For Quick Alerts
  ALLOW NOTIFICATIONS  
  For Daily Alerts

  ಬಿಗ್ ಮನೆಯಲ್ಲಿ ಪ್ರಾರಂಭವಾಯ್ತು ಸ್ಪರ್ಧಿಗಳ ಕಿತ್ತಾಟ: ಕ್ಯಾಪ್ಟನ್ ವಿರುದ್ಧ ಸಂಬರ್ಗಿ ಕೆಂಡಾಮಂಡಲ

  By ಫಿಲ್ಮ್ ಡೆಸ್ಕ್
  |

  ಬಿಗ್ ಬಾಸ್ ಕನ್ನಡ ಸೀಸನ್ 8ರ ಎರಡನೇ ದಿನ ಕೂಡ ಯಶಸ್ವಿ ಮುಕ್ತಾಯವಾಗಿದೆ. ಮನೆಯಿಂದ ಹೊರಹೋಗಬೇಕಿದ್ದ ಸ್ಪರ್ಧಿಗಳು ನಾಮಿನೇಷನ್ ತೂಗುಗತ್ತಿಯನ್ನು ಬೇರೆಯವರಿಗೆ ವರ್ಗಾಯಿಸಿ ನಿರಾಳರಾದರೆ, ನಾಮಿನೇಷನ್ ಆದವರು ತಲೆಕೆಡಿಸಿಕೊಂಡಿದ್ದಾರೆ.

  ಮೊದಲ ವಾರವೇ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದ ಪ್ರಶಾಂತ್ ಸಂಬರ್ಗಿ ಈ ಬಾರಿ ಸೇಫ್ ಆಗಿದ್ದಾರೆ. ವಿಶ್ವನಾಥ್ ಮತ್ತು ರಘು ಸದ್ಯ ಮನೆಯಿಂದ ಹೊರಹೋಗುವ ಲಿಸ್ಟ್ ನಲ್ಲಿದ್ದಾರೆ. ಎರಡನೇ ದಿನವೂ ಬಿಗ್ ಮನೆ ಸ್ಪರ್ಧಿಗಳ ನಗು ಅಳು, ಕುಣಿತ, ಸಂತೋಷಕ್ಕೆ ಸಾಕ್ಷಿಯಾಗಿದೆ.

  ಬಿಗ್ ಬಾಸ್ ಕನ್ನಡ 8: ನಿರ್ಮಲಾ ರಾಜ್ಯ ಪ್ರಶಸ್ತಿ ಗೆದ್ದಿದ್ದು ಯಾರಿಗೂ ಗೊತ್ತಾಗಲಿಲ್ಲ ಯಾಕೆ?

  ಸಂಬರ್ಗಿ v/s ಬ್ರೋ ಗೌಡ

  ಸಂಬರ್ಗಿ v/s ಬ್ರೋ ಗೌಡ

  ಸದ್ಯ ಮೂರನೇ ದಿನದ ಪ್ರೋಮೋ ರಿಲೀಸ್ ಆಗಿದ್ದು, ಬಿಗ್ ಮನೆಗೆ ಎಂಟ್ರಿ ಕೊಟ್ಟು 3 ದಿನಕ್ಕೆ ಸ್ಪರ್ಧಿಗಳ ನಡುವೆ ವೈಮನಸ್ಸು ಮೂಡಿದ್ದು, ಕಿತ್ತಾಟ, ಜಗಳ ಪ್ರಾರಂಭವಾಗಿದೆ. ಮೊದಲ ವಾರ ಕ್ಯಾಪ್ಟನ್ ಆಗಿರುವ ಬ್ರೋ ಗೌಡ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ಮಾತಿನ ಚಕಮಕಿ ನಡೆದಿದೆ.

  ದಿವ್ಯಾ ಜೊತೆ ಡ್ಯೂಯೆಟ್ ಹಾಡಲು ಅಡ್ಡಿ ಪಡಿಸಿದ್ರಾ ಬ್ರೋ ಗೌಡ?

  ದಿವ್ಯಾ ಜೊತೆ ಡ್ಯೂಯೆಟ್ ಹಾಡಲು ಅಡ್ಡಿ ಪಡಿಸಿದ್ರಾ ಬ್ರೋ ಗೌಡ?

  ಬಿಗ್ ಮನೆಯಲ್ಲಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದು, ಪ್ರಶಾಂತ್ ಸಂಬರ್ಗಿ ಮತ್ತು ದಿವ್ಯಾ ಉರುಡುಗ ಡ್ಯೂಯೆಟ್ ಹಾಡುತ್ತಿದ್ದರು. ಬ್ರೋ ಗೌಡ ಶೂಟ್ ಮಾಡುತ್ತಿದ್ದರು. ಆದರೆ ಇಬ್ಬರ ಡ್ಯೂಯೆಟ್ ಗೆ ಬ್ರೋ ಗೌಡ ಅಡ್ಡಿ ಪಡಿಸಿದ್ದಾರೆ ಎನ್ನುವ ಕೋಪ ಪ್ರಶಾಂತ್ ಅವರಿಗೆ. ಇನ್ನು ಸ್ಪರ್ಧಗಳಿಂದ ಪ್ರಶಾಂತ್ ಸಂಬರ್ಗಿ ಅವರದ್ದು ಓವರ್ ರಿಯಾಕ್ಷನ್ ಎನ್ನುವ ಕಾಮೆಂಟ್ ಬರಲು ಶುರುವಾಯಿತು.

  ಕ್ಯಾಪ್ಟನ್ ಅಂತ ದವಲತ್ತಿನಿಂದ ಮಾತನಾಡುತ್ತಿಲ್ಲ

  ಕ್ಯಾಪ್ಟನ್ ಅಂತ ದವಲತ್ತಿನಿಂದ ಮಾತನಾಡುತ್ತಿಲ್ಲ

  ಒಮ್ಮಗೆ ಕೆರಳಿದ ಪ್ರಶಾಂತ್ ಫುಲ್ ಗರಂ ಆಗಿ, ಬ್ರೋ ಗೌಡ ವಿರುದ್ಧ ರೊಚ್ಚಿಗೆದಿದ್ದಾರೆ. ಬ್ರೋ ಗೌಡ ಸಹ ಪ್ರಶಾಂತ್ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ. ಕ್ಯಾಪ್ಟನ್ ಅಂತ ದವಲತ್ತಿನಿಂದ ಮಾತನಾಡುತ್ತಿಲ್ಲ, ಎಲ್ಲರೂ ಫನ್ ಮಾಡುತ್ತಿದ್ವಿ ಅಷ್ಟೆ ಎಂದು ಬ್ರೋ ಗೌಡ ಸಹ ರೇಗಾಡಿದ್ದಾರೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು, ಬ್ರೋ ಗೌಡ ಅವರನ್ನು ಗೀತಾ ಕಂಟ್ರೋಲ್ ಮಾಡಿ ಎಳೆದುಕೊಂಡು ಹೋಗುತ್ತಾರೆ.

  ನಾಮಿನೇಟ್ ತೂಗುಕತ್ತಿಯನ್ನು ರಘು ತಲೆಗೆ ವರ್ಗಾಯಿಸಿದ ಮಂಜು

  ನಿಜಕ್ಕೂ ನಡೆದಿದ್ದೇನು?

  ನಿಜಕ್ಕೂ ನಡೆದಿದ್ದೇನು?

  ಇಬ್ಬರ ಕಿತ್ತಾಟ ನೋಡಿ ಬಿಗ್ ಮನೆಯ ಸಹ ಸ್ಪರ್ಧಿಗಳು ಕಂಗಾಲಾಗಿದ್ದಾರೆ. ನಿಜಕ್ಕೂ ಬ್ರೋ ಗೌಡ ಮತ್ತು ಪ್ರಶಾಂತ್ ಸಂಬರ್ಗಿ ನಡುವೆ ನಡೆದಿದ್ದೇನು? ಇಬ್ಬರು ಆ ಪರಿ ಕಿತ್ತಾಡಿದ್ದೇಕೆ ಎನ್ನುವುದು ಗೊತ್ತಾಗಬೇಕಾದರೆ ರಾತ್ರಿ ಸಂಪೂರ್ಣ ಎಪಿಸೋಡ್ ನೋಡಬೇಕು.

  English summary
  bigg boss kannada 8: Here is the Bigg Boss Kannada Season 8 Today Promo, Prashanth Mambargi outrage against Bro gowda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X