Don't Miss!
- News
ಫೆಬ್ರವರಿ 3ರಂದು 303 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Sports
2015ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಆಘಾತಕಾರಿ ವಿಷಯ ಬಿಚ್ಚಿಟ್ಟ ಪಾಕ್ ಮಾಜಿ ವೇಗಿ
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಘು ಗೌಡಗೆ ಬಿಗ್ ಗಿಫ್ಟ ಕೊಟ್ಟು ಮನೆಯಿಂದ ಹೊರಬಂದ ಧನುಶ್ರೀ
'ಬಿಗ್ ಬಾಸ್ ಕನ್ನಡ 8'ರಿಂದ ಮೊದಲ ಸ್ಪರ್ಧಿ ಮನೆಯಿಂದ ಹೊರಬಂದಿದ್ದಾರೆ. ಈ ಬಾರಿ ಬಿಗ್ ಬಾಸ್ ಗೆ ಮೊದಲ ಸ್ಪರ್ಧಿಯಾಗಿ ಧನುಶ್ರೀ ಮನೆಯೊಳಗೆ ಕಾಲಿಟ್ಟಿದ್ದರು. ಆದರೆ ಧನುಶ್ರೀ ಮನೆಯೊಳಗೆ ಹೋದ ವೇಗದಲ್ಲೇ ಹೊರಬಂದಿದ್ದಾರೆ.
Recommended Video
ಟಿಕ್ ಟಾಕ್ ಸ್ಟಾರ್ ಆಗಿದ್ದ ಧನುಶ್ರೀ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿದ್ದವರು. ಬಿಗ್ ಮನೆಯಲ್ಲೂ ಧನುಶ್ರೀ ಅವರಿಂದ ಸಿಕ್ಕಾಪಟ್ಟೆ ಮನರಂಜನೆ ನಿರೀಕ್ಷೆ ಮಾಡಲಾಗಿತ್ತು. ಆದರೆ ಮೊದಲ ವಾರದಲ್ಲೇ ಧನುಶ್ರೀ ಮನೆಯವರ ಮತ್ತು ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲರಾಗಿದ್ದಾರೆ.
ಬಿಗ್ಬಾಸ್
ಕನ್ನಡ
8
ರಿಂದ
ಹೊರ
ಹೋದ
ಮೊದಲ
ಸ್ಪರ್ಧಿ
ಧನುಶ್ರಿ
ಈ ಬಾರಿ ಮನೆಯಿಂದ ಧನುಶ್ರೀ ಹೊರ ಬಂದಿದ್ದಾರೆ. ನಿರ್ಮಲಾ, ರಘು ಗೌಡ ಮತ್ತು ಧನುಶ್ರೀ ಈ ವಾರ ಮನೆಯಿಂದ ಹೊರಬರಲು ನಾಮಿನೇಟ್ ಆಗಿದ್ದರು. ಕೊನೆಯದಾಗಿ ಬಿಗ್ ಮನೆಯಿಂದ ಧನುಶ್ರೀ ಹೊರಬಂದಿದ್ದಾರೆ. ಬರುವಾಗ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರವನ್ನು ಬಳಿಸಿಕೊಂಡು ಧನುಶ್ರೀ ರಘು ಗೌಡ ಅವರಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ.
ಈ ವಾರ ಬಿಗ್ ಬಾಸ್ ನಾಮಿನೇಷನ್ ನಿಂದ ರಘು ಗೌಡ ಅವರನ್ನು ಬಚಾವ್ ಮಾಡಿದ್ದಾರೆ. ಈ ಮೂಲಕ ರಘು ಗೌಡ ಈ ವಾರ ನೇಮಿನೇಷನ್ ನಿಂದ ಸೇಫ್ ಆಗಿದ್ದಾರೆ.
ಮೊದಲ ವಾರದಲ್ಲೇ ಧನುಶ್ರೀ ಕಳಪೆ ಪ್ರದರ್ಶನ ನೀಡಿ ಜೈಲು ಸೇರಿದ್ದರು. ಈ ಬಾರಿಯ ಬಿಗ್ ಬಾಸ್ ನಲ್ಲಿ ಜೈಲು ಸೇರಿದ ಮೊದಲ ಸ್ಪರ್ಧಿ ಧನುಶ್ರೀ ಆಗಿದ್ದರು. ಮೇಕಪ್ ವಿಚಾರಕ್ಕೆ ಧನುಶ್ರೀ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಮನೆಯೊಳಗೂ ಮೇಕಪ್ ವಿಚಾರವಾಗಿ ಉಳಿದ ಸ್ಪರ್ಧಿಗಳು ಕಾಲೆಳೆಯುತ್ತಿದ್ದರು. ಆದರೆ ಧನುಶ್ರೀ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ. ಸದ್ಯ ಮನೆಯಲ್ಲಿ 16 ಸ್ಪರ್ಧಿಗಳಿದ್ದು ಮುಂದಿನ ವಾರ ಯಾರು ಮನೆಯಿಂದ ಹೊರಬರಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.