»   » ದೀಪ ಆರಿದ ಮೇಲೆ ಬ್ರಹ್ಮಾಂಡ ಕಾಯಕ ಶುರು

ದೀಪ ಆರಿದ ಮೇಲೆ ಬ್ರಹ್ಮಾಂಡ ಕಾಯಕ ಶುರು

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ಕಾರ್ಯಕ್ರಮ 58ನೇ ದಿನಕ್ಕೆ ಅಡಿಯಿಟ್ಟಿದೆ. ಈ ವಾರ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ, ನಿಕಿತಾ ಹಾಗೂ ರಿಷಿಕಾ ಸಿಂಗ್ ನಾಮಿನೇಟ್ ಆಗಿದ್ದಾರೆ. ಈ ಮೂವರಲ್ಲಿ ಒಬ್ಬರು ಈ ಬಾರಿ ಮನೆಯಿಂದ ಹೊರಹೋಗಲಿದ್ದಾರೆ. ಒಂದು ವೇಳೆ ನಿಕಿತಾ ಹೋದರೆ ಅವರ ಜೊತೆ ಲೂಸ್ ಮಾದ ಯೋಗಿ ಸಹ ಹೊರಗೆ ಹೋಗುತ್ತಾರೆ.

ಐವತ್ತೆಂಟನೇ ದಿನ ಬಿಗ್ ಬಾಸ್ ಮನೆಯ ಸದಸ್ಯರಿಗೆ ಲಗ್ಜುರಿ ಬಜೆಟ್ ಟಾಸ್ಕ್ ನೀಡಿದ್ದಾರೆ. ಅದರ ಪ್ರಕಾರ ಕೆಲವರು ಕಳ್ಳರಾಗಿ, ಕೆಲವರು ಪೊಲೀಸರಾಗಿ ನಟಿಸಬೇಕು. ಅರುಣ್ ಸಾಗರ್, ನಿಕಿತಾ ಹಾಗೂ ರಿಷಿಕಾ ಅವರಿಗೆ ಪೊಲೀಸ್ ಪಾತ್ರ ನೀಡಲಾಗಿದೆ.

ಇನ್ನು ಕಳ್ಳರ ಟೀಂನಲ್ಲಿ ಬ್ರಹ್ಮಾಂಡ ಶರ್ಮಾ, ಲೂಸ್ ಮಾದ ಹಾಗೂ ಚಂದ್ರಿಕಾ ಇದ್ದಾರೆ. ಈ ರಹಸ್ಯ ಟಾಸ್ಕ್ ಪ್ರಕಾರ ಇವರು ತಮ್ಮ ಮೇಲೆ ಸಂದೇಹ ಬಾರದಂತೆ ನೋಡಿಕೊಳ್ಳಬೇಕು. ಹಾಗೆಯೇ ಬಿಗ್ ಬಾಸ್ ಸೂಚಿಸಿರುವ ವಸ್ತುಗಳನ್ನು ಕಳುವು ಮಾಡಬೇಕು.

ಕುಖ್ಯಾತ ಕಳ್ಳ ಜಗ್ಗುದಾದಾ ಆದ ಬ್ರಹ್ಮಾಂಡ ಶರ್ಮಾ

ಕುಖ್ಯಾತ ಕಳ್ಳರ ಗ್ಯಾಂಗ್ ಒಡೆಯ ಜಗ್ಗು ದಾದಾ ಪಾತ್ರವನ್ನು ಬ್ರಹ್ಮಾಂಡ ಶರ್ಮಾ ಪೋಷಿಸಬೇಕಾಗಿದೆ. ಅವರಿಗೆ ಯೋಗಿ ಹಾಗೂ ಚಂದ್ರಿಕಾ ಎಡಗೈ ಮತ್ತು ಬಲಗೈ ಬಂಟರು. ಇವರನ್ನು ಉಪಯೋಗಿಸಿಕೊಂಡು ಅವರು ಮನೆಯ ವಸ್ತುಗಳನ್ನು ಕದಿಯಬೇಕು.

ಅರುವತ್ತನಾಲ್ಕು ವಿದ್ಯೆಗಳ ಬಗ್ಗೆ ಹೇಳಿದ ಬಿಗ್ ಬಾಸ್

ಅರುವತ್ತನಾಲ್ಕು ವಿದ್ಯೆಗಳಲ್ಲಿ ತಸ್ಕರಶಾಸ್ತ್ರ ಹಾಗೂ ತಳವಾರ ಶಾಸ್ತ್ರದ ಬಗ್ಗೆ ಹೇಳಿದ ಬಿಗ್ ಬಾಸ್. ತಸ್ಕರ ಎಂದರೆ ಕಳ್ಳತನದ ವಿದ್ಯೆ ಹಾಗೂ ತಳವಾರ ಎಂದರೆ ಕಳ್ಳರನ್ನು ಪತ್ತೆಹಚ್ಚುವ ವಿದ್ಯೆ ಎಂದು ಹೇಳಿ ಕಳ್ಳ ಪೊಲೀಸ್ ಆಟದ ಲಗ್ಜುರಿ ಬಜೆಟ್ ಟಾಸ್ಕ್ ನೀಡಿದ್ದಾರೆ.

ವಿಜಿ, ಅನುಶ್ರೀಗೆ ಮನೆಯ ಕ್ಲೀನಿಂಗ್ ಜವಾಬ್ದಾರಿ

ಇನ್ನು ಮನೆಯ ಉಳಿದ ಸದಸ್ಯರಾದ ಅನುಶ್ರೀ ಹಾಗೂ ವಿಜಯ್ ರಾಘವೇಂದ್ರ ಅಡುಗೆ ಮಾಡುವುದು ಸೇರಿದಂತೆ ಮನೆಯ ಶುಚಿತ್ವದ ಜವಾಬ್ದಾರಿಗಳನ್ನು ನೀಡಲಾಗಿದೆ. ಆದರೆ ಇವರ್ಯಾರು ತಮ್ಮ ಪಾತ್ರದ ಬಗ್ಗೆ ಎಲ್ಲೂ ಬಾಯ್ಬಿಡುವಂತಿಲ್ಲ. ಜಗ್ಗುದಾದಾ ಹಾಗೂ ಅವರ ಬಂಟರು ಮಾತ್ರ ಚರ್ಚಿಸಿಕೊಳ್ಳಬಹುದು. ಇದು ಸೀಕ್ರೆಟ್ ಟಾಸ್ಕ್ ನ ಗಮ್ಮತ್ತ್ತು.

ದೀಪ ಆರಿದ ಮೇಲೆ ಬ್ರಹ್ಮಾಂಡ ಕಾಯಕ ಶುರು

ಬಿಗ್ ಬಾಸ್ ಕೊಟ್ಟ ಸೀಕ್ರೆಟ್ ಟಾಸ್ಕ್ ಪ್ರಕಾರ ಜಗ್ಗುದಾದ ಮನೆಯ ದೀಪ ಆರಿದ ಬಳಿಕ ತಮ್ಮ ಕಾರ್ಯಾಚರಣೆಯನ್ನು ಶುರುವಚ್ಚಿಕೊಂಡರು. ಯಾರಿಗೂ ಡೌಟ್ ಬಾರದಂತೆ ಮನೆಯ ಕೆಲಸ ಸಾಮಗ್ರಿಗಳನ್ನು ಕನ್ಫೆಷನ್ ರೂಮಿನಲ್ಲಿ ಬಚ್ಚಿಟ್ಟರು. ಜಗ್ಗುದಾದಾ ಅವರೇ ಎಂಬುದು ಅವರ ಬಂಟರಿಗೆ ಬಿಟ್ಟರೆ ಯಾರಿಗೂ ತಿಳಿದಿಲ್ಲ.

ಜಗ್ಗುದಾದ ಮೊದಲು ಕದ್ದಿದ್ದೇ ಗಣೇಶ ವಿಗ್ರಹ

ಜಗ್ಗುದಾದಾ ಮೊದಲು ಕದ್ದಿದ್ದೇ ಅನುಶ್ರೀ ಅವರ ಬಳಿ ಇದ್ದ ಗಣೇಶ ವಿಗ್ರಹ. ಅದನ್ನು ಎಲ್ಲೋ ಬಚ್ಚಿಟ್ಟಿದ್ದ ಆದರೆ ನಿಕಿತಾ ಅದನ್ನು ಪತ್ತೆ ಹಚ್ಚಿ ಅನುಶ್ರೀ ಸುಪರ್ದಿಗೆ ಒಪ್ಪಿಸಿದ್ದಾರೆ. ಆದರೆ ಕದ್ದ ಕಳ್ಳ ಮಾತ್ರ ಸಿಕ್ಕಿಬೀಳಲಿಲ್ಲ. ಮನೆಯಲ್ಲಿ ಕಳ್ಳ ಪೊಲೀಸ್ ಆಟ ಮುಂದುವರಿದಿದೆ.

ಕಣ್ಣೀರ ಕೋಡಿ ಹರಿಸುತ್ತಲೇ ಇರುವ ಚಂದ್ರಿಕಾ

ಈ ಕಳ್ಳ ಪೊಲೀಸ್ ಆಟದ ನಡುವೆಯೂ ಚಂದ್ರಿಕಾ ಅಳುವುದನ್ನು ಮುಂದುವರಿಸಿದರು. ಸಣ್ಣಪುಟ್ಟ ವಿಷಯಕ್ಕೂ ಅವರು ಯಾಕೋ ಏನೋ ಕಣ್ಣೀರಿಡುತ್ತಲೇ ಇದ್ದಾರೆ. ಈ ಬಾರಿಯೂ ನಿಕಿತಾ ಮೇಲೆ ಕೋಪ ಮಾಡಿಕೊಂಡು ಕಡೆಗೆ ತಮ್ಮ ಮಗು ಮೇಲೆ ಆಣೆ ಪ್ರಮಾಣ ಮಾಡುವವರೆಗೂ ಅವರ ಜಗಳ ಹೋಯಿತು.

ಸಿಂಹಾನ ಪೋಸ್ಟರ್ ನಲ್ಲಿ ನೋಡಿರುತ್ತೀರಾ...

ಒಟ್ಟಾರೆಯಾಗಿ ಈ ಕಳ್ಳ ಪೊಲೀಸ್ ಆಟದ ಪೊಲೀಸ್ ಅರುಣ್ ಸಾಗರ್ ಒಂದು ಡೈಲಾಗ್ ಹೇಳಿದರು, ಸಿಂಹಾನ ಪೋಸ್ಟರ್ ನಲ್ಲಿ ನೋಡಿರ್ತೀರಾ, ಫೋಟೋದಲ್ಲಿ ನೋಡಿರುತ್ತೀರಾ, ಜೂನಲ್ಲೂ ನೋಡಿರುತ್ತೀರಾ, ಆದರೆ ನಿಜವಾದ ಸಿಂಹ ಇಲ್ಲಿದೆ...

English summary
Etv Kannada's reality show Bigg Boss Kannada day 58th highlights. BB gives luxuary budget task to inmates as 'Kalla Police Aata'. Narendra Babu Sharma to play as Jaggu Dada while Arun, Nikita and Rishika as police officers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada