For Quick Alerts
  ALLOW NOTIFICATIONS  
  For Daily Alerts

  ತಂದೆಯಾದ ಖುಷಿಯಲ್ಲಿ 'ಬಿಗ್ ಬಾಸ್' ರಿಯಾಝ್ ಬಾಷಾ

  |

  Recommended Video

  Bigg Boss Kannada Season 5: ಖುಷಿಯಲ್ಲಿ 'ಬಿಗ್ ಬಾಸ್' ರಿಯಾಝ್ ಬಾಷಾ

  'ಬಿಗ್ ಬಾಸ್ ಕನ್ನಡ ಸೀಸನ್ 5'ರ ಸ್ಪರ್ಧಿಯಾಗಿದ್ದ ರಿಯಾಝ್ ಬಾಷಾ ಕುಟುಂಬದಲ್ಲಿ ಈಗ ದೊಡ್ಡ ಸಂಭ್ರಮ ಎದುರಾಗಿದೆ. ರಿಯಾಝ್ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ.

  ರಿಯಾಝ್ ಬಾಷಾ ಹಾಗೂ ಆಯೆಷಾ ದಂಪತಿ ತಂದೆ ತಾಯಿಯಾದ ಸಂತಸದಲ್ಲಿ ಇದ್ದಾರೆ. ನಿನ್ನೆ ರಿಯಾಝ್ ಪತ್ನಿ ಆಯೆಷಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಗು ಇಬ್ಬರು ಆರೋಗ್ಯವಾಗಿ ಇದ್ದಾರೆ.

  ಮಗ ಬಂದ ಖುಷಿಯನ್ನು ರಿಯಾಝ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ''ಸಿಹಿ ಸುದ್ದಿ ತಂದೆ.. ನಾನು ತಂದೆ ಮತ್ತು ಆಯೆಷಾ ತಾಯಿಯಾದೆವು.. ನಿಮ್ಮ ಆಶೀರ್ವಾದ ಸದಾ ನಮ್ಮೊಂದಿಗಿರಲಿ..'' ಎಂಬ ಸಾಲುಗಳ ಮೂಲಕ ತಮ್ಮ ಮನದ ಭಾವವನ್ನು ತಿಳಿಸಿದ್ದಾರೆ. ಮದ್ದು ಕಂದನ ಜೊತೆಗೆ ಮೊದಲ ಫೋಟೋವನ್ನು ಹಾಕಿದ್ದಾರೆ.

  ರಿಯಾಝ್ ರೇಡಿಯೋ ಜಾಕಿ ಹಾಗೂ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ಬಾಲಿವುಡ್ ತಾರೆಯರ ಎಷ್ಟೋ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ತಮ್ಮ ನಿರೂಪಣೆಯ ಮೂಲಕ ಗಮನ ಸೆಳೆದಿದ್ದರು. ಇಂತಹ ಕನ್ನಡದ ಪ್ರತಿಭೆ 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಕರ್ನಾಟಕದ ಜನರಿಗೆ ಪರಿಚಿತರಾದರು.

  English summary
  Bigg Boss Kannada season 5 contestant Riyaz Basha wife Ayesha blessed with a baby boy. Riyaz shared a first photo with his son in facebook account.
  Friday, March 15, 2019, 10:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X