Don't Miss!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
ಹಳೆಯ ಕಾರನ್ನು ಮಾರಾಟ ಮಾಡುತ್ತಿದ್ದೀರಾ?: ಟಾಟಾದಿಂದ ದೊಡ್ಡ ಘೋಷಣೆ
- News
Vande Metro Rail; ಬೆಂಗಳೂರಿಗೆ ಬರಲಿದೆ ದೇಶದ ಮೊದಲ ರೈಲು
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK 9 : ಮತ್ತೆ ಅಗ್ರೆಸ್ಸೀವ್ ಆಟ ಶುರು ಮಾಡಿದ ಅಮೂಲ್ಯ.. ಬೇರೆ ಟೀಂನಲ್ಲಿರುವ ರಾಕೇಶ್ ಗೂ ಅವಾಜ್
ಬಿಗ್ ಬಾಸ್ ಮನೆಯಲ್ಲಿ ಒಮ್ಮೊಮ್ಮೆ ಬರುವ ಜಗಳ ಅತೆಷ್ಟು ತಾರಕಕ್ಕೇರುತ್ತೆ ಎಂದರೆ ನೋಡುವಾಗ ಖಂಡಿತ ಭಯವಾಗುತ್ತದೆ. ಇವರ ನಡುವೆ ಮತ್ತೆ ಯಾವತ್ತು ಫ್ರೆಂಡ್ಶಿಪ್ ಇರುವುದೇ ಇಲ್ಲವೇನೋ ಎಂಬಷ್ಟು ಮಟ್ಟಕ್ಕೆ ಹೋಗಿ ಬಿಡುತ್ತದೆ. ಅಂಥದ್ದೆ ಭಾವನೆ ಅಮೂಲ್ಯ ಅವರನ್ನು ನೋಡಿದಾಗ ಮೂಡದೆ ಇರುವುದಿಲ್ಲ.
ಇವತ್ತು ನೀಡಿದ ಟಾಸ್ಕ್ ನಲ್ಲಿ ನಾನಾ ನೀನಾ ಎಂಬಂತ ಸ್ಪರ್ಧೆ ಶುರುವಾಗಿದೆ. ಅದರಂತೆ ಇಂದು ಕೂಡ ಟೀಂಗಲ ಆಟ ಮುಂದುವರೆದಿದೆ. ನಮ್ಮ ಟೀಂ ಗೆಲ್ಲಿಸಲೇಬೇಕೆಂಬ ಹಠ ಎಲ್ಲರಲ್ಲೂ ಎದ್ದು ಕಾಣುತ್ತಿದೆ. ಇವತ್ತಿನ ಟಾಸ್ಕ್ ನೋಡುಗರ ಎದೆಯೊಳಗೆ ಝಲ್ ಎನಿಸುತ್ತಿದೆ.

ಎರಡು ಟೀಂನವರನ್ನು ಜಗಳಕ್ಕೆ ಬಿಟ್ಟ ಬಿಗ್ ಬಾಸ್
ಬಿಗ್ ಬಾಸ್ ನೀಡುವ ಕೆಲವೊಂದು ಟಾಸ್ಕ್ ಗಳು ಜಗಳ ಆಡುವ ರೀತಿಯಲ್ಲಿಯೇ ಇರುತ್ತದೆ. ಯಾಕಂದ್ರೆ ಕಡೆ ಹಂತದಲ್ಲಿದ್ದಾರೆ ಮನೆ ಮಂದಿ. ಇಲ್ಲಿ ಟೀಂ ಆಗಿಯೂ ಆಡಬೇಕು. ಪ್ರತ್ಯೇಕವಾಗಿಯೂ ಆಡಬೇಕು. ಆಗ ಮಾತ್ರ ಕೊನೆಯಲ್ಲಿ ಉಳಿದುಕೊಳ್ಳುವುದಕ್ಕೆ ಸಾಧ್ಯ. ಅದೇ ರೀತಿ ಬಣ್ಣ ಬಳಿಯುವ ಆಟವನ್ನು ನೀಡಿದ್ದರು. ಅದರಲ್ಲಿ ಎರಡು ಟೀಂನವರು ಜೋರು ಜೋಶ್ ನಲ್ಲಿಯೇ ಆಡಿದ್ದಾರೆ.

ಆಟ ಅಂದ್ರೆ ಅಗ್ರೆಸ್ಸಿವ್ ಅಮೂಲ್ಯ
ಅಮೂಲ್ಯ ರೆಸ್ಪೆಕ್ಟ್ ವಿಚಾರದಲ್ಲಿ ಎಷ್ಟು ನಿರೀಕ್ಷೆ ಮಾಡುತ್ತಾರೋ, ಟಾಸ್ಕ್ ವಿಚಾರದಲ್ಲಿಯೂ ಎಲ್ಲಿಯೂ ಕಾಂಪ್ರೂಮೈಸ್ ಆಗುವುದಿಲ್ಲ. ಅಮೂಲ್ಯ ಅವರ ಆಟವನ್ನು ಎಲ್ಲರೂ ಅದಾಗಲೇ ಟಾಯ್ಸ್ ಆಟದಲ್ಲಿಯೇ ನೋಡಿದ್ದಾರೆ. ಟಾಯ್ಸ್ ಗೆಲ್ಲಲೇಬೇಕೆಂದು ಗಂಡು ಮಕ್ಕಳಿಗೆ ಸಮವಾಗಿ ನುಗ್ಗಿ ಟಾಯ್ಸ್ ಐಟಂ ತೆಗೆದುಕೊಳ್ಳುತ್ತಿದ್ದರು. ಎಲ್ಲರೂ ಚೆನ್ನಾಗಿಯೇ ಆಡುತ್ತಿದ್ದರು. ಅಮೂಲ್ಯ ಕೂಡ ನೀವೂ ನಿಯತ್ತಾಗಿ ಆಡಿದರೆ ನಾವೂ ನಿಯತ್ತಾಗಿ ಆಡುತ್ತೀವಿ, ನೀವೂ ಮೋಸ ಮಾಡಿದರೆ ನಾವೂ ಆಡುವುದು ಹಾಗೆ ಎಂದು ಹಠ ತೊಟ್ಟಿದ್ದರು. ನೀವಾ ನಾನಾ ನೋಡಿಯೇ ಬಿಡೋಣಾ ಅಂತ ಚಾಲೆಂಜ್ ಕೂಡ ಹಾಕಿದ್ದರು.

ಬಣ್ಣ ಬಳಿದುಕೊಂಡ ದೀಪಿಕಾ-ಅಮೂಲ್ಯ
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಅದುವೇ ಬಣ್ಣ ಬಳಿದುಕೊಳ್ಳುವ ಟಾಸ್ಕ್. ಎರಡು ಟೀಂನಿಂದ ಒಬ್ಬೊಬ್ಬರು ಬರಬೇಕಾಗಿತ್ತು. ಅದರಲ್ಲಿ ಇಬ್ಬರು ಕೂಡ ಅಲ್ಲಿಯೇ ಬಣ್ಣವನ್ನು ಕೈನಲ್ಲಿ ಅದ್ದಿ, ಎದುರು ಟೀಂನ ವ್ಯಕ್ತಿಯ ಶರ್ಟ್ ಗೆ ಫುಲ್ ಬಣ್ಣ ಮಾಡಬೇಕಿತ್ತು. ಬಣ್ಣ ಎರಚುವಂತಿರಲಿಲ್ಲ. ಆದ್ರೆ ಈ ಆಟ ಆಡುವುದಕ್ಕೆ ಹೋದ ಅಮೂಲ್ಯ ಅಂಡ್ ದೀಪಿಕಾ ಅಕ್ಷರಶಃ ರಣಭೂಮಿ ಮಾಡಿ ಬಿಟ್ಟಿದ್ದರು.

ರಾಜಣ್ಣನ ಸ್ಥಿತಿ ಅತಂತ್ರ
ಬಣ್ಣ ಬಳಿಯುವ ಟಾಸ್ಕ್ ನಲ್ಲಿ ಯಾವುದೇ ಕಾರಣಕ್ಕೂ ಬಣ್ಣವನ್ನು ಎರಚುವಂತಿರಲಿಲ್ಲ. ಅಂಗೈನಿಂದ ಬಣ್ಣ ತೆಗೆದುಕೊಂಡು ಬಟ್ಟೆಗೆ ಬಳಿಯಬೇಕಿತ್ತು. ಅಮೂಲ್ಯ ಅಂಡ್ ದೀಪಿಕಾ ಕಾದಾಟಕ್ಕೆ ಇಳಿದಿದ್ದಾಗ, ಮೊದಲಿಗೆ ದೀಪಿಕಾ ದಾಸ್ ಕೈನಿಂದ ಬಣ್ಣ ಎರಚಿದರು. ಹಾಗೇ ಮಾಡುವಂಗಿಲ್ಲ ಅಂತ ಮಿನುಗುತಾರೆ ಟೀಂನವರು ಎಚ್ಚರಿಸಿದರು. ಆದರೂ ಅದು ಮುಂದುವರೆದಾಗ ಅಮೂಲ್ಯಾ ಕೋಪ ಹೆಚ್ಚಾಗಿತ್ತು. ಅದಕ್ಕೆ ಬಣ್ಣವಿದ್ದ ಬಾಂಡಲಿ ತೆಗೆದು ದೀಪಿಕಾ ಅವರ ಮೇಲೆ ಸುರಿದರು. ಅಮೂಲ್ಯಾಗೆ ಅನುಪಮಾ ಕಿರುಚಿ ಹೇಳಿದರು. "ಆ ರೀತಿ ಮಾಡುವಂಗಿಲ್ಲ ಅಮ್ಮು" ಎಂದು ಆದರೂ ಅಮೂಲ್ಯ ಕೇಳಿಸಿಕೊಳ್ಳಲಿಲ್ಲ. ಜೊತೆಗೆ "ಅವರು ತಪ್ಪು ಮಾಡಬಹುದು, ನಾವೂ ಮಾಡುವಂಗಿಲ್ಲವಾ" ಎಂದು ಪ್ರಶ್ನಿಸಿದರು. ಅತ್ತ ರಾಜಣ್ಣನದ್ದು ಮತ್ತೊಂದು ಗೋಳು. ಕ್ಯಾಪ್ಟನ್ ಆಗಿರುವುದಕ್ಕಿಂತ ಹೆಚ್ಚು ಅವರ ಟೀಂ ಸಪೋರ್ಟಿವ್ ಆಗಿದ್ದಾರೆ ಎಂಬ ಅಪವಾದ ಹೊತ್ತುಕೊಂಡಿದ್ದರು.