For Quick Alerts
  ALLOW NOTIFICATIONS  
  For Daily Alerts

  ನಾಮಿನೇಷನ್ ತೂಗುಗತ್ತಿಯಿಂದ ನಿರ್ಮಲಾ ಅವರನ್ನು ಬಚಾವ್ ಮಾಡಿದ್ದೇಕೆ ಪ್ರಶಾಂತ್ ಸಂಬರ್ಗಿ?

  |

  ಬಿಗ್ ಬಾಸ್ ನಿಂದ ಮೊದಲ ವಾರವೇ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಮೊದಲ ದಿನವೇ 5 ಸ್ಪರ್ಧಿಗಳು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಈ ಐವರಲ್ಲಿ ನಿರ್ಮಲಾ ಚೆನ್ನಪ್ಪ ಟಾಸ್ಕ್ ನಲ್ಲಿ ಲೂಸರ್ ಆಗುವ ಮೂಲಕ ನೇರ ನಾಮಿನೇಟ್ ಆಗಿದ್ದರು.

  ಆದರೆ ಬಿಗ್ ಬಾಸ್ ನೀಡಿದ ಟ್ವಿಸ್ಟ್ ನಿಂದ ನಾಮಿನೇಟ್ ಆದವರ ಲೆಕ್ಕಾಚಾರ ಉಲ್ಟ ಪಲ್ಟವಾಯಿತು. ಮೊದಲ ದಿನವೇ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದವರಲ್ಲಿ ಕೆಲವರು ಸೇಫ್ ಆದರೆ ಇನ್ನು ಕೆಲವರು ಅದೆ ಜಾಗದಲ್ಲಿದ್ದಾರೆ. ಎರಡನೇ ಬಾರಿ ನೀಡಿದ ಅವಕಾಶದಲ್ಲಿ ಟಾಸ್ಕ್ ನಲ್ಲಿ ಸೋತು 4 ಮಂದಿ ಮನೆಯಿಂದ ಹೊರಹೋಗಲು ಎಲಿಮಿನೇಟ್ ಆಗಿದ್ದಾರೆ.

  ಎರಡನೇ ಸಲ ನಾಮಿನೇಷನ್: ಇದರ ಹಿಂದಿದ್ಯಾ ಬೇಕಾದವರನ್ನು ಉಳಿಸಿಕೊಳ್ಳುವ ತಂತ್ರ?

  ಸದ್ಯ ಮನೆಯಿಂದ ಹೊರಹೋಗಲು ನಾಮಿನೇಟ್ ಆದವರಲ್ಲಿ ಧನುಶ್ರೀ, ರಘು ಗೌಡ, ವಿಶ್ವ, ಶುಭ ಪೂಂಜಾ ಇದ್ದಾರೆ. ನಿರ್ಮಲಾ ಕೂಡ ಅದೇ ಲಿಸ್ಟ್ ನಲ್ಲಿ ಇದ್ದರು. ಆದರೀಗ ನಿರ್ಮಲಾ ಸೇಫ್ ಆಗುವ ಮೂಲಕ ನಾಮಿನೇಷನ್ ತೂಗುಗತ್ತಿಯಿಂದ ತಪ್ಪಿಸಿಕೊಂಡಿದ್ದಾರೆ.

  ಪ್ರಶಾಂತ್ ಸಂಬರ್ಗಿ, ನಿರ್ಮಲಾ ಅವರನ್ನು ಸೇವ್ ಮಾಡುವ ಮೂಲಕ ಮನೆಯಿಂದ ಹೊರಹೋಗುವುದನ್ನು ತಪ್ಪಿಸಿದ್ದಾರೆ. ಪ್ರಶಾಂತ್ ಸಂಬರ್ಗಿ ಅವರಿಗೆ ಬಿಗ್ ಬಾಸ್ ಎರಡು ಆಯ್ಕೆಗಳನ್ನು ಮುಂದಿಟ್ಟಿತ್ತು. ಒಂದು ಕಡೆ ಕಾಫಿ ಪುಡಿ ಪ್ಯಾಕ್ ಗಳು ಮತ್ತೊಂದು ಕಡೆ ನಿರ್ಮಲಾ ಅವರ ಲಗೇಜ್. ಎರಡರಲ್ಲಿ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂದು ಬಿಗ್ ಬಾಸ್ ಕೇಳಿದಾಗ ಪ್ರಶಾಂತ್ ಸಂಬರ್ಗಿ, ನಿರ್ಮಲಾ ಅವರ ಲಗೇಜ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಿರ್ಮಲಾ ಅವರನ್ನು ಸೇಫ್ ಮಾಡಿದ್ದಾರೆ.

  ಇದೀಗ ಮೊದಲ ವಾರ ಮನೆಯಿಂದ ಹೊರಹೋಗಲು 4 ಮಂದಿ ಎಲಿಮಿನೇಟ್ ಆಗಿದ್ದಾರೆ. ನಾಲ್ಕು ಮಂದಿಯಲ್ಲಿ ಈ ಬಾರಿ ಯಾರು ಮನೆಗೆ ಹೋಗುತ್ತಾರೆ ಎನ್ನುವುದು ಪ್ರೇಕ್ಷಕರ ಸದ್ಯದ ಕುತೂಹಲ.

  English summary
  Bigg Boss Kannada 8: Prashanth Sambargi Saved Nirmala Chennappa from celimation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X