For Quick Alerts
  ALLOW NOTIFICATIONS  
  For Daily Alerts

  Bigg Boss Kannada OTT: ಆರ್ಯವರ್ಧನ್ ಗುರೂಜಿ ಜ್ಯೋತಿಷ್ಯ ನಿಲ್ಲಿಸುತ್ತಾರಾ ?

  By ಎಸ್ ಸುಮಂತ್
  |

  ಬಿಗ್ ಬಾಸ್‌ಗೆ ಹೋಗುವುದಕ್ಕೂ ಮುನ್ನ ಕೆಲವು ವಾಹಿನಿಗಳಲ್ಲಿ ನಾನ್ ಅಂದ್ರೆ ನಂಬರ್.. ನಂಬರ್ ಅಂದ್ರೆ ನಾನು ಅಂತ ಬೆಳಗ್ಗೆ ಆದರೆ ಆರ್ಯವರ್ಧನ್ ಗುರೂಜಿ ಭವಿಷ್ಯ ಹೇಳುತ್ತಾ ಕುಳಿತುಕೊಂಡು ಬಿಡುತ್ತಿದ್ದರು. ಆದರೆ ಬಿಗ್ ಬಾಸ್ ಗೆ ಹೋದ ಮೇಲೆ ಅದ್ಯಾಕೋ ಗುರೂಜಿಗೆ ಜ್ಯೋತಿಷ್ಯಕ್ಕಿಂತ ಜೀವನ ಮುಖ್ಯ ಎನಿಸಿದೆ. ಬದುಕಿನ ಹೊಸ ಮಗ್ಗುಲನ್ನು ಕಂಡುಕೊಂಡಿದ್ದಾರೆ. ಅದನ್ನೇ ಯೋಚಿಸುತ್ತಾ ಹೊಸ ಫ್ಲ್ಯಾನ್ ಒಂದನ್ನು ಮಾಡಿಕೊಳ್ಳುತ್ತಿದ್ದಾರೆ.

  ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಟ್ಟಿಗೂ ಅಲ್ಲದೆ ಹೋದರೂ ಸೋಮಣ್ಣನ ಬಳಿ ಗುರೂಜಿ ತುಂಬಾನೆ ಚೆನ್ನಾಗಿದ್ದಾರೆ. ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೋಮಣ್ಣನಿಗೂ ಒಳ್ಳೆ ಕಂಪನಿ ನೀಡುತ್ತಿರುತ್ತಾರೆ. ಮನೆ ಮಂದಿ ಬಂದರೆ ಕೈ ನೋಡಿ ಭವಿಷ್ಯವನ್ನು ಹೇಳುತ್ತಾರೆ. ಆದರೆ ತಮ್ಮ ಹೊಟ್ಟೆ ಮೇಲೆ ಸಾಕಷ್ಟು ಜಿಗುಪ್ಸೆ ಪಟ್ಟುಕೊಂಡಿದ್ದಾರೆ.

  ಓಟಿಟಿಯಲ್ಲೂ RRR ಹೊಸ ದಾಖಲೆ: ಹಾಲಿವುಡ್‌ ಸಿನಿಮಾಗಳನ್ನೇ ಹಿಂದಿಕ್ಕಿದ ಜಕ್ಕಣನ ಸಿನಿಮಾ!ಓಟಿಟಿಯಲ್ಲೂ RRR ಹೊಸ ದಾಖಲೆ: ಹಾಲಿವುಡ್‌ ಸಿನಿಮಾಗಳನ್ನೇ ಹಿಂದಿಕ್ಕಿದ ಜಕ್ಕಣನ ಸಿನಿಮಾ!

