Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9 Grand Finale: ಬಿಗ್‌ಬಾಸ್ ಮನೆಯಿಂದ ದೀಪಿಕಾ ದಾಸ್ ಔಟ್: ಆಕೆಗೆ ಸಿಕ್ಕ ಬಹುಮಾನ ಎಷ್ಟು?
2ನೇ ಬಾರಿ ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶ ಪಡೆದಿದ್ದ ದೀಪಿಕಾ ದಾಸ್‌ಗೆ ಈ ಬಾರಿ ಕೂಡ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಸಿಗಲಿಲ್ಲ. ಬಿಗ್‌ಬಾಸ್ ಕನ್ನಡ ಸೀಸನ್9ರಲ್ಲಿ ನಟಿ ದೀಪಿಕಾ ದಾಸ್ 2ನೇ ರನ್ನಪ್ ಆಗಿದ್ದಾರೆ. ಸದ್ಯ ದೊಡ್ಮನೆ ಒಳಗೆ ರಾಕೇಶ್ ಅಡಿಗ ಹಾಗೂ ರೂಪೇಶ್ ಶೆಟ್ಟಿ ಮಾತ್ರ ಇದ್ದಾರೆ.
ಈ ಹಿಂದೆ ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ದೀಪಿಕಾ ದಾಸ್ ದೊಡ್ಮನೆಗೆ ಹೋಗುವ ಅವಕಾಶ ಪಡೆದಿದ್ದರು. ಆಗ 3ನೇ ರನ್ನರ್ ಅಪ್ ಆಗಿದ್ದವರು ಈ ಬಾರಿ 2ನೇ ರನ್ನರ್ ಅಪ್ ಆಗಿರುವುದು ನನ್ನ ಸಾಧನೆ. ಹಿಂದಿನ ಸೀಸನ್‌ಗಿಂತ ಈ ಸೀಸನ್‌ನಲ್ಲಿ ಚೆನ್ನಾಗಿ ಆಡಿದ್ದೇನೆ ಎಂದಿದ್ದಾರೆ. 4 ಜನ ಒಳಗೆ ಇದ್ದಾಗಲೂ ಯಾರು ಹೊರಗೆ ಬರಬೇಕು ಎಂದು ಹೊರಗಿದ್ದ ಸ್ಪರ್ಧಿಗಳನ್ನು ಕೇಳಿದ್ದಾಗ ಬಹುತೇಕರು ದೀಪಿಕಾ ದಾಸ್ ಹಾಗೂ ರೂಪೇಶ್ ರಾಜಣ್ಣ ಹೆಸರು ತೆಗೆದುಕೊಂಡಿದ್ದರು.
ಬಿಗ್‌ಬಾಸ್ ಕನ್ನಡ ಸೀಸನ್ ಕ್ಲೈಮ್ಯಾಕ್ಸ್ ಹಂತದವರೆಗೆ ಬಂದ ಮಹಿಳಾ ಸ್ಪರ್ಧಿ ದೀಪಿಕಾ ದಾಸ್ ಎನ್ನಬಹುದು. ಬಿಗ್‌ಬಾಸ್ ಕನ್ನಡ ಶೋನಲ್ಲಿ ನಟಿ ಶ್ರುತಿ ಬಿಟ್ಟರೆ ಬೇರೆ ಮಹಿಳಾ ಸ್ಪರ್ಧಿಗಳು ಗೆದ್ದಿಲ್ಲ. ನಾನು ಗೆದ್ದಿದ್ರೆ ಚೆನ್ನಾಗಿತ್ತು ಎಂದು ದೀಪಿಕಾ ದಾಸ್ ಹೇಳಿದ್ದಾರೆ.

5 ಲಕ್ಷ ಬಹುಮಾನ
100 ದಿನಗಳ ಕಾಲ ದೊಡ್ಮನೆಯಲ್ಲಿ ಇದ್ದು ಎಲ್ಲಾ ಟಾಸ್ಕ್‌ಗಳಲ್ಲೂ ಚೆನ್ನಾಗಿ ಆಡಿ ದೀಪಿಕಾ ದಾಸ್ ವೀಕ್ಷಕರನ್ನು ರಂಜಿಸಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 9ರಲ್ಲಿ ಒಟ್ಟು18 ಜನ ಸ್ಪರ್ಧಿಗಳು ಮನೆಯೊಳಗೆ ಹೋಗಿದ್ದರು. ಮೊದಲ ಸೀಸನ್‌ನಿಂದ ಓಟಿಟಿ ಸೀಸನ್‌ವರೆಗೆ ಇದ್ದ ಸ್ಪರ್ಧಿಗಳಲ್ಲಿ ಕೆಲವರಿಗೆ ಮತ್ತೊಂದು ಅವಕಾಶ ಸಿಕ್ಕಿದೆ. ಜೊತೆಗೆ ಹೊಸದಾಗಿ ಒಂದಷ್ಟು ಜನ ಹೋಗಿದ್ದರು. ಅವರೆಲ್ಲರ ಸ್ಪರ್ಧೆಯನ್ನು ಮೀರಿ ದೀಪಿಕಾ 2ನೇ ರನ್ನರ್ ಅಪ್ ಆಗಿದ್ದು ಉತ್ತಮ ಸಾಧನೆ. ಆಕೆಗೆ ಬಹುಮಾನವಾಗಿ 5 ಲಕ್ಷ ಹಣ ಸಿಕ್ಕಿದೆ.

ಒಂದು ಸ್ಥಾನ ಮೇಲೆರಿದ ದೀಪಿಕಾ
ಬಿಗ್‌ಬಾಸ್ ಕನ್ನಡ ಸೀಸನ್ 7ರಲ್ಲಿ ದೀಪಿಕಾ ದಾಸ್ ಗ್ರ್ಯಾಂಡ್ ಫಿನಾಲೆ ತಲುಪಿದ್ದರು. ಆದರೆ 3ನೇ ರನ್ನರ್ ಅಪ್ ಅನ್ನಿಸಿಕೊಂಡಿದ್ದರು. ಈ ಬಾರಿ 2ನೇ ರನ್ನರ್ ಅಪ್ ಆಗಿದ್ದಾರೆ. ಮತ್ತೊಂದು ಕಡೆ 2 ಅವಕಾಶ ಸಿಕ್ಕಗೂ ಟ್ರೋಫಿ ಸಿಗಲಿಲ್ಲ ಎನ್ನುವ ಬೇಸರ ಕೂಡ ದೀಪಿಕಾ ದಾಸ್ ಅವರಿಗೆ ಇದೆ. ಮಹಿಳಾ ಸ್ಪರ್ಧಿಯಾಗಿ ಟ್ರೋಫಿ ಗೆದ್ದಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ವೇದಿಕೆಯಲ್ಲಿ ಸುದೀಪ್ ಬಳಿ ಕೂಡ ಹೇಳಿದರು.

ವೈಲ್ಡ್ ಕಾರ್ಡ್ ಎಂಟ್ರಿ
ಬಿಗ್‌ಬಾಸ್ ಶೋ ಅಂದರೆ ಸಾಕಷ್ಟು ಟ್ವಿಸ್ಟ್‌ಗಳು ಇರುತ್ತವೆ. ಒಂದರ್ಥದಲ್ಲಿ ದೀಪಿಕಾ ದಾಸ್ ಅವರಿಗೆ ಇದು 3ನೇ ಅವಕಾಶ. ಯಾಕೆಂದರೆ ಬಿಗ್‌ಬಾಸ್ ಕನ್ನಡ ಸೀಸನ್ 9ರಲ್ಲಿ ಆಕೆ ಒಮ್ಮೆ ಎಲಿಮಿನೇಟ್ ಆಗಿ ಹೊರ ಬಂದಿದ್ದರು. 8ನೇ ವಾರ ಎಲಿಮಿನೇಟ್ ಆಗಿದ್ದ ದೀಪಿಕಾ ಮತ್ತೆ 9ನೇ ವಾರ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಇದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ದೀಪಿಕಾ ಬರುವ ಹೊತ್ತಿಗೆ ಮನೆಯೊಳಗೆ ಕಾಡಿನ ಸೆಟ್ ನಿರ್ಮಾಣ ಆಗಿತ್ತು. ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಮತ್ತಷ್ಟು ಉತ್ತಮವಾಗಿ ಆಗಿ ವೀಕ್ಷಕರ ಗಮನ ಸೆಳೆದಿದ್ದರು.

ರಾಕೇಶ್ ಅಡಿಗ ಗೆಲ್ಲಬೇಕು
ಇನ್ನು ವೇದಿಕೆಗೆ ಬಂದ ದೀಪಿಕಾ ದಾಸ್ ಅವರಿಗೆ ಅವರ ಜರ್ನಿ ಝಲಕ್ ತೋರಿಸಿ ಸುದೀಪ್ ಮಾತನಾಡಿಸಿದರು. ನಿಮ್ಮ ಪ್ರಕಾರ ಯಾರು ಈ ಬಾರಿ ಬಿಗ್‌ಬಾಸ್ ವಿನ್ನರ್ ಆಗಬೇಕು ಎನ್ನುವ ಪ್ರಶ್ನೆ ಮುಂದಿಟ್ಟಾಗ ದೀಪಿಕಾ ದಾಸ್ ರಾಕೇಶ್ ಅಡಿಗ ಹೆಸರು ತೆಗೆದುಕೊಂಡಿದ್ದಾರೆ. ರಾಕೇಶ್ ಅಡಿಗ ಆಟ ಬಹಳ ವಿಭಿನ್ನವಾಗಿದೆ. ಹಾಗಾಗಿ ಅವರು ಗೆಲ್ಲಬೇಕು ಎಂದರು.