»   » 'ಬಿಗ್ ಬಾಸ್ 3' ಎಲ್ಲಾ 15 ಸ್ಪರ್ಧಿಗಳ ಕಿರು ಪರಿಚಯ

'ಬಿಗ್ ಬಾಸ್ 3' ಎಲ್ಲಾ 15 ಸ್ಪರ್ಧಿಗಳ ಕಿರು ಪರಿಚಯ

Posted By:
Subscribe to Filmibeat Kannada

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 3' ಕಾರ್ಯಕ್ರಮ ನಿನ್ನೆ (ಅಕ್ಟೋಬರ್ 25) ಗ್ರ್ಯಾಂಡ್ ಆಗಿ ಒಪನ್ನಿಂಗ್ ಪಡೆದುಕೊಂಡಿದೆ. ಈಗಾಗಲೇ ಫೈನಲ್ ಸ್ಪರ್ಧಿಗಳು ಯಾರಿರಬಹುದು ಅನ್ನೋ ವೀಕ್ಷಕರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ.

ಸಂಜೆ 6 ಘಂಟೆಯಿಂದ ಕಲರ್ಸ್ ಕನ್ನಡ (ಈಟಿವಿ ಕನ್ನಡ) ವಾಹಿನಿಯಲ್ಲಿ ನಡೆದ 'ಬಿಗ್ ಬಾಸ್ 3' ಗ್ರ್ಯಾಂಡ್ ಪ್ರೀಮಿಯರ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಾರ್ಥಿಗಳನ್ನು ಸಂಭ್ರಮದಿಂದ ಬಿಗ್ ಬಾಸ್ ಮನೆಗೆ ಬರಮಾಡಿಕೊಂಡಿದ್ದಾರೆ.[ಇವರನ್ನೆಲ್ಲಾ ನಾವು 'ಬಿಗ್ ಬಾಸ್' ಮನೆಯಲ್ಲಿ ನೋಡ್ಬಹುದಾ?]

ಇನ್ನು ನಟಿ ಶ್ರುತಿ, ಸುನಾಮಿ ಕಿಟ್ಟಿ, ಚಂದನ್, ಮಾಧುರಿ, ಕೃತಿಕಾ, ರೆಹಮಾನ್ ಹಾಸನ್, ಹುಚ್ಚ ವೆಂಕಟ್ ಮುಂತಾದವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಳ್ಳುತ್ತಾರೆ ಅಂತ ನಾವು ಇದೇ ಫಿಲ್ಮಿ ಬೀಟಲ್ಲಿ ನಿಮಗೆ ಹೇಳಿದ್ವಿ ಅಲ್ವಾ. ಇದೀಗ ಅದೇ ಸ್ಪರ್ಧಾರ್ಥಿಗಳು ಮನೆಗೆ ಎಂಟ್ರಿ ಪಡೆದುಕೊಂಡಿದ್ದು, ಆಗಿದೆ.

ಬೆಂಗಳೂರಿನ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿರುವ ಅತ್ಯಂತ ಕಲರ್ ಫುಲ್ ಮನೆಗೆ ಈಗಾಗಲೇ 15 ಖಿಲಾಡಿಗಳು ಎಂಟ್ರಿ ಪಡೆದುಕೊಂಡಾಗಿದೆ. ಸಖತ್ ಕಲರ್ ಫುಲ್ ಸ್ಟೇಜ್ ನಲ್ಲಿ ಬಹಳ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟ ಆ ಫೈನಲ್ 15 ಖಿಲಾಡಿಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ.

ಕಿರುತೆರೆ ನಟ ಮಾಸ್ಟರ್ ಆನಂದ್

'ಡಾನ್ಸಿಂಗ್ ಸ್ಟಾರ್ ಸಿಸನ್ 2' ವಿನ್ನರ್ ಕಿರುತೆರೆ ನಟ ಮಾಸ್ಟರ್ ಆನಂದ್ ಅವರು ಸದ್ದಿಲ್ಲದೇ ಯಾವುದೇ ರೀತಿಯ ಸುದ್ದಿ ಮಾಡದೇ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ರೋಬೋ ಫ್ಯಾಮಿಲಿ ಖ್ಯಾತಿಯ ಮಾಸ್ಟರ್ ಆನಂದ್ ಅವರು ಬಿಗ್ ಬಾಸ್ ಮನೆಗೆ ಈಗಾಗಲೇ ಎಂಟ್ರಿಯಾಗಿದ್ದು, ತಮ್ಮ ಆಟ ಶುರು ಹಚ್ಚಿಕೊಳ್ಳಲಿದ್ದಾರೆ[ಹೌದು ಸ್ವಾಮಿ 'ಬಿಗ್ ಬಾಸ್ 3'ನಲ್ಲಿ 'ಇವರೆಲ್ಲಾ'.. ಇರ್ತಾರೆ!]

ಖ್ಯಾತ ಡ್ಯಾನ್ಸರ್ ಜಯಶ್ರೀ

ಈ ಸಂದರಿ ಬೆಡಗಿ ಜಯಶ್ರೀ ಖ್ಯಾತ ನೃತ್ಯಪಟು. ತಮ್ಮ ನೃತ್ಯದ ಮೂಲಕ ಎಲ್ಲರ ಮನಗೆದ್ದಿರುವ ಈಕೆ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಇನ್ನು ಈಕೆ ತಮ್ಮ ಡಾನ್ಸ್ ಮೂಲಕ ಅನೇಕರ ಮನಗೆದ್ದಿದ್ದರೂ, ಕೂಡ ಬಿಗ್ ಬಾಸ್ ಮನೆಯಲ್ಲಿ ಈಕೆಯ ಡಾನ್ಸ್ ಸ್ಕಿಲ್ ಉಪಯೋಗಕ್ಕೆ ಬರುತ್ತಾ?. ಅಥವಾ ಬೇರೆಯವರ ಹಾಡಿಗೆ ಈಕೆ ಕುಣಿಯುತ್ತಾಳ ಅಂತ ನೋಡಲು 'ಬಿಗ್ ಬಾಸ್ 3' ನೋಡಿ. [ಅಕ್ಟೋಬರ್ 25 ರಿಂದ, 'ಬಿಗ್ ಬಾಸ್ 3' ನೋಡಿ ಸ್ವಾಮಿ]

ಫಾಸ್ಟ್ ಬೌಲರ್ ಅಯ್ಯಪ್ಪ

ಕ್ರಿಕೆಟ್ ನ ಫಾಸ್ಟ್ ಬೌಲರ್ ಅಯ್ಯಪ್ಪ ಅವರು ಸದ್ದಿಲ್ಲದೇ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಫಾಸ್ಟ್ ಬೌಲರ್ ಗೆ ಬಿಗ್ ಬಾಸ್ ಮನೆಯಲ್ಲಿ ಅದೇನಪ್ಪಾ ಕೆಲ್ಸಾ ಅಂತ ನೀವು ತಲೆ ಕೆರೆದುಕೊಳ್ಳಬೇಡಿ, ಬದ್ಲಾಗಿ ಬಿಗ್ ಬಾಸ್ ನೋಡಿ.

ರಾಧ ಕಲ್ಯಾಣ ಖ್ಯಾತಿಯ ಕೃತಿಕಾ

ರಾಧ ಕಲ್ಯಾಣ ಧಾರಾವಾಹಿಯಲ್ಲಿ ಸಖತ್ ಆಗಿ ಕಣ್ಣೀರು ಸುರಿಸಿ ಸಾಕಾದ ಕೃತಿಕಾ ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಈ ಮನೆಯಲ್ಲಿ ತಾವೇ ಕಣ್ಣೀರ ಕೋಡಿ ಹರಿಸುತ್ತಾರ ಅಥವಾ ಬೇರೆಯವರಿಗೆ ಕಣ್ಣೀರು ತರಿಸುತ್ತಾರ?, ಅಂತ ನೋಡೋಣ.

ನಟ ಚಂದನ್

ರಾಧ ಕಲ್ಯಾಣದ ಮೂಲಕ ಖ್ಯಾತಿ ಪಡೆದುಕೊಂಡ ನಟ ಚಂದನ್ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಮತ್ತೆ ಫೇಮಸ್‌ ಆಗಿ ಬೆಳ್ಳಿತೆರೆಗೂ ಕಾಲಿಟ್ಟು ಇದೀಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯಕ್ಕೆ ಎಲ್ಲ ಕನ್ನಡ ಹುಡುಗಿಯರ ಹಾಟ್ ಫೇವರಿಟ್ ಆಗಿರುವ ಚಂದನ್ ಬಿಗ್ ಬಾಸ್ ಮನೆಯಲ್ಲಿ ಅದ್ಯಾವ ರೀತಿ ಮೋಡಿ ಮಾಡಲಿದ್ದಾರೆ ಅಂತ ಕಾದು ನೋಡಬೇಕು.

ನಟಿ ಮಾಧುರಿ ಇಟಗಿ

ಬೆಳ್ಳಿ ತೆರೆಯಲ್ಲಿ ಕಾಮಿಡಿ ಕಿಂಗ್ ಶರಣ್ ಜೊತೆ ಡ್ಯುಯೆಟ್ ಹಾಡಿದ್ದ ನಟಿ ಮಾಧುರಿ ಇಟಗಿಗೆ ಬಿಗ್ ಬಾಸ್ ಮನೆ ಶೂಟಿಂಗ್ ಸೆಟ್ ಅಲ್ಲ ಅಂತ ತಿಳಿಯುವ ದಿನ ಹತ್ತಿರವಾಗಿದೆ. ಯಾವುದೇ ಸವಾಲಿಗೂ ಸೈ ಎನ್ನುವ ಈಕೆಯ ಆಟವನ್ನು ನೀವು ಇನ್ನುಮುಂದೆ ಬಿಗ್ ಬಾಸ್ ಮನೆಯಲ್ಲಿ ನೋಡಬಹುದು.

ಚಂದನವನದ ನಟಿ ಶ್ರುತಿ

ಹೆಂಗಳೆಯರ ಹಾಟ್ ಫೇವರಿಟ್ ನಟಿ ಶ್ರುತಿ ಅವರು ಕೊನೆಯ ಕ್ಷಣದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಎಲ್ಲರಿಗೂ ಶಾಕ್ ನೀಡಿದ್ದಾರೆ. ತಮ್ಮ ಅಳುವಿನ ಮೂಲಕ ಎಲ್ಲರ ಮನಗೆದ್ದಿರುವ ಈಕೆ ಬಿಗ್ ಬಾಸ್ ಮನೆಯಲ್ಲಿ ಕಮಾಲ್ ಮಾಡ್ತಾರ ಅಂತ ಕಾದು ನೋಡಬೇಕು.

ಗಗನಸಖಿ ನೇಹಾ ಗೌಡ

ದಿನಾ ಫ್ಲೈಟ್ ನಲ್ಲಿ ಹಾರಾಡುತ್ತಿದ್ದ ಗಗನಸಖಿ ನೇಹಾ ಗೌಡ ಅವರು ಇದೀಗ ಧರೆಗಿಳಿದು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಮನೆ ಒಳಗಿನ ಟ್ರಬಲ್ ನ ಇವರು ಹೇಗೆ ನಿಭಾಯಿಸ್ತಾರೆ ಅಂತ ನೋಡಲು ಬಿಗ್ ಬಾಸ್ ನೋಡಿ.

ಹುಚ್ಚ ವೆಂಕಟ್

ಬಹುಜನರ ಡಿಮ್ಯಾಂಡ್ ನಂತೆ ಹುಚ್ಚ ವೆಂಕಟ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಎಡಗಾಲಿಟ್ಟು ಮನೆಗೆ ಎಂಟ್ರಿ ಕೊಟ್ಟ ಇವರ ಹುಚ್ಚಾಟಗಳನ್ನು ಇನ್ನು ನೀವು ದಿನಾ ಟಿವಿಯಲ್ಲಿ ನೋಡಬಹುದು.

ಭಾವನಾ ಬೆಳಗೆರೆ

ರವಿ ಬೆಳಗೆರೆ ಅವರ ಮುದ್ದಿನ ಮಗಳು, ಸ್ಯಾಂಡಲ್ ವುಡ್ ನಟ ಶ್ರೀನಗರ ಕಿಟ್ಟಿ ಅವರ ಪತ್ನಿ ಭಾವನಾ ಬೆಳಗೆರೆ ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ತಮ್ಮ ಕಾರು-ಬಾರು ನಡೆಸಲಿದ್ದಾರೆ.

ಆರ್.ಜೆ ನೇತ್ರಾ

ಸದಾ ಮಾತು ಮಾತು ಮಾತು ಅಂತಿರುವ ಮಾತಿನಮಲ್ಲಿ ಆರ.ಜೆ ನೇತ್ರಾ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಕಮಾಲ್ ಮಾಡಲಿದ್ದಾರೆ. 'ಮಾತು ಬಲ್ಲವನಿಗೆ ಜಗಳವಿಲ್ಲ' ಅನ್ನುವಂತೆ ಆರ್ ಜೆ ನೇತ್ರಾ ಅವರಿಗೆ ಮಾತೇ ಬಂಡವಾಳ ಆಗುತ್ತಾ ನೋಡೋಣ.

ನಿರೂಪಕ ರೆಹಮಾನ್ ಹಾಸನ್

ದಿನಾ ಜಗತ್ತಿಗೆ ನ್ಯೂಸ್ ಕೊಡುತ್ತಿದ್ದ ಈ ಅಂದಗಾರ ರೆಹಮಾನ್ ಇದೀಗ ಬಿಗ್ ಬಾಸ್ ಮೂಲಕ ತಾವೇ ನ್ಯೂಸ್ ಆಗೋಕೆ ಹೊರಟಿದ್ದಾರೆ. ಇನ್ನು ಕನ್ನಡದ ಈ ಸೊಗಸುಗಾರನ ಕ್ಷಣ-ಕ್ಷಣದ ಸುದ್ದಿಗಾಗಿ ನೋಡ್ತಾ ಇರಿ, ಬಿಗ್ ಬಾಸ್.

ಸಂಗೀತಗಾರ ರವಿ ಮುರೂರು

ಸ್ವಲ್ಪ ಡಿಫರೆಂಟ್ ಆಗಿರುವ ಇವರು ಸಖತ್ ಸಂಗೀತಗಾರ, ಖ್ಯಾತ ಸಂಗೀತ ಗಾರ್ತಿ ಅರ್ಚನಾ ಅವರ ಪತಿ ಶಿರಸಿ ಮೂಲದ ರವಿ ಮುರೂರು ಹಾಡುತ್ತಾ ಹಾಡುತ್ತಾ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮನಗೆಲ್ಲುತ್ತಾರ ನೋಡಲು ಬಿಗ್ ಬಾಸ್ ನೋಡಿ.

ಸ್ಯಾಂಡಲ್ ವುಡ್ ನಟಿ ಪೂಜಾ ಗಾಂಧಿ

ಉತ್ತರ ದ್ರುವದಿಂದ ಬಂದು ದಕ್ಷಿಣ ದ್ರುವದಲ್ಲಿ ಜನ ಮನ್ನಣೆ ಗಳಿಸಿರುವ 'ಮುಂಗಾರು ಮಳೆ' ಹುಡುಗಿ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಗಾಂಧಿಯ, ಗಾಂಧಿಗಿರಿ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಾ ನೋಡಬೇಕು.

ಸುನಾಮಿ ಕಿಟ್ಟಿ

ರಿಯಾಲಿಟಿ ಶೋಗಳ ರಾಜ ಅಂತಾನೇ ಖ್ಯಾತಿ ಗಳಿಸಿರುವ ಸುನಾಮಿ ಕಿಟ್ಟಿ ಪಂಚಿಂಗ್ ಟೈಲಾಗ್ ಗಳ ಪಕ್ಕಾ ಹಳ್ಳಿ ಸ್ಟಾರ್ ಬಿಗ್ ಬಾಸ್ ಮನೆಯೊಳಗೆ ಸುನಾಮಿ ಎಬ್ಬಿಸ್ತಾನ ಅಂತ ನೋಡಬೇಕಿದೆ. ಕಾರ್ಯಕ್ರಮಕ್ಕೆ ಮೊದಲು ಭರ್ಜರಿಯಾಗಿ ಎಂಟ್ರಿ ಪಡೆದುಕೊಂಡ ಈತ ಕಮಾಲ್ ಮಾಡ್ತಾನ ನೋಡಬೇಕು.

English summary
Bigg Boss' is back in Kannada. 'Bigg Boss-3' will be aired in 'Colours Kannada Channel' from Yesterday (October 25th). According to the sources, Huccha Venkat, Pooja Gandhi, Shruthi, to participate as contestants. Check out the final list of Bigg Boss Kannada Season 3 contestants here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada