»   » ಮೂರು ವಾರದಿಂದ ರೇಪ್ ಆಗಿದ್ದೀನಿ ಎಂದ ಜೋಶಿ

ಮೂರು ವಾರದಿಂದ ರೇಪ್ ಆಗಿದ್ದೀನಿ ಎಂದ ಜೋಶಿ

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ ಬಿಗ್ ಬಾಸ್ ಬಗ್ಗೆ ಹಲವಾರು ಅಪಸ್ವರಗಳು ಕೇಳಿಬರುತ್ತಿವೆ. ಈ ಕಾರ್ಯಕ್ರಮದಲ್ಲಿ ಕನ್ನಡತನವೇ ಇಲ್ಲ. ಈ ರೀತಿ ಕಾರ್ಯಕ್ರಮಗಳ ಅಗತ್ಯವಾದರೂ ಏನಿತ್ತು? ಇದೊಂದು ಮನೆಹಾಳು ಕಾರ್ಯಕ್ರಮ ಎಂಬ ಪ್ರಶ್ನೆಗಳ ಸುರಿಮಳೆಯೇ ಮಾಡಲಾಗುತ್ತಿದೆ.

ಈ ಎಲ್ಲಾ ಅಪಸ್ವರಗಳ ನಡುವೆಯೂ ಕಾರ್ಯಕ್ರಮ ದಿನೇದಿನೇ ಜನಪ್ರಿಯವಾಗುತ್ತಿದೆ. ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿಯ ಬಿಗ್ ಬಾಸ್ ಕಾರ್ಯಕ್ರವನ್ನು ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ಸಂಪೂರ್ಣವಾಗಿ ಅನುಕರಿಸದೆ ತನ್ನದೇ ಆದ ಶೈಲಿಯಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ ಎಂದೇ ಹೇಳಬೇಕು.

ಈಗ ಬಿಗ್ ಬಾಸ್ ವಾಹಿನಿಯ ಮೂರು ದಿನಗಳ ಹೈಲೈಟ್ಸ್ ಬಗ್ಗೆ ದೃಷ್ಟಿ ಹರಿಸೋಣ. 27, 28 ಹಾಗೂ 29ನೇ ದಿನ ಬಿಗ್ ಬಾಸ್ ಮನೆಯಲ್ಲಿ ಏನೇನು ನಡೀತು ಎಂಬುದನ್ನು ನೋಡೋಣ ಬನ್ನಿ. ಈ ಮೂರು ದಿನವೂ ಎಲ್ಲರ ಕೆಂಗಣ್ಣಿಗೆ ಗುರಿಯಾದವನು ವಿನಾಯಕ ಜೋಶಿ.

ಜೋಶಿ ಅವರು ಏನೋ ಮಾಡಲು ಇನ್ನೇನು ಆಗುತ್ತಿದೆ. ಒಮ್ಮೆ ಕಣ್ಣೀರಿಡುತ್ತಾರೆ. ಇನ್ನೊಮ್ಮೆ ಎಲ್ಲರೊಂದಿಗೂ ಬೆರೆತಂತೆ ನಾಟಕ ಮಾಡುತ್ತಾರೆ. ಅಲ್ಲಿಯದು ಇಲ್ಲಿಗೆ, ಇಲ್ಲಿನದು ಅಲ್ಲಿಗೆ ಮುಟ್ಟಿಸುವ ಕೆಲಸ ಮಾಡುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ನಾರಾಯಣ ನಾರಾಯಣ ಎಂದು ನಾರದನ ಕೆಲಸ ಮಾಡುತ್ತಿರುವ ಜೋಶಿಯನ್ನು ಯಾರೂ ನಂಬುತ್ತಿಲ್ಲ.

ಜೋಶಿ, ಅಪರ್ಣಾ ನಡುವೆ ಮಾತಿನ ಚಕಮಕಿ

ಜೋಶಿ ಹಾಗೂ ಅಪರ್ಣಾ ನಡುವೆ ಮಾತಿನ ಚಕಮಕಿ ನಡೆಯಿತು. ಅದು ಇನ್ನಷ್ಟು ಕಿಚ್ಚೆಬ್ಬಿಸುವ ಸಾಧ್ಯತೆಗಳಿದ್ದವಾದರೂ ಸದ್ಯಕ್ಕೆ ತಣ್ಣಗಾಗಿದೆ. ಇಬ್ಬರಿಗೂ ಈಗ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿಲ್ಲ. ಇನ್ನೊಂದು ಕಡೆ ಜೋಶಿ ವಿರುದ್ಧ ಎಲ್ಲರೂ ತಿರುಗಿಬಿದ್ದಿದ್ದಾರೆ.

ವಿನಾಯಕ ಜೋಶಿ ನಾಮಿನೇಟ್

ಮನೆಯ ಬಹುತೇಕ ಮಂದಿ ತಿಲಕ್, ಅನುಶ್ರೀ, ಅರುಣ್ ಸಾಗರ್, ಅಪರ್ಣಾ, ವಿಜಯ ರಾಘವೇಂದ್ರ ಇವರೆಲ್ಲಾ ಜೋಶಿ ಹೆಸರನ್ನು ನಾಮಿನೇಟ್ ಮಾಡಿದ್ದಾರೆ. ಈ ವಾರ ಬಹುತೇಕ ಜೋಶಿ ಮನೆಯಿಂದ ಹೊರಬೀಳುವುದು ಖಾತ್ರಿಯಾಗಿದೆ.

ಬ್ರಹ್ಮಾಂಡ ಬಗೆಗೆ ಮೌನ ತಳೆದ ನರ್ಸಮ್ಮ

ಇನ್ನೊಂದು ಕಡೆ ನರ್ಸ್ ಜಯಲಕ್ಷ್ಮಿ ಆರಂಭದಲ್ಲಿ ಇದ್ದಂತೆ ಇಲ್ಲಿ ಯಾರ ಬಗ್ಗೆಯೂ ತುಂಬಾ ಸಲುಗೆಯಿಂದ ನಡೆದುಕೊಳ್ಳುತ್ತಿಲ್ಲ. ಬ್ರಹ್ಮಾಂಡ ಜ್ಯೋತಿಷಿ ನರೇಂದ್ರ ಬಾಬು ಶರ್ಮಾ ವಿರುದ್ಧವೂ ನರ್ಸಮ್ಮ ಮುಗುಮ್ಮಾಗಿದ್ದಾರೆ. ಇನ್ನೊಂದು ಕಡೆ ಚಂದ್ರಿಕಾ ಅವರು ಬ್ರಹ್ಮಾಂಡ ಬಗ್ಗೆ ಹುಷಾರಾಗಿರುವಂತೆ ನರ್ಸಮ್ಮನಿಗೆ ಎಚ್ಚರಿಸಿದ್ದಾರೆ.

ನರ್ಸಮ್ಮ, ಚಂದ್ರಿಕಾ ಗುಸುಗುಸು ಪಿಸಪಿಸ

ಗುರೂಜಿ ಹತ್ತಿರ ಹೆಚ್ಚಾಗಿ ಮಾತನಾಡಬೇಡಿ. ಬೇರೆಯವರ ಬಳಿಯೂ ಹೆಚ್ಚಾಗಿ ಮಾತನಾಡಬೇಡಿ. ಅವರ ಭಕ್ತಾದಿಗಳು ಇನ್ಫಾರ್ಮ್ ಮಾಡ್ತಿರ್ತಾರೆ ಎಂದು ನರ್ಸಮ್ಮ ಹಾಗೂ ಬ್ರಹ್ಮಾಂಡ ಗುಸುಗುಸು ಪಿಸಪಿಸ ಎಂದು ಮಾತನಾಡಿಕೊಂಡರು.

ಬ್ರಹ್ಮಾಂಡ ಜೋತಿಷಿಗಳ ಮೌನವ್ರತ

ಇಪ್ಪತ್ತೊಂಬ್ಬತ್ತನೇ ದಿನ ಬ್ರಹ್ಮಾಂಡ ಜ್ಯೋತಿಷಿಗಳು ಮೌನವ್ರತಕ್ಕೆ ಶರಣಾಗಿದ್ದರು. ಅವರು ಯಾರ ಜೊತೆಗೂ ಮಾತನಾಡುತ್ತಿರಲಿಲ್ಲ. ಆದರೆ ಬಿಗ್ ಬಾಸ್ ಕನ್ಫೆಷನ್ ರೂಮಿಗೆ ಕರೆದಾಗ ಮಾತ್ರ ಬಾಯ್ಬಿಟ್ಟರು. ಅಲ್ಲಿಂದ ಹೊರಬಂದ ಮೇಲೆ ಮತ್ತೆ ಮೌನವ್ರತಕ್ಕೆ ಶರಣಾದರು.

ಬರ್ತ್ ಡೇ ಆಚರಿಸಿಕೊಂಡ ಚಂದ್ರಿಕಾ

ಇನ್ನೊಂದು ಕಡೆ ಚಂದ್ರಿಕಾ ಅವರ ಹುಟ್ಟುಹಬ್ಬವನ್ನು ಮನೆಯ ಎಲ್ಲ ಸದಸ್ಯರು ಆಚರಿಸಿ ಸಂಭ್ರಮಿಸಿದರು. ಆದರೆ ಚಂದ್ರಿಕಾ ಅವರ ಮುಖದಲ್ಲಿ ಮಾತ್ರ ಆ ಸಂಭ್ರಮ ಕಾಣುತ್ತಿರಲಿಲ್ಲ. ಕಾರಣ ಪ್ರತಿವರ್ಷ ಮಗನ ಜೊತೆ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದೆ. ಈಗ ಅವನು ತಮ್ಮ ಜೊತೆಯಲ್ಲಿ ಇಲ್ಲದಿರುವುದು ನೋವು ಅವರನ್ನು ಕಾಡುತ್ತಿತ್ತು.

ಚಂದ್ರಿಕಾ ಅವರಿಗೆ ಸಿಹಿಕಹಿ ಸಂಭ್ರಮ

ಚಂದ್ರಿಕಾ ಅವರಿಗೆ ಒಂದು ಕಡೆ ಹುಟ್ಟುಹಬ್ಬ ಸಿಹಿ ಇನ್ನೊಂದು ಕಡೆ ಎಲಿಮಿನೇಷನ್ ಗೆ ನಾಮಿನೇಟ್ ಆಗಿರುವ ಕಹಿ. ಆದರೂ ಅವರ ಮಗನ ರೆಕಾರ್ಡೆಡ್ ಸಂದೇಶವನ್ನು ಬಿಗ್ ಬಾಸ್ ಕಳುಹಿಸಿ ಅವರ ಕಣ್ಣು ಮಂಜಾಗುವಂತೆ ಮಾಡಿದ.

ಜೋಶಿ ತಾಕತ್ತಿನ ಬಗ್ಗೆ ಕೆಣಕಿದ ಅರುಣ್

ಇನ್ನೊಂದು ಕಡೆ ಅರುಣ್ ಸಾಗರ್ ಅವರು ವಿನಾಯಕ ಜೋಶಿ ಅವರನ್ನು ಕೆಣಕಿದರು. ಕಳೆದ ವಾರ ಸುದೀಪ್ ಜೊತೆ ಮಾತನಾಡುತ್ತಾ 'ನಾಯಿ' ತರಹ ಕಾದಿದ್ದೀನಿ ಎಂದಿದ್ದನ್ನು ಪ್ರಸ್ತಾಪಿಸಿದರು. ತಾಕತ್ತಿದ್ದರೆ ಎಲ್ಲರ ಎದುರು ನೇರವಾಗಿ ಮಾತನಾಡು. ಅದು ಬಿಟ್ಟು ಏನೇನೋ ಅಸಂಬದ್ಧವಾಗಿ ಮಾತನಾಡಬೇಡ ಎಂದು ಕೆಣಕಿದರು. ಅವರ ತಾಕತ್ತಿನ ಬಗ್ಗೆ ಪ್ರಶ್ನೆ ಮಾಡಿದ್ದು ಜೋಶಿ ಅವರನ್ನು ಸರಿಯಾಗಿ ಕೆಣಕಿತು.

ಈ ನನ್ ಮಕ್ಳಿಗೆ ಅರ್ಥವಾಗಲ್ಲ ಎಂಬ ಬೈಗುಳ

ಈ ನನ್ ಮಕ್ಳಿಗೆ ಏನೂ ಅರ್ಥವಾಗಲ್ಲ ಎಂದು ಯಾರನ್ನೋ ಬೈದರು. ಇದರಿಂದ ಸಿಟ್ಟಿಗೆದ್ದ ವಿಜಯ್ ರಾಘವೇಂದ್ರ, ಯಾರ ಬಗ್ಗೆ ಆ ರೀತಿ ಅಂತಿದ್ದೀಯಾ. ಅವರ ಹೆಸರು ಹೇಳು ಎಂದರು. ಇದಕ್ಕೆ ನಿಮ್ಮ ಬಗ್ಗೆಯಂತೂ ಅಲ್ಲ ರಾಘಣ್ಣ ಎಂದರು ಜಾರಿಕೊಂಡರು.

ಮೂರು ವಾರದಿಂದ ರೇಪ್ ಆಗಿದ್ದೀನಿ, ಜೋಶಿ

ನಾನೂ ಇಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಬಾತ್ ರೂಮಲ್ಲಿದ್ದ ಕೂದಲನ್ನೆಲ್ಲಾ ತೆಗೆದು ಕ್ಲೀನ್ ಮಾಡಿದ್ದೇನೆ. ನನ್ನ ಕಷ್ಟ ಯಾರ ಹತ್ತಿರ ಹೇಳಿಕೊಳ್ಳಲಿ ಎಂದರು ವಿಜಯ್ ರಾಘವೇಂದ್ರ. ಅವರ ಮಾತಿಗೆ ಧ್ವನಿಗೂಡಿಸಿದ ವಿನಾಯಕ ಜೋಶಿ, ಮೂರು ವಾರದಿಂದ ನನ್ನ ರೇಪ್ ಆಗಿ ಹೋಗಿದೆ ಎಂದರು. ಅದ್ಯಾವ ರೀತಿ ರೇಪ್ ಆಗಿದೆಯೋ ಏನೋ ಎಂಬುದನ್ನು ಅವರು ತಿಳಿಸಲಿಲ್ಲ. ಅಲ್ಲಿಗೆ ಒಂದು ಅಂಕ ಮುಗಿದಿತ್ತು.

English summary
Etv Kannada channels Bigg Boss Kannada reality show day 27, 28 and 29th highlights. This week Vinayaka Joshi and Chandrika nominates for elimination. Arun, Nikita, Anushree, Thilak and Chandika, in separate discussions, felt that Vinayak Joshi has become a nuisance in the house. They hope that he would be out of the house in the coming weekend.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada