For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಮನೆಯಲ್ಲಿ ಬ್ರಹ್ಮಾಂಡ ಶರ್ಮಾ ಡಾನ್ಸ್

  By Rajendra
  |

  'ಬಿಗ್ ಬಾಸ್' ಮನೆಯಲ್ಲಿ ಮದುವೆ ಸಂಭ್ರಮ ಮುಂದುವರೆದಿದೆ. ಐವತ್ತೆರಡನೆ ದಿನ ಮೆಹಂದಿ ಹಚ್ಚುವ ಕಾರ್ಯಕ್ರಮ, ಸಂಗೀತ ಸಂಭ್ರಮಗಳು ನಡೆದವು. ಈ ಮೂಲಕ ಇದು ಉತ್ತರ ಭಾರತದ ವಿವಾಹವೋ ಅಥವಾ ದಕ್ಷಿಣದ ಮದುವೆನಾ ಎಂಬ ಸಂದೇಹಗಳು ಮೂಡಿದವು.

  ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ಈ ಮದುವೆ ಭಾರತೀಯ ಸಂಸ್ಕೃತಿ, ಸಂಪ್ರದಾಯದಂತೆ ನಡೆಯಬೇಕು ಎಂದು ಗೈಡ್ ಲೈನ್ಸ್ ಕೊಟ್ಟಿದ್ದರು. ಇಲ್ಲಿ ಸ್ಪರ್ಧಿಗಳು ತಮಗಿಷ್ಟ ಬಂದಂತೆ ಮದುವೆ ಕಾರ್ಯಕ್ರಮ ಮಾಡಿ ಸಂಭ್ರಮಿಸುತ್ತಿದ್ದಾರೆ. ಒಂದಷ್ಟು ದಕ್ಷಿಣ, ಇನ್ನೊಂದಿಷ್ಟು ಉತ್ತರ ಶೈಲಿಯಲ್ಲಿ ಮದುವೆ ಮಾಡಿ ಸಂಭ್ರಮಿಸುತ್ತಿದ್ದಾರೆ.

  ಎಷ್ಟೇ ಆಗಲಿ ಇದು ಲಕ್ಷುರಿ ಟಾಸ್ಕ್ ಅಲ್ಲವೆ? ಅವರವರ ಭಾವಕ್ಕೆ ಭಕ್ತಿಗೆ ತಕ್ಕಂತೆ ಮದುವೆ ನಡೆಯುತ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ರೋಹನ್ ಗೌಡ ಬೀಗರ ಮೇಲೆ ಒಂಚೂರು ಕೋಪ ಮಾಡಿಕೊಂಡು ಮನೆಯಲ್ಲಿ ಒಂಚೂರು ವಾತಾವರಣ ಹದಗೆಡುವಂತೆ ಮಾಡಿದ. ಆದರೆ ಎಲ್ಲರೂ ಅದನ್ನು ತಹಬಂದಿಗೆ ತರುವಲ್ಲಿ ಯಶಸ್ವಿಯಾದರು.

  ನಿಕಿತಾ ನಿಶ್ಚಿತಾರ್ಥ ಮುಗಿದಿದೆ, ಮದುವೆ ಬಾಕಿ

  ನಿಕಿತಾ ನಿಶ್ಚಿತಾರ್ಥ ಮುಗಿದಿದೆ, ಮದುವೆ ಬಾಕಿ

  ಮನೆಯಲ್ಲಿ ಈಗಾಗಲೆ ನಿಕಿತಾ ನಿಶ್ಚಿತಾರ್ಥ ಮುಗಿದಿದೆ. ವರನನ್ನೇ ನೋಡದೆ ಎಲ್ಲರೂ ಮದುವೆಗೆ ಒಪ್ಪಿಕೊಂಡಿರುವುದು ಇನ್ನೊಂದು ವಿಶೇಷ. ಆದರೆ ಕನ್ಯಾಮಣಿ ನಿಕಿತಾಗೆ ಅರಿಶಿಣ ಹಚ್ಚಿ ಮಂಗಳ ಸ್ನಾನ ಮಾಡಿಸಲು ರೋಹನ್ ಹಿಂದೇಟು ಹಾಕುತ್ತಾನೆ. ಬೆಳಗ್ಗೆಯಿಂದ ನನಗೆ ಚೆಂಬು ತೆಗೆದುಕೊಂಡು ಬಾ, ಅದು ಇದು ತೆಗೆದುಕೊಂಡು ಬಾ ಎಂದು ಹೇಳುತ್ತಿದ್ದೀರಿ. ನಾನು ಅವಳಿಗೆ ಅರಿಶಿಣ ಹಚ್ಚಲ್ಲ ಎಂದು ಹಠ ಹಿಡಿದ.

  ವರಮಹಾಶಯನ ನಿರೀಕ್ಷೆಯಲ್ಲಿ ಮನೆಯವರು

  ವರಮಹಾಶಯನ ನಿರೀಕ್ಷೆಯಲ್ಲಿ ಮನೆಯವರು

  ಅಣ್ಣನಾದ ನೀನೆ ಹಿಂಗಂದ್ರೆ ಹೆಂಗೆ ಎಂದು ಎಲ್ಲರೂ ಆತನನ್ನು ಓಲೈಸಿ ನಿಖಿತಾಗೆ ಅರಿಶಿಣ ಹಚ್ಚಲು ಒಪ್ಪಿಸುತ್ತಾರೆ. ಮನೆಯಲ್ಲಿ ನಿಶ್ಚಿತಾರ್ಥದ ಆಟ ಮುಗಿದಿದೆ. ಎಲ್ಲರೂ ವರನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಬರುವ ವರಮಹಾಶಯ ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಪ್ರೇಕ್ಷಕರಿಗೆ ಮಾತ್ರ ಸುಳಿವು ಸಿಕ್ಕಿದೆ.

  ನಿದ್ದೆಗೆ ಹೊರಳಿದ ನರೇಂದ್ರ ಬಾಬು ಶರ್ಮಾ

  ನಿದ್ದೆಗೆ ಹೊರಳಿದ ನರೇಂದ್ರ ಬಾಬು ಶರ್ಮಾ

  ಇನ್ನೊಂದು ಕಡೆ ನರೇಂದ್ರ ಬಾಬು ಶರ್ಮಾ ಅವರು ಕ್ಯಾಮೆರಾ ಕಡೆ ಮುಖ ಮಾಡಿ, ನೋಡಪ್ಪಾ ಬಿಗ್ ಬಾಸ್ ನನ್ನದು ಊಟ ಆಯಿತು. ಎಲ್ಲ ಶಾಸ್ತ್ರ ಸಂಪ್ರದಾಯಗಳನ್ನು ವಿಧಿವತ್ತಾಗಿ ಮುಗಿಸಿಕೊಟ್ಟಿದ್ದೇನೆ. ಬೀಗರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ನನಗೂ ನಿದ್ದೆ ಬರುತ್ತಿದೆ. ತಂಪಾಗಿ ಮಲಗುತ್ತಿದ್ದೇನೆ. ಬೀಗರು ಎಬ್ಬಿಸುವವರೆಗೂ ನನಗೆ ಕೆಲಸ ಇಲ್ಲ ಎಂದು ಹಾಸಿಗೆ ಹೊರಳಿದರು.

  ಸಂತೈಸು ಎನ್ನಲು ಹೋಗಿ ಸಂತಾನ ಎಂದ ಚಂದ್ರಿಕಾ

  ಸಂತೈಸು ಎನ್ನಲು ಹೋಗಿ ಸಂತಾನ ಎಂದ ಚಂದ್ರಿಕಾ

  ಇನ್ನೊಂದು ಕಡೆ ದಂಪತಿಗಳಾದ ಅರುಣ್ ಸಾಗರ್ ಹಾಗೂ ಚಂದ್ರಿಕಾ ಅವರು ಮಾತನಾಡುತ್ತಾ, ಸಂತೈಸಬೇಕು ಎಂಬ ಪದಕ್ಕೆ ಬದಲಾಗಿ...ನಾನೇ ಅವಳನ್ನು ಸಂತಾನ ಮಾಡಬೇಕು ಎಂದರು. ಕೂಡಲೆ ಅರುಣ್ ಅಯ್ಯೋ ಅದು ಸಂತಾನ ಅಲ್ಲಮ್ಮಾ, ಸಮಾಧಾನ ಪಡಿಸಬೇಕು ಅಥವಾ ಸಂತೈಸಬೇಕು ಎಂದು ಹೇಳಿದರು. ಈಗಾಗಲೆ ನಿನಗೆ ಒಂದು ಮಗು ಆಗಿದೆ, ಇನ್ನೇನು ಸಂತಾನ ಮಾಡ್ತೀಯ ಎಂದು ಕೇಳೋಣ ಅಂತಿದ್ದೆ ಎಂದು ಹೇಳಿ ಇಬ್ಬರೂ ನಗಾಡಿದರು.

  ಬಿಗ್ ಬಾಸ್ ಮನೆಯಲ್ಲಿ ಬ್ರಹ್ಮಾಂಡ ಶರ್ಮಾ ಡಾನ್ಸ್

  ಬಿಗ್ ಬಾಸ್ ಮನೆಯಲ್ಲಿ ಬ್ರಹ್ಮಾಂಡ ಶರ್ಮಾ ಡಾನ್ಸ್

  ಸಂಗೀತ ಸಂಭ್ರಮದ ಸನ್ನಿವೇಶಗಳಲ್ಲಿ ಎಲ್ಲರೂ ಒಂದು ಹೆಜ್ಜೆ ಹಾಕಿದರು. ತಾವೇನು ಕಮ್ಮಿ ಎಂದು ನರೇಂದ್ರ ಬಾಬು ಶರ್ಮಾ ಅವರು ಒಂದು ಕೈ ನೋಡಿಯೇ ಬಿಟ್ಟರು. ಸಂತೋಷಕ್ಕೆ ಹಾಡು ಸಂತೋಷಕ್ಕೆ...ಹಾಡಿಗೆ ಶರ್ಮಾ ಸಾಹೇಬರು ಕುಣಿಸು ಆಗಾಗ ತಮ್ಮ ಸೊಂಟವನ್ನು ಕುಣಿಸಿ ರಂಜಿಸಿದರು.

  ಕಮಾನು ಡಾರ್ಲಿಂಗ್ ಅಯ್ಯೋ ಅಯ್ಯೋ ಡಾನ್ಸ್

  ಕಮಾನು ಡಾರ್ಲಿಂಗ್ ಅಯ್ಯೋ ಅಯ್ಯೋ ಡಾನ್ಸ್

  ಕಮಾನು ಡಾರ್ಲಿಂಗ್ ಅಯ್ಯೋ ಅಯ್ಯೋ, ಸಿಡೌನು ಡಾರ್ಲಿಂಗ್ ಅಯ್ಯೋ ಅಯ್ಯೋ ಎಂಬ ಹಾಡಿಗೆ ಅರುಣ್ ಹಾಗೂ ಚಂದ್ರಿಕಾ ಹೆಜ್ಜೆ ಮೇಲೆ ಹೆಜ್ಜೆ ಹಾಕಿದರು. ಕಡೆಗೆ ಎಲ್ಲರೂ 'ಯಜಮಾನ' ಚಿತ್ರದ ನಮ್ಮ ಮನೆಯಲಿ ದಿನವೂ ಮಿರುಗೋ ಚೈತ್ರವೇ ಹಾಡಿಗೆ ಹೆಜ್ಜೆ ಹಾಕಿದರು. ಅಲ್ಲಿಗೆ 52ನೇ ದಿನದ ಎಪಿಸೋಡ್ ಮುಗಿದಿದೆ.

  English summary
  Etv Kannada's reality show Bigg Boss day 52nd highlights. Luxury budget task Bheema Maduve Sambrama continues on the day. Mehndi and Sangeet ceremony took place at bigg boss house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X