For Quick Alerts
  ALLOW NOTIFICATIONS  
  For Daily Alerts

  ಸಣ್ಣಪುಟ್ಟ ವಿಚಾರಕ್ಕೂ ಚಂದ್ರಿಕಾ ಕಣ್ಣೀರಧಾರೆ ಏಕೋ?

  By Rajendra
  |
  <ul id="pagination-digg"><li class="next"><a href="/tv/anushree-fails-in-secreat-task-bigg-boss-074007.html">Next »</a></li></ul>

  ಈಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ದೈನಿಕ ರಿಯಾಲಿಟಿ ಶೋ 'ಬಿಗ್ ಬಾಸ್' ಅರ್ಧ ಸೆಂಚುರಿ ಬಾರಿಸಿದೆ. ಇಲ್ಲಿವೆ ನೋಡಿ 49 ಹಾಗೂ 50ನೇ ದಿನದ ಮುಖ್ಯಾಂಶಗಳು. ಕಳೆದ ಕೆಲದಿನಗಳಿಂದ ಮನೆಯಲ್ಲಿ ಎಲ್ಲರಿಗೂ ನೆಮ್ಮದಿ ಇಲ್ಲದಂತಾಗಿತ್ತು. ಯಾಕೋ ಏನೋ ನಟಿ ರಿಷಿಕಾ ಸಿಂಗ್ ಅವರ ಕಾಲ್ಗುಣ ಸರಿಯಿಲ್ಲ ಎನ್ನಿಸುತ್ತದೆ.

  ಇಷ್ಟು ದಿನ ಮನೆಯಲ್ಲಿ ಕಿತ್ತಾಟ, ರಂಪಾಟ, ಕೂಗಾಟಗಳು ಜಾಸ್ತಿಯಾಗಿದ್ದವು. ಆದರೆ 49 ಹಾಗೂ 50ನೇ ದಿನ ಮಾತ್ರ ಎಲ್ಲರೂ ಸ್ವಲ್ಪ ತಣ್ಣಗಾಗಿದ್ದರು. ಯಾರೂ ಎಗರಾಡಲಿಲ್ಲ, ಕೂಗಾಡಲಿಲ್ಲ. ಮನೆಯಿಂದ ನರ್ಸ್ ಜಯಲಕ್ಷ್ಮಿ ಹೊರಬಿದ್ದ ಮೇಲೆ ಎಲ್ಲರೂ ಸ್ವಲ್ಪ ಕೂಲ್ ಆಗಿದ್ದರು.

  ಮನೆಗೆ ಬಂದ ಹೊಸತರದಲ್ಲಿ ರಿಷಿಕಾ ಸಿಂಗ್ ಸಿಕ್ಕಾಪಟ್ಟೆ ಎಗರಾಡುತ್ತಿದ್ದರು. ಈಗ ಅವರು ಸ್ವಲ್ಪ ಕೂಲ್ ಆಗಿದ್ದಾರೆ. ಆದರೂ ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಚಂದ್ರಿಕಾ ಅವರು ಕಣ್ಣೀರು ಹಾಕುತ್ತಿರುವುದು ಯಾಕೋ ಏನೋ ಎಂಬುದು ಅರ್ಥವಾಗುತ್ತಿಲ್ಲ.

  ಈ ರೀತಿ ಕಣ್ಣೀರು ಹರಿಸಿದಷ್ಟೂ ತಾವು ಹೆಚ್ಚು ದಿನ ಇಲ್ಲೇ ಉಳಿದುಕೊಳ್ಳಬಹುದೇನೋ ಎಂದು ಚಂದ್ರಿಕಾ ಎಣಿಸಿದಂತಿದೆ. ನಿಖಿತಾ ಅವರ ಮೇಲೆ ಸಣ್ಣಪುಟ್ಟ ಸಂಗತಿಗಳಿಗೂ ಅವರು ಬೇಸರಿಸಿಕೊಂಡು ಮುಸುಕಿನ ಗುದ್ದಾಟ ನಡೆಸುತ್ತಿದ್ದಾರೆ. ಇನ್ನು ಎಷ್ಟು ದಿನ ಈ ರೀತಿ ಕೋಲ್ಡ್ ವಾರ್ ನಡೆಯುತ್ತದೋ ಏನೋ?

  ಏತನ್ಮಧ್ಯೆ ಎಲ್ಲರ ನಡುವೆ ಚಿಲಿಪಿಲಿ ಎಂದು ಓಡಾಡಿಕೊಂಡಿದ್ದ ಅನುಶ್ರೀ ಅವರಿಗೆ 'ಬಿಗ್ ಬಾಸ್' ರಹಸ್ಯ ಟಾಸ್ಕ್ ನೆಪದಲ್ಲಿ ಅತಿ ದೊಡ್ಡ ಪರೀಕ್ಷೆಯನ್ನೇ ಕೊಟ್ಟರು. ಅದರ ಪ್ರಕಾರ ಅವರು ಮನೆಯ ಎಲ್ಲ ಸದಸ್ಯರು ತಮ್ಮನ್ನು ನಾಮಿನೇಟ್ ಮಾಡುವಂತೆ ಮಾಡಬೇಕಾಗಿತ್ತು. ಆದರೆ ಯಾವುದೇ ಕಾರಣಕ್ಕೂ ರಹಸ್ಯ ಟಾಸ್ಕ್ ವಿಚಾರ ಅವರ ಬಳಿ ಚರ್ಚಿಸದಂತೆ ನೋಡಿಕೊಳ್ಳಬೇಕಾಗಿತ್ತು.

  <ul id="pagination-digg"><li class="next"><a href="/tv/anushree-fails-in-secreat-task-bigg-boss-074007.html">Next »</a></li></ul>
  English summary
  Etv Kannada's reality show Bigg Boss day 49th and 50th highlights. The inmates celebrates mothers day. Anushree fails to maintain bigg boss secreat task, this week three inmates Anushree, Narendra Babu Shama and Rohan Gowda nominated for eviction.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X