»   » ಹುಚ್ಚಾಸ್ಪತ್ರೆಯಾಗಿ ಬದಲಾದ ಬಿಗ್ ಬಾಸ್ ಮನೆ

ಹುಚ್ಚಾಸ್ಪತ್ರೆಯಾಗಿ ಬದಲಾದ ಬಿಗ್ ಬಾಸ್ ಮನೆ

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋ 30ನೇ ದಿನಕ್ಕೆ ಅಡಿಯಿಟ್ಟಿದೆ. ಇಷ್ಟು ದಿನ ಈ ಕಾರ್ಯಕ್ರಮದ ಬಗ್ಗೆ ಕೆಲವರು ಅದೊಂದು ಹುಚ್ಚರ ಕಾರ್ಯಕ್ರಮ ಎಂದು ವ್ಯಂಗ್ಯವಾಡುತ್ತಿದ್ದರು. ಈ ಬಾರಿ ಬಿಗ್ ಬಾಸ್ ಅಂಥಹವರಿಗೆ ಮತ್ತೊಂದು ಶಾಕ್ ನೀಡಿದ್ದಾರೆ.

ಅದಕ್ಕೂ ಮುನ್ನ 30ನೇ ದಿನದ ಕೆಲವು ಹೈಲೈಟ್ಸ್ ಬಗ್ಗೆ ಗಮನಹರಿಸೋಣ. ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಮನೆಯ ಗಾರ್ಡನ್ ನಲ್ಲಿ ಉಳಿದುಕೊಂಡಿದ್ದ ಅನುಶ್ರೀ ಅವರ ಶಿಕ್ಷೆ ರದ್ದಾಗಿದೆ. ಅವರ ಗಾರ್ಡನ್ ವಾಸ ಅಂತ್ಯವಾಗಿದೆ. ಇನ್ನು ಮುಂದೆ ಅವರು ಎಲ್ಲರೊಡನೆ ಮನೆಯಲ್ಲಿ ಇರಬಹುದು.

ಬಿಗ್ ಬಾಸ್ ಈ ಬಾರಿ ಮನೆಯ ಸದಸ್ಯರಿಗೆ ವಿಭಿನ್ನ ಟಾಸ್ಕ್ ನೀಡಿದ್ದಾರೆ. ಅದೇನೆಂದರೆ ಮನೆಯನ್ನು ಹುಚ್ಚಾಸ್ಪತ್ರೆಯಾಗಿ ಬದಲಾಯಿಸಿದ್ದಾರೆ. ಟಾಸ್ಕೇ ಈ ರೀತಿ ಇರುವುದರಿಂದ ಬಿಗ್ ಬಾಸ್ ಮನೆ ಈಗ ಅಕ್ಷರಶಃ ಹುಚ್ಚಾಸ್ಪತ್ರೆಯಂತೆ ಬದಲಾಗಿದೆ. ಹುಚ್ಚಾಸ್ಪತ್ರೆ ಎಂದ ಮೇಲೆ ಹುಚ್ಚರು ಇರಲೇಬೇಕಲ್ಲವೆ?

ಅರುಣ್, ನಿಖಿತಾ, ಚಂದ್ರಿಕಾ, ಶರ್ಮಾ ಹುಚ್ಚರು

ಅರುಣ್ ಸಾಗರ್, ನಿಖಿತಾ ತುಕ್ರಲ್, ಚಂದ್ರಿಕಾ, ಅನುಶ್ರೀ ಹಾಗೂ ನರೇಂದ್ರ ಬಾಬು ಶರ್ಮಾ ಮಾನಸಿಕ ರೋಗಿಗಳು. ವಿಜಯ್ ರಾಘವೇಂದ್ರ ಸೀನಿಯರ್ ಡಾಕ್ಟರ್ ಆದರೆ ವಿನಾಯಕ ಜೋಶಿ ಜೂನಿಯರ್ ಡಾಕ್ಟರ್. ಜೋಶಿ ಅವರದು 'ಮುನ್ನಾಬಾಯ್ ಎಂಬಿಬಿಎಸ್' ಚಿತ್ರದಲ್ಲಿನ 'ಸರ್ಕ್ಯೂಟ್' ಪಾತ್ರ.

