For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್: ಮನೆಯ ಸದಸ್ಯರಲ್ಲಿ ಭಯ ಹುಟ್ಟಿಸಿದ ನಿರ್ಮಲಾ

  |

  ಬಿಗ್‌ಬಾಸ್ ಮನೆಯ ಐದನೇ ದಿನ ಮನೆಯಲ್ಲಿ ಕೆಲವು ಕುತೂಹಲಕಾರಿ ಘಟನೆಗಳು ನಡೆದಿವೆ. ಸ್ಪರ್ಧಿ ನಿರ್ಮಲಾ ಅವರ ವರ್ತನೆಯಲ್ಲಾದ ಹಠಾತ್ ಬದಲಾವಣೆ ಬಿಗ್‌ಬಾಸ್ ಸ್ಪರ್ಧಿಗಳೆಲ್ಲರಿಗೂ ಭಾರಿ ಆತಂಕ ತಂದಿದೆ.

  ನಾಲ್ಕನೇ ದಿನ ರಾತ್ರಿ ನಿರ್ಮಲಾ ಅವರು ಬಿಗ್‌ಬಾಸ್ ನ ಸ್ಟೋರ್‌ ರೂಂ ನಲ್ಲಿ ಆಕಸ್ಮಿಕವಾಗಿ ಸಿಲುಕಿಕೊಂಡರು ಅಲ್ಲಿ ತಮ್ಮ ಜೀವನದ ಪಯಣದ ಬಗ್ಗೆ ಮಾತನಾಡಲು ಆರಂಭಿಸಿದರು. ಆ ನಂತರ ಹೋಗಿ ಹಳದಿ ಬಣ್ಣದ ಸೀರೆ ಉಟ್ಟುಕೊಂಡರು. ಆ ನಂತರ ಅವರ ವರ್ತನೆಯಲ್ಲಿ ಬಹಳವಾಗಿ ಬದಲಾವಣೆ ಆಗಿದೆ.

  ಇಷ್ಟು ದಿನ ಎಲ್ಲರನ್ನು ಕೇರ್ ಮಾಡುತ್ತಿದ್ದ ನಿರ್ಮಲಾ ಹಠಾತ್ತನೆ ಏಕಾಂಗಿಯಾಗಿಬಿಟ್ಟರು. ಯಾರೊಂದಿಗೂ ಮಾತನಾಡದೇ ಒಬ್ಬರೇ ಕೂತು ಒಬ್ಬೊಬ್ಬರೇ ಮಾತನಾಡಿಕೊಳ್ಳುವುದು. ಒಬ್ಬರೇ ಪ್ರತ್ಯೇಕವಾಗಿ ಹೋಗಿ ಊಟ ಮಾಡುವುದು. ಎಲ್ಲರೂ ಒಟ್ಟಿಗೆ ಮಾತನಾಡುವಾಗ ಅವರೊಬ್ಬರೇ ಹೋಗಿ ಮೌನವಾಗಿ ದೂರ ಕುಳಿತುಕೊಳ್ಳುವುದು ಮಾಡಲು ಆರಂಭಿಸಿದರು. ಇದು ಮನೆಯಲ್ಲಿರುವ ಎಲ್ಲರಿಗೂ ತೀವ್ರ ಆತಂಕ ತಂದಿದೆ.

  ರಘು ಗೌಡ, ರಾಜೀವ್, ಅರವಿಂದ್, ಚಂದ್ರಕಲಾ, ದಿವ್ಯಾ ಇನ್ನೂ ಹಲವರು ನಿರ್ಮಲಾ ಅವರೊಟ್ಟಿಗೆ ಆಪ್ತವಾಗಿ ಮಾತನಾಡಲು ಯತ್ನಿಸಿದರು ಆದರೆ ಅವರ ವರ್ತನೆಯಲ್ಲಿ ಬದಲಾವಣೆ ಕಂಡುಬರಲಿಲ್ಲ. ರಘು ಗೌಡ ಅಂತೂ ತಮ್ಮ ತಾಯಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ ವರ್ತಿಸುತ್ತಿದ್ದ ರೀತಿಗಿಂತಲೂ ಭಿನ್ನವಾಗಿ ಏಕಾಂಗಿಯಾಗಿ ನಿರ್ಮಲಾ ವರ್ತಿಸುತ್ತಿದ್ದಾರೆ ಏನೋ ಅವಘಡ ಸಂಭವಿಸಬಹುದು ಎಂಬ ಅನುಮಾನ ವ್ಯಕ್ತಡಿಸಿದರು.

  ಧೈರ್ಯಶಾಲಿ ರಾಜೇಶ್ ಸಹ ತಾವು ನಿರ್ಮಲಾ ಅವರ ಬದಲಾದ ವ್ಯಕ್ತಿತ್ವ ಕಂಡು ಬಹಳವಾಗಿ ಭಯಪಟ್ಟುದಾಗಿ ಹೇಳಿಕೊಂಡರು. ಇನ್ನು ಚಂದ್ರಕಲಾ 'ಪ್ರೇಕ್ಷಕರ, ಇಲ್ಲಿರುವ ಉಳಿದ ಸ್ಪರ್ಧಿಗಳ ಗಮನವನ್ನು ಸೆಳೆಯಲು ನಿರ್ಮಲಾ ಅವರು ಹೀಗೆ ವರ್ತಿಸುತ್ತಿದ್ದಾರೆ' ಎಂಬ ವಾದ ಮುಂದಿಟ್ಟಿರು.

  ಇನ್ನು ಕೆಲವರು ಬಿಗ್‌ಬಾಸ್, ನಿರ್ಮಲಾ ಗೆ ಯಾವುದೋ ಸೀಕ್ರೆಟ್ ಟಾಸ್ಕ್ ನೀಡಿದ್ದಿರಬಹುದು, ಹಾಗಾಗಿ ಅವರು ಹೀಗೆ ವರ್ತಿಸುತ್ತಿರಬಹುದು ಎಂದು ಕೆಲವರು ಗುಮಾನಿ ವ್ಯಕ್ತಪಡಿಸಿದರು.

  English summary
  Bigg Boss Kannada 8: Nirmala's Behavior scared other contestants in the house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X