»   » 'ಬಿಗ್ ಬಾಸ್'ಗೆ ಬಿಕನಾಸಿ ಕಾರ್ಯಕ್ರಮ ಎಂದ ಶರ್ಮಾ

'ಬಿಗ್ ಬಾಸ್'ಗೆ ಬಿಕನಾಸಿ ಕಾರ್ಯಕ್ರಮ ಎಂದ ಶರ್ಮಾ

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ ಅರುವತ್ತನೇ ದಿನಕ್ಕೆ ಅಡಿಯಿಟ್ಟಿದೆ. ಬಾಸ್ ಒಪ್ಪಿಸಿದ್ದ ಕಳ್ಳ ಪೋಲೀಸ್ ಆಟವನ್ನು ನಿಭಾಯಿಸುವಲ್ಲಿ ಎಲ್ಲರೂ ಸಾಕಷ್ಟು ಶ್ರಮಿಸಿದ್ದಾರೆ. ಆದರೆ ಅರುಣ್ ಸಾಗರ್ ಅವರ ತಂಡ ಕುಖ್ಯಾತ ಕಳ್ಳ ಜಗ್ಗುದಾದಾನನ್ನು ಹಿಡಿಯುವಲ್ಲಿ ಸಂಪೂರ್ಣ ವಿಫಲವಾಯಿತು.

ಹಾಗಾಗಿ ಈ ಬಾರಿಯ ಲಗ್ಜಿರಿ ಬಜೆಟ್ ಪೊಲೀಸರ ತಂಡದ ಕೈತಪ್ಪಿತು. ಅರುಣ್ ಸಾಗರ್, ರಿಷಿಕಾ ಸಿಂಗ್ ಹಾಗೂ ನಿಕಿತಾ ಪೊಲೀಸ್ ಪಾತ್ರವನ್ನು ಪೋಷಿಸಿದ್ದರು. ಕಡೆಗೆ ಅವರು ಜಗ್ಗುದಾದಾ ಯಾರು ಎಂದು ಬಿಗ್ ಬಾಸ್ ಗೆ ತಿಳಿಸುವಲ್ಲಿ ವಿಫಲರಾದರು. ಬಹುಶಃ ಲೂಸ್ ಮಾದ ಯೋಗೀಶ್ ಅವರೇ ಜಗ್ಗುದಾದಾ ಇರಬಹುದು ಎಂದು ಪ್ರಕಟಿಸಿದರು.

ಕಡೆಯ ತನಕ ತಾನೇ ಜಗ್ಗು ದಾದಾ ಎಂಬ ಸಣ್ಣ ಸಂದೇಹವೂ ಬಾರದಂತೆ ಬ್ರಹ್ಮಾಂಡ ಶರ್ಮಾ ಬಹಳ ಜಾಗರೂಕತೆಯಿಂದ ಟಾಸ್ಕನ್ನು ನಿಭಾಯಿಸಿದರು. ಜಗ್ಗುದಾದಾ ಇವನೇ ಎಂದು ಅವರ ಮೇಲೆ ಯಾರೂ ಸಂದೇಹ ಪಡಲಿಲ್ಲ. ಅರುವತ್ತನೇ ದಿನದ ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ ಬನ್ನಿ.

ಮನೆಯಲ್ಲಿ ಶರ್ಮಾ ವೇಲಾಯುಧ ಕಾಣೆ

ಬ್ರಹ್ಮಾಂಡ ಗುರುಗಳು ಬೆಳಗಿನ ಶೌಚಕ್ರಿಯೆಗೆ ತೆರಳಿದ್ದಾಗ ಅವರ ವೇಲಾಯುಧವನ್ನು ಅರುಣ್ ಕದ್ದರು. ಅವರು ಬಂದು ನೋಡಿದಾಗ ತಮ್ಮ ಆಯುಧ ಕಾಣೆಯಾಗಿತ್ತು. ಕೂಡಲೆ ಅವರು ಎಲ್ಲರನ್ನೂ ವಿಚಾರಿಸಿದರು. ಚಂದ್ರಿಕಾರನ್ನು ಕೇಳಿದರೆ ಅಯ್ಯೋ ನನ್ನ ಮಗು ಮೇಲೆ ಆಣೆ ನಾನಂತೂ ತೆಗೆದಿಲ್ಲಪ್ಪ ಅಂದರು.

ಈ ಬಿಕನಾಸಿ ಕಾರ್ಯಕ್ರಮ ನನಗೆ ಬೇಕಾಗಿಲ್ಲ

ಕಡೆಗೆ ತಮ್ಮ ಆಯುಧ ಸಿಗದೆ ಇದ್ದಾಗ ಕೆಂಡಮಂಡಲರಾದ ನರೇಂದ್ರ ಬಾಬು ಶರ್ಮಾ ಅವರು, "ಯಾವುದೇ ಕಾರಣಕ್ಕೂ ನನ್ನ ಅಸ್ತ್ರಗಳನ್ನು ಮುಟ್ಟಬೇಡಿ ಎಂದು ಹೇಳಿದ್ದೆ. ಈ ಬಿಕನಾಸಿ ಕಾರ್ಯಕ್ರಮ ಬೇಕಾಗಿಲ್ಲ ನನಗೆ. ನಾನು ಮನೆಗೆ ಹೋಗ್ತೀನಿ ಬಿಟ್ಟುಬಿಡಿ. ಎಲ್ಲಾ ಹಾಳಾಗಿ ಹೋಗ್ತೀರಾ..."

ಬಿಗ್ ಬಾಸ್ ಗೆ ಹಿಡಿಶಾಪ ಹಾಕಿದ ಬ್ರಹ್ಮಾಂಡ

ದೀಕ್ಷೆ ವಸ್ತುಗಳನ್ನು ಯಾವುದೇ ಕಾರಣಕ್ಕೂ ಮುಟ್ಟಬೇಡಿ ಎಂದು ಹೇಳಿದ್ದೀನಿ. ನನ್ನ ಆಯುಧಗಳನ್ನು ಕೊಟ್ಟುಬಿಡಿ. ಇಲ್ಲಾಂದ್ರೆ ಈ ಕಾರ್ಯಕ್ರಮ ಖಂಡಿತ ಸಕ್ಸಸ್ ಆಗಲ್ಲ ಎಂದು ಹಿಡಿಶಾಪವನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೂ ಹಾಕಿದರು. ತಮ್ಮ ಧಾರ್ಮಿಕ ವಸ್ತುಗಳಿಗೆ ಅಗೌರವ ಸೂಚಿಸಿದ್ದಾರೆಂದು ಗೊಳೋ ಎಂದು ಶರ್ಮಾ ಕಣ್ಣೀರಿಟ್ಟರು.

ನನ್ನನ್ನು ಊರಿಗೆ ಕಳುಹಿಸಿ ಬಿಡಿ ಎಂದು ಗೋಗರೆದ

ಅಯ್ಯೋ ನನ್ನನ್ನು ಬಿಟ್ಟು ಬಿಡ್ರಪ್ಪಾ. ನಾನು ಮನೆಗೆ ಹೋಗ್ತೀನಿ. ನನ್ನನು ಊರಿಗೆ ಕಳುಹಿಸಿಬಿಡಿ. ಅಯ್ಯೋ ನನ್ನ ಕರ್ಮ. ದೀಕ್ಷೆ ತೊಟ್ಟ ವಸ್ತುಗಳನ್ನು ಯಾರೂ ತಗೋಬಾರ್ದು. ನನ್ನನ್ನು ಕಳುಹಿಸಿಬಿಡಿ ಎಂದು ಕಾಲುಸುಟ್ಟ ಬೆಂಕಿನಂತೆ ಆಡಿದರು.

ತ್ರಿಶೂಲ ವಾಪಸ್ ತಂದುಕೊಟ್ಟ ಅರುಣ್ ಸಾಗರ್

ಅವರ ಪಾಡನ್ನು ಕಂಡು ಕಡೆಗೆ ಅರುಣ್ ಸಾಗರ್ ಅವರೇ ಮುಂದೆ ಬಂದು ನಾನೇನಪ್ಪಾ ನಿನ್ನ ತ್ರಿಶೂಲವನ್ನು ಕದ್ದಿದ್ದು. ಅದನ್ನು ಚಪ್ಪಲಿ ತೆಗೆದು, ನಿನದೇ ಬಟ್ಟೆಗಳಲ್ಲಿ ಮುಚ್ಚಿಟ್ಟಿದ್ದೇನೆ. ಯಾವುದೇ ಅಗೌರವನ್ನೂ ತ್ರಿಶೂಲಕ್ಕೆ ತೋರಿಸಿಲ್ಲ. ತೆಗೆದುಕೊಳ್ಳಿ. ನನ್ನಿಂದ ತಪ್ಪಾಯಿತು ಎಂದು ಕ್ಷಮೆ ಕೇಳಿದರು.

ತ್ರಿಶೂಲಕ್ಕೆ ಮತ್ತೆ ಪೂಜೆ, ಪುನಸ್ಕಾರ ಮಾಡಿದರು

ಆದರೂ ಬ್ರಹ್ಮಾಂಡ ಗುರುಗಳ ಕೋಪ ತಣ್ಣಗಾದಂತೆ ಕಂಡುಬರಲಿಲ್ಲ. ಒಳಗೊಳಗೇ ಕುದಿಯುತ್ತಿದ್ದರು. ಸಂದರ್ಭ ಸಿಕ್ಕಾಗೆಲ್ಲಾ ಕೋಪವನ್ನು ಹೊರಹಾಕುತ್ತಲೇ ಇದ್ದರು. ಬಳಿಕ ತಮ್ಮ ತ್ರಿಶೂಲಕ್ಕೆ ಪೂಜೆ, ಪುನಸ್ಕಾರ ಮಾಡಿ ಅದನ್ನು ಶುಚಿಗೊಳಿಸಿದರು ಶರ್ಮಾ.

ನಿಕಿತಾ ಮೇಲೆ ಬೆಂಕಿಯ ಚೆಂಡಿನಂತಾದ ಚಂದ್ರಿಕಾ

ಇನ್ನೊಂದು ಕಡೆ ಚಂದ್ರಿಕಾ ಮತ್ತು ನಿಕಿತಾ ನಡುವೆ ವಾರ್ ನಡೆಯುತ್ತಲೇ ಇದೆ. ತನ್ನ ಮಗನ ಫೋಟೋ ಕದ್ದಳು ಎಂದು ನಿಕಿತಾ ಮೇಲೆ ಬೆಂಕಿ ಚೆಂಡಿನಂತೆ ಹಾರಿಬಿದ್ದರು ಚಂದ್ರಿಕಾ. ಇದಕ್ಕಾಗಿ ದಿನವೆಲ್ಲಾ ಅಳುತ್ತಲೇ ಕುಳಿತಿದ್ದರು.

ಬಿಗ್ ಬಾಸ್ ಬಗ್ಗೆ ಚಂದ್ರಿಕಾ ಆರೋಪ

ಯಾವುದೇ ಟಾಸ್ಕ್ ನಲ್ಲಿ ನಿಕಿತಾ ಗೆದ್ದಾಗ ಬಿಗ್ ಬಾಸ್ ಒಳ್ಳೆಯ ಮಾರ್ಕ್ಸ್ ಕೊಡ್ತಾರೆ. ಆದರೆ ನಾವು ಗೆದ್ದಾಗ ಮಾತ್ರ ಕಡಿಮೆ ಅಂಕಗಳನ್ನು ನೀಡುತ್ತಾರೆ ಎಂದು ಬಿಗ್ ಬಾಸ್ ಬಗ್ಗೆಯೇ ಆರೋಪಿಸಿದರು ಚಂದ್ರಿಕಾ. ಇದು ಬಿಗ್ ಬಾಸ್ ಕಿವಿಗೂ ಬಿದ್ದಿದೆ.

ಈ ವಾರ ಯಾರಿಗೆ ಜೈಲು ಯಾರಿಗೆ ಬೇಲು

ಈ ವಾರ ಮೂವರು ಮನೆಯಿಂದ ಹೊರಹೋಗಲು ಮೂವರು ನಾಮಿನೇಟ್ ಆಗಿದ್ದಾರೆ. ಬ್ರಹ್ಮಾಂಡ ಶರ್ಮಾ, ರಿಷಿಕಾ ಸಿಂಗ್ ಹಾಗೂ ನಿಕಿತಾ. ಈ ಮೂವರಲ್ಲಿ ಒಬ್ಬರು ಮನೆಯಿಂದ ಹೊರಹೋಗುವುದು ಗ್ಯಾರಂಟಿ. ಯಾರಿಗೆ ಜೈಲು ಯಾರಿಗೆ ಬೇಲು ಶುಕ್ರವಾರ (ಮೇ 24) ರಾತ್ರಿ 8ಕ್ಕೆ ಗೊತ್ತಾಗಲಿದೆ.

English summary
Etv Kannada reality show Bigg Boss day 60th highlights. Arun Sagar team fails to identify the Jaggu Dada. So the luxuary budget task goes to Narendra Babu Sharma team, he played as Jaggu Dada and maitained secret upto end of the task.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada