For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್: ಕೈ-ಕೈ ಮಿಲಾಯಿಸಿದ ಮಹಿಳಾ ಸ್ಪರ್ಧಿಗಳು

  |

  ಬಿಗ್‌ಬಾಸ್ ಮನೆ ದಿನದಿಂದ ದಿನಕ್ಕೆ ಬಿಸಿ ಏರುತ್ತಿದೆ. ಮೊದಲ ಎರಡು ದಿನ ಹಾಸ್ಯ-ನಗು ತುಂಬಿಕೊಂಡಿದ್ದ ಮನೆಯಲ್ಲಿ ಸಣ್ಣದಾಗಿ ಮನಸ್ತಾಪ, ಕೋಪ, ದೂರು, ಜಗಳಗಳು ಏಳುತ್ತಿವೆ.

  ನಿನ್ನೆಯ (ಬುಧವಾರ) ಎಪಿಸೋಡ್‌ನಲ್ಲಿ ಪ್ರಶಾಂತ್ ಸಂಬರ್ಗಿ ಹಾಗೂ ಬ್ರೋ ಗೌಡನ ನಡುವೆ ಈಗಾಗಲೇ ಜಗಳವಾಗಿದ್ದನ್ನು ಪ್ರೇಕ್ಷಕರು ನೋಡಿದ್ದಾರೆ. ಗುರುವಾರದ ರಾತ್ರಿಯ ಎಪಿಸೋಡ್‌ನಲ್ಲಿ ಇನ್ನೂ ಭಾರಿ ದೊಡ್ಡ ಜಗಳವೇ ನಡೆಯಲಿದೆ.

  ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?

  ಹೌದು, ಇಬ್ಬರು ಮಹಿಳಾ ಸ್ಪರ್ಧಿಗಳು ಪರಸ್ಪರ ಕುಸ್ತಿಗೆ ಬಿದ್ದಿದ್ದಾರೆ ಆದರೆ ಇದು ಯಾವುದೇ ಜಗಳ ಕಾರಣಕ್ಕೆ ಅಲ್ಲ ಬದಲಿಗೆ ಟಾಸ್ಕ್‌ನ ಕಾರಣಕ್ಕೆ. ಇಬ್ಬರು ಮಹಿಳಾ ಸ್ಪರ್ಧಿಗಳು ಪರಸ್ಪರ ಕಿತ್ತಾಡುತ್ತಿರುವ ಪ್ರೋಮೊ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದ್ದು, ಕುತೂಹಲ ದುಪ್ಪಟ್ಟಾಗಿದೆ.

  ಕಿತ್ತಾಡಿದ ಧನುಶ್ರಿ-ದಿವ್ಯಾ ಸುರೇಶ್

  ಕಿತ್ತಾಡಿದ ಧನುಶ್ರಿ-ದಿವ್ಯಾ ಸುರೇಶ್

  ಸ್ಪರ್ಧಿಗಳಾದ ದಿವ್ಯಾ ಸುರೇಶ್ ಹಾಗೂ ಟಿಕ್‌ಟಾಕ್ ಸ್ಟಾರ್ ಧನುಶ್ರಿ ಅವರು ಟಾಸ್ಕ್‌ನಲ್ಲಿ ಗೆಲ್ಲಲು ಆಟವೊಂದನ್ನು ಆಡುತ್ತಿದ್ದು, ಆಟದಲ್ಲಿ ಪರಸ್ಪರ ಕಿತ್ತಾಡುತ್ತಿದ್ದಾರೆ. ಈ ಕಿತ್ತಾಟ ಬಹು ತೀವ್ರವಾಗಿಯೇ ಇದೆ. ಇಬ್ಬರೂ ಸ್ಪರ್ಧಿಗಳು ಒಬ್ಬರನ್ನೊಬ್ಬರು ಎಳೆದಾಡಿ-ತಳ್ಳಾಡಿ ಹಿಡಿದು ಬೀಳಿಸಿ ಆಟದಲ್ಲಿ ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.

  ಬಿಗ್‌ಬಾಸ್ ಕೊಟ್ಟಿದ್ದಾರೆ ಅವಕಾಶ

  ಬಿಗ್‌ಬಾಸ್ ಕೊಟ್ಟಿದ್ದಾರೆ ಅವಕಾಶ

  ಧನುಶ್ರಿ ಈಗಾಗಲೇ ನಾಮಿನೇಟ್ ಆಗಿದ್ದು, ಗೀತಾ ಭಟ್ ಅವರ ಮೇಲೆ ಆಟದಲ್ಲಿ ಸೋತು ಸೇಫ್ ಜೋನ್‌ಗೆ ಹೋಗಲು ಇದ್ದ ಒಂದು ಅವಕಾಶವನ್ನು ಕಳೆದುಕೊಂಡಿದ್ದಾರೆ. ಆದರೆ ಬಿಗ್‌ಬಾಸ್ ಕೊಟ್ಟಿರುವ ಮತ್ತೊಂದು ಅವಕಾಶದಲ್ಲಿ ದಿವ್ಯಾ ಸುರೇಶ್ ಎದುರು ಆಡಿದ್ದಾರೆ ಧನುಶ್ರಿ.

  ಅಪ್ಪ-ಅಮ್ಮನ ಆತ್ಮಹತ್ಯೆ ಬಗ್ಗೆ ರಘು ಗೌಡ ಮಾತು

  ಚೆಂಡಿಗಾಗಿ ಧನುಶ್ರಿ-ದಿವ್ಯಾ ಸುರೇಶ್ ಕಿತ್ತಾಟ

  ಚೆಂಡಿಗಾಗಿ ಧನುಶ್ರಿ-ದಿವ್ಯಾ ಸುರೇಶ್ ಕಿತ್ತಾಟ

  ಕೋರ್ಟ್‌ನ ಮಧ್ಯದಲ್ಲಿರುವ ಚೆಂಡನ್ನು ಇಬ್ಬರು ಸ್ಪರ್ಧಿಗಳು ಬೇಗನೇ ಎತ್ತಿಕೊಂಡು ಎದುರಾಳಿ ಅಂಗಳದಲ್ಲಿರುವ ಬಾಸ್ಕೆಟ್‌ಗೆ ಹಾಕುವ ಟಾಸ್ಕ್ ಅನ್ನು ಬಿಗ್‌ಬಾಸ್ ನೀಡಿದ್ದಾರೆ. ಬಾಸ್ಕೆಟ್ ಬಾಲ್ ಆಟದ ಮಾದರಿಯಲ್ಲಿಯೇ ಈರುವ ಆಟವನ್ನು ಧನುಶ್ರಿ ಹಾಗೂ ದಿವ್ಯಾ ಇಬ್ಬರೂ ಬಹಳ ಬಲಪ್ರಯೋಗಿಸಿ ಆಡುತ್ತಿರುವುದು ಪ್ರೋಮೋ ನಲ್ಲಿ ಗೊತ್ತಾಗುತ್ತಿದೆ.

  ಗಾಯಗೊಂಡ ದಿವ್ಯಾ ಸುರೇಶ್

  ಗಾಯಗೊಂಡ ದಿವ್ಯಾ ಸುರೇಶ್

  ಪ್ರೊಮೋದಲ್ಲಿ ಕಾಣುತ್ತಿರುವಂತೆ ಈ ಆಟದಲ್ಲಿ ದಿವ್ಯಾಗೆ ದೊಡ್ಡ ಪೆಟ್ಟೇ ಆಗಿದೆ. ದಿವ್ಯಾ ಅವರ ಕಾಲಿಗೆ ಏಟಾಗಿ ರಕ್ತ ಹರಿದಿದೆ. ಮನೆಯ ಇತರ ಸ್ಪರ್ಧಿಗಳು ದಿವ್ಯಾ ಅವರ ಶುಶ್ರೂಶೆಯಲ್ಲಿ ತೊಡಗಿದ್ದಾರೆ. ಆಟದ ಅಂತ್ಯದ ಫಲಿತಾಂಶ ಏನಾಯಿತು. ಧನುಶ್ರಿ ಸೇಫ್ ಆದರಾ ಅಥವಾ ದಿವ್ಯಾ ಸೇಫ್ ಆದರಾ ಎಂಬುದು ಗುರುವಾರ ರಾತ್ರಿ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.

  English summary
  Bigg Boss Kannada 8: Dhanushree and Divya Suresh engaged in physical fight to win a task in Bigg Boss house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X