For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಕನ್ನಡ ಸೀಸನ್ 8; ಸ್ಪರ್ಧಿಗಳ ಕ್ವಾರಂಟೈನ್ ಗೆ ದಿನಾಂಕ ಫಿಕ್ಸ್

  |

  ಬಿಗ್ ಬಾಸ್ ಕನ್ನಡ ಸೀಸನ್ 8 ಯಾವಾಗ ಪ್ರಾರಂಭವಾಗುತ್ತೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಕಳೆದ ವರ್ಷವೇ ನಡೆಯಬೇಕಿದ್ದ ಬಿಗ್ ಬಾಸ್ ಕೊರೊನಾ ಕಾರಣದಿಂದ 2021ಕ್ಕೆ ಮುಂದೂಡಲಾಗಿದೆ. ಈಗಾಗಲೇ ಬಿಗ್ ಬಾಸ್ ಆರಂಭಕ್ಕೆ ಅದ್ದೂರಿ ತಯಾರಿ ನಡೆಯುತ್ತಿದ್ದು, ಸ್ಪರ್ಧಿಗಳ ಆಯ್ಕೆ ಕೂಡ ಫೈನಲ್ ಆಗಿದೆ.

  ಹೊಸ ನಿಯಮ ಅನುಸರಿಸಲಿಲ್ಲ ಅಂದ್ರೆ ತುಂಬಾ ಕಷ್ಟ | Filmibeat Kannada

  ಬಿಗ್ ಬಾಸ್ ಸೀಸನ್ 8 ನಡೆಸಿಕೊಡಲು ಕಿಚ್ಚ ಸುದೀಪ್ ಸಹ ಉತ್ಸುಕರಾಗಿದ್ದು, ಸದ್ಯ ಇಂಟರೆಸ್ಟಿಂಗ್ ಪ್ರೋಮೋ ಎಲ್ಲರ ಗಮನ ಸೆಳೆಯುತ್ತಿದೆ. ಬಿಗ್ ಬಾಸ್ ಯಾವಾಗ ಪ್ರಾರಂಭವಾಗಲಿದೆ ಎನ್ನುವ ಕುತೂಹಲದಿಂದ ಕಾಯುತ್ತಿದ್ದ ಕಿರುತೆರೆ ಪ್ರೇಕ್ಷಕರಿಗೆ ಫೆಬ್ರವರಿ 28ರಿಂದ ಪ್ರಾರಂಭವಾಗಲಿದೆ ಎನ್ನುವ ಮಾಹಿತಿ ಸಿಕ್ಕಿದೆ.

  ಈ ಬಾರಿಯ 'ಬಿಗ್ ಬಾಸ್' ಮನೆಯಲ್ಲಿ ಇರ್ತಾರಾ ಸುಮಂತ್ ಮತ್ತು ತರಂಗ ವಿಶ್ವ?

  ಆದರೆ ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಬಿಗ್ ಮನೆಯಲ್ಲಿ ಇರಲಿದ್ದಾರೆ ಎನ್ನುವ ಸಂಭಾವ್ಯರ ಪಟ್ಟಿ ಸಹ ಜೋರಾಗಿ ಹರಿದಾಡುತ್ತಿದೆ. ಈ ಬಾರಿ ಬಿಗ್ ಬಾಸ್ ಪ್ರಾರಂಭ ಮಾಡಲು ಕೊರೊನಾ ನಿಯಮಗಳನ್ನು ಪಾಲನೆ ಮಾಡಬೇಕು. ಕೊರೊನಾ ನಿಯಮದ ಪ್ರಕಾರ ಸ್ಪರ್ಧಿಗಳನ್ನು ಈ ಬಾರಿ ಬಿಗ್ ಮನೆಯೊಳಗೆ ಕಳುಹಿಸುವ ಮೊದಲು ಕ್ವಾರಂಟೈನ್ ಮಾಡಬೇಕು.

  ಹಾಗಾಗಿ ಈಗಾಗಲೇ ಸ್ಪರ್ಧಿಗಳ ಕ್ವಾರಂಟೈನ್ ಗೆ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿಯೊಂದು ಸ್ಪರ್ಧಿಗಳನ್ನು ಒಂದೊಂದು ಹೋಟೆಲ್ ನಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಂದಹಾಗೆ ಕ್ವಾರಂಟೈನ್ ಪ್ರಕ್ರಿಯೆ ಇದೇ ತಿಂಗಳು 17ರಿಂದ ಪ್ರಾರಂಭವಾಗುತ್ತಿದೆ. 28ರ ವರೆಗೂ ಸ್ಪರ್ಧಿಗಳು ಕ್ವಾರಂಟೈನ್ ನಲ್ಲಿ ಇರಲಿದ್ದು, 28 ರಾತ್ರಿಯಿಂದ ಬಿಗ್ ಬಾಸ್ ಮನೆ ಸೇರಿಕೊಳ್ಳಲಿದ್ದಾರೆ.

  28ರಂದು ನಡೆಯುವ ಗ್ರ್ಯಾಂಡ್ ಓಪನಿಂಗ್ ಸಮಾರಂಭದಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ತೆರೆ ಬೀಳಲಿದೆ. 29ರಿಂದ ಸ್ಪರ್ಧಿಗಳ ನಿಜವಾದ ಆಟ ಆರಂಭವಾಗಲಿದೆ.

  ಅಂದಹಾಗೆ ಈ ಬಾರಿ ಬಿಗ್ ಬಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಅನೇಕ ಕಲಾವಿದರ ಹೆಸರುಗಳು ಕೇಳಿಬರುತ್ತಿದೆ. ಬ್ರಹ್ಮಗಂಟು ಖ್ಯಾತಿಯ ನಟಿ ಗೀತಾ ಭಾರತಿ, ಸುಕೃತಾ, ತರಂಗ ವಿಶ್ವ, ರವಿಶಂಕರ್ ಗೌಡ, ಕಾಮಿಡಿ ಕಿಲಾಡಿ ನಯನಾ, ಸುಮಂತ್ ಸೈಲೇಂದ್ರ, ನಟಿ ಅನುಷಾ ಸೇರಿದಂತೆ ಸಾಕಷ್ಟು ಕಲಾವಿದರ ಹೆಸರು ಕೇಳಿಬರುತ್ತಿದೆ. ಆದರೆ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲಕ್ಕೆ ಫೆಬ್ರವರಿ 28ರಂದು ತೆರೆಬೀಳಲಿದೆ.

  English summary
  Bigg Boss season 8 Kannada: contestants quarantine period starts from february 17th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X