For Quick Alerts
  ALLOW NOTIFICATIONS  
  For Daily Alerts

  ಇಡೀ ಮನೆ ನಿರ್ಮಲಾಗೆ ಡಿಸ್‌ಲೈಕ್ ಕೊಟ್ಟರು: ಒಬ್ಬರಿಂದ ಮಾತ್ರ ಲೈಕ್!

  |

  ಬಿಗ್ ಬಾಸ್ ಐದನೇ ದಿನದ ಸಂಚಿಕೆಯಲ್ಲಿ ಇಷ್ಟವಾದವರಿಗೆ ಲೈಕ್ ಬ್ಯಾಡ್ಜ್ ಮತ್ತು ಇಷ್ಟ ಆಗದವರಿಗೆ ಡಿಸ್‌ಲೈಕ್ ಬ್ಯಾಡ್ಜ್ ಹಾಕುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ನಿರ್ಮಲಾ ಚೆನ್ನಪ್ಪ ಅತಿ ಹೆಚ್ಚು ಡಿಸ್‌ಲೈಕ್ ಬ್ಯಾಡ್ಜ್ ಪಡೆದುಕೊಂಡರು.

  ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕ ಮಂದಿ ನಿರ್ಮಲಾ ಅವರಿಗೆ ಡಿಸ್‌ಲೈಕ್ ಬ್ಯಾಡ್ಜ್ ನೀಡಿದರು. ನಿರ್ಮಲಾ ಅವರು ಮನೆಯಲ್ಲಿ ಪ್ರತ್ಯೇಕತೆಯನ್ನು ಹುಡುಕುತ್ತಿದ್ದಾರೆ. ಮನೆ ಸದಸ್ಯರಿಂದ ದೂರವಾಗುತ್ತಿದ್ದಾರೆ, ಒಬ್ಬಂಟಿಯಾಗಿ ಇರಲು ಇಷ್ಟ ಪಡುತ್ತಿದ್ದಾರೆ ಎಂದು ಕಾರಣ ನೀಡಿದ ಹಲವು ಸದಸ್ಯರು ನಿರ್ಮಲಾಗೆ ಡಿಸ್‌ಲೈಕ್ ಬ್ಯಾಡಜ್ ನೀಡಿದರು.

  ನಿರ್ಮಲಾಗೆ ಡಿಸ್‌ಲೈಕ್ ಬ್ಯಾಡ್ಜ್ ನೀಡಿದ ಸ್ಪರ್ಧಿಗಳು ಯಾರು?

  ವೈಷ್ಣವಿ ಗೌಡ, ಗೀತಾ ಭಟ್, ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಚಂದ್ರಕಲಾ ಮೋಹನ್, ರಘು ಗೌಡ, ಧನುಶ್ರೀ, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ರೇಸರ್ ಅರವಿಂದ್ ಅವರು ನಿರ್ಮಲಾ ಅವರಿಗೆ ಡಿಸ್‌ಲೈಕ್ ಬ್ಯಾಡ್ಜ್ ನೀಡಿದರು.

  ರಾತ್ರೋರಾತ್ರಿ ರಾ..ರಾ..ಲುಕ್ ನಲ್ಲಿ ಕಾಣಿಸಿಕೊಂಡ ನಿರ್ಮಲಾ: ಭಯಭೀತರಾಗಿರುವ ಸ್ಪರ್ಧಿಗಳು

  ಇಷ್ಟು ಜನರ ಪೈಕಿ ದಿವ್ಯಾ ಸುರೇಶ್ ಅವರೊಬ್ಬರೇ ನಿರ್ಮಲಾ ಚೆನ್ನಪ್ಪ ಅವರಿಗೆ ಲೈಕ್ ಬ್ಯಾಡ್ಜ್ ನೀಡಿ ಗಮನ ಸೆಳೆದರು. ನಿರ್ಮಲಾ ಬಿಗ್ ಬಾಸ್ ಮನೆಯಲ್ಲಿ ತಾವು ತಾವಾಗಿದ್ದಾರೆ ಎಂದು ದಿವ್ಯಾ ಅಭಿಪ್ರಾಯ ಪಟ್ಟರು.

  ನಿರ್ಮಲಾ ಅವರು ಪ್ರಶಾಂತ್ ಸಂಬರ್ಗಿ ಅವರಿಗೆ ಡಿಸ್‌ಲೈಕ್ ಬ್ಯಾಡ್ಜ್ ನೀಡಿದ್ರೆ, ರೇಸರ್ ಅರವಿಂದ್ ಅವರಿಗೆ ಲೈಕ್ ಬ್ಯಾಡ್ಜ್ ಕೊಟ್ಟರು.

  English summary
  Bigg Boss Kannada 8: Most Of People in Bigg Boss Home Disliked Nirmala.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X