Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK 9: ಅರುಣ್ ಸಾಗರ್ ಎಲಿಮಿನೇಶನ್‌ಗೆ ಕಾರಣಗಳು
ಬಿಗ್‌ಬಾಸ್ ಕನ್ನಡ ಸೀಸನ್ 09 ಮುಗಿಯುವ ಸಮಯ ಹತ್ತಿರ ಬಂದಿದೆ. ಇನ್ನೊಂದು ವಾರದಲ್ಲಿ ಬಿಗ್‌ಬಾಸ್ ಮನೆಯ ವಿಜೇತರು ಯಾರೆಂಬುದು ತಿಳಿಯಲಿದೆ.
ಬಿಗ್‌ಬಾಸ್‌ನ ಫಿನಾಲೆಯ ಹಿಂದಿನ ವಾರ ಡಬಲ್ ಎಲಿಮಿನೇಶನ್ ಆಗುವುದು ಸಾಮಾನ್ಯ. ಅಂತೆಯೇ ಈ ವಾರ ಡಬಲ್ ಎಲಿಮಿನೇಶನ್ ಆಗಿದ್ದು, ವೀಕ್ಷಕರು ಆಶ್ಚರ್ಯ ಪಡುವಂತೆ ಬಿಗ್‌ಬಾಸ್ ಮನೆಯ ಟಾಪ್ ಎಂಟರ್ಟೈನರ್ ಆಗಿದ್ದ ಅರುಣ್ ಸಾಗರ್ ಮನೆಯಿಂದ ಹೊರಗೆ ಹೋಗಿದ್ದಾರೆ.
ಹೊಸ
ವರ್ಷಕ್ಕೆ
ಬಿಗ್‌ಬಾಸ್
ಮ್ಯಾರಥಾನ್
ಫಿನಾಲೆ!
ಹೊಸ
ವರ್ಷದ
ಸಿಹಿ
ಯಾರಿಗೆ
ಡಬಲ್ ಎಲಿಮಿನೇಶನ್‌ನಲ್ಲಿ ಶನಿವಾರದಂದು ಮೊದಲಿಗೆ ಅಮೂಲ್ಯ ಗೌಡ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋದರು. ಬಳಿಕ ಭಾನುವಾರದಂದು ಅರುಣ್ ಸಾಗರ್ ಅವರನ್ನು ಮನೆಯಿಂದ ಎಲಿಮಿನೇಟ್ ಮಾಡಲಾಯ್ತು. ಅಮೂಲ್ಯ ಗೌಡ ಎಲಿಮಿನೇಶನ್ ನಿರೀಕ್ಷವೇ ಆಗಿದ್ದರು, ಅರುಣ್ ಸಾಗರ್ ಎಲಿಮಿನೇಶನ್ ನಿರೀಕ್ಷಿತವಾಗಿರಲಿಲ್ಲ.
ಅರುಣ್ ಸಾಗರ್, ಬಿಗ್‌ಬಾಸ್ ಮನೆಯ ಟಾಪ್ ಎಂಟರ್ಟ್ರೈನರ್ ಆಗಿದ್ದರು. ಹಾಡು ಹಾಡುವುದು, ಡ್ಯಾನ್ಸ್ ಮಾಡುವುದು ಜೋಕ್ ಮಾಡುವುದು, ಬಿಗ್‌ಬಾಸ್ ಮನೆಯ ಸದಸ್ಯರನ್ನು ಸದಾ ಸಕ್ರಿಯವಾಗಿರಿಸುವ ಕಾರ್ಯವನ್ನು ಅರುಣ್ ಸಾಗರ್ ಮಾಡುತ್ತಿದ್ದರು. 'ಪ್ರವೀಣ' ಕೋಟಾದಲ್ಲಿ ಮನೆ ಸೇರಿದ್ದ ಅರುಣ್ ಸಾಗರ್‌ಗೆ ಬಿಗ್‌ಬಾಸ್ ಮನೆಯಲ್ಲಿ ಹೇಗಿರಬೇಕೆಂಬ ಅನುಭವವೂ ಇತ್ತು. ಅಂತೆಯೇ ಅವರು ಇದ್ದರು ಸಹ. ಹಾಗಿದ್ದರೂ ಅರುಣ್ ಸಾಗರ್ ಬಿಗ್‌ಬಾಸ್ ಮನೆಯಿಂದ ಎಲಿಮಿನೇಶನ್ ಆಗಿದ್ದಾರೆ.
