For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ನಲ್ಲಿ ಮುಂಗಾರು ಮಳೆ ಚಿತ್ರದ ಕುಚೋದ್ಯ

  By ಉದಯರವಿ
  |
  <ul id="pagination-digg"><li class="next"><a href="/tv/bigg-boss-disgraces-mungaru-male-cast-crew-075073.html">Next »</a></li></ul>

  ಈ ಬಾರಿ 'ಬಿಗ್ ಬಾಸ್' ಮನೆಯ ಸದಸ್ಯರಿಗೆ ಹೊಸ ಟಾಸ್ಕ್ ನೀಡಿದರು. ಅದೇನೆಂದರೆ ಚಿತ್ರ ನಿರ್ದೇಶನ. ಚಿತ್ರದ ಶೀರ್ಷಿಕೆ 'ಹಿಂಗಾರು ಮಳೆ'. ಆಕ್ಷನ್ ಕಟ್ ಹೇಳುವವರು ಅರುಣ್ ಸಾಗರ್. ಚಿತ್ರದ ನಾಯಕ, ನಾಯಕಿ ವಿಜಯ್ ರಾಘವೇಂದ್ರ ಹಾಗೂ ನಿಕಿತಾ. ದೇವದಾಸ ಮೊಲದ ಪಾತ್ರದಲ್ಲಿ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ.

  ಈ ಚಿತ್ರ ನಿರ್ದೇಶನದ ಟಾಸ್ಕ್ ಜೊತೆಗೆ ಬಿಗ್ ಬಾಸ್ ಒಂದು ಎಚ್ಚರಿಕೆಯನ್ನೂ ಕೊಟ್ಟರು. ಅದೇನೆಂದರೆ ಈ ಚಿತ್ರ ಸಂಪೂರ್ಣ ಭಿನ್ನವಾಗಿರಬೇಕು. ಯಾರನ್ನೂ ಅನುಕರಣೆ ಮಾಡಬಾರದು ಎಂದು. ಆದರೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಯಿತು.

  ಮನೆಯಲ್ಲಿ ನಡೆದದ್ದೇ ಬೇರೆ. 'ಮುಂಗಾರು ಮಳೆ' ಚಿತ್ರದ ಗೋಲ್ಡನ್ ಸ್ಟಾರ್ ಗಣೇಶ್, ನಿರ್ದೇಶಕ ಯೋಗರಾಜ್ ಭಟ್, ನಾಯಕಿ ಪೂಜಾಗಾಂಧಿ ಅವರನ್ನು ಅಣಕಿಸುವಂತೆ ಈ ಟಾಸ್ಕನ್ನು ನಿರ್ವಹಿಸಲಾಯಿತು. ಎಂಬತ್ತೇಳನೇ ದಿನದ ಹೈಲೈಟ್ಸ್ ಇಲ್ಲಿವೆ ನೋಡಿ.

  ಇಲ್ಲಿ 'ಹಿಂಗಾರು ಮಳೆ' ನಿರ್ದೇಶಕರ ಹೆಸರು ನಾಗರಾಜ್ ನಟ್. ಗಣೇಶ್ ಬದಲಾಗಿ ಮಣೇಶ್. ಪೂಜಾಗಾಂಧಿ ಹೋಗಿ ಸೋಜಾಗಾಂಧಿ. ಅವರ ತಾಯಿಯ ಹೆಸರು ಮಜಾಗಾಂಧಿ. ಇನ್ನು ಚಿತ್ರದ ಅಡಿಬರಹ ಮುಂಗಾರು ಮಳೆ-ಮಿನಿಮಿನಿ ಜಿಲ್ ಜವಾನಿ.

  ಮಣೇಶ್ ಪಾತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಬಹುತೇಕ ಗಣೇಶ್ ಅವರಂತೆ ಮಾಡಿ ತೋರಿಸಿದರು. ಇನ್ನು ಸೋಜಾಗಾಂಧಿಯಾಗಿ ನಿಕಿತಾ ಸಹ ಅಷ್ಟೇ ಪೂಜಾಗಾಂಧಿಯಂತೆ ನರ್ತಿಸಿದರು. ನಾಗರಾಜ್ ನಟ್ ಆಗಿ ಅರುಣ್ ಸಾಗರ್ ಯೋಗರಾಜ್ ಭಟ್ ಅವರಂತೆ ಮಾಡಿದರು.

  <ul id="pagination-digg"><li class="next"><a href="/tv/bigg-boss-disgraces-mungaru-male-cast-crew-075073.html">Next »</a></li></ul>
  English summary
  Bigg Boss Kannada day 87th highlights. The boss gives 'Hingaru Male' task to inmates. But the contestents imitates 'Mungaru Male' film cast and crew. Sometimes it looks like disgrace to the Yograj Bhat, Pooja Gandhi and actor Ganesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X