For Quick Alerts
  ALLOW NOTIFICATIONS  
  For Daily Alerts

  BBK9 : ಟ್ಯಾಯ್ಲೆಟ್ ಕ್ಲೀನ್ ಮಾಡುವ ವಿಚಾರಕ್ಕೆ ರೂಪೇಶ್, ಸಂಬರ್ಗಿ, ಸಾನ್ಯಾ ಮಧ್ಯೆ ಗಲಾಟೆ!

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಆಗಾಗ ಯಾವುದಕ್ಕಾದರೂ ಜಗಳ ನಡೆಯುತ್ತಲೇ ಇರುತ್ತದೆ. ಅದು ಹಬ್ಬದ ದಿನವಾದರೂ ಸರಿ ಮಾಮೂಲಿ ದಿನವಾದರೂ ಸರಿ. ಜಗಳಕ್ಕೇನು ಸಮಯ-ಸಂದರ್ಭ ಎಂಬುದು ಬೇಕಾಗಿರುವುದಿಲ್ಲ. ಟಾಸ್ಕ್ ವಿಚಾರಕ್ಕೂ ಜಗಳವಾಡುತ್ತಾರೆ. ಮಾತು ಶುರು ಮಾಡಿದಾಗಲೇ ಸಮಾಧಾನದಿಂದ ಮಾತನಾಡದೇ ಜಗಳವನ್ನು ಶುರು ಮಾಡುತ್ತಾರೆ. ಈಗ ಅಂಥದ್ದೆ ಜಗಳ ಮನೆ ಮಂದಿಯ ನೆಮ್ಮದಿಯನ್ನು ಕೆಡಿಸಿದೆ.

  ಈ ವಾರ ಸಾನ್ಯಾ ಕ್ಯಾಪ್ಟನ್ ಆಗಿದ್ದಾರೆ. ಅವರ ಕ್ಯಾಪ್ಟನ್ಸಿ ಸಮಯದಲ್ಲಿ ಪ್ರಶಾಂತ್ ಸಂಬರ್ಗಿ ಮತ್ತು ಸಾನ್ಯಾ ನಡುವೆ ಆಗಾಗ ಬಿರುಕು ಮೂಡುತ್ತಿದೆ. ಜಗಳಕ್ಕೂ ಕಾರಣವಾಗುತ್ತಿದೆ. ಈಗ ಹಬ್ಬದ ದಿನದಂದು ಅಂಥದ್ದೊಂದು ಘಟನೆ ನಡೆದಿದೆ. ಇಬ್ಬರ ನಡುವೆ ಫೇವರಿಸಂ ಎಂಬ ವಿಚಾರ ಕೂಡ ಬಂದಿದೆ. ಸಾನ್ಯಾ ತನ್ನ ಏರು ಧ್ವನಿಯಲ್ಲಿ ಪ್ರಶಾಂತ್ ಸಂಬರ್ಗಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

  BBK9:ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬದಂದೇ ಕಣ್ಣೀರಿಟ್ಟ ದಿವ್ಯಾ!BBK9:ಬಿಗ್ ಬಾಸ್ ಮನೆಯಲ್ಲಿ ದೀಪಾವಳಿ ಹಬ್ಬದಂದೇ ಕಣ್ಣೀರಿಟ್ಟ ದಿವ್ಯಾ!

  ಸಂಬರ್ಗಿ ಕೆಲಸದಿಂದ ಜಾರಿಕೊಳ್ಳುತ್ತಿದ್ದಾರಾ?

  ಸಂಬರ್ಗಿ ಕೆಲಸದಿಂದ ಜಾರಿಕೊಳ್ಳುತ್ತಿದ್ದಾರಾ?

  ಊಟ ಬಲ್ಲವನಿಗೆ ರೋಗವಿಲ್ಲ.. ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿದೆ. ಆದರೆ ಇಲ್ಲಿ ಪ್ರಶಾಂತ್ ಸಂಬರ್ಗಿ ಕೆಲಸದಿಂದ ತಪ್ಪಿಸಿಕೊಳ್ಳುವ ಸೂಕ್ಷ್ಮತೆಯ ಗೇಮ್ ಆಡುತ್ತಿದ್ದಾರಾ ಎನಿಸುತ್ತಿದೆ. ರೂಪೇಶ್ ರಾಜಣ್ಣ ಹಾಗೂ ಸಂಬರ್ಗಿ ನಡುವೆ ಈಗ ಕೆಲಸ ಶುರುವಾಗಿದೆ. ಇಬ್ಬರು ಒಗ್ಗೂಡಿ ಟಾಯ್ಲೆಟ್ ಕ್ಲೀನ್ ಮಾಡಿಕೊಡಬೇಕಾಗಿದೆ. ಆದರೆ ಹೇಳುವಾಗ ನಾನು ಜೊತೆಗಿರುತ್ತೀನಿ ಎರಡು ನಾನು ಎರಡು ನೀನು ಅಂತ ಹೇಳಿದ ಸಂಬರ್ಗಿ ಇದೀಗ ಒಂದಕ್ಕೂ ಹೋಗಿಲ್ಲವಂತೆ. ಇದು ರೂಪೇಶ್ ರಾಜಣ್ಣ ಅವರನ್ನು ಕೆರಳಿ ಕೆಂಡದಂತೆ ಮಾಡಿದೆ.

  ಸಾನ್ಯಾ ನಿಂತಿದ್ದು ಯಾರ ಪರವಾಗಿ?

  ಸಾನ್ಯಾ ನಿಂತಿದ್ದು ಯಾರ ಪರವಾಗಿ?

  ಟಾಯ್ಲೆಟ್ ತೊಳೆಯೋ ವಿಚಾರದಲ್ಲಿ ಒಬ್ಬರು ಹೇಳಿದ ಕೂಡಲೇ ಅವರ ಪರವಾಗಿ ಮಾತನಾಡುವುದಲ್ಲ ಎಂದು ಸಂಬರ್ಗಿಆಡಿದ ಮಾತಿಗೆ, ಸಾನ್ಯಾ ಕೂಡ ಗರಂ ಆಗಿದ್ದಾರೆ. ನಾನು ಯಾರ ಪರವಾಗಿಯೂ ಇಲ್ಲಿ ಮಾತನಾಡಿಲ್ಲ ಅರ್ಥ ಮಾಡಿಕೊಳ್ಳಿ. ಇವತ್ತು ಬೆಳಗ್ಗೆ ಟಾಯ್ಲೆಟ್ ತೊಳೆದಿದ್ದಾರೆ. ಇವತ್ತು ಸಂಜೆ ಕೂಡ ಟಾಯ್ಲೆಟ್ ತೊಳಿಬೇಕು ಎಂದು ಅದರಲ್ಲಿ ಪರ ಎಲ್ಲಿ ಬಂತು. ನಿಮ್ಮ ಮಾತಿನ ಮೇಲೆ ಗಮನ ಇರಲಿ. ನಾನು ಹೇಳಿದ ಪಾಯಿಂಟ್ ಅರ್ಥ ಮಾಡಿಕೊಳ್ಳಿ. ಟಾಯ್ಲೆಟ್ ಡಿಪಾರ್ಟ್‌ಮೆಂಟ್‌ನಲ್ಲಿ ಇಬ್ಬರು ಇದ್ದೀರಾ. ಅದಕ್ಕೆ ಹೇಳಲೇಬೇಕು ಎಂದು ಸಾನ್ಯಾ ಏರು ಧ್ವನಿಯಲ್ಲಿ ಉತ್ತರಿಸಿದ್ದಾರೆ.

  ಸಂಬರ್ಗಿ ಮಾತಿಗೆ ಈಗ ನೋ ಕಮೆಂಟ್ಸ್!

  ಸಂಬರ್ಗಿ ಮಾತಿಗೆ ಈಗ ನೋ ಕಮೆಂಟ್ಸ್!

  ಟಾಯ್ಲೆಟ್ ತೊಳೆಯುವ ವಿಚಾರ ಸಾಕಷ್ಟು ಸದ್ದು ಮಾಡಿದೆ. ಇದರ ನಡುವೆ ಸಂಬರ್ಗಿ, ನಾವೂ ಟಾಯ್ಲೆಟ್ ಕ್ಲೀನ್ ಮಾಡುವ ಕೆಲಸವನ್ನು ಡಿವೈಡ್ ಮಾಡಿಕೊಂಡಿದ್ದೀವಿ. ನನ್ನ ಡಿವಿಷನ್‌ನಲ್ಲಿ ನನ್ನ ಕೆಲಸ ಮಾಡಿದ್ದೀನಿ ಅಂತ ಸಂಬರ್ಗಿ ಹೇಳಿದ್ದೆ ತಡ, ರೂಪೇಶ್ ರಾಜಣ್ಣನಿಗೆ ಕೋಪ ಬಂದಿದೆ. ಏನು ಡಿವಿಷನ್ ಮಾಡಿದ್ದೀರಾ ನೀವು ಅಂತ ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಸಂಬರ್ಗಿ, ಎರಡು ಬಾತ್ ರೂಮ್ ತೊಳೆಯಿರಿ ಅಂತ ಹೇಳಿದಾಗ ನಾನು ಮಾಡಿದ್ದೀನಿ ಎಂದು ವಾದ ಮಾಡಿದ್ದಾರೆ. ಅಷ್ಟೇ ಅಲ್ಲ ಸಾನ್ಯಾ ಹೇಳಿದ ಮಾತನ್ನು ತಿರುಗಿಸಿದ್ದಾರೆ. ಟಾಯ್ಲೆಟ್ ಡಿಪಾರ್ಟ್ಮೆಂಟ್‌ನಲ್ಲಿ ಇಬ್ಬರಿದ್ದೀರಾ ಒಬ್ಬರಿಗೆ ಹೇಳಿದ್ರೆ ಇನ್ನೊಬ್ಬರಿಗೆ ಹೇಳಲೇಬೇಕು ಎಂದು ಸಾನ್ಯಾ ಹೇಳಿದಾಗ, ರಾಜಣ್ಣ ಕೇಳಿಸ್ತೇನಪ್ಪ, ನಿನ್ನ ಕೆಲಸ ನೀನು ಮಾಡು ಅಂತ ಹೇಳುತ್ತಾ ಇದ್ದಾರೆ ಎಂದು ಇಬ್ಬರ ನಡುವೆ ತಂದಿಟ್ಟಿದ್ದಾರೆ.

  ಸಂಬರ್ಗಿ ಮಾತಿಗೆ ರಾಜಣ್ಣನ ಪ್ರತಿಕ್ರಿಯೆ ಏನು?

  ಸಂಬರ್ಗಿ ಮಾತಿಗೆ ರಾಜಣ್ಣನ ಪ್ರತಿಕ್ರಿಯೆ ಏನು?

  ಹೀಗೆ ಮಾತಿಗೆ ಮಾತು ಬೆಳೆದಾಗ ರೂಪೇಶ್ ರಾಜಣ್ಣ ಸಂಬರ್ಗಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಮೊದಲು ಕಾರಣ ಕೊಡುವುದನ್ನು ಬಿಟ್ಟು, ಹರಟೆ ಹೊಡೆಯುವುದನ್ನು ಬಿಟ್ಟು ಇಲ್ಲಿ ಬಂದು ಕೆಲಸ ಮಾಡಿ. ಇಲ್ಲಿ ಕೂತು ನಾಟಕವಾಡುವುದು, ಅಲ್ಲಿ ಬಂದು ಡೈಲಾಗ್ ಹೊಡೆಯುವುದು ಅಲ್ಲ ಎಂದಿದ್ದಾರೆ. ಈ ಮಾತು ಕೇಳಿಸಿಕೊಳ್ಳುತ್ತಿದ್ದ ಮನೆಯವರು ಮೂಕವಿಸ್ಮಿತರಾಗಿದ್ದಾರೆ.

  English summary
  Bigg Boss Kannada October 26th Episode Written Update. Here is the details about Biggboss deepavali special episode
  Wednesday, October 26, 2022, 23:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X