2013 ರ ಮಾರ್ಚ್ ತಿಂಗಳಲ್ಲಿ ಅರುಣ್ ಸಾಗರ್ ಮೊದಲ ಬಾರಿಗೆ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಅದು ಮೊದಲ ಬಿಗ್‌ಬಾಸ್ ಕನ್ನಡ ಸೀಸನ್ ಆಗಿತ್ತು. ಇನ್ನು ಮೂರು ತಿಂಗಳು ಕಳೆದರೆ ಅರುಣ್ ಸಾಗರ್ ಬಿಗ್‌ಬಾಸ್ ಮನೆಗೆ ಹೋಗಿ ಹತ್ತು ವರ್ಷವಾಗುತ್ತದೆ. ಹತ್ತು ವರ್ಷದ ಹಿಂದಿನ ವೀಕ್ಷಕರಿಗೂ ಹಾಗೂ ಬಿಗ್‌ಬಾಸ್ ಶೋಗೂ ಈಗಿನ ಪ್ರೇಕ್ಷಕ ಹಾಗೂ ಬಿಗ್‌ಬಾಸ್ ಶೋಗೂ ಬಹಳ ವ್ಯತ್ಯಾಸವಿದೆ. ಈ ವ್ಯತ್ಯಾಸವೇ ಅರುಣ್ ಸಾಗರ್ ಅವರನ್ನು ಈ ಬಾರಿಯೂ ಗೆಲ್ಲದಂತೆ ತಡೆದಿದೆ ಎನ್ನಬಹುದು.

ಅರುಣ್ ಸಾಗರ್ ಎಲಿಮಿನೇಶನ್‌ಗೆ ಕಾರಣಗಳು
ಮೊದಲು ಬಿಗ್‌ಬಾಸ್ ಮನೆಯಲ್ಲಿ ಒಳ್ಳೆಯ ಮನೊರಂಜನೆ ನೀಡುವವರಿಗೆ, ಒಳ್ಳೆಯ ವ್ಯಕ್ತಿತ್ವ ಪ್ರದರ್ಶಿಸುವವರಿಗೆ ಗೆಲ್ಲುವ ಅವಕಾಶವಿತ್ತು. ಪ್ರೇಕ್ಷಕರು ಸಹ ಅವರಿಗೇ ಮತ ಚಲಾಯಿಸುತ್ತಿದ್ದರು. ಆದರೆ ಬರ ಬರುತ್ತಾ ಇದು ಬದಲಾಗಿ, ಯಾರು ಹೆಚ್ಚು ಜಗಳವಾಡುತ್ತಾರೊ ಅವರಿಗಷ್ಟೆ ಉಳಿದುಕೊಳ್ಳುವ ಅವಕಾಶ ಎಂಬಂತಾಯಿತು. ಮಾನವೀಯತೆ, ನೈತಿಕತೆ ಮೀರಿ ಟಾಸ್ಕ್‌ಗಳಲ್ಲಿ ಕಿತ್ತಾಡಿ, ಪರಚಾಡಿ, ಅರಚಾಡಿ ಆಡಿ ಒಟ್ಟಿನಲ್ಲಿ ಗೆಲ್ಲುವ ಸ್ಪರ್ಧಿಗಳಗಷ್ಟೆ ಮನೆಯಲ್ಲಿ ಉಳಿದುಕೊಳ್ಳುವ ಅವಕಾಶ ಎಂಬಂತಾಯಿತು. ಆದರೆ ಅರುಣ್ ಸಾಗರ್ ಗೆಲ್ಲಲು ಏನನ್ನಾದರೂ ಮಾಡಲು ಸಿದ್ಧ ಎಂಬ ವ್ಯಕ್ತಿತ್ವದವರಲ್ಲ, ಅವರ ಎಲಿಮಿನೇಶನ್‌ಗೆ ಇದು ಒಂದು ಕಾರಣ ಇರಬಹುದು.

ವಯಸ್ಸಿನ ಅಂತರದ ಸಮಸ್ಯೆ!
ಹತ್ತು ವರ್ಷದ ಹಿಂದೆ ಅರುಣ್ ಸಾಗರ್ ಬಿಗ್‌ಬಾಸ್ ಮನೆಯ ಒಳಗೆ ಹೋದಾಗ ಹಲವರು ಅವರ ಪರಿಚಿತರು, ಅವರ ವಯಸ್ಸಿಗೆ ಹತ್ತಿರದವರು, ಸಮಾನ ಮನಸ್ಕರು ಅವರ ಜೊತೆಗಿದ್ದರು. ಆದರೆ ಈಗ ಹಾಗಿಲ್ಲ. ಈಗ ಪರಿಸ್ಥಿತಿ ಭಿನ್ನವಾಗಿದೆ. ಆ ಮನೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದರು ಅರುಣ್ ಸಾಗರ್. ಸಣ್ಣ ವಯಸ್ಸಿನ ಸ್ಪರ್ಧಿಗಳು ಪೂರ್ಣವಾಗಿ ಅರುಣ್ ಸಾಗರ್ ಜೊತೆ ಬೆರೆಯಲಾಗಲಿಲ್ಲ. ಅರುಣ್ ಸಾಗರ್‌ಗೂ ಸಣ್ಣ ವಯಸ್ಸಿನವರೊಟ್ಟಿಗೆ ಪರಿಪೂರ್ಣವಾಗಿ ಬೆರೆಯಲಾಗಲಿಲ್ಲ. ಹಾಗಾಗಿ ಅವರು ತಮ್ಮ ವಯಸ್ಸಿಗೆ ಹತ್ತಿರದವರಾದ ಪ್ರಶಾಂತ್ ಸಂಬರ್ಗಿ, ಆರ್ಯವರ್ಧನ್ ಅವರೊಟ್ಟಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಇದು ಸಹ ಅವರ ಎಲಿಮಿನೇಶನ್‌ಗೆ ಕಾರಣವಾಗಿರಬಹುದು.

ಗಾಯಗೊಂಡ ಅರುಣ್ ಸಾಗರ್
ಅರುಣ್ ಸಾಗರ್ ಗೆ ಬಿಗ್‌ಬಾಸ್ ಮನೆಯಲ್ಲಿದ್ದಾಗ ಆದ ಗಾಯವೂ ಸಹ ಅವರ ಆಟದ ಮೇಲೆ ಪರಿಣಾಮ ಬೀರಿತು. ಬಿಗ್‌ಬಾಸ್ ಮನೆಯಲ್ಲಿದ್ದಾಗ ಅವರ ಕೈಗೆ ಪೆಟ್ಟು ಬಿದ್ದಿತು. ಅದಾದ ಬಳಿಕ ಅವರ ಹೆಚ್ಚು ಸಕ್ರಿಯರಾಗಿ ಆಟದಲ್ಲಿ ಭಾಗವಹಿಸಲಾಗಲಿಲ್ಲ. ಅಲ್ಲದೆ, ಮೊದಲ ಸೀಸನ್‌ನಂತೆ ಈ ಸೀಸನ್‌ನಲ್ಲಿ ಮನೆಯರನ್ನು ಬಹಳವಾಗಿ ಹಚ್ಚಿಕೊಳ್ಳಲು ಅರುಣ್ ಸಾಗರ್‌ಗೆ ಆಗಲಿಲ್ಲ. ಮೊದಲ ಸೀಸನ್‌ಗೆ ಹೋಲಿಸಿದರೆ ಅವರಲ್ಲಿ ಎನರ್ಜಿ ಸಹ ಉತಸು ಕಡಿಮೆ ಆಗಿತ್ತು ಇದಕ್ಕೆ ಅವರ ವಯಸ್ಸು ಕಾರಣ ಆಗಿರಬಹುದು. ಏನಾದರಾಗಲಿ, ಅರುಣ್ ಸಾಗರ್ ಒಬ್ಬ ಅದ್ಭುತ ಎಂಟರ್ಟೈನರ್, ಒಬ್ಬ ಅದ್ಭುತ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಿಗ್‌ಬಾಸ್ ಮೂಲಕ ಅದು ಮತ್ತೊಮ್ಮೆ ಸಾಬೀತಾಯಿತು.

ಮುಂದಿನ ವಾರ ಫಿನಾಲೆ?
ಬಿಗ್‌ಬಾಸ್ ಮನೆಯಿಂದ ಇಬ್ಬರು ಹೊರ ಹೋಗಿರುವ ಕಾರಣ ಇನ್ನು ಕೇವಲ ಐದು ಜನರಷ್ಟೆ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಆರ್ಯವರ್ಧನ್, ದೀಪಿಕಾ ದಾಸ್ ಅವರುಗಳು ಪ್ರಸ್ತುತ ಬಿಗ್‌ಬಾಸ್ ಮನೆಯಲ್ಲಿದ್ದು, ಮುಂದಿನ ವಾರ ಅಂದರೆ ಕೊನೆಯ ವಾರ ಈ ಐದರಲ್ಲಿ ಇಬ್ಬರು ಮನೆಯಿಂದ ಹೊರಗೆ ಹೋಗುತ್ತಾರೆ. ಇನ್ನುಳಿದ ಮೂವರಲ್ಲಿ ಯಾರು ವಿಜೇತರು ಎಂಬುದನ್ನು ನಿರ್ಣಯಿಸಲಾಗುತ್ತದೆ. ರಾಕೇಶ್ ಅಡಿಗ ಹಾಗೂ ರೂಪೇಶ್ ರಾಜಣ್ಣ ನಡುವೆ ಪ್ರಬಲ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ.