Don't Miss!
- Sports
ICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂ
- News
74th Republic Day: ದೇಶಾದ್ಯಂತ ಗಣರಾಜ್ಯೋತ್ಸವ, ದೇಶಭಕ್ತಿ ಮೆರೆದ ರಾಜ್ಯಗಳು
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Automobiles
ಪ್ರತಿ ತಿಂಗಳಿಗೆ Just 7 ಸಾವಿರ ಪಾವತಿಸುವ ಮೂಲಕ ಹೊಸ ಕಾರು ಖರೀದಿಸಿ..
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಿಗ್ ಬಾಸ್ ಮನೆಗೆ ಇದೇ ಮೊದಲ ಬಾರಿಗೆ ಆಗಮಿಸಿರುವ 9 ಮಂದಿ 'ನವೀನರು' ಯಾರು, ಅವರ ಹಿನ್ನೆಲೆಯೇನು?
ಬಿಗ್ ಬಾಸ್ ಕನ್ನಡ ಒಂಬತ್ತನೇ ಆವೃತ್ತಿ ಆರಂಭವಾಗುವುದಕ್ಕೂ ಮುನ್ನ ಬಿಗ್ ಬಾಸ್ ಕನ್ನಡ ಓಟಿಟಿ ರಿಯಾಲಿಟಿ ಶೋ ನಡೆದಿತ್ತು. ಈ ಶೋನಲ್ಲಿ ಭಾಗವಹಿಸಿದ್ದ ಹದಿನಾರು ಸ್ಪರ್ಧಿಗಳ ಪೈಕಿ ನಾಲ್ವರು ಸ್ಪರ್ಧಿಗಳು ಅರ್ಹತೆ ಗಿಟ್ಟಿಸಿಕೊಂಡು ಬಿಗ್ ಬಾಸ್ ಕನ್ನಡ ಒಂಬತ್ತನೇ ಆವೃತ್ತಿಗೆ ಆಯ್ಕೆಯಾಗಿದ್ದಾರೆ.
ಈ ನಾಲ್ವರ ಜತೆಗೆ ಈ ಹಿಂದೆ ಬಿಗ್ ಬಾಸ್ ಆಡಿರುವ ಅನುಭವವಿರುವ 5 ಮಂದಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ ಹಾಗೂ 9 ಹೊಸ ಸ್ಪರ್ಧಿಗಳು ಬಿಗ್ ಬಾಸ್ ಪ್ರವೇಶಿಸಿದ್ದಾರೆ. ಈ ಮೂಲಕ ಈ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋಗೆ ಈಗಾಗಲೇ ಬಿಗ್ ಬಾಸ್ ಮನೆಯ ಅನುಭವ ಇರುವ 9 ಸ್ಪರ್ಧಿಗಳು ಹಾಗೂ ಬಿಗ್ ಬಾಸ್ ಮನೆಯ ಅನುಭವವೇ ಇಲ್ಲದ 9 ಹೊಸ ಸ್ಪರ್ಧಿಗಳು ಪ್ರವೇಶಿಸಿದ್ದಾರೆ.
'ಬಿಗ್
ಬಾಸ್'
ಕನ್ನಡದಲ್ಲಿಲ್ಲ
ಎಂದಿದ್ದ
ರೂಪೇಶ್
ರಾಜಣ್ಣ
ಇಂದು
ಅದೇ
ಶೋನಲ್ಲಿ!;
ಟ್ರೋಲ್
ಮೇಲೆ
ಟ್ರೋಲ್
ಹೀಗೆ ಅನುಭವ ಇರುವ ಸ್ಪರ್ಧಿಗಳಿಗೆ 'ಪ್ರವೀಣರು' ಹಾಗೂ ಅನುಭವ ಇಲ್ಲದ ಸ್ಪರ್ಧಿಗಳಿಗೆ 'ನವೀನರು' ಎಂದು ಹೆಸರಿಡಲಾಗಿದೆ. ಇನ್ನು ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ 'ನವೀನರು' ಯಾರು ಹಾಗೂ ಅವರು ಯಾವ ಕ್ಷೇತ್ರದಿಂದ ಬಂದಿದ್ದಾರೆ ಎಂಬುದರ ಕಿರು ಪರಿಚಯ ಇಲ್ಲಿದೆ.

ಮಯೂರಿ, ಕಾವ್ಯಶ್ರೀ, ಅಮೂಲ್ಯ ಗೌಡ
ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಖ್ಯಾತಿಯನ್ನು ಪಡೆದ ನಟಿ ಮಯೂರಿ ಕ್ಯಾತರಿ ನಂತರ ಚಿತ್ರರಂಗಕ್ಕೂ ಪ್ರವೇಶಿಸಿ ಕೃಷ್ಣಲೀಲಾ ರೀತಿಯ ಹಿಟ್ ಚಿತ್ರದಲ್ಲಿ ಅಭಿನಯಿಸಿದ ಅನುಭವ ಹೊಂದಿದ್ದಾರೆ ಹಾಗೂ ಇನ್ನೊಂದಷ್ಟು ಚಿತ್ರಗಳಲ್ಲಿ ನಟಿ ಮಯೂರಿ ಅಭಿನಯಿಸಿದ್ದಾರೆ.
ಮಂಗಳಗೌರಿ ಧಾರಾವಾಹಿ ಮೂಲಕ ವೀಕ್ಷಕರಿಗೆ ಪರಿಚಿತಳಾಗಿರುವ ನಟಿ ಕಾವ್ಯಶ್ರೀ ಗೌಡ ಕಿರುತೆರೆ ಹಿನ್ನಲೆಯನ್ನು ಹೊಂದಿದ್ದಾರೆ.
ಸ್ಪರ್ಧಿ ಅಮೂಲ್ಯ ಗೌಡ ಕೂಡ ಮಯೂರಿ ಹಾಗೂ ಕಾವ್ಯಶ್ರೀ ಗೌಡ ರೀತಿ ಕಿರುತೆರೆಯಿಂದ ಗುರುತಿಸಿಕೊಂಡವರೇ. ಕಮಲಿ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದ ಅಮೂಲ್ಯ ಗೌಡ ಧಾರಾವಾಹಿಯಿಂದ ತುಸು ಗುರುತಿಸಿಕೊಂಡಿದ್ದೇನೆ ಹಾಗೂ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಮತ್ತಷ್ಟು ಜನರಿಗೆ ರೀಚ್ ಆಗಬೇಕು ಎಂಬ ಗುರಿ ಹೊಂದಿದ್ದಾರೆ.

ದರ್ಶ್ ಚಂದ್ರಪ್ಪ, ನೇಹಾ ಗೌಡ ಹಾಗೂ ವಿನೋದ್ ಗೊಬ್ರ
ಯುವ ನಟ ಹಾಗೂ ಉದ್ಯಮಿ ಆಗಿರುವ ದರ್ಶ್ ಚಂದ್ರಪ್ಪ ಕೆಲ ಧಾರಾವಾಹಿ ಹಾಗೂ ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ದರ್ಶ್ ಚಂದ್ರಪ್ಪ ಅಭಿನಯದ ಜಾಲಿ ಬ್ಯಾಚುಲರ್ಸ್ ಕಿರುಚಿತ್ರ ಬಿಡುಗಡೆಯಾಗಬೇಕಿದ್ದು, ಈ ಕಿರುಚಿತ್ರದಲ್ಲಿ ದರ್ಶ್ ಚಂದ್ರಪ್ಪ ಅವರಿಗೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಚಂದನ ನಾಯಕಿಯಾಗಿ ನಟಿಸಿದ್ದಾರೆ.
ನೇಹ ಗೌಡ / ನೇಹಾ ರಾಮಕೃಷ್ಣ ಈ ಹೆಸರು ಕೇಳಿದಾಗ ಆಕೆ ಯಾರೆಂದು ಜನ ಕೇಳಬಹುದು, ಅದೇ ಲಕ್ಷ್ಮಿಬಾರಮ್ಮ 'ಗೊಂಬೆ' ಎಂದ ಕೂಡಲೇ 'ಓ ಅವರಾ ಗೊತ್ತು ಬಿಡಿ' ಎಂದು ಹೇಳುವವರೇ ಹೆಚ್ಚು. ಹೀಗೆ ಗೊಂಬೆ ಪಾತ್ರದ ಮೂಲಕ ಕರ್ನಾಟಕದ ಕಿರುತೆರೆ ವೀಕ್ಷಕರಿಗೆ ಪರಿಚಿತಳಾಗಿರುವ ನೇಹಾ ಗೌಡ ನವೀನ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
ವಿನೋದ್ ಗೊಬ್ರ, ಹೀಗೆ ವಿಶೇಷ ಹಾಗೂ ವಿಚಿತ್ರ ಹೆಸರಿನಿಂದಲೇ ವೀಕ್ಷಕರ ಗಮನ ಸೆಳೆದಿರುವ ಈತ ಮಜಾ ಭಾರತ ಕಾರ್ಯಕ್ರಮದ ಸ್ಪರ್ಧಿಯಾಗಿದ್ದರು. ಅಷ್ಟೇನೂ ಫೇಮ್ ಹೊಂದಿಲ್ಲದೇ ಇದ್ದರೂ ಮನೆಗೆ ಎಂಟ್ರಿ ಕೊಟ್ಟ ನಂತರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೀಡಾಗಿರುವ ಈತ ಕೂಡ ನವೀನ ಸ್ಪರ್ಧಿ.

ನವಾಜ್, ಐಶ್ವರ್ಯಾ ಪಿಸ್ಸೆ ಹಾಗೂ ರೂಪೇಶ್ ರಾಜಣ್ಣ
ಇನ್ನು ನವಾಜ್ ಸಾಮಾಜಿಕ ಜಾಲತಾಣದಲ್ಲಿ ಫೇಸ್ ಬುಕ್ ಖಾತೆ ಹೊಂದಿರುವವರಿಗೆ ಅತಿ ಪರಿಚಿತ. ತನ್ನ ಪ್ರಾಸ ಪದಗಳ ಮೂಲಕ ಸಿನಿಮಾಗಳ ವಿಮರ್ಶೆ ಮಾಡಿ ವೈರಲ್ ಆದ ನವಾಜ್ ಸದ್ಯ ಬಿಗ್ ಬಾಸ್ ಪ್ರವೇಶಿಸಿದ್ದಾನೆ.
ಐಶ್ವರ್ಯಾ ಪಿಸ್ಸೆ ಇಲ್ಲಿಯವರೆಗೂ ಚಿತ್ರರಂಗದಲ್ಲಿ ಕೆಲಸ ಮಾಡಿಲ್ಲ, ಮೂಲತಃ ಬೈಕರ್ ಆಗಿರುವ ಐಶ್ವರ್ಯಾ ಪಿಸ್ಸೆ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ರೂಪೇಶ್ ರಾಜಣ್ಣ ಕೂಡ ಸಾಮಾಜಿಕ ಜಾಲತಾಣದ ಮೂಲಕ ಗುರುತಿಸಿಕೊಂಡು ಫೇಮಸ್ ಆದವರು. ಸದಾ ಕನ್ನಡದ ಪರ ಹೋರಾಡುವ ರೂಪೇಶ್ ರಾಜಣ್ಣ ಈ ಹಿಂದೆ ಇದೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿಯೂ ಸಹ ಕನ್ನಡ ಬಳಕೆ ಹೆಚ್ಚಾಗಿ ಇಲ್ಲ ಹೀಗಾಗಿ ಎಂದಿಗೂ ನಾನು ಬಿಗ್ ಬಾಸ್ ಪ್ರವೇಶಿಸುವುದಿಲ್ಲ ಎಂದು ನೀಡಿದ ಹೇಳಿಕೆ ಇದೀಗ ವೈರಲ್ ಆಗಿದೆ.