For Quick Alerts
  ALLOW NOTIFICATIONS  
  For Daily Alerts

  ಒಟಿಟಿ, ಟಿವಿ ಎರಡರಲ್ಲೂ ಮಿಂಚಿದ ಸಾನ್ಯಾ ಐಯ್ಯರ್, ಬಿಗ್‌ಬಾಸ್ ಮನೆಯಲ್ಲಿದ್ದಿದ್ದು ಎಷ್ಟು ದಿನ?

  |

  ಬಿಗ್‌ಬಾಸ್ ಕನ್ನಡ ಸೀಸನ್ 09 ರಲ್ಲಿ ನಿನ್ನೆ ಭಾನುವಾರ ಹಾಗೂ ಶನಿವಾರ ವಾರದ ಪಂಚಾಯಿತಿ ನಡೆದಿದ್ದು, ಪದ್ಧತಿಯಂತೆ ಭಾನುವಾರದಂದು ಮನೆಯ ಒಬ್ಬ ಸದಸ್ಯರು ಮನೆಯಿಂದ ಹೊರಹೋಗಿದ್ದಾರೆ.

  ವಾರಗಳು ಉರುಳಿದಂತೆ, ಮನೆಯ ಸದಸ್ಯರ ಮಧ್ಯೆ ಸ್ಪರ್ಧೆ ಹೆಚ್ಚಾಗುವ ಕಾರಣ ಹಲವು ಒಳ್ಳೆಯ ಸ್ಪರ್ಧಿಗಳು ಸಹ ಕೆಲವು ಕಾರಣಗಳಿಂದ ಹೊರಗೆ ಹೋಗಬೇಕಾಗುತ್ತದೆ. ಹಾಗೆಯೇ ಈ ಬಾರಿ ಸಹ ಹಲವರು ನಿರೀಕ್ಷಿಸದೇ ಇದ್ದ ಸ್ಪರ್ಧಿಯೊಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ.

  ಬಿಗ್‌ಬಾಸ್: ಐದನೇ ವಾರ ಮನೆಯಿಂದ ಹೊರಬಿದ್ದವರು ಯಾರು?ಬಿಗ್‌ಬಾಸ್: ಐದನೇ ವಾರ ಮನೆಯಿಂದ ಹೊರಬಿದ್ದವರು ಯಾರು?

  ನಟಿ ಸಾನ್ಯಾ ಐಯ್ಯರ್ ಅವರು ಈ ಬಾರಿ ಮನೆಯಿಂದ ಹೊರಹೋಗಿದ್ದಾರೆ. ಚೆನ್ನಾಗಿ ಆಡುತ್ತಿದ್ದ, ಎಲ್ಲ ಟಾಸ್ಕ್‌ಗಳಲ್ಲಿ ಪಾರ್ಟಿಸಿಪೇಟ್ ಮಾಡುತ್ತಿದ್ದ ಸಾನ್ಯಾ ಐಯ್ಯರ್ ಆಗಾಗ್ಗೆ ಮನೆಯ ಹಿರಿಯ ಸದಸ್ಯರೊಟ್ಟಿಗೆ ತುಸು ಅಸಮಾಧಾನ ಸಹ ತೋರಿಸಿಕೊಳ್ಳುತ್ತಾ ಒಟ್ಟಾರೆ ಮನೆಯಲ್ಲಿ ಸಕ್ರಿಯವಾಗಿರುತ್ತಿದ್ದರು. ಆದರೆ ಅವರೇ ಈಗ ಮನೆಯಿಂದ ಹೊರಬಿದ್ದಿದ್ದಾರೆ.

  ಸಾನ್ಯಾ ಐಯ್ಯರ್ ಅಸಲಿಗೆ ಮೊದಲಿಗೆ ಬಿಗ್‌ಬಾಸ್ ಪಯಣ ಪ್ರಾರಂಭಿಸಿದ್ದು, ಒಟಿಟಿ ಸೀಸನ್‌ನಿಂದ. ಆ ಸೀಸನ್‌ನಿಂದ ಟಿವಿ ಸೀಸನ್‌ಗೆ ಬಂದು ಇಲ್ಲಿಯೂ ಏಳು ವಾರಗಳ ಕಾಲ ಚೆನ್ನಾಗಿ ಪ್ರದರ್ಶನ ನೀಡಿ ಏಳನೇ ವಾರ ಮನೆಯಿಂದ ಹೊರಬಿದ್ದಿದ್ದಾರೆ.

  ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಬಹಳ ಆಪ್ತರಾಗಿದ್ದರು. ಇಬ್ಬರು ಪರಸ್ಪರ ಪ್ರೀತಿಯಲ್ಲಿದ್ದಾರೆ ಎಂಬುದು ಮನೆಯ ಸದಸ್ಯರು, ವೀಕ್ಷಕರೆಲ್ಲರಿಗೂ ಗೊತ್ತಿತ್ತು. ಆದರೆ ಈಗ ಸಾನ್ಯಾ ಐಯ್ಯರ್ ಹಠಾತ್ತನೆ ಮನೆಯಿಂದ ಹೊರಗೆ ಹೋಗಿರುವುದು ಪಾಪ ರೂಪೇಶ್ ಶೆಟ್ಟರಿಗೆ ಬಹಳ ಬೇಸರ ತಂದಿದೆ.

  ಸಾನ್ಯಾ ಐಯ್ಯರ್ ಮನೆಯಿಂದ ಹೊರ ಹೋಗುವ ಮೂಲಕ ಒಟಿಟಿ ಸೀಸನ್‌ನಿಂದ ಟಿವಿಗೆ ಬಂದ ನಾಲ್ವರಲ್ಲಿ ಮೊದಲ ಸದಸ್ಯರು ಹೊರಹೋದಂತಾಗಿದೆ. ಒಟಿಟಿ ಸೀಸನ್‌ನಲ್ಲಿ ಚಾಂಪಿಯನ್ ಆಗಿದ್ದ ಸಾನ್ಯಾ ಐಯ್ಯರ್ ಅಲ್ಲಿ ಫಿನಾಲೆವರೆಗೆ ಇದ್ದು, ಕೊನೆಯ ದಿನ ಮನೆಯಿಂದ ಹೊರಗೆ ಬಂದಿದ್ದರು.

  ಟಿವಿ ಶೋನಲ್ಲಿಯೂ ಸಹ ಚೆನ್ನಾಗಿಯೇ ಪ್ರದರ್ಶನ ನೀಡಿರುವ ಸಾನ್ಯಾ, ಇಲ್ಲಿಯೂ ಕೆಲವು ವಾರಗಳ ವರೆಗೆ ಸರ್ವೈವ್ ಆಗಿದ್ದಾರೆ.

  ಆಗಸ್ಟ್ 16 ರಂದು ಪ್ರಾರಂಭವಾಗಿದ್ದ ಒಟಿಟಿ ಸೀಸನ್ 45 ದಿನಗಳ ವರೆಗೆ ನಡೆದಿತ್ತು. ಅಷ್ಟೂ ದಿನ ಸಾನ್ಯಾ ಐಯ್ಯರ್ ಆ ಮನೆಯಲ್ಲಿದ್ದರು. ಸೆಪ್ಟೆಂಬರ್ 16 ರಂದು ಶೋ ಮುಗಿದು, ಒಂದು ವಾರಗಳ ಕಾಲ ಹೊರಪ್ರಪಂಚಕ್ಕೆ ಗೊತ್ತಾಗದೆ, ರೆಸಾರ್ಟ್‌ ಒಂದರಲ್ಲಿ ಸಾನ್ಯಾ ಹಾಗೂ ಇತರ ಒಟಿಟಿ ಬಿಗ್‌ಬಾಸ್ ಚಾಂಪಿಯನ್‌ಗಳಿದ್ದರು.

  ಆ ಬಳಿಕ ಸೆಪ್ಟೆಂಬರ್ 24 ರಿಂದ ಬಿಗ್‌ಬಾಸ್ ಟಿವಿ ಶೋ ಪ್ರಾರಂಭವಾಯಿತು. ಅಲ್ಲಿ ಆರು ವಾರಗಳ ಕಾಲ ಅಂದರೆ 42 ದಿನಗಳ ಕಾಲ ಇದ್ದ ಸಾನ್ಯಾ ನಿನ್ನೆ ಅಂದರೆ ನವೆಂಬರ್ 7 ರಂದು ಮನೆಯಿಂದ ಹೊರಬಿದ್ದಿದ್ದಾರೆ. ಆ ಮೂಲಕ ಒಟಿಟಿಯಿಂದ ಟಿವಿಗೆ ಬಂದ ಸ್ಪರ್ಧಿಗಳಲ್ಲಿ ಮನೆಯಿಂದ ಹೊರಗೆ ಹೋದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ ಸಾನ್ಯಾ.

  ಒಟಿಟಿ ಸೀಸನ್‌ನಲ್ಲಿ 45 ದಿನ ಟಿವಿ ಸೀಸನ್‌ನಲ್ಲಿ 42 ದಿನ ಅಲ್ಲಿಗೆ ಒಟ್ಟು 87 ದಿನ ಬಿಗ್‌ಬಾಸ್ ಮನೆಯ ಒಳಗೆ ಇದ್ದರು. ಒಟಿಟಿ ಹಾಗೂ ಬಿಗ್‌ಬಾಸ್ ನಡುವೆ ಇದ್ದ ಅಂತರ ಆರು ದಿನವನ್ನೂ ಸೇರಿಸಿಕೊಂಡರೆ ಸಾನ್ಯಾ ಬರೋಬ್ಬರಿ 93 ದಿನಗಳಿಂದಲೂ ಮನೆಯಿಂದ ದೂರವಿದ್ದರು.

  English summary
  Bigg Boss Kannada Season 09: Sanya Iyer eliminated from Bigg Boss house. She came to Tv season from OTT season.
  Monday, November 7, 2022, 9:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X