  ಆರ್ಯವರ್ಧನ್ ಯೋಚನೆಯಲ್ಲಿ ಬದಲಾವಣೆ

  ಆರ್ಯವರ್ಧನ್ ಯೋಚನೆಯಲ್ಲಿ ಬದಲಾವಣೆ

  ಆರ್ಯವರ್ಧನ್ ಅವರನ್ನು ಇಷ್ಟು ದಿನ ಟಿವಿಗಳಲ್ಲಿ ನೋಡಿದ್ದು, ಹಣೆ ಮೇಲೊಂದು ನಾಮ ಇಟ್ಟುಕೊಂಡು, ನಂಬರ್ ಭವಿಷ್ಯ ಹೇಳುತ್ತಿದ್ದದ್ದು. ಅದನ್ನು ಹೊರತುಪಡಿಸಿ, ತಾನೇನು, ತನ್ನೊಳಗಿನ ನೋವು ಏನು ಎಂಬುದನ್ನು ಆರ್ಯವರ್ಧನ್ ಮನೆಯವರಿಗೂ ಹೇಳಿರಲಿಲ್ಲ ಎನಿಸುತ್ತದೆ. ಅಂಥದ್ದೊಂದು ಕಠೋರ ಸತ್ಯವನ್ನು ಬಿಗ್ ಬಾಸ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆರ್ಯವರ್ಧನ್ ಸದ್ಯ ಸಿಕ್ಕಾಪಟ್ಟೆ ಬೇಸರ ಇರುವುದು ಎಂದರೆ ತನ್ನ ಹೊಟ್ಟೆಯ ಮೇಲೆ. ಸುಮ್ಮನೆ ತಿನ್ನೋದು ಕೂರೋದು, ಹೊಟ್ಟೆ ಹೀಗೆ ಬೆಳೆದು ಬಿಟ್ಟಿದೆ. ಹೇಗಾದರೂ ಮಾಡಿ ಕರಗಿಸಲೇಬೇಕು ಎನಿಸಿದೆ ಎಂದು ಹೇಳುತ್ತಿದ್ದಾರೆ.

  'ವಿಕ್ರಾಂತ್ ರೋಣ' ಓಟಿಟಿಗೆ ಲಗ್ಗೆ ಇಡಲು ಮುಹೂರ್ತ ಫಿಕ್ಸ್: ಕಿಚ್ಚನಿಗೆ ಜೀ 5 ಗಿಫ್ಟ್!'ವಿಕ್ರಾಂತ್ ರೋಣ' ಓಟಿಟಿಗೆ ಲಗ್ಗೆ ಇಡಲು ಮುಹೂರ್ತ ಫಿಕ್ಸ್: ಕಿಚ್ಚನಿಗೆ ಜೀ 5 ಗಿಫ್ಟ್!

  ಆರ್ಯವರ್ಧನ್‌ಗೂ ಸಾಯಬೇಕು ಎನಿಸಿತ್ತಂತೆ

  ಆರ್ಯವರ್ಧನ್‌ಗೂ ಸಾಯಬೇಕು ಎನಿಸಿತ್ತಂತೆ

  ಲೈಫ್ ಅರ್ಥ ಮಾಡಿಕೊಂಡರೆ ಸಖತ್ ಬ್ಯೂಟಿಫುಲ್ ಆಗಿ ಇರುತ್ತದೆ. ಪ್ರಪಂಚ ತುಂಬಾ ವಿಶಾಲವಾಗಿದೆ. ಒಂದೊಂದು ದಿಕ್ಕಿನಲ್ಲೂ ಒಂದೊಂದು ಅಂದ ಅಡಗಿದೆ. ಆ ಅಂದ ತಿಳಿದುಕೊಳ್ಳಲು ಆರ್ಯವರ್ಧನ್ ಬಿಗ್ ಬಾಸ್‌ಗೆ ಹೋಗಬೇಕಾಯಿತು. ಬಿಗ್ ಬಾಸ್‌ನಲ್ಲಿರುವ ಎಲ್ಲರನ್ನು ನೋಡಿ ಆರ್ಯವರ್ಧನ್ ಮನಸ್ಸು ಬದಲಾಗಿದೆ. ಒಬ್ಬರೆ ಮಲಗಿಕೊಂಡು ಈ ಬಗ್ಗೆ ಯೋಚನೆ ಮಾಡುತ್ತಾ ಮಾತನಾಡುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ನೋಡಿ ನೋವಾಗಿದೆ. ಹೇಗಾದರೂ ಮಾಡಿ ಈ ಹೊಟ್ಟೆ ಕರಗಿಸಬೇಕು. ಲೈಫ್ ಏನು ಅಂತ ಗೊತ್ತಿಲ್ಲದೆ ಸಾಯುವ ನಿರ್ಧಾರ ಮಾಡಿದ್ದೆ. ಆದರೆ ಈಗ ಲೈಫ್‌ನ ಚೆನ್ನಾಗಿ ನೋಡಿಕೊಳ್ಳಬೇಕು ಎನಿಸಿದೆ ಎಂದಿದ್ದಾರೆ.

