For Quick Alerts
  ALLOW NOTIFICATIONS  
  For Daily Alerts

  ಜಗ್ಗುದಾದಾ ಜೊತೆ ಹೊಸ ಕ್ಯಾರೆಕ್ಟರ್ ಬಗ್ಗುದಾದಾ

  By Rajendra
  |
  <ul id="pagination-digg"><li class="next"><a href="/tv/yogesh-changed-cloths-nikita-bigg-boss-074257.html">Next »</a></li></ul>

  ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ 59ನೇ ದಿನದ ಹೈಲೈಟ್ಸ್ ಇಲ್ಲಿವೆ. ಮನೆಯಲ್ಲಿ ಕಳ್ಳ ಪೋಲೀಸ್ ಆಟ ಜೋರಾಗಿ ನಡೆಯುತ್ತಿದೆ. ಒಂದರ್ಥದಲ್ಲಿ ಮನೆ ಕಳ್ಳರ ಸಂತೆಯಾಗಿದೆ. ಇನ್ಸ್ ಪೆಕ್ಟರ್ ಉಳ್ಳಾಗಡ್ಡಿ ಪಾತ್ರದಲ್ಲಿ ಅರುಣ್ ಸಾಗರ್ ಕಳ್ಳರನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ.

  ಕಳ್ಳರ ಗುಂಪಿನ ನಾಯಕ ಜಗ್ಗುದಾದಾ ಆಗಿ ಯಾರಿಗೂ ಸಂದೇಹ ಬಾರದಂತೆ ಬ್ರಹ್ಮಾಂಡ ಶರ್ಮಾ ಅವರು ಕಳ್ಳತನದಲ್ಲಿ ತೊಡಗಿಕೊಂಡಿದ್ದಾರೆ. ರಾತ್ರಿ ಮನೆಯಲ್ಲಿ ದೀಪ ಆರುತ್ತಿದ್ದಂತೆ ತಮ್ಮ ಕಾರ್ಯಾಚರಣೆಯನ್ನು ಶರ್ಮಾ ಸಾಹೇಬರು ಶುರುವಚ್ಚಿಕೊಳ್ಳುತ್ತಿದ್ದಾರೆ.

  ಕದ್ದ ಒಂದೊಂದೇ ವಸ್ತುಗಳನ್ನು ಕನ್ಫೆಷನ್ ರೂಮಿನಲ್ಲಿ ಬಚ್ಚಿಡುತ್ತಿದ್ದಾರೆ. ಎಲ್ಲೋ ಒಂದು ಕಡೆ ಜಗ್ಗುದಾದಾ ಇವರೇ ಇರಬಹುದೇ ಎಂಬ ಸಣ್ಣ ಸಂದೇಹ ಪೊಲೀಸರ ಟೀಂನಲ್ಲಿ ಬಂದಿದೆ. ರಿಷಿಕಾ ಸಿಂಗ್, ಅರುಣ್ ಸಾಗರ್ ಈ ಬಗ್ಗೆ ಗುಸುಗುಸು ಎಂದು ಚರ್ಚಿಸಿಯೂ ಇದ್ದಾರೆ.

  ಆದರೆ ಜಗ್ಗುದಾದಾ ಇವರೇ ಎಂದು ಹೇಳಲು, ಪತ್ತೆ ಹಚ್ಚಲು ಮಾತ್ರ ಸಾಧ್ಯವಾಗಿಲ್ಲ. ಇದರ ಜೊತೆಗೆ ವಿಜಯ್ ರಾಘವೇಂದ್ರ ಅವರಿಗೆ ಬಿಗ್ ಬಾಸ್ ಮತ್ತೊಂದು ರಹಸ್ಯ ಟಾಸ್ಕ್ ಕೊಟ್ಟಿದ್ದಾರೆ. ಅದೇನೆಂದರೆ ಜಗ್ಗುದಾದಾ ಜೊತೆಗೆ ರಾಘು ಬಗ್ಗುದಾದಾ ಆಗಿ ಅಭಿನಯಿಸಬೇಕು. ಅವರೂ ಒಂದಷ್ಟು ವಸ್ತುಗಳನ್ನು ಕದಿಯಬೇಕು.

  <ul id="pagination-digg"><li class="next"><a href="/tv/yogesh-changed-cloths-nikita-bigg-boss-074257.html">Next »</a></li></ul>
  English summary
  Etv Kannada reality show Bigg Bos day 59th highlights. BB gives secret task to Vijay Raghavendra. He plays thief 'Baggu Dada' and theft list of items from the house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X