»   » ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಕಲರ್ ಫುಲ್ ಚಿತ್ರಗಳು

ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಕಲರ್ ಫುಲ್ ಚಿತ್ರಗಳು

Posted By:
Subscribe to Filmibeat Kannada

ಸತತ ತೊಂಬತ್ತೆಂಟು ದಿನಗಳ ವನವಾಸವನ್ನು ಮುಗಿಸಿಕೊಂಡ 'ಬಿಗ್ ಬಾಸ್' ತಂಡ ಸೋಮವಾರ (ಜುಲೈ 1) ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯಿತು. ಎಲ್ಲರ ಮುಖದಲ್ಲೂ ಮಂದಹಾಸ ಇಣುಕುತ್ತಿತ್ತು. ಇವರ ಜೊತೆಗೆ ಕಿಚ್ಚ ಸುದೀಪ್ ಸಹ ಬೆಂಗಳೂರಿಗೆ ಮರಳಿದರು.

ಈಟಿವಿ ಕನ್ನಡದ ಈ ರಿಯಾಲಿಟಿ ಶೋ ಕರ್ನಾಟಕದ ಮೂಲೆ ಮೂಲೆಗೆ ತಲುಪಿದೆ. ಇದರಲ್ಲಿ ಭಾಗವಹಿಸಿದ್ದ ಕಲಾವಿದರೆಲ್ಲರೂ ಇಂದು ವೀಕ್ಷಕರೆಲ್ಲರಿಗೂ ಚಿರಪರಿಚಿತರೇನೋ ಎಂಬಷ್ಟರ ಮಟ್ಟಿಗೆ ಹತ್ತಿರವಾಗಿದ್ದಾರೆ. 'ಬಿಗ್ ಬಾಸ್' ರಿಯಾಲಿಟಿ ಶೋನ ಹೆಚ್ಚುಗಾರಿಕೆ ಇರುವುದೇ ಇಲ್ಲಿ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ರನ್ನರ್-ಅಪ್ ಅರುಣ್ ಸಾಗರ್ ಅವರನ್ನು ಮಾಧ್ಯಮಗಳು ಮಾತಿಗೆಳೆದವು. "ವಿಜಯ್ ರಾಘವೇಂದ್ರ ನಮ್ಮ ಹುಡುಗ. ನಾನು ಗೆದ್ದಿದ್ದರೆ ಎಷ್ಟು ಖುಷಿಪಡುತ್ತಿದ್ದೆನೋ ಅವನು ಗೆದ್ದಿರುವುದು ಅಷ್ಟೇ ಖುಷಿ ಕೊಟ್ಟಿದೆ" ಎಂದರು.

ವೀಕ್ಷಕರ ಸಹನೆ ಕೆಣಕಿದ ಜಾಹೀರಾತುಗಳು

ಭಾನುವಾರ (ಜೂ.30) ರಾತ್ರಿ 8ಕ್ಕೆ ಆರಂಭವಾದ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿದಿದ್ದು ಮಾತ್ರ ಬೆಳಗ್ಗೆ 1 ಗಂಟೆಗೆ. ಸಮಯ ಮಧ್ಯರಾತ್ರಿ ಕಳೆದಿದ್ದರೂ ವೀಕ್ಷಕರು ಮಾತ್ರ ಕಣ್ಣು ರೆಪ್ಪೆ ಬಡಿಯದಂತೆ ಕೂತಿದ್ದರು. ಆದರೆ ಜಾಹೀರಾತುಗಳ ಅಬ್ಬರ ವೀಕ್ಷಕರ ಸಹನೆಗೆ ಸವಾಲೊಡ್ಡುತ್ತಿತ್ತು.

ಬಿಗ್ ಬಾಸ್ ಮನೆಯಲ್ಲಿ ಸುದೀಪ್ ಪ್ರತ್ಯಕ್ಷ

ಬಿಗ್ ಬಾಸ್ ಫೈನಲ್ ಕಣದಿಂದ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಹಾಗೂ ನಿಕಿತಾ ಹೊರಬಿದ್ದಾಗ ಮನೆಯಲ್ಲಿ ವಿಜಯ್ ಹಾಗೂ ಅರುಣ್ ಮಾತ್ರ ಉಳಿದುಕೊಂಡಿದ್ದರು. ವಿಜಯ್ ಹಾಗೂ ಅರುಣ್ ಕನ್ಫೆಷನ್ ರೂಮಿಗೆ ಹೋಗಿ ಹೊರಬಂದಾಗ ಮನೆಯಲ್ಲಿ ಸುದೀಪ್ ಇದ್ದರು.

ಮನೆಯಲ್ಲಿ ಜಾರಿಹೋಗುತ್ತಿದ್ದ ಕ್ಷಣಗಳು

ಸುದೀಪ್ ಇವರಿಬ್ಬರ ಜೊತೆ ಮಾತನಾಡುತ್ತಾ ಇರಬೇಕಾದರೆ 'ಬಿಗ್ ಬಾಸ್' ಮನೆಯ ಒಂದೊಂದೇ ದೀಪಗಳ ಸ್ವಿಚ್ ಆಫ್ ಆಗುತ್ತಿತ್ತು. ಅವರು ಮನೆಯಿಂದ ಹೊರಬರುವಷ್ಟರಲ್ಲಿ ಕಟ್ಟಕಡೆಯ ದೀಪವೂ ಸ್ವಿಚ್ ಆಪ್ ಆಯಿತು. ಜಾರಿ ಹೋಗುತ್ತಿದ್ದ ಆ ಕ್ಷಣಗಳು ನಿಜಕ್ಕೂ ಸೊಗಸಾಗಿತ್ತು.

ಪ್ರಶಸ್ತಿ ಇಬ್ಬರಿಗೂ ಇಷ್ಟವಿರಲಿಲ್ಲವೇ?

ಬಳಿಕ ಸುದೀಪ್ ಇಬ್ಬರನ್ನೂ ವೇದಿಕೆಗೆ ಕರೆತಂದರು. ಯಾರು ಗೆಲ್ಲುಬಹುದು ನಿಮ್ಮ ಪ್ರಕಾರ ಎಂದು ಅರುಣ್ ಅವರನ್ನು ಕೇಳಿದ ಪ್ರಶ್ನೆಗೆ. "ವಿಜಯ್ ಗೆಲ್ಲಲಿ" ಎಂದರು. ವಿಜಯ್ ಸಹ ಅಷ್ಟೇ ಅರುಣ್ ಅಣ್ಣ ಗೆಲ್ಲಲಿ ಎಂದು ಬಯಸಿದರು.

ಫೈನಲ್ ನಲ್ಲಿ ಒಂದು ಸಣ್ಣ ಎಡವಟ್ಟು

ಕಡೆಗೆ ಸುದೀಪ್ ಅವರ ಬಲಗಡೆ ವಿಜಯ್ ರಾಘವೇಂದ್ರ ಇದ್ದರು. ಇಬ್ಬರ ಕೈ ಹಿಡಿದುಕೊಂಡು ನಾನು ಯಾರ ಕೈಗೆ ಮೇಲಕ್ಕೆ ಎತ್ತುತ್ತೇನೋ ಅವರು ಗೆದ್ದಂತೆ ಎಂದರು. ಈ ಕ್ಷಣದಲ್ಲಿ ಒಂದು ಸಣ್ಣ ಎಡವಟ್ಟು ಆಯಿತು. ಅದು ಸುದೀಪ್ ತಮಾಷೆಗೆ ಹೇಳಿದ್ದೋ. ಅದರ ನಿಜಕ್ಕೂ ಹಾಗೆ ಆಯಿತೋ ಎಂಬುದು ಗೊತ್ತಾಗಲಿಲ್ಲ.

ದ ವಿನ್ನರ್ ಈಸ್ ವಿಜಯ್ ರಾಘವೇಂದ್ರ

ಅದೇನೆಂದರೆ ಸುದೀಪ್ ಹಿಡಿದಿದ್ದ ಅರುಣ್ ಕೈ ಮೇಲಕ್ಕೆ ಎತ್ತವಂತೆ ಆಯಿತು. ಇದಕ್ಕೆ ಸುದೀಪ್ ನೀನ್ಯಾಕಪ್ಪಾ ಕೈ ಎತ್ತುತ್ತೀಯಾ ಎಂದು ಅರುಣ್ ಅವರನ್ನು ಕೇಳಿದರು. ಇಷ್ಟಕ್ಕೂ ಏನೂ ನಡೆಯಿತೋ ಏನೋ ಗೊತ್ತಿಲ್ಲ. ದ ವಿನ್ನರ್ ಈಸ್ ಎಂದು ಕಡೆಗೆ ವಿಜಯ್ ಅವರ ಕೈಯನ್ನು ಮೇಲಕ್ಕೆತ್ತಿದರು ಸುದೀಪ್.

English summary
kaleidoscopic photos of Bigg Boss Kannada grand finale, which been held on 30th June at Lonavale, Pune. Here is the memorable moments of the final episode. Vijay Ragavendra who walked away with the final prize after he beat the other three finalists - Arun Sagar.
Please Wait while comments are loading...