  ಜ್ಯೋತಿಷ್ಯದ ಬಗ್ಗೆ ಹಂಗ್ಯಾಕಂದ್ರು

  ಜ್ಯೋತಿಷ್ಯದ ಬಗ್ಗೆ ಹಂಗ್ಯಾಕಂದ್ರು

  ಸದ್ಯ ಕರ್ನಾಟಕಕ್ಕೆ ಆರ್ಯವರ್ಧನ್ ಎಂದರೆ ಪರಿಚಿತವಾಗಿರುವುದು ನಂಬರ್ ಗುರೂಜಿ ಎಂದೇ. ಆದರೆ ಗುರೂಜಿ ಜ್ಯೋತಿಷ್ಯದ ಬಗ್ಗೆ ಜಿಗುಪ್ಸೆ ಮೂಡಿರುವ ರೀತಿ ಮಾತನಾಡಿದ್ದಾರೆ. ಮಗಳನ್ನು ತುಂಬಾ ಪ್ರೀತಿ ಮಾಡುವ ಬಗ್ಗೆಯೂ ಹಂಚಿಕೊಂಡಿದ್ದಾರೆ. ಇಲ್ಲಿರುವವರನ್ನೆಲ್ಲಾ ನೋಡಿದರೆ ಬ್ಯೂಟಿ ಎಷ್ಟು ಮುಖ್ಯ ಎಂದು ಗೊತ್ತಾಗುತ್ತೆ. ಆರೋಗ್ಯವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ಆದರೆ ನಾನಿ ಬರೀ ಗ್ರಹಗಳನ್ನು ನೋಡುತ್ತಾ, ಡಿಸ್ಟರ್ಬ್ ಆದರೆ ಹೋಗಿ ಪ್ರೇಯರ್ ಮಾಡಿ ಬರುತ್ತಿದ್ದೆ. ಇನ್ಮುಂದೆ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ ಎಂದಿದ್ದಾರೆ.

  ಎಲ್ಲಾ ಆಟದಲ್ಲೂ ಆರ್ಯವರ್ಧನ್ ಸ್ಟ್ರಾಂಗ್

  ಎಲ್ಲಾ ಆಟದಲ್ಲೂ ಆರ್ಯವರ್ಧನ್ ಸ್ಟ್ರಾಂಗ್

  ಆರ್ಯವರ್ಧನ್‌ಗೆ ಕಮ್ಯುನಿಕೇಷನ್ ಸಮಸ್ಯೆ ಸ್ವಲ್ಪ ಇದೆ. ಯಾರ ಬಳಿಯೂ ಹೆಚ್ಚಾಗಿ ಮಾತನಾಡುವುದಿಲ್ಲ. ಅಷ್ಟೇ ಅಲ್ಲ ಏನಾದರೂ ಪ್ರಶ್ನೆ ಕೇಳಿದರೆ ಅದಕ್ಕೆ ಸರಿಯಾದ ವಿವರಣೆ ನೀಡುವುದಕ್ಕೂ ಕಷ್ಟ. ಆದರೆ ಟಾಸ್ಕ್ ವಿಚಾರ ಬಂದಾಗ ಇದ್ಯಾವುದು ಲೆಕ್ಕಕ್ಕಿಲ್ಲ. ಅದ್ಭುತವಾಗಿ ಆಡಿ ತೋರಿಸುತ್ತಾರೆ. ಅದಾಗಲೇ ಪ್ರೂವ್ ಆಗಿದೆ. ಮೊಟ್ಟೆ ಎಸೆಯುವುದರಲ್ಲಿ, ಬಾಲ್ ಉಲ್ಟಾ ಮಾಡುವುದರಲ್ಲೂ ಸಕ್ಸಸ್ ಫುಲ್‌ ಆಟ ಆಡಿದ್ದಾರೆ.

  English summary
  Bigg Boss Kannada OTT August 25nd Episode Written Update. Here is the details

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X