For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಕನ್ನಡದಲ್ಲಿಲ್ಲ ಎಂದಿದ್ದ ರೂಪೇಶ್ ರಾಜಣ್ಣ ಇಂದು ಅದೇ ಶೋನಲ್ಲಿ!; ಟ್ರೋಲ್ ಮೇಲೆ ಟ್ರೋಲ್

  |

  ಬಿಗ್ ಬಾಸ್ ಕನ್ನಡ ಓಟಿಟಿ ಮುಕ್ತಾಯವಾದ ನಂತರ ನಿನ್ನೆಯಿಂದ ( ಸೆಪ್ಟೆಂಬರ್ 24 ) ಬಿಗ್ ಬಾಸ್ ಕನ್ನಡ ಒಂಬತ್ತನೇ ಟಿವಿ ಆವೃತ್ತಿ ಆರಂಭವಾಗಿದೆ. ಈ ಶೋನಲ್ಲಿ ಒಂಬತ್ತು ನವೀನರು ಹಾಗೂ ಒಂಬತ್ತು ಪ್ರವೀಣರು ಮನೆಗೆ ಕಾಲಿಟ್ಟಿದ್ದಾರೆ. ನವೀನರು ಎಂದರೆ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಗೆ ಕಾಲಿಟ್ಟವರು ಹಾಗೂ ಪ್ರವೀಣರು ಎಂದರೆ ಈಗಾಗಲೇ ಬಿಗ್ ಬಾಸ್ ಮನೆಯ ಅನುಭವ ಹೊಂದಿರುವವರು ಎಂದರ್ಥ.

  ಹೌದು, ಹಳೆಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿದ್ದವರು ಎರಡನೇ ಸಲ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ಹಾಗೂ ಈ ಬಾರಿ ನೂತನವಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿರುವ ಸ್ಪರ್ಧಿಗಳೂ ಸಹ ಸಾಕಷ್ಟು ಕುತೂಹಲ ಮೂಡಿಸಿದ್ದು, ಮನರಂಜನೆ ನೀಡುವ ನಿರೀಕ್ಷೆ ಹೆಚ್ಚಿದೆ. ಕಮಲಿ ಧಾರಾವಾಹಿ ನಟಿ ಅಮೂಲ್ಯ ಗೌಡ, ರಿವ್ಯೂ ನವಾಜ್, ನೇಹಾ ಗೌಡ ಹಾಗೂ ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ರೀತಿಯ ಸ್ಪರ್ಧಿಗಳ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಟಾಕ್ ಶುರುವಾಗಿದೆ.

  Anupama Gowda: ಬಿಗ್ ಬಾಸ್ 18ನೇ ಸ್ಪರ್ಧಿಯಾಗಿ ಅನುಪಮಾ ಗೌಡ ಮರುಪ್ರವೇಶAnupama Gowda: ಬಿಗ್ ಬಾಸ್ 18ನೇ ಸ್ಪರ್ಧಿಯಾಗಿ ಅನುಪಮಾ ಗೌಡ ಮರುಪ್ರವೇಶ

  ಅದರಲ್ಲಿಯೂ ನವಾಜ್ ಹಾಗೂ ರೂಪೇಶ್ ರಾಜಣ್ಣ ಕುರಿತ ಚರ್ಚೆಗಳು ಹೆಚ್ಚಿದ್ದು, ಈ ಇಬ್ಬರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಕನ್ನಡ ಪ್ರೇಮಿ ರೂಪೇಶ್ ರಾಜಣ್ಣ ಎಲ್ಲಾ ಕಡೆ ಕನ್ನಡ ಭಾಷೆ ಬಳಕೆಯಾಗಬೇಕು, ಕರ್ನಾಟಕದಲ್ಲಿ ಯಾವುದೇ ಕಂಪೆನಿ ಇರಲಿ ಅಥವಾ ಕಾರ್ಯಕ್ರಮವಿರಲಿ ಅಲ್ಲಿ ಕನ್ನಡದ ನಾಮಫಲಕ ಇರಲೇಬೇಕು ಎಂದು ಅನೇಕ ಭಾರಿ ಹೋರಾಟ ನಡೆಸಿದ್ದಾರೆ. ಅದೇ ರೀತಿ ಈ ಹಿಂದೆ ಇದೇ ಬಿಗ್ ಬಾಸ್ ರಿಯಾಲಿಟಿ ಶೋ ವಿರುದ್ಧವೂ ಕೂಡ ರೂಪೇಶ್ ರಾಜಣ್ಣ ಗುಡುಗಿದ್ದರು. ಆ ವಿಡಿಯೋ ಈಗ ವೈರಲ್ ಆಗಿದ್ದು ಇದರ ಬಗ್ಗೆ ಭಿನ್ನ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

