೇ ವರ್ಷದಲ್ಲಿದ್ದಾಗ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಸಿಕ್ಕಿತ್ತು. ಅಷ್ಟರಲ್ಲಿ ಕಿರುತೆರೆಯಿಂದ ಆಫರ್ ಬಂದ ಕಾರಣ ಧಾರಾವಾಹಿ ಕಡೆ ಹೆಜ್ಜೆಯಿಟ್ಟರು.

  English summary
  Here is the Bigg Boss Kannada Season 8 contestant Divya uruduga detailed profile, biography, photos and video. Read on.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X