Just In
- 7 min ago
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- 39 min ago
'ಮತ್ತೆ ಮನ್ವಂತರ' ತರುತ್ತಿದ್ದಾರೆ ಟಿ.ಎನ್.ಸೀತಾರಾಮ್
- 56 min ago
ಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆ
- 1 hr ago
ಪವನ್ ಕಲ್ಯಾಣ್ ಮಗಳ ಕುರಿತು ಸಹನಟಿ ಅನನ್ಯಾ ಮಾತು
Don't Miss!
- News
ಬಿಟ್ ಕಾಯಿನ್ ಮೌಲ್ಯ ಮತ್ತೆ $60,000 ಗಡಿ ದಾಟಿ ಏರಿಕೆ
- Sports
IPL: SRH vs KKR, Live: ಟಾಸ್ ಗೆದ್ದ ಹೈದರಾಬಾದ್ ಬೌಲಿಂಗ್ ಆಯ್ಕೆ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Automobiles
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ನನ್ನ ಪತ್ನಿಗೆ ಕಣ್ಣೀರು ಹಾಕೋಕು ಬರುತ್ತೆ, ಗನ್ ಹಿಡಿಯೋಕು ಬರುತ್ತೆ': ಪತ್ನಿ ಬಗ್ಗೆ ಸತ್ಯ ಸ್ಪಷ್ಟನೆ
ಬಿಗ್ ಬಾಸ್ ಎಂಟನೇ ಆವೃತ್ತಿ ಕೊನೆಯ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶ ಮಾಡಿದ ನಿರ್ಮಲಾ ಚೆನ್ನಪ್ಪ ಒಳ್ಳೆಯ ಕಾಂಪಿಟೇಟರ್ ಎಂದು ವಿಶ್ಲೇಷಿಸಲಾಗಿದೆ. ಮೊದಲೆರಡು ದಿನ ಒಳ್ಳೆಯ ಆಟ ಪ್ರದರ್ಶಿಸಿದ್ದರು. ಆದ್ರೆ, ನಿರ್ಮಲಾ ಚೆನ್ನಪ್ಪ ಕಳೆದ ಎರಡು ದಿನಗಳಿಂದ ನಡೆದುಕೊಳ್ಳುತ್ತಿರುವ ರೀತಿ ಮನೆಯಲ್ಲಿರುವ ಇತರೆ ಸದಸ್ಯರಿಗೆ ಆತಂಕ ಸೃಷ್ಟಿಸಿದೆ.
ಒಬ್ಬೊಬ್ಬರೆ ಕುಳಿತುಕೊಳ್ಳುತ್ತಿದ್ದಾರೆ, ಒಬ್ಬೊಬ್ಬರೆ ಮಾತನಾಡುತ್ತಿದ್ದಾರೆ, ರಾತ್ರಿ ಸಮಯ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಇದೆಲ್ಲವೂ ಸ್ಪರ್ಧಿಗಳಿಗೆ ಭಯ ಹುಟ್ಟಿಸಿದೆ. ಪ್ರೇಕ್ಷಕರಿಗೂ ನಿರ್ಮಲಾ ಅವರ ಮನಸ್ಥಿತಿ ಹಾಗೂ ಅವರ ನಡೆ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಈ ರೀತಿ ಉದ್ದೇಶಪೂರ್ವವಾಗಿ ಮಾಡುತ್ತಿದ್ದಾರಾ ಅಥವಾ ಅವರು ಇರೋದೇ ಹಾಗೇನಾ ಎಂಬ ಚರ್ಚೆ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಪತ್ನಿಯ ನಡೆ ಗಮನಿಸಿದ ಪತಿ ಸರ್ದಾರ್ ಸತ್ಯ ಫೇಸ್‌ಬುಕ್ ಲೈವ್‌ನಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...
ಬಿಗ್ಬಾಸ್: ಮನೆಯ ಸದಸ್ಯರಲ್ಲಿ ಭಯ ಹುಟ್ಟಿಸಿದ ನಿರ್ಮಲಾ

ಬಿಗ್ ಬಾಸ್ ಎನ್ನುವುದು ಒಂದು ಆಟ
''ಅವರು ಏನು ಎನ್ನುವುದು ನನಗೆ ತಿಳಿದಿದೆ. ಬಿಗ್ ಬಾಸ್ ಎನ್ನುವುದು ಒಂದು ಆಟ. ಎಲ್ಲರು ಅಲ್ಲಿ ಸೇರಿರುವುದು ಊಟ ಮಾಡಿ ಮಲುಗುವುದಕ್ಕೆ ಹೋಗಿಲ್ಲ. ಪ್ರತಿಯೊಬ್ಬರು ಅವರವರ ಆಟಗಳನ್ನು ಶುರು ಮಾಡ್ತಾರೆ. ಪ್ರತಿಯೊಬ್ಬರು ಅವರಿಗೆ ಅನಿಸಿದ್ದನ್ನ ಮಾಡ್ತಾರೆ. ಬಿಗ್ ಬಾಸ್ ಎನ್ನುವುದು ಅತ್ಯಂತ ದೊಡ್ಡ ಮನರಂಜನೆ ವೇದಿಕೆ. ಅಲ್ಲಿಗೆ ಹೋದ್ಮೇಲೆ ಏನು ಮಾಡಬೇಕೋ ಅದನ್ನು ಮಾಡಬೇಕು ಅಲ್ಲವೇ?'' ಎಂದು ಸತ್ಯ ಪತ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ.

