Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK 9 : ರಾಜಣ್ಣನ ಮೇಲೆ ಕೈ ಮಾಡಿದರಾ ಆರ್ಯವರ್ಧನ್? ಬಿಗ್ ಬಾಸ್ ಮನೆಯಲ್ಲಿ ಏನಾಗ್ತಿದೆ?
ಬಿಗ್ ಬಾಸ್ ಮನೆಯಲ್ಲಿ ಈಗ ಇರುವ ಹತ್ತು ಜನರನ್ನು ಎರಡು ಟೀಂಗಳಾಗಿ ಮಾಡಿ, ಒಗ್ಗಟ್ಟನ್ನು ಪ್ರದರ್ಶಿಸುವ ಕೆಲಸ ಮಾಡುತ್ತಿದೆ ಬಿಗ್ ಬಾಸ್. ಕೂಲ್ ಟೀಂ ಅಂಡ್ ಮಿನುಗು ತಾರೆ ಎಂಬ ಟೀಂ ಮಾಡಿ, ಎರಡು ಟೀಂನಲ್ಲೂ ಐದು ಜನ ಮೆಂಬರ್ಸ್ ಇಟ್ಟಿದೆ. ಇಬ್ಬರಿಗೂ ಟಾಸ್ಕ್ ಗಳನ್ನು ನೀಡುತ್ತಿದ್ದು, ಗೆಲ್ಲುವ ಹಠ ಎಲ್ಲರಲ್ಲೂ ಶುರುವಾಗಿದೆ.
ಮನೆಯಲ್ಲಿ ಆಗಾಗ ತಮಾಷೆಯನ್ನು ಮಾಡುತ್ತಲೇ ಇರುತ್ತಾರೆ. ಅದರಂತೆಯೆ ತಮಾಷೆಯೇ ಕೆಲವೊಂದು ಸಲ ಸೀರಿಯಸ್ ಆಗಿ, ಇನ್ನೇನನ್ನೋ ಕ್ರಿಯೇಟ್ ಮಾಡಿ ಬಿಡುತ್ತದೆ. ಅಂಥದ್ದೊಂದು ಪರಿಸ್ಥಿತಿ ಇದೀಗ ಆರ್ಯವರ್ಧನ್ ಹಾಗೂ ರೂಪೇಶ್ ರಾಜಣ್ಣನನ ಹೊತ್ತಿಕೊಂಡಿದೆ.

ಕ್ಲೋಸ್ ಆಗಿದ್ದವರೆ ದುಷ್ಮನ್ ಗಳಾಗಿ ಹೋದ್ರಾ..?
ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಹೆಚ್ಚು ಆತ್ಮೀಯವಾಗಿರುವುದು, ರೂಪೇಶ್ ರಾಜಣ್ಣ ಹಾಗೂ ರೂಪೇಶ್ ಶೆಟ್ಟಿ ಜೊತೆಗೆ. ಇತ್ತಿಚೆಗೆ ಮೂರು ಜನ ಸೇರಿ ಬೆಳದಿಂಗಳ ಊಟವನ್ನು ಮಾಡಿದ್ದರು, ಮನೆಯಿಂದ ಔಟ್ ಆಗುವುದು ಯಾರು ಎಂದು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಾ ಕೂತಿದ್ದರು. ಅಷ್ಟೇ ಯಾಕೆ ಆರ್ಯವರ್ಧನ್ ಅವರ ಹೆಂಡತಿ ಬಗ್ಗೆ ಮಾತನಾಡಿದ ಇಬ್ಬರು, ಕಾಲಿಗೆ ಬಿದ್ದು ಕ್ಷಮೆ ಕೂಡ ಕೇಳಿದ್ದರು. ಹೀಗಿರುವಾಗ ಸಹಜವಾದ ಸಲಿಗೆ, ಜಗಳಕ್ಕೆ ಕಾರಣವಾಗಿದೆ.

ರಾಜಣ್ಣ ಕೋಪಕ್ಕೆ ಕಾರಣವೇನು..?
ಆರ್ಯವರ್ಧನ್ ಅವರು ತಮಾಷೆ ಮಾಡುತ್ತಾ ನಿಂತರೆ ಅದು ನೋಡುಗರಿಗೆಲ್ಲಾ ಹೊಟ್ಟೆ ನೋವು ಬರುವಷ್ಟು ನಗುತ್ತಾರೆ, ನಗಿಸುತ್ತಾರೆ. ರಾಜಣ್ಣ ಕೂಡ ಆಗಾಗ ತಮಾಷೆ ಮಾಡುತ್ತಾರೆ. ಅದರಂತೆ ಇವತ್ತು ಟಾಸ್ಕ್ ಎಲ್ಲಾ ಮುಗಿದ ಮೇಲೆ ಎರಡು ಟೀಂನವರು ನಿಂತು ಮಾತನಾಡುತ್ತಿದ್ದರು. ಈ ವೇಳೆ ಆರ್ಯವರ್ಧನ್ ಮತ್ತು ರಾಜಣ್ಣ ತಮಾಷೆಯಾಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದರು. ರಾಜಣ್ಣ ಅವರು ಆರ್ಯವರ್ಧನ್ ಅವರನ್ನು ಸುತ್ತಾಡಿಸಿ, ಕೈ ಬೆನ್ನ ಹಿಂದಕ್ಕೆ ಕಟ್ಟಿದ್ದರು. ಬಳಿಕ ಆರ್ಯವರ್ಧನ್, ರಾಜಣ್ಣ ಅವರ ಹೊಟ್ಟೆಗೊಮ್ಮೆ, ಬೆನ್ನಿಗೊಮ್ಮೆ ಹೊಡೆದಿದ್ದಾರೆ. ಇದು ನೋಡ ನೋಡುತ್ತಿದ್ದಂತೆ ಜೋರು ಜಗಳಕ್ಕೆ ಕಾರಣವಾಗಿದೆ.

ರಾಜಣ್ಣನಿಗೆ ಆರ್ಯವರ್ಧನ್ ನಡೆ ಇಷ್ಟವಾಗಲಿಲ್ಲವಾ..?
ಸಲಿಗೆ ಎಂಬುದೇ ಒಮ್ಮೊಮ್ಮೆ ಹಾಗೆ. ಅತಿಯಾದರೆ ಜಗಳಕ್ಕೂ ಕಾರಣವಾಗುತ್ತದೆ. ಇಲ್ಲಿಯೂ ಆಗಿದ್ದು ಅದೇ. ಮನೆಯವರು ತಮಾಷೆ ಎಂದುಕೊಂಡಿದ್ದ ಜಗಳ ನೋಡ ನೋಡುತ್ತಿದ್ದಂತೆ ಅತಿರೇಕಕ್ಕೆ ಹೋಗಿತ್ತು. ಮನೆಯವರೆಲ್ಲ ಒಂದು ಕ್ಷಣ ಗಾಬರಿಯಾಗುವಂತೆ ರಾಜಣ್ಣ ಕಿರುಚಿದರು. "ಏನ್ರೀ ನೀವೂ ಆಟ ಆಡುತ್ತಾ ಇದ್ದೀರಾ. ಸಲಿಗೆ ಕೊಟ್ಟರೆ ಹೀಗೆ ಆಡೋದಾ. ಒಳ್ಲೆ ಕಪಿ ಥರ ಆಡ್ತಾ ಇದ್ದೀರಲ್ಲ. ನಿಮ್ಮತ್ರ ಯಾವ ತಮಾಷೆ. ಸಲಿಗೆ ಕೊಟ್ಟರೆ ಹೀಗೆನಾ. ಲಾರ್ಡ್ ಥರ ಆಡಬೇಡಿ ನನ್ನ ಹತ್ರ. ಹೊಡೆದ್ರೆ ಮುಖಕ್ಕೆ ಅಷ್ಟೆ ಆಮೇಲೆ" ಅಂತ ರಾಜಣ್ಣ ರೊಚ್ಚಿಗೆದ್ದಿದ್ದಾರೆ.

ಆರ್ಯವರ್ಧನ್ & ರಾಜಣ್ಣನ ಜಗಳ ಬಿಡಿಸಲು ರೂಪೇಶ್ ಶೆಟ್ಟಿ ಹರಸಾಹಸ..!
ಮಾತು ಮಾತು ಆಡುತ್ತಲೇ ರೂಪೇಶ್ ರಾಜಣ್ಣ ಮತ್ತು ಆರ್ಯವರ್ದನ್ ಜಗಳ ಆಡಲು ಶುರು ಮಾಡಿದರು. ರಾಜಣ್ಣ ಹೇಳಿದ ಮಾತಿಗೆ ಆರ್ಯವರ್ಧನ್ ಕೂಡ ಟಾಂಗ್ ಕೊಟ್ಟರು. "ನೀವೂ ಕಪಿ ಥರ ಆಡೋದು. ತಮಾಷೆಗೆ ಹೊಡೆದದ್ದು ಅಂತ ಹೇಳ್ತಾ ಇದ್ದೀನಿ. ಇಷ್ಟು ಹೊತ್ತು ತಮಾಷೆ ಮಾಡಿ ಈಗ ಸೀರಿಯಸ್ ಆಗಿಬಿಟ್ಟರೆ. ನೀವೂ ದೊಡ್ಡ ಲಾರ್ಡ್ ಅಪ್ಪನ ಥರ ಆಡಬೇಡಿ. ನೀವೇನ್ರಿ ಕೈ ತೋರಿಸೋದು, ಏನು ಹೊಡೆದು ಬಿಡ್ತೀರಾ. ಮುಟ್ರಿ ನೋಡೋಣಾ" ಅಂತ ಆರ್ಯವರ್ಧನ್ ಯುದ್ಧಕ್ಕೆ ನಿಂತಿದ್ದರು. ಈ ಜಗಳ ಬಿಡಿಸುವುದಕ್ಕೆ ರೂಪೇಶ್ ಶೆಟ್ಟಿ, ಅರುಣ್ ಸಾಗರ್ ಸುಸ್ತಾಗಿ ಹೋದರು.