ನರ್ಸ್ ಜಯಲಕ್ಷ್ಮಿಗೆ ಹೇಳಿ ಮಾಡಿಸಿದ ರೋಲ್

ಇನ್ನು ನಿಜ ಜೀವನದಲ್ಲೂ ನರ್ಸ್ ಆಗಿರುವ ಜಯಲಕ್ಷ್ಮಿ ಅವರಿಗೆ ಅದೇ ಪಾತ್ರವನ್ನು ನೀಡಲಾಗಿದೆ. ಇನ್ನು ಅಪರ್ಣಾ ಅವರದು ನರ್ಸ್ ಕೆಲಸ. ಜೊತೆಗೆ ವಾರ್ಡ್ ಬಾಯ್ ಕೆಲಸವನ್ನು ತಿಲಕ್ ಅವರಿಗೆ ಒಪ್ಪಿಸಲಾಗಿದೆ.

ವಾರ್ಡ್ ಬಾಯ್ ಆದ ತಿಲಕ್

ರೋಗಿಗಳಿಗೆ ಶುಶ್ರೂಷೆ ನೀಡುವುದು, ಅವರಿಗೆ ಸ್ನಾನ ಮಾಡಿಸುವುದು, ಅವರ ಆರೈಕೆ ಮುಂತಾದ ಕೆಲಸಗಳನ್ನು ನರ್ಸ್ ಗಳಾದ ಜಯಲಕ್ಷ್ಮಿ, ಅಪರ್ಣಾ ನೋಡಿಕೊಳ್ಳಬೇಕು. ಮನೆ ಒರೆಸುವುದು, ಕ್ಲೀನಿಂಗ್ ಕೆಲಸ ಎಲ್ಲಾ ವಾರ್ಡ್ ಬಾಯ್ ತಿಲಕ್ ಅವರದು.

ಹುಚ್ಚರಿಗೆ ಡಿಫರೆಂಟ್ ಟ್ರೀಟ್ ಮೆಂಟ್

ರೋಗಿಗಳ ಹುಚ್ಚು ಅಧಿಕವಾದರೆ ಅವರಿಗೆ ಶಾಕ್ ಟ್ರೀಟ್ ಮೆಂಟ್ ಸಹ ಕೊಡಬಹುದು. ಇದು ಸೀನಿಯರ್ ವೈದ್ಯರ ನಿರ್ಧಾರಕ್ಕೆ ಬಿಟ್ಟಿದ್ದು. ಒಟ್ಟಿನಲ್ಲಿ ಮನೆಯನ್ನು ರಿಯಲ್ ಹುಚ್ಚಾಸ್ಪತ್ರೆಯಂತೆ ಬದಲಾಯಿಸಬೇಕು. ಟ್ರೀಟ್ ಮೆಂಟ್ ಡಿಫರೆಂಟ್ ಆಗಿರಬೇಕು ಎಂದು ಬಿಗ್ ಬಾಸ್ ಆಜ್ಞೆ ಮಾಡಿದ್ದಾರೆ.

ನರ್ಸ್ ಪಾತ್ರಕ್ಕೆ ಅನ್ ಫಿಟ್ ಆದ ಜಯಲಕ್ಷ್ಮಿ

ನಿಜ ಜೀವನದಲ್ಲೂ ನರ್ಸ್ ಆಗಿರುವ ಜಯಲಕ್ಷ್ಮಿ ಅವರು ರೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹಿಸಲು ತಿಣುಕಾಡುತ್ತಿದ್ದರು. ಅವರಿಗೆ ಕೊಂಚವೂ ವ್ಯವಧಾನ ಇರಲಿಲ್ಲ. ಶಾಲೆಯ ಹೆಡ್ ಮೇಡಂನಂತೆ ವರ್ತಿಸುತ್ತಿದ್ದರು. ಕೆಲವೊಂದು ವಿನಾ ಕಾರಣ ರೋಗಿಗಳ ಮೇಲೆ ಸಿಟ್ಟಾಗುತ್ತಿದ್ದರು. ಇದು ನಟನೆಯೋ ಅಥವಾ ಅವರು ನಿಜವಾಗಿಯೂ ಹಾಗೆ ವರ್ತಿಸುತ್ತಿದ್ದರೋ ಒಂದೂ ಗೊತ್ತಾಗುತ್ತಿರಲಿಲ್ಲ.

ಹುಚ್ಚನಾಗಿ ಅರುಣ್ ಸಾಗರ್ ಅಮೋಘ ಅಭಿನಯ

ಇನ್ನು ಹುಚ್ಚನಾಗಿ ಅರುಣ್ ಸಾಗರ್ ಅವರಂತೂ ಎಲ್ಲರ ಗಮನಸೆಳೆದರು. ಅನುಶ್ರೀ, ನಿಖಿತಾ ಸಹ ಅಷ್ಟೇ ಹುಚ್ಚುಚ್ಚಾಗಿ ವರ್ತಿಸುತ್ತಾ ಎಲ್ಲರನ್ನೂ ಗೋಳುಹೊಯ್ದುಕೊಳ್ಳುತ್ತಿದ್ದರು. ಆದರೆ ಚಂದ್ರಿಕಾ ಹಾಗೂ ನರೇಂದ್ರ ಬಾಬು ಶರ್ಮಾ ಮಾತ್ರ ಸೈಲೆಂಟ್ ಹುಚ್ಚರು.

ಗಡದ್ದಾಗಿ ನಿದ್ದೆ ಮಾಡಿದ ನರೇಂದ್ರ ಬಾಬು ಶರ್ಮಾ

ಬಹುಶಃ ಶರ್ಮಾ ಅವರು ಈ ಎಪಿಸೋಡಿನಲ್ಲಿ ಎಲ್ಲರನ್ನೂ ರಂಜಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಅವರು ದಿನದ ಬಹಳಷ್ಟು ಸಮಯವನ್ನು ನಿದ್ದೆಯಲ್ಲೇ ಕಳೆದರು. ಚಂದ್ರಿಕಾ ಅವರಿಗೆ ಸಾಥ್ ನೀಡಿದರು. ಒಟ್ಟಿನಲ್ಲಿ ಇಬ್ಬರೂ ಗಢದ್ದಾಗಿ ನಿದ್ದೆ ಮಾಡಿದರು.

ಚಂದ್ರಿಕಾ, ಅನುಶ್ರೀಗೆ ಶಾಕ್ ಟ್ರೀಟ್ ಮೆಂಟ್

ಇನ್ನೊಂದು ಕಡೆ ಸೀನಿಯರ್ ಹಾಗೂ ಜೂನಿಯರ್ ವೈದ್ಯರಾದ ವಿಜಯ್ ಹಾಗು ವಿನಾಯಕ ಜೋಶಿ ಹೆಚ್ಚು ಹುಚ್ಚರಾಗಿ ವರ್ತಿಸುತ್ತಿರುವವರಿಗೆ ಶಾಕ್ ಟ್ರೀಟ್ ಮೆಂಟ್ ಕೊಡುವ ಬದಲಾಗಿ ಸುಮ್ಮನೆ ಮಲಗಿದ್ದ ಚಂದ್ರಿಕಾ ಹಾಗೂ ಅನುಶ್ರೀ ಅವರಿಗೆ ಶಾಕ್ ಟ್ರೀಟ್ ಮೆಂಟ್ ಕೊಟ್ಟರು.

ಇವರಿಗಿಂತಲೂ ನಿಮ್ಹಾನ್ಸ್ ರೋಗಿಗಳು ಎಷ್ಟೋ ವಾಸಿ

ನರ್ಸ್ ಜಯಲಕ್ಷ್ಮಿ ಅವರಂತೂ ನಾನು ನಿಮ್ಹಾನ್ಸ್ ನಲ್ಲೂ ಇಂತಹ ರೋಗಿಗಳನ್ನು ನೋಡಿಲ್ಲ.ನಾನೂ ಅಲ್ಲೂ ಸೇವೆ ಸಲ್ಲಿಸಿದ್ದೇನೆ. ಇವರಿಗೆ ಹೋಲಿಸಿದರೆ ಅಲ್ಲಿನ ರೋಗಿಗಳೇ ಎಷ್ಟೋ ವಾಸಿ ಎಂದು ಹೇಳಿಕೊಂಡರು.

ಹುಚ್ಚರ ಸಂತೆಯಂತಾದ ಬಿಗ್ ಬಾಸ್ ಮನೆ

ಒಟ್ಟಾರೆಯಾಗಿ ಮನೆಯೊಂದು ಹುಚ್ಚರ ಸಂತೆಯಂತಾಗಿದೆ. ಹುಚ್ಚರ ಪಾತ್ರದಲ್ಲಿ ಮುಳುಗಿರುವವರು ತಮ್ಮಲ್ಲಿನ ತುಂಟತನವನ್ನು ಹೊರಹಾಕುತ್ತಿದ್ದಾರೆ. ಬಿಗ್ ಬಾಸ್ ಈ ರೀತಿಯ ವಿಚಿತ್ರ ಟಾಸ್ಕ್ ಕೊಟ್ಟು ಮರೆಯಲ್ಲಿ ಮಜಾ ನೋಡುತ್ತಿದ್ದಾರೆ.

English summary
Etv Kannada channels Bigg Boss Kannada reality show day 30th highlights. The Boss made the house a mental asylum. Jayalakshmi and Aparnaa are the nurse in the hospital and Thilak is the ward boy. They have all been given responsibilities of controlling the patients and they also have special rules to follow.
Please Wait while comments are loading...