For Quick Alerts
  ALLOW NOTIFICATIONS  
  For Daily Alerts

  Exclusive: ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಆರಂಭದ ದಿನಾಂಕ ಬಹಿರಂಗ?

  |

  ಕೊನೆಗೂ ಕನ್ನಡ ಬಿಗ್ ಬಾಸ್ ಹೊಸ ಆವೃತ್ತಿ ಅರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಅಧಿಕೃತವಾಗಿ ದಿನಾಂಕ ಪ್ರಕಟವಾಗಿಲ್ಲ. ಅದರೆ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯ ಆರಂಭದ ದಿನಾಂಕದ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಫಿಲ್ಮಿಬೀಟ್‌ಗೆ ಲಭ್ಯವಾಗಿದೆ.

  ಇದೇ ತಿಂಗಳು ನಿಮ್ಮ ಮನೆಗೆ ಬರಲಿದ್ದಾರೆ ಕಿಚ್ಚ ಸುದೀಪ್ | Bigg boss kannada season 8

  ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿಯ ಸಿದ್ದತೆ ಕಾರ್ಯಗಳು ಬಹುತೇಕ ಅಂತ್ಯಕ್ಕೆ ಬಂದಿದ್ದು, ಸ್ಪರ್ಧಿಗಳ ಪಟ್ಟಿಯೂ ಅಂತಿಮವಾಗಿದೆ. ಹೊಸ ಸೀಸನ್‌ಗೆ ಆಯ್ಕೆಯಾದ ಸ್ಪರ್ಧಿಗಳನ್ನು ಕೆಲವು ದಿನ ಕ್ವಾರಂಟೈನ್ ಮಾಡಲಾಗುವುದು, ಬಳಿಕ ಬಿಗ್ ಬಾಸ್‌ ಮನೆಗೆ ಕಳುಹಿಸಿಕೊಡಲಾಗುತ್ತದೆ ಎಂಬ ಮಾಹಿತಿ ಸಿಕ್ಕಿದೆ. ಅಷ್ಟಕ್ಕೂ, ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿ ಯಾವಾಗ? ಮುಂದೆ ಓದಿ...

  ಫೆಬ್ರವರಿ 28ಕ್ಕೆ ಬಿಗ್ ಬಾಸ್ ಆರಂಭ?

  ಫೆಬ್ರವರಿ 28ಕ್ಕೆ ಬಿಗ್ ಬಾಸ್ ಆರಂಭ?

  ಫಿಲ್ಮಿಬೀಟ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಫೆಬ್ರವರಿ 28 ರಂದು ಆರಂಭವಾಗಲಿದೆ. ಬಿಗ್‌ಬಾಸ್‌ ಹೊಸ ಆವೃತ್ತಿಗೆ ಸಂಬಂಧಿಸಿದಂತೆ ಎಲ್ಲ ತಯಾರಿ ನಡೆದಿದ್ದು, ಈ ತಿಂಗಳ ಕೊನೆಯ ಭಾನುವಾರದಿಂದ ದೊಡ್ಮನೆ ಆಟ ಆರಂಭವಾಗಲಿದೆಯಂತೆ.

  ಬಿಗ್ ಬಾಸ್‌ ಶೋಗೆ ಹೋಗಿ ಬಂದ ಈ ಸ್ಪರ್ಧಿಗಳನ್ನು ಮರೆತುಬಿಟ್ಟಿರಾ?

  ಸ್ಪರ್ಧಿಗಳಿಗೆ ಕ್ವಾರಂಟೈನ್ ಕಡ್ಡಾಯ?

  ಸ್ಪರ್ಧಿಗಳಿಗೆ ಕ್ವಾರಂಟೈನ್ ಕಡ್ಡಾಯ?

  ಪ್ರಸ್ತುತ ಕೊರೊನಾ ವೈರಸ್ ಭೀತಿ ಇರುವ ಕಾರಣ, ಬಿಗ್‌ಬಾಸ್‌ ಮನೆಗೆ ಸ್ಪರ್ಧಿಗಳನ್ನು ಕಳುಹಿಸುವ ಮುನ್ನ ಕ್ವಾರಂಟೈನ್ ಮಾಡಲಾಗುತ್ತದೆ. ಬಿಗ್‌ಬಾಸ್‌ಗೆ ಹೋಗುವ ಎಲ್ಲ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತಿದ್ದು, ನಂತರ ಕೊವಿಡ್ ಪರೀಕ್ಷೆ ಮಾಡಿ ಬಿಗ್ ಮನೆಗೆ ಎಂಟ್ರಿ ನೀಡಲಾಗುತ್ತದೆ.

  ದುಬೈನಿಂದ ಮರಳಿದ ಸುದೀಪ್

  ದುಬೈನಿಂದ ಮರಳಿದ ಸುದೀಪ್

  ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ದುಬೈಗೆ ತೆರಳಿದ್ದ ಸುದೀಪ್ ಬೆಂಗಳೂರಿಗೆ ಮರಳಿದ್ದಾರೆ. ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಕ್ರಾಂತ್ ರೋಣ ಟೀಸರ್ ಹಾಗೂ ಸುದೀಪ್ ಅವರ 25 ವರ್ಷದ ಜರ್ನಿ ವಿಡಿಯೋ ಪ್ರದರ್ಶನ ಮಾಡಲಾಗಿತ್ತು. ಈ ಸಂಭ್ರಮ ಮುಗಿಸಿ ಬಂದ ಸುದೀಪ್ ಈಗ ಬಿಗ್ ಬಾಸ್ ಕಡೆ ಗಮನ ಕೊಡಲಿದ್ದಾರೆ. ಈಗಾಗಲೇ ಪ್ರೋಮೋ ಶೂಟ್ ಮಾಡಿದ್ದು, ಟಿವಿಯಲ್ಲಿ ಪ್ರಸಾರ ಸಹ ಆಗ್ತಿದೆ.

  ಅವಕಾಶ ಸಿಕ್ಕಿಲ್ಲ, ಅದೃಷ್ಟನೂ ಇಲ್ಲ: 'ಕಾಮನ್‌ಮ್ಯಾನ್‌'ಗೆ ಬಿಗ್‌ಬಾಸ್‌ನಿಂದ ಸಿಕ್ಕಿದ್ದೇನು?

  ಈ ಸಲ ಯಾರೆಲ್ಲ ಹೋಗ್ತಾರೆ?

  ಈ ಸಲ ಯಾರೆಲ್ಲ ಹೋಗ್ತಾರೆ?

  ಪ್ರತಿವರ್ಷದಂತೆ ಈ ವರ್ಷವೂ ಬಿಗ್ ಬಾಸ್ ಆರಂಭಕ್ಕೂ ಮುನ್ನವೇ ಅನೇಕರ ಹೆಸರು ಚರ್ಚೆಯಲ್ಲಿದೆ. ಯಶ್ ಅವರ ತಾಯಿ ಪುಷ್ಪ, ಹಿರಿಯ ನಟಿ ವಿನಯಪ್ರಸಾದ್, ಬ್ರಹ್ಮಗಂಟು ಗೀತಾ ಅವರು ಹೆಸರು ಹೆಚ್ಚು ಕುತೂಹಲ ಮೂಡಿಸಿದವು. ಆದರೆ, ಇವರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ.

  'ಬಿಗ್ ಬಾಸ್' ಕನ್ನಡ ರನ್ನರ್ ಅಪ್ ಗಳು ನೆನಪಿದ್ದಾರಾ? ಈಗೇನು ಮಾಡ್ತಿದ್ದಾರೆ? ಇಲ್ಲಿದೆ ಮಾಹಿತಿ

  English summary
  Bigg boss kannada season starting date: Bigg Boss Kannada Season 8 all set to start from February 28. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X