»   » ಬಿಗ್ ಬಾಸ್ ಮನೆಯಲ್ಲಿ ಗಂಡುಬೀರಿ ಹೆಣ್ಣು ಚಂದ್ರಿಕಾ

ಬಿಗ್ ಬಾಸ್ ಮನೆಯಲ್ಲಿ ಗಂಡುಬೀರಿ ಹೆಣ್ಣು ಚಂದ್ರಿಕಾ

Posted By:
Subscribe to Filmibeat Kannada
<ul id="pagination-digg"><li class="next"><a href="/tv/brahmanda-item-song-bigg-boss-075037.html">Next »</a></li></ul>

ಈಟಿವಿ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ 86ನೇ ದಿನಕ್ಕೆ ಅಡಿಯಿಟ್ಟಿದೆ. ಮನೆಯಲ್ಲಿರುವ ಐದು ಮಂದಿಗೆ ಈ ಬಾರಿ ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದರು. ಅದೇನೆಂದರೆ ಉಲ್ಟಾ ಪಲ್ಟಾ ಟಾಸ್ಕ್. ಅದರ ಪ್ರಕಾರ ಮಹಿಳಾ ಸ್ಪರ್ಧಿಗಳು ಪಂಚೆ, ಶರ್ಟ್ ಧರಿಸಬೇಕು. ಪುರುಷರು ಸೀರೆ, ರವಿಕೆ ತೊಡಬೇಕು.

ಈ ಟಾಸ್ಕ್ ನಿಯಮಗಳ ಪ್ರಕಾರ ಪುರುಷ ಸ್ಪರ್ಧಿಗಳು ಮೀಸೆ ಹಾಗೂ ಗಡ್ಡ ಬೋಸಿಸಬೇಕು ಎಂದು ಬಿಗ್ ಬಾಸ್ ಹೇಳಿದರು. ಆದರೆ ವಿಜಯ್ ಆಗಲಿ ಅರುಣ್ ಅಥವಾ ನರೇಂದ್ರ ಬಾಬು ಶರ್ಮಾ ಅವರು ಗಡ್ಡ ಮೀಸೆಗಳನ್ನು ತೆಗೆಯಲಿಲ್ಲ.

ನರೇಂದ್ರ ಬಾಬು ಅವರು ಸೀರೆ ಉಟ್ಟುಕೊಳ್ಳಬೇಕು ಎಂದು ಹೇಳಲಾಗಿತ್ತು. ಆದರೆ ಅವರು ಇದೆಲ್ಲಾ ನನ್ನ ಕೈಯಲ್ಲಿ ಆಗಲ್ಲಪ್ಪಾ ಎಂದರು. ಆದರೆ ಡಾನ್ಸ್ ಮಾತ್ರ ಬೊಂಬಾಟ್ ಆಗಿ ಮಾಡಿದರು. ಇಷ್ಟು ದಿನ ಅವರಲ್ಲಿದ್ದ ಅಪ್ಪಟ ಕಲಾವಿದನೊಬ್ಬ ಈ ಟಾಸ್ಕ್ ನ ಮೂಲಕ ಹೊರಬಂದ.

Bigg Boss highlights

ಇನ್ನು ಮನೆಯಲ್ಲಿರುವ ಇಬ್ಬರು ನಾರಿಮಣಿಗಳಾದ ನಿಕಿತಾ ಹಾಗೂ ಚಂದ್ರಿಕಾ ಗಡ್ಡ, ಮೀಸೆ ಮೇಕಪ್ ಮಾಡಿಕೊಂಡು ಗಂಡುಬೀರಿ ಹೆಂಗಸಂತಾದರು. ಬೆಳಗ್ಗೆಯಿಂದ ರಿಹರ್ಸಲ್ಸ್ ಮಾಡಿದ ಸ್ಪರ್ಧಿಗಳು ಸಂಜೆಯಾಗುತ್ತಿದ್ದಂತೆ ಮನೆಯಲ್ಲಿ ಹೊಸ ರಂಗೇರಿತು.

ಚಂದ್ರಿಕಾ ಅವರಂತೂ ಗಡ್ಡ ಮೀಸೆ, ಬಿಳಿ ಪಂಚೆ ಶರ್ಟು ತೊಟ್ಟು ಮಂಡ್ಯಗಂಡು ಶೈಲಿಯಲ್ಲಿ ಮಿಂಚುತ್ತಿದ್ದರು. ಇತ್ತೀಚೆಗಷ್ಟೇ ರವಿಚಂದ್ರನ್ ಅವರು ಬ್ರಹ್ಮಾಂಡ ಗುರುಗಳನ್ನು ನೆನೆದು ಕಾಮೆಂಟ್ ಮಾಡಿದ್ದರು. ಬ್ರಹ್ಮಾಂಡ ಗುರುಗಳನ್ನು ನಾನು ಹೋಗೋ ಬಾರೋ ಎಂದು ಕರೆಯುತ್ತೇನೆ ಎಂದಿದ್ದರು.

ಕಾಕತಾಳೀಯ ಎಂಬಂತೆ ಬ್ರಹ್ಮಾಂಡ ಗುರುಗಳು ಮನೆಯಲ್ಲಿ ಏನ್ ಹುಡ್ಗೀರೋ ಯಾಕಿಂಗ್ ಆಡ್ತೀರೋ ಎಂಬ ಹಾಡನ್ನು ಗುನುಗುತ್ತಿದ್ದರು. ಈ ಬಾರಿ ಟಾಸ್ಕ್ ನ ಭಾಗವಾಗಿ ಎರಡು ಐಟಂ ಹಾಡುಗಳನ್ನು ಕೊಡಲಾಗಿತ್ತು.

<ul id="pagination-digg"><li class="next"><a href="/tv/brahmanda-item-song-bigg-boss-075037.html">Next »</a></li></ul>
English summary
Bigg Boss Kannada day 86th highlights. Boss gives 'Ulta Palta Task' to all inmates. According to task Brahmanda fame Narendra Babu Sharma shakes his legs and hip. Finally Sharma exhausts.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada