For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಯಲ್ಲಿ ನಿಖಿತಾಗೆ ಕಂಕಣಭಾಗ್ಯ

  By Rajendra
  |

  ಈಟಿವಿ ಕನ್ನಡ ವಾಹಿನಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮನೆಯಲ್ಲಿ ಮದುವೆ ಕಳೆಬಂದಿದೆ. ಮನೆಯ ಸದಸ್ಯರಿಗೆ 'ಬಿಗ್ ಬಾಸ್' ಹೊಸ ಟಾಸ್ಕ್ ಕೊಟ್ಟಿದ್ದು ಅದರಂತೆ ಎಲ್ಲರೂ ನಟಿಸಬೇಕಾಗಿದೆ. ಈ ಬಾರಿಯ ಟಾಸ್ಕ್ ವಧು ಪರೀಕ್ಷೆ. ಇದು 51ನೇ ದಿನದ ಹೈಲೈಟ್ಸ್.

  ನಿಖಿತಾ ಹಾಗೂ ಅನುಶ್ರೀ ಮನೆಯ ಇಬ್ಬರು ವಧುಗಳು. ವಧು ಪರೀಕ್ಷೆಗೆ ಬರುವ ದಂಪತಿಗಳೂ ಚಂದ್ರಿಕಾ ಹಾಗೂ ಅರುಣ್ ಸಾಗರ್. ಸೋದರಮಾವನಾಗಿ ವಿಜಯ್ ರಾಘವೇಂದ್ರ, ಅಣ್ಣನಾಗಿ ರೋಹನ್, ಅಕ್ಕನಾಗಿ ರಿಷಿಕಾ ಅವರು ವಧು ಕಡೆಯ ಬಂಧುಗಳು. ನರೇಂದ್ರ ಬಾಬು ಶರ್ಮಾ ಅವರಿಗೆ ಇಲ್ಲಿ ಗುರುಗಳ ಪಾತ್ರ.

  ಒಟ್ಟಿನಲ್ಲಿ ಮನೆಯಲ್ಲಿ ಮದುವೆ ಸಂಭ್ರಮ ರಂಗೇರಿದೆ. ಅರುಣ್ ಹಾಗೂ ಚಂದ್ರಿಕಾ ಇಬ್ಬರು ವಧುಗಳಿಗೆ ನಾನಾ ಪರೀಕ್ಷೆಗಳನ್ನು ಒಡ್ಡುತ್ತಾರೆ. ಒಂದಷ್ಟು ಚರ್ಚೆ, ವಾದ ವಿವಾದಗಳೂ, ಮಾತುಕತೆಗಳೂ ನಡೆಯುತ್ತವೆ. ಒಂದು ಹಂತದಲ್ಲಿ ನಮಗೆ ಈ ಸಂಬಂಧವೇ ಬೇಡ ಎಂದು ಅರುಣ್ ಹಾಗೂ ಚಂದ್ರಿಕಾ ಹೊರಹೋಗಲು ಬಯಸುತ್ತಾರೆ.

  ಅನುಶ್ರೀ, ನಿಖಿತಾ ಇಬ್ಬರೂ ಲೀಲಾಜಾಲ ಅಭಿನಯ

  ಅನುಶ್ರೀ, ನಿಖಿತಾ ಇಬ್ಬರೂ ಲೀಲಾಜಾಲ ಅಭಿನಯ

  ಕಡೆಗೆ ಮನೆಯರೆಲ್ಲಾ ಅವರನ್ನು ಸಮಾಧಾನಪಡಿಸುತ್ತಾರೆ. ಅನುಶ್ರೀ ಹಾಗೂ ನಿಖಿತಾಗೆ ಅವರಿಗೆ ಹಾಡಲು, ಡಾನ್ಸ್ ಮಾಡಲು ಹೇಳುತ್ತಾರೆ. ಇಬ್ಬರೂ ಅವರು ಹೇಳಿದ ಎಲ್ಲ ಕೆಲಸಗಳನ್ನು ನಿಭಾಯಿಸುತ್ತಾರೆ. ವಧು ಪರೀಕ್ಷೆಯಲ್ಲಿ ಪಾಸಾಗುತ್ತಾರೆ.

  ದಂಪತಿಗಳಾಗಿ ಚಂದ್ರಿಕಾ, ಅರುಣ್ ಅಮೋಘ ಅಭಿನಯ

  ದಂಪತಿಗಳಾಗಿ ಚಂದ್ರಿಕಾ, ಅರುಣ್ ಅಮೋಘ ಅಭಿನಯ

  ನಿಖಿತಾ ಅವರು ಜೊತೆ ಜೊತೆಯಲಿ ಪ್ರೀತಿ ಜೊತೆಯಲಿ ಎಂದು ಹಾಡಿ ಕುಣಿದರೆ, ಅನುಶ್ರೀ ಪೂಜಿಸಲೆಂದೆ ಹೂಗಳ ತಂದೆ ದರುಶನ ಕೋರಿ ನಾ ಬಂದೆ ಎಂದು ಹಾಡುತ್ತಾರೆ. ಇಬ್ಬರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲಕ್ಕೆ ಸಿಕ್ಕಂತೆ ಅರುಣ್, ಚಂದ್ರಿಕಾ ಅಮೋಘ ಅಭಿನಯವನ್ನೇ ನೀಡಿದ್ದಾರೆ.

  ಶಕೀರಾ ಡಾನ್ಸ್ ಸಹ ಗೊತ್ತು ಎಂದ ಶರ್ಮಾ

  ಶಕೀರಾ ಡಾನ್ಸ್ ಸಹ ಗೊತ್ತು ಎಂದ ಶರ್ಮಾ

  ನಿಖಿತಾಗೆ ಡಾನ್ಸ್ ಮಾಡಲು ಬರುತ್ತದೆಯೇ ಎಂದು ವರನ ಕಡೆಯವರು ಕೇಳಿದಾಗ, ಅಲ್ಲೇ ಕುಳಿತಿದ್ದ ಶರ್ಮಾ ಅವರು ಅಯ್ಯೋ ಬಿಟ್ರೆ ಶಕೀರಾ ಡಾನ್ಸ್ ಮಾಡುತ್ತಾರೆ ಎನ್ನುತ್ತಾರೆ. ಇದಕ್ಕೆ ಚಂದ್ರಿಕಾ ಅವರು ಅಯ್ಯೋ ಗುರುಗಳೇ ನಿಮಗೂ ಶಕೀರಾ ಗೊತ್ತಾ ಎಂದು ಹಾಸ್ಯ ಚಟಾಕಿ ಸಿಡಿಸುತ್ತಾರೆ.

  ವಧು ಪರೀಕ್ಷೆಯಲ್ಲಿ ನಿಖಿತಾ ಪಾಸು

  ವಧು ಪರೀಕ್ಷೆಯಲ್ಲಿ ನಿಖಿತಾ ಪಾಸು

  ರಂಗೋಲಿ ಪರೀಕ್ಷೆ, ಹೂಕಟ್ಟುವ ಪರೀಕ್ಷೆ, ಹಾಡುಗಾರಿಗೆ, ನೃತ್ಯ ಹೀಗೆ ಎಲ್ಲ ಪರೀಕ್ಷೆಗಳನ್ನು ಮಾಡಿಸುತ್ತಾರೆ. ಎಲ್ಲದರಲ್ಲೂ ಇಬ್ಬರೂ ಪಾಸ್ ಆಗುತ್ತಾರೆ. ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲಕ್ಕೆ ಒಳಗಾಗಿ ಕಡೆಗೆ ಚೀಟಿ ಹಾಕಿ ಆಯ್ಕೆ ಮಾಡುತ್ತಾರೆ. ಅದರಲ್ಲಿ ನಿಖಿತಾ ಹೆಸರು ಬಂದಿರುತ್ತದೆ.

  ಮದುವೆ ಮನೆಯಂತೆ ಬದಲಾದ ಬಿಗ್ ಬಾಸ್

  ಮದುವೆ ಮನೆಯಂತೆ ಬದಲಾದ ಬಿಗ್ ಬಾಸ್

  ವರನ ಕಡೆಯರು ಸುಖಾ ಸುಮ್ಮನೆ ಕೋಪ ಮಾಡಿಕೊಂಡಂತೆ, ಅವರನ್ನು ಅಂಗಲಾಚಿ ಬೇಡಿಕೊಳ್ಳುವಂತಹ ಕೆಲವೊಂದು ನಾಟಕೀಯ ಬೆಳವಣಿಗೆಗಳಿಂದ ಈ ಬಾರಿ ಬಿಗ್ ಬಾಸ್ ಮನೆ ಮದುವೆ ಮನೆಯಂತೆ ಬಲಾಯಿತು. ಆದರೆ ವರ ಮಹಾಶಯ ಯಾರು ಎಂಬುದು ಗೊತ್ತಾಗಬೇಕಾದರೆ 52ನೇ ಎಪಿಸೋಡ್ ನೋಡಲೇಬೇಕು.

  ಗುಟ್ಟು ಬಿಟ್ಟು ಕೊಡದ ಬಿಗ್ ಬಾಸ್

  ಗುಟ್ಟು ಬಿಟ್ಟು ಕೊಡದ ಬಿಗ್ ಬಾಸ್

  ಬಿಗ್ ಬಾಸ್ ಮನೆಯಲ್ಲಿ ನಿಖಿತಾಗೆ ಕಂಕಣ ಭಾಗ್ಯ ಕೂಡಿಬಂದಿದೆ. ಈ ವಾರ ಮನೆಯಲ್ಲಿ ಮದುವೆ ಸಂಭ್ರಮ. ಮನೆಗೆ ವರನಾಗಿ ಹೊಸ ಅತಿಥಿ ದರ್ಶನ ಆಗಲಿದೆ. ಆದರೆ ಅವರು ಯಾರು ಎಂಬ ಗುಟ್ಟನ್ನು ಬಿಗ್ ಬಾಸ್ ಬಿಟ್ಟುಕೊಟ್ಟಿಲ್ಲ.

  English summary
  Etv Kannada's reality show Bigg Boss day 51st highlights. The boss gives matrimony task to all inmates. Anushree and Nikita are brides. Finally Arun and Chandrika couple selects bride Nikita as daughter in law.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X