ತಾಳ್ಮೆಯಿಂದ ಕಾಯೋಣ
''ಬಿಗ್ ಬಾಸ್ ಅಂದ್ರೆ ಅಲ್ಲಿ ಒಂದಿಷ್ಟು ನಿಯಮಗಳಿವೆ, ನೂರು ದಿನ ಇರಬೇಕು, ನೂರು ದಿನ ಅಲ್ಲಿರುವುದು ದೊಡ್ಡ ವಿಷ್ಯ. ಅದಕ್ಕೆ ತಕ್ಕಂತೆ ಮನರಂಜಿಸುತ್ತಾ ಹೋಗಬೇಕು. ಆ ಬಗ್ಗೆ ನಾವು ಇಲ್ಲಿ ಕೂತು ಮಾತನಾಡಬಾರದು. ನೋಡಿ ಸಂತೋಷ ಪಡಬೇಕು. ಮುಂದೆ ಏನಾಗುತ್ತದೆ ಎಂದು ತಾಳ್ಮೆಯಿಂದ ಕಾದು ನೋಡೋಣ'' ಎಂದು ಸತ್ಯ ಹೇಳಿದರು.
ಇಡೀ ಮನೆ ನಿರ್ಮಲಾಗೆ ಡಿಸ್ಲೈಕ್ ಕೊಟ್ಟರು: ಒಬ್ಬರಿಂದ ಮಾತ್ರ ಲೈಕ್!

ನಾನು ತಲೆಕೆಡಿಸಿಕೊಳ್ಳಲ್ಲ
''ಎಪಿಸೋಡ್ ನೋಡಿದ್ರೆ ಎಲ್ಲವೂ ಅರ್ಥವಾಗುತ್ತದೆ. ನಾನು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಬಿಗ್ ಬಾಸ್‌ನಲ್ಲಿ ಮಜಾ ಇರಬೇಕು, ಅಲ್ಲಿ ಏನೇ ನಡೆದರು ಮನರಂಜನೆ ದೃಷ್ಟಿಯಿಂದ ಅಷ್ಟೇ. ನಾನು ಎಪಿಸೋಡ್ ನೋಡಿ ಖುಷಿ ಪಡ್ತೀನಿ'' ಅಷ್ಟೇ ಎಂದು ಸತ್ಯ ನೆಟ್ಟಿಗರಿಗೆ ಪ್ರತಿಕ್ರಿಯಿಸಿದ್ದಾರೆ.

ಕಣ್ಣೀರು ಹಾಕೋಕು ಬರುತ್ತೆ, ಗನ್ ಹಿಡಿಯೋಕು ಬರುತ್ತೆ
''ನಿರ್ಮಲಾ ಬಹಳ ಗಟ್ಟಿಯಾಗಿದ್ದಾರೆ. ವೇದಿಕೆ ಮೇಲೆ ಆಕ್ಟ್ ಮಾಡೋಕೆ ಬರುತ್ತೆ, ವೇದಿಕೆ ಹಿಂದೆ ಕೆಲಸ ಮಾಡೋಕು ಬರುತ್ತೆ. ಅವಳಿಗೆ ಕಣ್ಣೀರು ಹಾಕೋಕು ಬರುತ್ತೆ, ಗನ್ ಹಿಡಿಯೋಕೆ ಬರುತ್ತೆ'' ಎಂದು ಸತ್ಯ ಪತ್ನಿಯನ್ನು ಸಮರ್ಥಿಸಿಕೊಂಡಿದ್ದಾರೆ.
ನಾಮಿನೇಷನ್ ತೂಗುಗತ್ತಿಯಿಂದ ನಿರ್ಮಲಾ ಅವರನ್ನು ಬಚಾವ್ ಮಾಡಿದ್ದೇಕೆ ಪ್ರಶಾಂತ್ ಸಂಬರ್ಗಿ?

ಬಿಗ್ ಬಾಸ್ ಮನೆಯಲ್ಲಿ ನಿರ್ಮಲಾ ಟಾರ್ಗೆಟ್
ನಿರ್ಮಲಾ ಒಬ್ಬೊಬ್ಬರೆ ಸಮಯ ಕಳೆಯುತ್ತಿರುವುದು ಮನೆಯ ಸದಸ್ಯರಿಗೆ ಇಷ್ಟವಾಗುತ್ತಿಲ್ಲ. ಈ ಕಾರಣದಿಂದ ಮನೆಯಲ್ಲಿರುವವರೆಲ್ಲವೂ ನಿರ್ಮಲಾ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಮನೆಯಲ್ಲಿ ಇಷ್ಟ ಆಗದ ಸ್ಪರ್ಧಿಗಳಿಗೆ ಕೆಂಪು ಬ್ಯಾಡ್ಜ್ ಕೊಡಬೇಕು ಎಂದು ಬಿಗ್ ಬಾಸ್ ಸೂಚಿಸಿದ್ದರು. ಅದರಲ್ಲಿ ಹತ್ತಕ್ಕಿಂತ ಹೆಚ್ಚು ಮಂದಿ ನಿರ್ಮಲಾ ಅವರಿಗೆ ಕೆಂಪು ಬ್ಯಾಡ್ಜ್ ಕೊಟ್ಟರು.