»   » ಬಿಗ್ ಬಾಸ್ ಶೋನ ಕೊನೆಯ ದಿನದ ಹೈಲೈಟ್ಸ್

ಬಿಗ್ ಬಾಸ್ ಶೋನ ಕೊನೆಯ ದಿನದ ಹೈಲೈಟ್ಸ್

Posted By:
Subscribe to Filmibeat Kannada
<ul id="pagination-digg"><li class="next"><a href="/tv/rishi-kumar-swamiji-tooks-bigg-boss-lcd-tv-075321.html">Next »</a></li></ul>

ಬಿಗ್ ಬಾಸ್ ಮನೆಯ ತೊಂಬತ್ತೆಂಟು ದಿನಗಳ ವಾಸಕ್ಕೆ ತೆರೆಬೀಳುವ ಸಮಯ ಬಂದಿದೆ. ಶನಿವಾರ (ಜೂ.29) ರಾತ್ರಿ 8 ಗಂಟೆಗೆ ಬಿಗ್ ಬಾಸ್ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ. ಗೆದ್ದವರಿಗೆ ರು.50 ಲಕ್ಷದ ನಗದು ಬಹುಮಾನ ಸಿಗಲಿದೆ. ತೊಂಬತ್ತಾರನೇ ದಿನದ ಹೈಲೈಟ್ಸ್ ಇಲ್ಲಿವೆ ನೋಡಿ.

ಋಷಿಕುಮಾರ ಸ್ವಾಮೀಜಿ, ವಿನಾಯಕ ಜೋಷಿ, ರೋಹನ್ ಗೌಡ ಹಾಗೂ ಸಂಜನಾ ಅವರನ್ನು 'ಬಿಗ್ ಬಾಸ್' ಮತ್ತೆ ಮನೆಗೆ ಕರೆಸಿಕೊಂಡರು. ಇವರೆಲ್ಲಾ ಫೈನಲ್ ಸ್ಪರ್ಧೆಯಲ್ಲಿರುವ ವಿಜಯ್ ರಾಘವೇಂದ್ರ, ಅರುಣ್ ಸಾಗರ್, ನರೇಂದ್ರ ಬಾಬು ಶರ್ಮಾ ಹಾಗೂ ನಿಕಿತಾ ಅವರೊಂದಿಗೆ ದಿನವೆಲ್ಲಾ ಸಂಭ್ರಮದೊಂದಿಗೆ ಕಳೆದರು.

Bigg Boss Kannada

ಸ್ವಾಮೀಜಿ ವೇಷದಲ್ಲಿ ವಿನಾಯಕ ಜೋಷಿ ಮನೆಗೆ ಎಂಟ್ರಿ ಕೊಟ್ಟರು. ರೋಹನ್ ಗೌಡ ಸದ್ದಿಲ್ಲದಂತೆ ಬಂದು ಬಾತ್ ರೂಂನಲ್ಲಿ ಸೇರಿಕೊಂಡರು. ಬಳಿಕ ಅವರನ್ನು ಪತ್ತೆ ಹಚ್ಚಿದ್ದು ಮಾತ್ರ ವಿಜಯ್ ರಾಘವೇಂದ್ರ. ಇನ್ನು ಋಷಿಕುಮಾರ ಸ್ವಾಮಿಜಿಗಳಂತೂ ಬ್ರಹ್ಮಾಂಡ ಅವರ ಕಾಲು ಒತ್ತಿ ಸೇವೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಎಲ್ಲರೂ ಕೊನೆಯ ವಾರದ ಅನುಭವವನ್ನು ಹಂಚಿಕೊಂಡರು. ನಿಕಿತಾ ಮಾತನಾಡುತ್ತಾ, "ತುಂಬಾ ತುಂಬಾ ಖುಷಿಯಾಯಿತು ನಿಜ್ಜ. ಥ್ಯಾಂಕ್ಯು ಥ್ಯಾಂಕ್ಯೂ ಫರ್ ಬೀಯಿಂಗ್ ಇನ್ ದ ಫೈನಲ್. ನೋ ವರ್ಡ್ಸ್ ಬಿಗ್ ಬಾಸ್" ಎಂದು ಕಣ್ಣೀರಿಗೆ ಶರಣಾದರು.

ಫೈನಲ್ ಗೆ ತಲುಪಿರುವ ಸದಸ್ಯರೆಲ್ಲಾ ಸೊರಗಿ ಹೋಗಿರುವುದನ್ನು ನೋಡಿದ ಸಂಜನಾ, ಅಯ್ಯೋ ನೀವೆಲ್ಲಾ ರೋಗಿಗಳಂತಾಗಿದ್ದೀರಿ ಎಂದರು. ಇದಕ್ಕೆ ಧ್ವನಿಗೂಡಿಸಿದ ಋಷಿಕುಮಾರ ಅಯ್ಯೋ ಅವರಿಗೆ ಒಂದು ವಾರ ತಿನ್ನಲಿಕ್ಕೆ ಏನೂ ಸಿಕ್ಕಿರಲಿಲ್ಲ ಅದಕ್ಕೆ ಹೀಗಾಗಿದ್ದಾರೆ ಎಂದರು.

ಹಳೆಯ ಸ್ಪರ್ಧಿಗಳು ಫೈನಲ್ ಸ್ಪರ್ಧಿಗಳೊಂದಿಗೆ ಹಾಡಿ ಕುಣಿದು ಸಂಭ್ರಮಿಸಿದರು. ಯಾರು ಗೆಲ್ಲಬೇಕು, ಯಾರು ಸೋಲಬೇಕು ಎಂಬುದನ್ನು ಸಂಜನಾ, ವಿನಾಯಕ ಜೋಷಿ ಹಾಗು ಋಷಿಕುಮಾರ ತಿಳಿಸಬೇಕಾಗಿತ್ತು.

<ul id="pagination-digg"><li class="next"><a href="/tv/rishi-kumar-swamiji-tooks-bigg-boss-lcd-tv-075321.html">Next »</a></li></ul>
English summary
Etv Kannada reality show Bigg Boss Kannada last day (day 96th) highlights. The glamourous actress Sanjjanna will be seen performing at the grand finale (29h June) of the first edition of the reality show hosted by Kiccha Sudeep.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada