For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಔಚಿತ್ಯದ ಬಗ್ಗೆ ಓದುಗರ ಟೀಕೆ ಟಿಪ್ಪಣಿ

  By ಉದಯರವಿ
  |

  ಈಟಿವಿ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ 'ಬಿಗ್ ಬಾಸ್' ಕಾರ್ಯಕ್ರಮವನ್ನು ಕೆಲವರು ಎಂಜಾಯ್ ಮಾಡಿದರೆ ಇನ್ನೂ ಕೆಲವರು ಈ ರೀತಿಯ ಕಾರ್ಯಕ್ರಮ ಬೇಕೆ ಎಂಬ ಟೀಕೆಗಳನ್ನು ಮಾಡುತ್ತಿದ್ದಾರೆ. ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗುತ್ತಿದ್ದಂತೆ ಅದಕ್ಕೆ ವಾದ ವಿವಾದಗಳು ಹೊಸದಲ್ಲ ಬಿಡಿ.

  ಯಾವುದೇ ಒಂದು ಕಾರ್ಯಕ್ರಮವನ್ನು ಇಷ್ಟಪಡುವವರು ಇರುತ್ತಾರೆ. ಹಾಗೆಯೇ ಟೀಕಿಸುವವರು ಇರುತ್ತಾರೆ. ಹೊಗಳಿಕೆಗಿಂತ ಟೀಕೆಗಳೇ ಹೆಚ್ಚಾದಾಗ ಅದಕ್ಕೆ ಕಾರಣಗಳನ್ನೂ ಹುಡುಕಬೇಕಾಗುತ್ತದೆ. ಈಗ ಅಂತಹದ್ದೇ ಒಂದು ಕ್ಲಿಷ್ಟಕರ ಪರಿಸ್ಥಿತಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎದುರಾಗಿದೆ.

  ಈ ಕಾರ್ಯಕ್ರಮಕ್ಕೆ ಹೊಗಳಿಕೆಗಿಂತ ತೆಗಳಿಕೆಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ನಮ್ಮ ಒನ್ಇಂಡಿಯಾ ಕಚೇರಿಗಂತೂ ರಾಶಿ ರಾಶಿ ಇ-ಮೇಗಳು ಹರಿದು ಬರುತ್ತಿವೆ. ಅವೆಲ್ಲವನ್ನೂ ಇಲ್ಲಿ ಪ್ರಕಟಿಸುವುದು ಅಪ್ರಸ್ತುತ. ಆದರೂ ಕೆಲವೊಂದು ಆಯ್ದ ಪತ್ರಗಳು ಪ್ರಬುದ್ಧವಾಗಿರುವಂತ ಪತ್ರಗಳು ಇಲ್ಲಿವೆ. ಓದಿ ನೀವೂ ಪ್ರತಿಕ್ರಿಯಿಸಿ.

  ಅಸಹ್ಯದ ಪರಮಾವಧಿ ಈ ರಿಯಾಲಿಟಿ ಶೋ

  ಅಸಹ್ಯದ ಪರಮಾವಧಿ ಈ ರಿಯಾಲಿಟಿ ಶೋ

  'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಒಂದು ಎಪಿಸೋಡಿನಲ್ಲಿ ಒಂದೇ ಹಾಸಿಗೆ ಮೇಲೆ ಒಂದೇ ಹೊದಿಕೆಯಲ್ಲಿ ಒಬ್ಬರ ಮೇಲೊಬ್ಬರು ಹೊರಳಾಡುತ್ತಾರೆ. ಅಲ್ಲಿನ ಮಾತುಕತೆ ಈ ರೀತಿ ಇತ್ತ್ತು. ಬೇಡಮ್ಮಾ ರೇಪ್ ಮಾಡಬೇಡ, ನಾಳೆ ಬ್ರೇಕಿಂಗ್ ನ್ಯೂಸ್ ಆಗುತ್ತದೆ. ಇದಕ್ಕೆ ಪ್ರತಿಯಾಗಿ ಇನ್ನೊಬ್ಬಾಕೆ ಇದು ರೇಪ್ ಅಲ್ಲ ಸಲಿಂಗಕಾಮ ಎನ್ನುತ್ತಾಳೆ. ಎಲ್ಲಿಗೆ ಬಂತು ರಿಯಾಲಿಟಿ ಶೋಗಳ ಪರಿಸ್ಥಿತಿ? ಈ ರೀತಿಯ ರಿಯಾಲಿಟಿ ಶೋಗಳು ನಮಗೆ ಬೇಕಿತ್ತೆ?-ರಮಾಕಾಂತ, ಬೆಂಗಳೂರು

  ಯಾರಿಗೆ ಬೇಕು ಸ್ವಾಮಿ ಸೆಲೆಬ್ರಿಟಿಗಳ ಖಾಸಗಿ ಬದುಕು

  ಯಾರಿಗೆ ಬೇಕು ಸ್ವಾಮಿ ಸೆಲೆಬ್ರಿಟಿಗಳ ಖಾಸಗಿ ಬದುಕು

  ಯಾರಿಗೆ ಬೇಕು ಸ್ವಾಮಿ ಸೆಲೆಬ್ರಿಟಿಗಳ ಖಾಸಗಿ ಬದುಕು. ಪ್ರೇಕ್ಷಕರ ಪಾಲಿಗೆ ಇದೂ ವಸ್ತು ಆಸಕ್ತಿಕರ ವಸ್ತುವಾಗಬೇಕೆ? ಈ ರೀತಿಯ ಕೀಳು ಅಭಿರುಚಿಯ ಕಾರ್ಯಕ್ರಮ ಈಟಿವಿ ಕನ್ನಡಕ್ಕೆ ಬೇಕಾಗಿರಲಿಲ್ಲ. ಸುದೀಪ್ ಅವರಂತಹ ಜನಪ್ರಿಯ ನಟರು ಈ ರೀತಿಯ ಕಾರ್ಯಮದ ನಿರೂಪಣೆ ಒಪ್ಪಿಕೊಳ್ಳಬಾರದಿತ್ತು-ರೇಣುಕಾ, ದಾವಣಗೆರೆ

  ಈ ಆಮದು ಸಂಸ್ಕೃತಿ ನಮಗೆ ಬೇಕಿತ್ತಾ?

  ಈ ಆಮದು ಸಂಸ್ಕೃತಿ ನಮಗೆ ಬೇಕಿತ್ತಾ?

  ಈ ರೀತಿಯ ರಿಯಾಲಿಟಿ ಶೋ ಕಲ್ಪನೆ ನಮ್ಮ ದೇಶದ್ದಲ್ಲ. ಕೂಡು ಕುಟುಂಬದ ಕಲ್ಪನೆ ಇಲ್ಲದ ಪಾಶ್ವಾತ್ಯ ದೇಶಗಳ ಆಮದು ಸಂಸ್ಕೃತಿ ಇದು. ಮನೆಮಂದಿಯಲ್ಲಾ ಒಟ್ಟಿಗೆ ಬಾಳಬಹುದು ಎಂಬುದನ್ನು ತೋರಿಸಿಕೊಡಲು ಮಾಡಿದ ರಿಯಾಲಿಟಿ ಶೋ ಇದು. ಈ ಆಮದು ಸಂಸ್ಕೃತಿ ನಮಗೆ ಬೇಕಾಗಿತ್ತೇ?-ಬೇಲೂರು ಪ್ರಕಾಶ್.

  ಪಾಶ್ಚಾತ್ಯ ದೇಶಗಳಿಂದ ಬಂದಂತಹ ಸಂಸ್ಕೃತಿ

  ಪಾಶ್ಚಾತ್ಯ ದೇಶಗಳಿಂದ ಬಂದಂತಹ ಸಂಸ್ಕೃತಿ

  ಈ ಕಾರ್ಯಕ್ರಮ ನಮ್ಮ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಕನ್ನಡಿ. ಪಾಶ್ವಾತ್ಯ ದೇಶಗಳಿಂದ ಬಂದಂತಹ ಎರವಲು ಸಂಸ್ಕೃತಿ ಇದು. ಈ ರೀತಿಯ ಕೀಳು ಅಭಿರುಚಿ ಕಾರ್ಯಕ್ರಮವನ್ನು ವಿದ್ಯಾವಂತರು ಯಾರೂ ನೋಡಲು ಸಾಧ್ಯವಿಲ್ಲ. ಟಿಆರ್ ಪಿ ಗಾಗಿ ವಾಹಿನಿಯವರು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂಬುದಕ್ಕೆ ನಿದರ್ಶನ ಈ ಕಾರ್ಯಕ್ರಮ-ಸವಿತಾ, ಬೆಂಗಳೂರು

  ಅಪರ್ಣಾ ಅವರ ಬಗ್ಗೆ ಇದ್ದ ಗೌರವ ಹೋಗಿದೆ

  ಅಪರ್ಣಾ ಅವರ ಬಗ್ಗೆ ಇದ್ದ ಗೌರವ ಹೋಗಿದೆ

  ಅಪರ್ಣಾ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಹಣದಾಸೆಗೆ ಅವರು ಈ ರಿಯಾಲಿಟಿ ಶೋ ಒಪ್ಪಿಕೊಂಡದ್ದು ಎಷ್ಟರ ಮಟ್ಟಿಗೆ ಸರಿ. ಅವರ ಬಗ್ಗೆ ನಮಗೆಲ್ಲಾ ಅಪಾರ ಗೌರವವಿತ್ತು. ಅವರು ಈ ರೀತಿಯ ಕಾರ್ಯಕ್ರಮ ಒಪ್ಪಿಕೊಂಡಿದ್ದು ಖೇದಕರ- ಆನಂದ, ಅಥಣಿ

  English summary
  Here is the some readers comments on Bigg Boss Kannada reality show. The host for the show is Sudeep.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X