»   » 'ಬಿಗ್ ಬಾಸ್' ಬಗ್ಗೆ ಕಿಚ್ಚ ಸುದೀಪ್ ಬಿಚ್ಚಿಟ್ಟ ಮನದಾಳ

'ಬಿಗ್ ಬಾಸ್' ಬಗ್ಗೆ ಕಿಚ್ಚ ಸುದೀಪ್ ಬಿಚ್ಚಿಟ್ಟ ಮನದಾಳ

Posted By:
Subscribe to Filmibeat Kannada

ಅಂತೂ 'ಬಿಗ್ ಬಾಸ್' ಕಾರ್ಯಕ್ರಮದ ಮೂರನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. ಇದೇ ಭಾನುವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್-3' ಶೋಗೆ ಗ್ರ್ಯಾಂಡ್ ಓಪನಿಂಗ್ ಸಿಗಲಿದೆ.

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ನಿನ್ನೆ ಕಲರ್ಸ್ ಕನ್ನಡ ವಾಹಿನಿ ಸುದ್ದಿಗೋಷ್ಠಿ ಕರೆದಿತ್ತು. ಅದರಲ್ಲಿ 'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ಕಿಚ್ಚ ಸುದೀಪ್ ಮನಬಿಚ್ಚಿ ಮಾತನಾಡಿದರು. [ನಿಮಗ್ಯಾರಿಗೂ ಗೊತ್ತಿಲ್ಲದ 'ಬಿಗ್ ಬಾಸ್' ಸುದೀಪ್.!]

'ಬಿಗ್ ಬಾಸ್' ಕಾರ್ಯಕ್ರಮದ ರೂಪುರೇಶೆ, ವೋಟಿಂಗ್, ಎಲಿಮಿನೇಷನ್ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಮಾಧ್ಯಮ ಹಾಗು ಪತ್ರಿಕಾ ಮಿತ್ರರೊಂದಿಗೆ ಕಿಚ್ಚ ಸುದೀಪ್ ಹಂಚಿಕೊಂಡರು. [ಬಿಗ್ ಬಾಸ್ ಸೀಸನ್ 3 : ಸ್ಪೆಷಾಲಿಟಿ ಏನ್ ಗೊತ್ತಾ?]

'ಬಿಗ್ ಬಾಸ್' ಬಗ್ಗೆ ಸುದೀಪ್ ಬಿಚ್ಚಿಟ್ಟ ಮನದಾಳ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

ನನ್ನ ನಿರ್ಧಾರ ನಡೆಯಲ್ಲ!

''ವೋಟಿಂಗ್ ಗೂ ನನಗೂ ಸಂಬಂಧ ಇಲ್ಲ. ಇಲ್ಲಿ ನನ್ನ ನಿರ್ಧಾರವೇನೂ ನಡೆಯಲ್ಲ.'' - ಸುದೀಪ್

ನನಗೆ ಖುಷಿ ಇದೆ

''ಬಿಗ್ ಬಾಸ್ ಮತ್ತೆ ಈಟಿವಿ (ಕಲರ್ಸ್ ಕನ್ನಡ) ಪಾಲಾಗಿರುವುದು ಖುಷಿ ಕೊಟ್ಟಿದೆ. ಕೆಲವು ವ್ಯಕ್ತಿಗಳು ಇಲ್ಲ ಅನ್ನೋದು ಬಿಟ್ಟರೆ ಹಳೇ ಟೀಮ್ ಮತ್ತೆ ಒಂದಾಗಿದೆ. ಮೊದಲು ನಾನು ಬಿಗ್ ಬಾಸ್ ಗೆ ಬಂದಾಗ, ನನಗೆ ಏನೂ ಗೊತ್ತಿರಲಿಲ್ಲ. ಹಿಂದಿ ಸೀಸನ್ ಕೂಡ ನಾನು ನೋಡಿರಲಿಲ್ಲ. ಎಲ್ಲರ ಸಪೋರ್ಟ್ ನನಗೆ ಚೆನ್ನಾಗಿತ್ತು.'' - ಸುದೀಪ್

ಒಂದೊಂದು ಪದವೂ ಮುಖ್ಯ

''ಶನಿವಾರ ಮತ್ತು ಭಾನುವಾರದ ಎಪಿಸೋಡ್ ಗಳನ್ನು ನೋಡಿ ಜನ ತುಂಬಾ ಎಂಜಾಯ್ ಮಾಡ್ತಿದ್ದಾರೆ ಅಂದ್ರೆ ಅದರ ಹಿಂದೆ ತುಂಬಾ ಜನರ ಶ್ರಮ ಇದೆ. ಯಾಕಂದ್ರೆ, ಒಂದೊಂದು ಮಾತು, ಒಂದೊಂದು ಪದ ಕೂಡ ಹೇಳುವುದಕ್ಕಿನ್ನ ಮುಂಚೆ ಸಾವಿರ ಸಲಿ ಯೋಚನೆ ಮಾಡ್ಬೇಕಾಗುತ್ತೆ.'' - ಸುದೀಪ್

ನಾನು ಜಡ್ಜ್ ಅಲ್ಲ

''Contestants ಬಗ್ಗೆ ನಾನು ನನ್ನ ಜಾಗದಲ್ಲಿ ನಿಂತುಕೊಂಡು ಕಂಪ್ಲೇನ್ ಮಾಡುವ ಹಾಗಿಲ್ಲ. ಹೊಗಳುವ ಹಾಗಿಲ್ಲ. ನಾನು ಜಡ್ಜ್ ಅಲ್ಲ.'' - ಸುದೀಪ್

ಯಾರೂ ತಪ್ಪು ಮಾಡಲ್ಲ

''ಮನೆಯಲ್ಲಿ ಇರುವವರೆಲ್ಲಾ ಡ್ರಾಮಾ ಮಾಡುವುದಕ್ಕೆ ಇರುವುದು. ಒಬ್ಬರನ್ನ ಇನ್ನೊಬ್ಬರು ಹೊರಗಡೆ ಹಾಕುವುದಕ್ಕೆ ಇರುವುದು. ಹೀಗಾಗಿ ಅವರು ಮಾಡುವುದು ಸರಿ ಅಥವಾ ತಪ್ಪು ಅಂತ ಹೇಳುವುದಕ್ಕೆ ಆಗಲ್ಲ.'' - ಸುದೀಪ್

ನಾವು ಯಾರಿಗೂ ಮೋಸ ಮಾಡಲ್ಲ

''ಮನೆ ಒಳಗೆ Contestants ಬರಬೇಕು ಅಂದ್ರೆ ಅವರು ಕೂಡ ಕೆಲವೊಂದನ್ನ ತ್ಯಾಗ ಮಾಡಿ ಬಂದಿರುತ್ತಾರೆ. ನಾವು ಎಲ್ಲರನ್ನ ಕ್ಲೋಸ್ ಆಗಿ ನೋಡಿದ್ದೇವೆ. ಕೆಲವರು ಒಂದು ವಾರಕ್ಕೆ ಹೊರಗಡೆ ಬರಬಹುದು. ಕೆಲವರು ಎರಡು ವಾರಕ್ಕೆ ಬರಬಹುದು. ಕೆಲವರು 100 ದಿನ ಇದ್ದು ವಿನ್ನರ್ ಆಗದೇ, ಎರಡನೇ ಅಥವಾ ಮೂರನೇ ಸ್ಥಾನ ಪಡೆಯಬಹುದು. ಇದಕ್ಕೆ ಅವರು ಎಲ್ಲವನ್ನೂ ಬಿಟ್ಟು ಬರಬೇಕಾಗುತ್ತೆ. ಕೊನೆವರೆಗೂ ಇದ್ದು ಗೆಲ್ಲಲಿಲ್ಲ ಅನ್ನೋದು ಕೂಡ ಬೇಸರದ ಸಂಗತಿ. ಹೀಗಾಗಿ ನಾವು ಎಲ್ಲಾ Contestants ಗಳನ್ನ ಪ್ರೀತಿಸುತ್ತೇವೆ. ಯಾರಿಗೂ Injustice ಮಾಡುವುದಕ್ಕೆ ನಾವು ಹೋಗಲ್ಲ.'' - ಸುದೀಪ್

ನಾನೂ ಅತ್ತಿದ್ದೇನೆ

''ವೋಟಿಂಗ್ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ವೋಟ್ ಇಲ್ಲ ಅಂದ್ರೆ ನಾವು ಕೂಡ ಏನೂ ಮಾಡೋಕೆ ಆಗಲ್ಲ. ಎಷ್ಟೋ ಸನ್ನಿವೇಶಗಳಲ್ಲಿ ನಾನು ಕೂಡ ಅತ್ತಿದ್ದೇನೆ. ನನಗೂ ಬೇಜಾರಾಗಿದೆ. ಆದ್ರೆ, ಕೊನೆಗೆ ಇದು ಆಟ. ಜನರ ವೋಟ್ ಮಾತ್ರ ಇಲ್ಲಿ ಮುಖ್ಯ.'' - ಸುದೀಪ್

ಸ್ಪರ್ಧಿಗಳ ಆಯ್ಕೆ ಬಗ್ಗೆ ತಲೆಹಾಕಲ್ಲ

''ಸ್ಪರ್ಧಿಗಳ ಆಯ್ಕೆ ಕೂಡ ನನಗೆ ಗೊತ್ತಿಲ್ಲ. ಎಲ್ಲರೂ ನಾನೇ ಬಿಗ್ ಬಾಸ್ ಅಂದುಕೊಳ್ಳುತ್ತಾರೆ. ನನಗೆ ನನ್ನ ಅಪ್ಪನೇ ಬಿಗ್ ಬಾಸ್. ಹೀಗಿರುವಾಗ, ನಾನು ಹೇಗೆ ಬಿಗ್ ಬಾಸ್ ಆಗುವುದಕ್ಕೆ ಸಾಧ್ಯ. ಸ್ಪರ್ಧಿಗಳ ಆಯ್ಕೆಗೂ ನನಗೂ ಯಾವುದೇ ಸಂಬಂಧ ಇಲ್ಲ.'' - ಸುದೀಪ್

English summary
Kannada Actor Sudeep has expressed his views and opinions on Bigg Boss Kannada reality show. Read the article to know what Sudeep spoke.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada