For Quick Alerts
  ALLOW NOTIFICATIONS  
  For Daily Alerts

  BBK 9 : ಬಿಗ್ ಬಾಸ್ ಮನೆಯಲ್ಲಿ 'ಮರ್ಯಾದೆ' ಪ್ರಶ್ನೆ: ಕಣ್ಣೀರಿಟ್ಟ ಕಾವ್ಯಾಶ್ರೀ

  |

  ಕನ್ನಡ ಬಿಗ್‌ ಬಾಸ್‌ ಸೀಸನ್‌ 9ರ ಸ್ಫರ್ಧಿಗಳ ಪಯಣ ಒಂದು ವಾರ ಪೂರ್ಣಗೊಂಡಿದೆ. ಮೊದಲ ವಾರ ಕಿಲಾಡಿ ಜೋಡಿ ಟಾಸ್ಕ್‌ನಲ್ಲಿ ಎಲ್ಲಾ ಸ್ಫರ್ಧಿಗಳು ಉತ್ತಮವಾಗಿ ಸ್ಪರ್ಧಿಸಿದ್ದಾರೆ. ಜೊತೆಗೆ ತಮ್ಮ ತಮ್ಮ ಕಂಫರ್ಟ್‌ಜೋನ್‌ಗಳನ್ನು ಹುಡುಕಿಕೊಂಡಿದ್ದಾರೆ. ಒಂದು ವಾರ ಸ್ಫರ್ಧಿಗಳ ಬಿಗ್ ಬಾಸ್‌ ಪಯಣ ಕಳೆದಿದ್ದು, ಬೈಕರ್‌ ಐಶ್ವರ್ಯಾ ಪಿಸೆ ಎಲಿಮಿನೇಟ್‌ ಆಗಿ ಮನೆಯಿಂದ ಹೊರಬಂದರು.

  ಹಾಡು, ಹಾಸ್ಯ,ನಗು, ಡಾನ್ಸ್‌, ನಾಟಕ ಜೊತೆಗೆ ದಿನಕ್ಕೊಂಡು ಕಿರಿಕ್‌, ಜಗಳ, ಒಬ್ಬರನೊಬ್ಬರು ಕಾಲು ಎಳೆಯುತ್ತಾ ಒಂದು ವಾರ ಕಳೆದಿರುವ ಬಿಗ್‌ ಬಾಸ್‌ ಸ್ಫರ್ಧಿಗಳು ಎರಡನೇ ವಾರಕ್ಕೆ ಕಾಲಿಟ್ಟಿದ್ದಾರೆ. ಕಳೆದ ವಾರದವೂ ಕೆಲ ಜಗಳ ಮನಸ್ತಾಪಗಳು ನಡೆದಿದ್ದು, ಜಗಳದಲ್ಲಿ ಮೊದ ಮೊದಲು ಪ್ರಶಾಂತ್ ಸಂಬರ್ಗಿ, ರೂಪೇಶ್‌ ರಾಜಣ್ಣ ಹೈಲೈಟ್‌ ಆಗುತ್ತಿದ್ದು, ಆದರೆ ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಮತ್ತಿಬ್ಬರ ಜಗಳ ಆರಂಭವಾಗಿದೆ.

  BB9: ಎಲಿಮಿನೇಶನ್‌ನಿಂದ ಪಾರಾದ ಮೊದಲ ಮೂವರ್ಯಾರು?BB9: ಎಲಿಮಿನೇಶನ್‌ನಿಂದ ಪಾರಾದ ಮೊದಲ ಮೂವರ್ಯಾರು?

  ಬಿಗ್‌ ಬಾಸ್‌ ಮನೆಯಲ್ಲಿ ವಿನೋದ್‌ ಗೊಬ್ರಗಾಲ ಹಾಗೂ ಮಂಗಳ ಗೌರಿ ಖ್ಯಾತಿ ನಟಿ ಕಾವ್ಯಾಶ್ರೀ ನಡುವಿನ ಮನಸ್ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತಮಾಷೆಯಿಂದ ಆರಂಭವಾದ ಇವರಿಬ್ಬರ ಜಗಳ ಇದೀಗ ಮಾನ ಮರ್ಯಾದೆ ಪ್ರಶ್ನೆವರೆಗೂ ಬಂದು ನಿಂತಿದ್ದು, ಇವರಿಬ್ಬರ ಮಾತುಗಳು ಇತರ ಸ್ಫರ್ಧಿಗಳಿಗೆ ಕಿರಿ ಕಿರಿ ಉಂಟು ಮಾಡುತ್ತಿದೆ.

  ಕಾವ್ಯಾಶ್ರೀ ಪ್ರಾಸ.. ವಿನೋದ್‌ಗೆ ತ್ರಾಸ..

  ಕಾವ್ಯಾಶ್ರೀ ಪ್ರಾಸ.. ವಿನೋದ್‌ಗೆ ತ್ರಾಸ..

  ಕಿಲಾಡಿ ಜೋಡಿ ಟಾಸ್ಕ್‌ ನಲ್ಲಿ ಕಾವ್ಯಾಶ್ರೀ ರೂಪೇಶ್‌ ಜೋಡಿಯಾಗಿದ್ದು, ವಿನೋದ್‌ ಗೊಬ್ರಗಾಲ ಪ್ರಶಾಂತ್‌ ಸಂಬರ್ಗಿ ಜೋಡಿಯಾಗಿದ್ದರು. ಟಾಸ್ಕ್‌ಗಳ ನಡುವೆ ಕಾವ್ಯಾಶ್ರೀ ಹಾಗೂ ವಿನೋದ್‌ ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಿದ್ದರು. ಕಳೆದ ವಾರ ಪ್ರಾಸ ಹೇಳುವ ಸಂದರ್ಭದಲ್ಲಿ ಕಾವ್ಯಾಶ್ರೀ ವಿಕ್ರಾಂತ್‌ ರೋಣದಲ್ಲಿ ಇದ್ದಾರೆ ಗುಮ್ಮ ನೀ ನನ್ನ ದೊಡ್ಡ ತಮ್ಮ ಎಂದಿದ್ದರು, ಈ ವೇಳೆ ಮಾತಿನ ಭರದಲ್ಲಿ ವಿನೋದ್‌, ಕಾವ್ಯಾಶ್ರಿ ಅವರಿಗೆ ಆಂಟಿ ಎಂದಿದ್ದರು. ವಿನೋದ್‌ ಮಾತಿಗೆ ಕಾವ್ಯಾಶ್ರೀ ಕೋಪಗೊಂಡು ಅವನ್ಯಾಕೆ ನನ್ನ ರೇಗಿಸೋದು ಎಂದು ಸಿಟ್ಟಿನಿಂದ ಬೈದಾಡಿದ್ದರು.

  BB9: ವಾರದ ಕತೆಯಲ್ಲಿ ಕೆಲವರಿಗೆ ಎಚ್ಚರಿಕೆ, ಕೆಲವರಿಗೆ ಭೇಷ್ ಎಂದ ಸುದೀಪ್BB9: ವಾರದ ಕತೆಯಲ್ಲಿ ಕೆಲವರಿಗೆ ಎಚ್ಚರಿಕೆ, ಕೆಲವರಿಗೆ ಭೇಷ್ ಎಂದ ಸುದೀಪ್

  ಎರಡನೇ ವಾರಕ್ಕೆ ಬಂದ ಮನಸ್ತಾಪ

  ಎರಡನೇ ವಾರಕ್ಕೆ ಬಂದ ಮನಸ್ತಾಪ

  ಈ ಘಟನೆ ವೇಳೆ ಇಬ್ಬರ ಮಧ್ಯೆ ಮನಸ್ತಾಪ ಆರಂಭವಾಗಿದ್ದು, ಕಾವ್ಯಾಶ್ರೀ ನನಗೆ ನಿನ್ನ ಹತ್ತಿರ ಮಾತನಾಡಲು ಇಷ್ಟ ಇಲ್ಲ. ನನ್ನ ಜೊತೆ ಮಾತನಾಡಬೇಡ ಎಂದು ವಿನೋದ್‌ಗೆ ಎಲ್ಲರೆದುರು ಎಚ್ಚರಿಕೆ ಕೊಟ್ಟಿದ್ದರು. ಇಷ್ಟಾದರೂ ಮಾತನಾಡಲು ಹೋದ ವಿನೋದ್ ವಿರುದ್ಧ ಕಾವ್ಯಾಶ್ರೀ ಕಿರುಚಾಡಿದ್ದರು. ಬಳಿಕ ಇಬ್ಬರು ಸಮಾಧಾನಗೊಂಡಿದ್ದರು. ಮೊದಲ ವಾರದಲ್ಲಿ ಆರಂಭವಾದ ಜಗಳ ಈಗ ಎರಡನೇ ವಾರಕ್ಕೆ ಬಂದು ತಲುಪಿದೆ.

  ಅನ್ನ ಹಾಕು ಎಂದಿದ್ದಕ್ಕೆ ಅಸಮಧಾನ ಸ್ಟೋಟ

  ಅನ್ನ ಹಾಕು ಎಂದಿದ್ದಕ್ಕೆ ಅಸಮಧಾನ ಸ್ಟೋಟ

  ಬಿಗ್‌ ಬಾಸ್‌ ಕನ್ನಡ ಸೀಜನ್‌ 9ರ ಹತ್ತನೇ ದಿನದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಮತ್ತೆ ಕಾವ್ಯಾಶ್ರೀ ಹಾಗೂ ವಿನೋದ್‌ ಜಗಳವಾಡಿದ್ದು, ಬಿಗ್‌ ಬಾಸ್‌ ಮನೆಯಲ್ಲಿ ಮಾರ್ಯದೆ ಪ್ರಶ್ನೆ ಉದ್ಭವವಾಗಿದೆ. ಎಲ್ಲರೂ ಒಟ್ಟಿಗೆ ಊಟ ಮಾಡುವಾಗ ವಿನೋದ್‌ ಎಲ್ಲರೆದುರು ಕಾವ್ಯಾಶ್ರೀ ಬಳಿ ಬಂದು ಅನ್ನ ಹಾಕು ಎಂದಿದ್ದಾರೆ. ಇದರಿಂದ ಕಾವ್ಯಾಶ್ರೀಗೆ ಬೇಸರವಾಗಿದ್ದು, ನಾನೇನು ಅವನ ಮನೆಯ ಆಳ ಎಂದು ರಾಕೇಶ್‌ ಬಳಿ ಅಸಮಾಧಾನ ತೋಡಿಕೊಂಡಿದ್ದರು.

  Bigg Boss Kannada 9: ಸಾನ್ಯಾ-ರೂಪೇಶ್ ನಡುವೆ ಅಂತರ ಜಾಸ್ತಿ ಮಾಡಲು ಐಡಿಯಾ ಕೊಟ್ರಾ ಆರ್ಯವರ್ಧನ್?Bigg Boss Kannada 9: ಸಾನ್ಯಾ-ರೂಪೇಶ್ ನಡುವೆ ಅಂತರ ಜಾಸ್ತಿ ಮಾಡಲು ಐಡಿಯಾ ಕೊಟ್ರಾ ಆರ್ಯವರ್ಧನ್?

  ಕಣ್ಣೀರು ಹಾಕಿದ ವಿನೋದ್‌ ಗೊಬ್ರಗಾಲ

  ಕಣ್ಣೀರು ಹಾಕಿದ ವಿನೋದ್‌ ಗೊಬ್ರಗಾಲ

  ವಿನೋದ್‌ ಕೂಡ ಈ ಘಟನೆಯಿಂದ ಬೇಸರಗೊಂಡಿದ್ದು, ಬೆಲೆನೆ ಇಲ್ವಾ ನನಗಿಲ್ಲಿ ಎಂದಿದ್ದಾರೆ. ಬಳಿಕ ತಾವಾಗಿಯೇ ಕಾವ್ಯಾಶ್ರಿ ಅವರ ಬಳಿ ಹೋಗಿ ಕುಳಿತಿದ್ದಾರೆ. ಈ ವೇಳೆ ಕಾವ್ಯಾಶ್ರಿ, ನನಗೆ ಇಷ್ಟ ಇಲ್ಲದಿರುವ ಕಪಿ ನನ್ನ ಹಿಂದೆ ಬಿಂದಿದ್ದಾರೆ ಎಂದು ಅಪಹಾಸ್ಯ ಮಾಡಿದ್ದಾರೆ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದ್ದು, ಇಬ್ಬರೂ ಒಬ್ಬರ ಬಗ್ಗೆ ಮತ್ತೊಬ್ಬರು ಅಸಮಧಾನ ತೋಡಿಕೊಂಡು ಕಣ್ಣೀರು ಹಾಕಿದ್ದಾರೆ. ಉಳಿದ ಸ್ಫರ್ಧಿಗಳು ಕಾವ್ಯಾಶ್ರಿ ಹಾಗೂ ವಿನೋದ್‌ಗೆ ಸಮಾಧಾನ ಹೇಳಿದ್ದಾರೆ.

  English summary
  On 10th day of Boss Season 9, Kavyashree And Vinod Gobbaragala fight continues in Bigg Boss house.
  Monday, October 3, 2022, 15:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X