»   » ಬಿಗ್ ಬಾಸ್ ಗೆ ಧಮ್ಕಿ ಹಾಕಿದ ಬ್ರಹ್ಮಾಂಡ ಶರ್ಮಾ

ಬಿಗ್ ಬಾಸ್ ಗೆ ಧಮ್ಕಿ ಹಾಕಿದ ಬ್ರಹ್ಮಾಂಡ ಶರ್ಮಾ

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ಗಾಳಿ ಬಲವಾಗಿ ಬೀಸುತ್ತಿದೆ. ಕಡೆಗೆ ಅದು ಬೆಂಕಿ ಬಿರುಗಾಳಿಯಾಗಿ ಮನೆಯಲ್ಲಿ ಸುಡುವ ವಾತಾವರಣ ನಿರ್ಮಿಸಿದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಪರಿಸ್ಥಿತಿ ತಲೆದೋರಿದೆ.

ಮನೆಯ ಸದಸ್ಯರು ಟಾಸ್ಕ್ ಎಂಬುದನ್ನು ಮರೆತು ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಒಬ್ಬರ ಮೇಲೆ ಒಬ್ಬರು ಕೆಸರು ಎರಚುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬಾತ್ ರೂಮಿನಲ್ಲಿ ಕೂದಲು ತೆಗೆಯುವ ವಿಚಾರದಲ್ಲಿ ಅರುಣ್ ಸಾಗರ್ ಭಾರಿ ಗದ್ದಲಕ್ಕೆ ಕಾರಣರಾದರು.

ಬಾತ್ ರೂಮಿನಲ್ಲಿ ತಾವು ತೆಗೆದ ಕೂದಲು ಯಾರದು ಎಂಬ ಬಗ್ಗೆ ಚರ್ಚೆ ನಡೆಯಿತು. ಅದು ಅಪರ್ಣಾ ಅವರದು ಎಂದು ನೇರವಾಗಿ ಆರೋಪಿಸಲಾಯಿತು. ಇದಕ್ಕೆ ಅಪರ್ಣಾ ಅವರು ತಾವು ಸ್ನಾನವನ್ನೇ ಮಾಡಲಿಲ್ಲ. ಅದು ಹೇಗೆ ತಮ್ಮ ಕೂದಲು ಆಗಲು ಸಾಧ್ಯ ಎಂದು ವಾದಿಸಿದರು.

ನಾನು ಬಾತ್ ರೂಮಿಗೆ ಹೋಗಿ ಬರ್ತೀನಿ. ಒಳಗೆ ಇದೇ ಕೆಲಸ ಮಾಡಿಕೊಂಡು ಬರ್ತೀನಿ ಎಂದು ಯಾವ ಆಧಾರವ ಮೇಲೆ ಹೇಳ್ತಿರಿ ಎಂದರು ಅಪರ್ಣಾ ಪ್ರಶ್ನಿಸಿದರು. ಕಡೆಗೂ ಕೂದಲು ಯಾರದು ಎಂಬ ಬಗ್ಗೆ ಗೊತ್ತಾಗಲಿಲ್ಲ. ಬಹುಶಃ ಡಿಎನ್ಎ ಪರೀಕ್ಷೆ ಮಾಡಿಸಿದ್ದರೆ ಗೊತ್ತಾಗುತ್ತಿತ್ತೇನೋ ಎನ್ನುವಷ್ಟು ಮಟ್ಟಕ್ಕೆ ವಾದ ಬೆಳೆದಿತ್ತು. [ಹಿಂದೆಯೂ ಧಮ್ಕಿ ಹಾಕಿದ್ದರು]

ಬಿಗ್ ಬಾಸ್ ಮನೆ ಮುಂಡಾಮೋಚ್ತು

ಅರುಣ್ ಸಾಗರ್ ಹಾಗೂ ಅಪರ್ಣಾ ನಡುವಿನ ವಾದಕ್ಕೆ ಬೇಸತ್ತ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ಮಧ್ಯೆ ಪ್ರವೇಶಿಸಿದರು. "ಅಲ್ಲಿ ನೋಡಿದರೆ ಕೂದಲಿದೆ. ಇಲ್ಲಿ ನೋಡಿದ್ರೆ ಪುಟಗೋಸಿ ಇದೆ. ಬಿಗ್ ಬಾಸ್ ಮನೆ ಮುಂಡಾಮೋಚ್ತು..." ಎಂದು ವಾಚಾಮಗೋಚರ ಬೈದರು.

ಅರುಣ್ ಸಾಗರ್ ಗೆ ಶರ್ಮಾ ಮಾತಿನ ಧಮ್ಕಿ

ಬಿಗ್ ಬಾಸ್ ಮನೆಗೆ ನನ್ನನ್ನು ಕರೆದುಕೊಂಡು ಬಂದಿರುವುದು ನನ್ನ ಜನಪ್ರಿಯತೆಯಿಂದಲೇ. ನಾನು ಚೆನ್ನಾಗಿದ್ದರೆ ಅವನು ಚೆನ್ನಾಗಿರುತ್ತಾನೆ. ನಿನ್ನ ಪಾಡಿಗೆ ನೀನು ಮುಚ್ಚಿಕೊಂಡಿರು. ಅಲ್ಲಿ ಕೂದಲು ಬಿದ್ದಿದೆ ಇಲ್ಲಿ ಇನ್ನೊಂದು ಬಿದ್ದಿದೆ ಎಂದು ಹೆಂಗಸರು ಇರುವ ಕಡೆ ಈ ರೀತಿ ಮಾತನಾಡಬೇಡ ಎಂದು ಅರುಣ್ ಸಾಗರ್ ಗೆ ಮಾತಿನ ಧಮ್ಕಿ ಹಾಕಿದರು.

ಮನೆಯಲ್ಲಿ ಶರ್ಮಾ ಕಣ್ಣೀರಿಟ್ಟ ಪ್ರಸಂಗ

ಶರ್ಮಾ ಅವರ ಮಾತುಗಳಿಗೆ ಸೊಪ್ಪು ಹಾಕದ ಅರುಣ್ ಸಾಗರ್ ಸಹ ಅಷ್ಟೇ ಜೋರಾಗಿ ಮಾತನಾಡಿದರು. ಇನ್ನೊಂದು ಕಡೆ ಬ್ರಹ್ಮಾಂಡ ಶರ್ಮಾ ಅವರು ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು. ಆದರೆ ಅವರು ಅಳುತ್ತಿರುವುದು ಬಿಗ್ ಬಾಸ್ ಮನೆಯಲ್ಲಿನ ಕ್ಯಾಮೆರಾಗಳಿಗೆ ಬೀಳಬಾರದು ಎಂಬ ಉದ್ದೇಶಕ್ಕೆ ಅವರನ್ನು ಕವರ್ ಮಾಡಿಕೊಳ್ಳಲು ನಿಖಿತಾ ಎಲ್ಲರನ್ನೂ ಕರೆದರು. ಆದರೂ ಶರ್ಮಾ ಅವರ ಕಣ್ಣೀರ ಪ್ರಸಂಗವನ್ನು ಮರೆಮಾಚಲು ಸಾಧ್ಯವಾಗಲಿಲ್ಲ.

ಅಯ್ಯೋ ಅವನು ಗುರೂಜಿ ಅಲ್ಲ ಜ್ಯೋತಿಷಿ

ಮನೆಯಲ್ಲಿ ಇನ್ನೊಂದು ಕಡೆ ಚಂದ್ರಿಕಾ ಅವರು ಅರುಣ್ ಹಾಗೂ ರೋಹನ್ ಗೌಡ ಜೊತೆ ಮಾತನಾಡುತ್ತಾ, ಕಾವಿ ತೊಟ್ಟವರೆಲ್ಲಾ ಗುರೂಜಿ ಆಗಲು ಸಾಧ್ಯವಿಲ್ಲ ಎಂದರು. ಇದಕ್ಕೆ ಧ್ವನಿಗೂಡಿಸಿದ ಅರುಣ್, ಅಯ್ಯೋ ಅವನು ಗುರೂಜಿ ಅಲ್ಲ ಜ್ಯೋತಿಷಿ ಎಂದರು.

ಕಾವಿ ಹಾಕಿರುವವನಿಗೆ ಇಷ್ಟೆಲ್ಲಾ ಧಿಮಾಕು ಇರಬಾರದು

ಆ ಮನುಷ್ಯನನ್ನು ಕಂಡ್ರೆ ನನಗೆ ಹಾಗಲ್ಲ. ಕಾವಿ ಹಾಕಿರುವವನಿಗೆ ಇಷ್ಟೆಲ್ಲಾ ಧಿಮಾಕು ಇರಬಾರದು ಎಂದರು ಚಂದ್ರಿಕಾ. ಅವರನ್ನು ಶರ್ಮಾ ಎಂದು ಕರೆಯೋದು ಬಿಟ್ಟು ಎಲ್ಲರೂ ಗುರೂಜಿ ಎಂದು ಅದ್ಯಾಕೆ ಕರೆಯುತ್ತಾರೋ ಎಂದು ಬೇಸರ ವ್ಯಕ್ತಪಡಿಸಿದರು.

ಬಿಗ್ ಬಾಸ್ ನನ್ನ ಬಗ್ಗೆ ಬೇಜಾರಾಗಬೇಡಿ

ಬಳಿಕ ಶರ್ಮಾ ಅವರು ಕ್ಯಾಮೆರಾ ಕಡೆ ಮುಖಮಾಡಿ ತಮ್ಮ ನೋವನ್ನು ತೋಡಿಕೊಂಡರು. ಇಂಥಹ ಹೊಸಲು ಜನಗಳ ನಡುವೆ ನಾನಿದ್ದೀನಲ್ಲಾ ಅದಕ್ಕೆ ಬೇಸರವಾಗುತ್ತಿದೆ. ಬಿಗ್ ಬಾಸ್ ಬಗ್ಗೆ ಮಾತನಾಡಿದ್ದಕ್ಕೆ ಬೇಜಾರಾಗಬೇಡಿ.

ಕಚಡಾ ಜನಗಳ ನಡುವೆ ಇರಲು ನನಗೆ ಇಷ್ಟವಿಲ್ಲ

ಈ ರೀತಿಯ ಹೊಲಸು ರಾಜಕೀಯ, ಕಚಡಾ ಜನಗಳ ನಡುವೆ ನನಗೆ ಇರುವುದಕ್ಕೆ ಸಾಧ್ಯವಿಲ್ಲ. ಛೀಪ್ ಮೆಂಟಾಲಿಟಿ. ನನ್ನ ಕೈಯಲ್ಲಿ ಆಗಲ್ಲ. ನನ್ನನ್ನು ಬೇಗ ಕಳುಹಿಸುವ ಏರ್ಪಾಡು ಮಾಡಿ ಎಂದು ಹೇಳಿಕೊಂಡರು. ಒಂಥರಾ ಅವರು ಕ್ಷಮಾಪಣೆ ಕೇಳಿದಂತಿತ್ತು.

ಪುಟಗೋಸಿ ಬಗ್ಗೆ ಹಗುರವಾಗಿ ಮಾತನಾಡಬೇಡಿ

ಪದೇ ಪದೇ ಪುಟಗೋಸಿ ಎಂಬ ಪದ ಬಳಕೆಯಾಗುತ್ತಿರುವ ಅರುಣ್ ಪ್ರಸ್ತಾಪ ಮಾಡುತ್ತಾ, ಪುಟಗೋಸಿ ತೊಟ್ಟಿಯೇ ತಮ್ಮ ಪೊರಕೆ ಪಕ್ಷದ ಪರ ಪ್ರಚಾರ ಮಾಡಿದರು. ಗಾಂಧಿಜಿ ಅವರು ಪುಟಗೋಸಿ ತೊಟ್ಟೇ ಹೋರಾಡಿದ್ದು ಎಂದರು. ಪುಟಗೋಸಿ ಅಂದ್ರೆ ಕೇವಲವಾಗಿ ಮಾತನಾಡಬೇಡಿ ಎಂದರು.

ಬೆಳಗ್ಗೆ ಅಪ್ಪಾಜಿ ಅಂತಾರೆ ರಾತ್ರಿ ಇನ್ನೇನೋ

ಇನ್ನೊಂದು ಕಡೆ ಚಂದ್ರಿಕಾ ಅವರು ನರ್ಸ್ ಜಯಲಕ್ಷ್ಮಿ ಜೊತೆ ಮಾತನಾಡುತ್ತಾ, ಬೆಳಗ್ಗೆ ಹೊತ್ತು ಅಪ್ಪಾಜಿ ಅಂತಾರೆ ರಾತ್ರಿ ಆದರೆ ಇನ್ನೇನೋ ಅಂತಾರೆ ಎಂದು ಕಿವಿಕಚ್ಚಿದರು. ಇದು ಶರ್ಮಾ ಅವರ ಕಿವಿಗೂ ಬಿದ್ದು ಮನೆಯಲ್ಲಿ ಅಸಮಾಧಾನದ ಹೊಗೆ ಇನ್ನಷ್ಟು ಹೆಚ್ಚಾಗಲು ಕಾರಣವಾಯಿತು.

ಬಹುಮತ ಪಡೆದ ಆಫಲ್ ಪಕ್ಷ

ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿ ನಡೆದ ಚುನಾವಣೆಯಲ್ಲಿ ಆಫಲ್ ಪಕ್ಷ ಬಹುಮತ ಪಡೆದಿದೆ. ಪೊರಕೆ ಪಕ್ಷಕ್ಕೆ ಕೇವಲ 2 ಮತಗಳು ಬಿದ್ದಿದ್ದು, ಬಿಗ್ ಬಾಸ್ ಪಕ್ಷಕ್ಕೆ 0 ಮತಗಳು ಬಿದ್ದಿವೆ. ಹಾಗಾಗಿ ಗೆದ್ದ ಪಕ್ಷಕ್ಕೆ ಈ ಬಾರಿ ವಾರದ ಬಜೆಟ್ ನಿರ್ವಹಿಸುವ ಟಾಸ್ಕ್ ನೀಡಲಾಯಿತು. ಇದರೆ ಜೊತೆಗೆ ಹಲವು ಜವಾಬ್ದಾರಿಗಳನ್ನು ನೀಡಲಾಗಿದೆ.

ಬ್ರಹ್ಮಾಂಡ ಶರ್ಮಾ ವಿರುದ್ಧ ಗುಸುಗುಸು

ಮನೆಯಲ್ಲಿ ಬ್ರಹ್ಮಾಂಡ ಗುರುಗಳ ಬಗ್ಗೆ ಗುಸುಗುಸು ಶುರುವಾಗಿದೆ. ಮನೆಯ ಅರ್ಧದಷ್ಟು ಸದಸ್ಯರು ಅವರ ವಿರುದ್ಧ ತಿರುಗು ಬಿದಿದ್ದಾರೆ. ರಾಜಕೀಯ ಟಾಸ್ಕ್ ನೆಪದಲ್ಲಿ ನಿಜವಾದ ರಾಜಕೀಯ ಶುರುವಾಗಿದೆ. ಒಬ್ಬರಿಗೊಬ್ಬರು ಶಾಕ್ ಟ್ರೀಟ್ ಮೆಂಟ್ ನೀಡಲು ಮುಂದಾಗಿದ್ದಾರೆ. ಆದರೆ ಇಂದು ರಾತ್ರಿ (ಮೇ.3) ಕಿಚ್ಚ ಸುದೀಪ್ ನಿಜವಾದ ಶಾಕ್ ಟ್ರೀಟ್ ಮೆಂಟ್ ನೀಡಲಿದ್ದಾರೆ. ಇಬ್ಬರು ಸದಸ್ಯರು ಮನೆಯಿಂದ ಹೊರಬೀಳುತ್ತಿದ್ದಾರೆ.

English summary
Etv Kannada's big reality show day 39th highlights. Brahmanda Narendra Babu Sharma shed tears in the house. He fight with other inmates and warns even Bigg Boss also. The political party task completed on 39th day.
Please Wait while comments are loading...