   2017ರಲ್ಲಿ ಬಿಗ್ ಬಾಸ್ ವಿರುದ್ಧ ರೂಪೇಶ್ ರಾಜಣ್ಣ ಗುಡುಗು

  2017ರಲ್ಲಿ ಬಿಗ್ ಬಾಸ್ ವಿರುದ್ಧ ರೂಪೇಶ್ ರಾಜಣ್ಣ ಗುಡುಗು

  ಹೌದು, 2017ರ ಸಮಯದಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ವಿರುದ್ಧ ರೂಪೇಶ್ ರಾಜಣ್ಣ ರೊಚ್ಚಿಗೆದ್ದಿದ್ದರು. ಇದು ಕನ್ನಡದ ರಿಯಾಲಿಟಿ ಶೋ ಆಗಿದ್ದು, ಷೋನ ಬಹುತೇಕ ಕಡೆ ಆಂಗ್ಲ ಭಾಷೆಯಲ್ಲಿಯೇ ಬಿಗ್ ಬಾಸ್ ನಾಮಫಲಕವನ್ನು ಬಳಸಲಾಗಿದೆ ಹಾಗೂ ಇದರ ವಿರುದ್ಧ ಈಗಾಗಲೇ ಸಂಬಂಧಪಟ್ಟವರನ್ನು ಭೇಟಿ ಮಾಡಿ ನಾಮಫಲಕಗಳನ್ನು ಕನ್ನಡಕ್ಕೆ ಬದಲಾಯಿಸಿ ಎಂದು ಕೋರಿಕೆ ಇಟ್ಟಿದ್ದೆ ಆದರೆ ಇಲ್ಲಿಯವರೆಗೂ ಆ ಕಾರ್ಯ ನಡೆದೇ ಇಲ್ಲ ಎಂದು ವಿಡಿಯೋದಲ್ಲಿ ಕಿಡಿಕಾರಿದ್ದರು. ಮನೆಯೊಳಗಡೆ ಆಂಗ್ಲ ಭಾಷೆ ಬಳಸಿದ ತಕ್ಷಣ ಬಜರ್ ಒತ್ತಿ ಕನ್ನಡದಲ್ಲಿ ಮಾತನಾಡಿ ಎಂದು ಘೋಷಣೆ ಮಾಡ್ತೀರಾ ಆದರೆ ನಾಮಫಲಕಗಳೇ ಆಂಗ್ಲ ಭಾಷೆಯಲ್ಲಿವೆ ಎಂದು ರೂಪೇಶ್ ರಾಜಣ್ಣ ಬಿಗ್ ಬಾಸ್ ಆಯೋಜಕರ ವಿರುದ್ಧ ಕೆಂಡ ಕಾರಿದ್ದರು.

   ಸುದೀಪ್ ವಿರುದ್ಧವೂ ರೂಪೇಶ್ ರಾಜಣ್ಣ ಕಿಚ್ಚು

  ಸುದೀಪ್ ವಿರುದ್ಧವೂ ರೂಪೇಶ್ ರಾಜಣ್ಣ ಕಿಚ್ಚು

  ಕೇವಲ ಬಿಗ್ ಬಾಸ್ ಆಯೋಜಕರು ಮಾತ್ರವಲ್ಲದೆ ನಟ ಕಿಚ್ಚ ಸುದೀಪ್ ವಿರುದ್ಧವೂ ಕೂಡ ರೂಪೇಶ್ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದರು. ನೀವು ಚಿತ್ರಗಳಲ್ಲಿ ಕನ್ನಡದ ಬಗ್ಗೆ ಒಳ್ಳೊಳ್ಳೆ ಸಂದೇಶವನ್ನು ನೀಡಿದ್ದೀರಾ, ಸಿನಿಮಾದಾಚೆಗೂ ಸಹ ಕನ್ನಡವೆಂದರೆ ವಿಶೇಷ ಗೌರವ ನೀಡಿದ್ದೀರಾ, ಆದರೆ ಬಿಗ್ ಬಾಸ್ ಮನೆ ಆಂಗ್ಲಮಯವಾಗಿದ್ದು ನೀವು ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

   ರೂಪೇಶ್ ರಾಜಣ್ಣ ಒತ್ತಾಯ ನಿಜವಾಯ್ತಾ?

  ರೂಪೇಶ್ ರಾಜಣ್ಣ ಒತ್ತಾಯ ನಿಜವಾಯ್ತಾ?

  ಮನೆಯ ಮುಂಭಾಗದ ನಾಮಫಲಕ ಕನ್ನಡದ ಬದಲು ಆಂಗ್ಲ ಭಾಷೆಯಲ್ಲಿದೆ ಹಾಗೂ ವೇದಿಕೆ ಮೇಲೆ ಇರುವ ಪರದೆಗಳಲ್ಲಿ ಬರೀ ಆಂಗ್ಲ ಭಾಷೆಯನ್ನೇ ಬಳಸಲಾಗಿದೆ, ಅದನ್ನು ಕನ್ನಡಕ್ಕೆ ಬದಲಿಸಿ ಎಂದು ರೂಪೇಶ್ ರಾಜಣ್ಣ ಒತ್ತಾಯ ಮಾಡಿದ್ದರು. ಈ ಪೈಕಿ ಮನೆಯ ಮುಂದಿನ ನಾಮಫಲಕವನ್ನು ಕನ್ನಡಕ್ಕೆ ಬದಲಿಸಲಾಗಿದ್ದು, ವೇದಿಕೆ ಮೇಲಿನ ಪರದೆಯ ಮೇಲೂ ಸಹ ಕನ್ನಡವನ್ನು ಬಳಸಲಾಗುತ್ತಿದೆ. ಆದರೆ ವೇದಿಕೆಯ ಮೇಲ್ಚಾವಣಿಯ ನಾಮಫಲಕ ಹಾಗೂ ಇನ್ನುಳಿದ ಕಡೆ ಇಂದಿಗೂ ಸಹ ಬಿಗ್ ಬಾಸ್ ಹೆಸರು ಆಂಗ್ಲಭಾಷೆಯಲ್ಲಿಯೇ ದೊಡ್ಡದಾಗಿ ಇದೆ.

   ರೂಪೇಶ್ ರಾಜಣ್ಣ ವಿರುದ್ಧ ಶುರುವಾಯ್ತು ಗೇಲಿ

  ರೂಪೇಶ್ ರಾಜಣ್ಣ ವಿರುದ್ಧ ಶುರುವಾಯ್ತು ಗೇಲಿ

  ರೂಪೇಶ್ ರಾಜಣ್ಣ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆರಂಭವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಕನ್ನಡವೇ ಇಲ್ಲ ಎಂದು ಕಿಡಿಕಾರಿದ್ದ ರೂಪೇಶ್ ರಾಜಣ್ಣ ಇಂದು ಅದೇ ಮನೆಗೆ ಸ್ಪರ್ಧಿಯಾಗಿ ಹೋಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ.

  English summary
  Roopesh Rajanna's old video about Bigg Boss goes viral and trolled on social media. Read on
  Sunday, September 25, 2022, 15:03
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X