Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್‌ಬಾಸ್: ಒಂದು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಬದಲಾಯಿಸಿರುವ ಬಟ್ಟೆ ಎಷ್ಟು ಗೊತ್ತೆ?
ಬಿಗ್‌ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ಪ್ರಶಾಂತ್ ಸಂಬರ್ಗಿ ಅವರನ್ನು ಕಂಡಾಗ ಹಲವರಿಗೆ ಆಶ್ಚರ್ಯವಾಗಿತ್ತು.
Recommended Video
'ಸಾಮಾಜಿಕ ಹೋರಾಟಗಾರ' ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಪ್ರಶಾಂತ್ ಸಂಬರ್ಗಿಯವರು ಬಿಗ್‌ಬಾಸ್ ಮನೆಗೆ ಬರಲು ಹೇಗೆ ಒಪ್ಪಿಕೊಂಡರು. ಬಿಗ್‌ಬಾಸ್ ಮನೆಯಲ್ಲಿ ಹೇಗೆ ವರ್ತಿಸಬಹುದು ಎಂಬುದು ಹಲವರ ಕುತೂಹಲವಾಗಿದೆ.
ಗಂಭೀರ, ನಿಷ್ಠುರ, ವಾಚಾಳಿ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಪ್ರಶಾಂತ್ ಸಂಬರ್ಗಿಯವರು ಬಿಗ್‌ಬಾಸ್ ಮನೆಯಲ್ಲಿ ಆರಂಭದಲ್ಲಿ ತುಸು ಡಾಮಿನೆಂಟ್ ವ್ಯಕ್ತಿತ್ವವನ್ನು ಪ್ರದರ್ಶಿಸಿದರು. ಬ್ರೋಗೌಡ ವಿರುದ್ಧ ಜಗಳ ಮಾಡಿದರು. ಮಂಜು ವಿರುದ್ಧವೂ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ಆ ನಂತರ ಎಲ್ಲರೊಂದಿಗೆ ತುಸು ಹೊಂದಿಕೊಂಡು ಹೋಗುವ, ತಮಾಷೆ ಪ್ರವೃತ್ತಿಯಾಗಿರಲು ಪ್ರಯತ್ನಿಸುತ್ತಿದ್ದಾರೆ.
ಇಂದು ಸುದೀಪ್ ಅವರು ವೀಕೆಂಡ್ ಎಪಿಸೋಡ್ ಅನ್ನು ನಡೆಸಿಕೊಡಬೇಕಾದರೆ, ಪ್ರಶಾಂತ್ ಸಂಬರ್ಗಿ ಅವರ ಬಗ್ಗೆ ಬಹಳ ಅಪರೂಪವಾದ ಮಾಹಿತಿಯೊಂದನ್ನು ಹಂಚಿಕೊಂಡರು.
ಸ್ಪರ್ಧಿ ರಾಜೇಶ್ ಅವರಿಗೆ 26 ಅನ್ನು 14 ರಿಂದ ಗುಣಿಸಿದರೆ ಎಷ್ಟು ಉತ್ತರ ಬರುತ್ತದೆ ಎಂಬ ಪ್ರಶ್ನೆಯನ್ನು ಹಾಕಿದರು ಸುದೀಪ್. ಅಷ್ಟೇ ಅಲ್ಲದೆ ಈ ಪ್ರಶ್ನೆ ಕೇಳಲು ನಿಖರವಾದ ಕಾರಣವೂ ಇದೆ ಎಂದರು ಸುದೀಪ್.
ರಾಜೇಶ್ ಅವರು ಸುದೀಪ್ ಪ್ರಶ್ನೆಗೆ ಉತ್ತರವಾಗಿ 364 ಎಂಬ ಸರಿಯಾದ ಉತ್ತರವನ್ನೇ ನೀಡಿದರು. ಪ್ರಶ್ನೆ ಕೇಳಿದ ಕಾರಣ ಗೊತ್ತೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೆಲವು ಸ್ಪರ್ಧಿಗಳು 14 ಎಂಬುದು ನಾವು ಬಿಗ್‌ಬಾಸ್ ನಲ್ಲಿ ಇರುವ ವಾರಗಳ ಸಂಖ್ಯೆ ಎಂದು ಉತ್ತರಿಸಿದರು. ಆದರೆ 26 ಏನು ಎಂಬುದು ಯಾರಿಗೂ ಗೊತ್ತಾಗಲಿಲ್ಲ.
ನಂತರ ಸುದೀಪ್ ಅವರೇ ಹೇಳಿದಂತೆ. 24 ಎಂಬುದು ಪ್ರಶಾಂತ್ ಸಂಬರ್ಗಿ ಅವರು ಒಂದು ವಾರದಲ್ಲಿ ಬದಲಾಯಿಸಿರುವ ಬಟ್ಟೆಗಳ ಸಂಖ್ಯೆಯಂತೆ!
ಹೌದು, ಪ್ರಶಾಂತ್ ಸಂಬರ್ಗಿಯವರು ಬಿಗ್‌ಬಾಸ್ ಆಟದ ಮೊದಲ ವಾರದಲ್ಲಿ ಬರೋಬ್ಬರಿ 26 ಜೊತೆ ಬಟ್ಟೆಗಳನ್ನು ಬದಲಾಯಿಸಿದ್ದಾರೆ. ಸುದೀಪ್ ಹೇಳಿದಂತೆ, ಪ್ರಶಾಂತ್ ಅವರು ಎಲ್ಲರಿಗೂ ಕಾಣುವಂತೆ ಬದಲಾವಯಿಸಿರುವ ಬಟ್ಟೆಗಳ ಸಂಖ್ಯೆ 26. ಎಲ್ಲರ ಕಣ್ಣಿಗೂ ಕಾಣದಂತೆ ಬದಲಾಯಿಸಿರುವ ಬಟ್ಟೆಯ ಸಂಖ್ಯೆ ಗೊತ್ತಿಲ್ಲ! ಅಂದರೆ ಒಳ ಉಡುಪುಗಳ ಸಂಖ್ಯೆ ಬಿಗ್‌ಬಾಸ್‌ಗೂ ಗೊತ್ತಿಲ್ಲ!
ಇದಕ್ಕೆ ನಗುತ್ತ ಉತ್ತರಿಸಿದ ಪ್ರಶಾಂತ್ ಸಂಬರ್ಗಿ, ಹೊರಗೆ ಇದ್ದಾಗ ನಾನು ಸದಾ ಬಿಳಿ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸುತ್ತಿದ್ದೆ. ಕಲರ್ಸ್ ಚಾನೆಲ್‌ನಲ್ಲಿ ಬಿಗ್‌ಬಾಸ್ ಗೆ ಬಂದ ಕಾರಣ ಬಣ್ಣ-ಬಣ್ಣದ ಉಡುಪು ಖರೀದಿಸಿದ್ದೇನೆ ಎಂದರು ಸಂಬರ್ಗಿ.