»   » 'ಬಿಗ್ ಬಾಸ್ ಸೀಸನ್ 2' ಸ್ಪರ್ಧಿಗಳು ಇವರೇನಾ ಸ್ವಾಮಿ?

'ಬಿಗ್ ಬಾಸ್ ಸೀಸನ್ 2' ಸ್ಪರ್ಧಿಗಳು ಇವರೇನಾ ಸ್ವಾಮಿ?

By: ಉದಯರವಿ
Subscribe to Filmibeat Kannada

ಕನ್ನಡ ಕಿರುತೆರೆಯಲ್ಲಿ ಕಿಚ್ಚ ಸುದೀಪ್ ಮಾಡಿದ ಮೋಡಿಯನ್ನು ಯಾರೂ ಮರೆತಿಲ್ಲ. ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋ ಅದ್ಭುತವಾಗಿ ನಡೆಸಿಕೊಟ್ಟು ಕಿರುತೆರೆಯ ಶೋಮ್ಯಾನ್ ಆಗಿಬಿಟ್ಟರು. ಇದೀಗ ಮತ್ತೆ 'ಬಿಗ್ ಬಾಸ್' ಸೀಸನ್ 2ಗೆ ಭರದ ಸಿದ್ಧತೆಗಳು ನಡೆಯುತ್ತಿವೆ.

ಮೊದಲ ಆವೃತ್ತಿಯನ್ನು ನಿರ್ಮಿಸಿದ್ದ ಎಂಡಮೋಲ್ ಸಂಸ್ಥೆಯೇ ಈ ಬಾರಿಯೂ ಬಂಡವಾಳ ಹೂಡುತ್ತಿದೆ. ಈ ಕಾರ್ಯಕ್ರಮದ ಮೂಲಕ ಹಾಕಿದ ಬಂಡವಾಳಕ್ಕೆ ಮೂರು ನಾಲ್ಕು ಪಟ್ಟು ಲಾಭ ತೆಗೆಯುವುದು ಗೊತ್ತೇ ಇದೆ ಆ ಸಂಸ್ಥೆಗೆ ಚೆನ್ನಾಗಿ ಗೊತ್ತು. [ಬಿಗ್ ಬಾಸ್ ಶೋನ ಕೊನೆಯ ದಿನದ ಹೈಲೈಟ್ಸ್]

ಬಿಗ್ ಬಾಸ್ ಸೀಸನ್ 1ಕ್ಕೆ ಬಳಸಿಕೊಂಡಿದ್ದ ತಂತ್ರಜ್ಞರನ್ನೇ ಈ ಬಾರಿಯೂ ಬಳಸಿಕೊಳ್ಳಲಿದೆ ಎಂಬುದು ಲೇಟೆಸ್ಟ್ ಸಮಾಚಾರ. ಕಳೆದ ಬಾರಿಯ ಬಿಗ್ ಬಾಸ್ ಸೀಸನ್ 1ರ ಹಿಂದೆ ನಾನ್ ಫಿಕ್ಷನ್ ಕ್ರಿಯೇಟೀವ್ ಹೆಡ್ ರಾಘವೇಂದ್ರ ಹುಣಸೂರು ಇದ್ದರು. ಈ ಬಾರಿಯೂ ಅವರೇ ಸೂತ್ರಧಾರ ಎನ್ನುತ್ತವೆ ಮೂಲಗಳು.

ಮೊದಲ ಆವೃತಿಯಲ್ಲಿದ್ದ ಸ್ಪರ್ಧಿಗಳು

ಮೊದಲ ಆವೃತ್ತಿಯಲ್ಲಿ ವಿಜಯ್ ರಾಘವೇಂದ್ರ, ಅರುಣ್ ಸಾಗರ್, ನಿಖಿತಾ ತುಕ್ರಲ್, ನರೇಂದ್ರ ಬಾಬು ಶರ್ಮ, ಚಂದ್ರಿಕಾ, ಅನುಶ್ರೀ, ಶ್ವೇತಾ ಪಂಡಿತ್, ಸಂಜನಾ, ತಿಲಕ್ ಶೇಖರ್, ವಿನಾಯಕ ಜೋಶಿ, ಜಯಲಕ್ಷ್ಮಿ, ಅಪರ್ಣಾ, ಋಷಿಕುಮಾರ ಸ್ವಾಮೀಜಿ, ರಿಷಿಕಾ ಸಿಂಗ್ ಇದ್ದರು. ಅಂತಿವಾಗಿ ವಿಜಯ ಮಾಲೆ ವಿಜಯ್ ರಾಘವೇಂದ್ರ ಅವರ ಕೊರಳಿಗೆ ಬಿದ್ದಿದ್ದನ್ನು ವೀಕ್ಷಕರು ಇನ್ನೂ ಮರೆತಿಲ್ಲ.

ಬಿಗ್ ಬಾಸ್ ಸೀಸನ್ 2ಗೆ ಇವರೇನಾ ಸ್ವಾಮಿ?

ಈ ಬಾರಿ ಸೀಸನ್ 2ನಲ್ಲಿ ಯಾರು ಇರಲಿದ್ದಾರೆ ಎಂಬ ಬಗ್ಗೆ ಊಹಾಪೋಹಗಳು ಶುರುವಾಗಿವೆ. ಗಾಸಿಪ್ ಸುದ್ದಿ ಪ್ರಕಾರ, ಮಠ ಗುರುಪ್ರಸಾದ್, ನವೀನ್ ಕೃಷ್ಣ, ಪೂಜಾಗಾಂಧಿ, ಅನು ಪ್ರಭಾಕರ್, ಪ್ರಿಯಾ ಹಾಸನ್, ಋಷಿಕುಮಾರ ಸ್ವಾಮಿ, ಸಿಹಿಕಹಿ ಚಂದ್ರು ಹೆಸರುಗಳು ಕೇಳಿಬಂದಿವೆ.

'ಬ್ರಹ್ಮಾಂಡ' ಸ್ವಾಮಿ ಇಲ್ಲದಿದ್ದರೆ ಮುಂಡಾಮೋಚ್ತು

ಕಳೆದ ಬಾರಿ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮ ಅವರು ಬಹಳ ಮನರಂಜನೆ ನೀಡಿದ್ದರು. ಆದರೆ ಅವರು ಅಲ್ಲಿಂದ ಬಂದ ಮೇಲೆ 'ಬಿಗ್ ಬಾಸ್'ನನ್ನು ಮುಂಡಾಮೋಚೋ ಕಾರ್ಯಕ್ರಮ ಎಂದಿದ್ದರು.

ಚಂದ್ರಿಕಾ, ನಿಖಿತಾ ತಿಕ್ಕಾಟ ಮರೆಯಲು ಸಾಧ್ಯವೇ?

ಈ ಬಾರಿಯ ಸ್ಪರ್ಧಿಗಳ ಶಾರ್ಟ್ ಲಿಸ್ಟ್ ಪಟ್ಟಿ ನೋಡಿದರೆ ಆ ರೀತಿಯ ತಲೆಗಳ್ಯಾವುದೂ ಕಾಣಿಸುತ್ತಿಲ್ಲ. ಕಳೆದ ಬಾರಿ ಚಂದ್ರಿಕಾ ಹಾಗೂ ನಿಖಿತಾ ನಡುವಿನ ತಿಕ್ಕಾಟ ಯಾವುದೇ ಕೌಟುಂಬಿಕ ಧಾರಾವಾಹಿಗೂ ಕಡಿಮೆ ಇರಲಿಲ್ಲ.

ತಿಲಕ್, ಶ್ವೇತಾ ಕಣ್ಣಾಮುಚ್ಚಾಲೆ ಇನ್ನೂ ಹಸಿರಾಗಿದೆ

ಇನ್ನು ತಿಲಕ್ ಹಾಗೂ ಶ್ವೇತಾ ಪಂಡಿತ್ ಜೋಡಿಯೂ ಕಿರುತೆರೆ ಪ್ರೇಕ್ಷಕರಲ್ಲಿ ಸಾಕಷ್ಟು ರೋಚಕತೆಯನ್ನು ಸೃಷ್ಟಿಸಿತ್ತು. ಋಷಿಕುಮಾರ ಸ್ವಾಮೀಜಿಯಂತೂ ಜೋಕರ್ ತರಹ ಎಲ್ಲರನ್ನೂ ನಗಿಸಿದ್ದರು.

ಸೀಸನ್ 2ನಲ್ಲೂ ಇರುತ್ತಾರಂತೆ ಅರುಣ್ ಸಾಗರ್

ಸ್ವಲ್ಪದರಲ್ಲಿ ಬಿಗ್ ಬಾಸ್ ಕಪ್ ಕಳೆದುಕೊಂಡಿದ್ದ ಅರುಣ್ ಸಾಗರ್ ಸಹ ಸೀಸನ್ 2ನಲ್ಲಿರಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಯಾವುದೂ ಇನ್ನೂ ಕನ್ಫರ್ಮ್ ಆಗಿಲ್ಲ. ಸೀಸನ್ 2ನಲ್ಲಿರುವ ತಾರೆಗಳ ಪಟ್ಟಿ ನೋಡಿದರೆ ಯಾರೂ ಅಷ್ಟಾಗಿ ಬಿಜಿಯಾಗಿಲ್ಲ. ಬಹುಶಃ ಬಿಗ್ ಬಾಸ್ ಅವರಿಗೆ ಹೊಸ ದಾರಿ ತೋರಿಸಬಹುದೇನೋ.

English summary
Telebuzz is back with the latest updates of Bigg Boss 2 Kannada. Some of the names, who may enter Bigg Boss 2 Kannada are revealed. Check it out the list.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada