For Quick Alerts
  ALLOW NOTIFICATIONS  
  For Daily Alerts

  Anupama Gowda: ಬಿಗ್ ಬಾಸ್ 18ನೇ ಸ್ಪರ್ಧಿಯಾಗಿ ಅನುಪಮಾ ಗೌಡ ಮರುಪ್ರವೇಶ

  |

  ಈ ಬಾರಿಯ ಬಿಗ್ ಬಾಸ್‌ಗೆ ಹದಿನೆಂಟನೇ ಸ್ಪರ್ಧಿಯಾಗಿ ಅನುಪಮಾ ಗೌಡ ಎಂಟ್ರಿ ಕೊಟ್ಟಿದ್ದಾರೆ. ಅನುಪಮಾ ಗೌಡ 1991ರ ಮಾರ್ಚ್ ತಿಂಗಳ 31ರಂದು ಜನಿಸಿದ್ದು ಸದ್ಯ 31 ವರ್ಷ ವಯಸ್ಸಿನವರಾಗಿದ್ದಾರೆ. ಕನ್ನಡದ ಕೆಲ ಧಾರಾವಾಹಿ ಹಾಗೂ ಚಿತ್ರಗಳಲ್ಲಿ ಅಭಿನಯಿಸಿರುವ ಅನುಪಮಾ ಗೌಡ ಕೆಲ ಕಾರ್ಯಕ್ರಮಗಳ ನಿರೂಪಕಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ.

  2003ರಲ್ಲಿ ಬಿಡುಗಡೆಯಾಗಿದ್ದ ದರ್ಶನ್ ಅಭಿನಯದ ಲಂಕೇಶ್ ಪತ್ರಿಕೆ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸುವುದರ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶಿಸಿದ ಅನುಪಮಾ ಗೌಡ 2015ರಲ್ಲಿ ನಗರಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ತಮ್ಮ ಎರಡನೇ ಇನಿಂಗ್ಸ್ ಆರಂಭಿಸಿದರು. 2018ರಲ್ಲಿ ಆ ಕರಾಳ ರಾತ್ರಿ ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಪ್ರಶಂಸೆ ಗಿಟ್ಟಿಸಿಕೊಂಡರು ಹಾಗೂ 2019ರಲ್ಲಿ ತ್ರಯಂಬಕಂ ಎಂಬ ಚಿತ್ರದಲ್ಲಿ ಅಭಿನಯಿಸಿದರು ಮತ್ತು 2020ರಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ಅಭಿನಯಿಸಿದ್ದ ಅನುಪಮಾ ಗೌಡ ನಂತರ ಯಾವುದೇ ಚಿತ್ರದಲ್ಲಿಯೂ ಅಭಿನಯಿಸಿಲ್ಲ.

  ಇನ್ನು 2015ರಲ್ಲಿ ಪರಿಪೂರ್ಣ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಅನುಪಮಾ ಗೌಡಗೆ ದೊಡ್ಡ ಬ್ರೇಕ್ ನೀಡಿದ್ದು 2014ರಲ್ಲಿ ಆರಂಭವಾದ ಅಕ್ಕ ಧಾರಾವಾಹಿ. 2014ರಿಂದ 2017ರವರೆಗೆ ನಡೆದ ಈ ಧಾರಾವಾಹಿ ಅನುಪಮಾ ಗೌಡಗೆ ನೇಮ್ ಹಾಗೂ ಫ್ರೇಮ್ ಎರಡನ್ನೂ ತಂದುಕೊಟ್ಟಿತ್ತು. ಇದಕ್ಕೂ ಮುನ್ನ ಹಾಗೂ ಚಿ ಸೌ ಸಾವಿತ್ರಿ ಧಾರಾವಾಹಿಯಲ್ಲಿಯೂ ಸಹ ಅನುಪಮಾ ಗೌಡ ಅಭಿನಯಿಸಿದ್ದರು.

  ನಂತರ 2017ರಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನುಪಮಾ ಗೌಡ ಬಳಿಕ ಮಜಾಭಾರತ, ರಾಜ ರಾಣಿ ಹಾಗೂ ನಮ್ಮಮ್ಮ ಸೂಪರ್*ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

  ಕಳೆದ ಬಾರಿ 98 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಅನುಪಮಾ ಗೌಡ ಈ ಬಾರಿ ಸೆಂಚುರಿ ಬಾರಿಸುವ ಉದ್ದೇಶದೊಂದಿಗೆ ಮನೆ ಪ್ರವೇಶಿಸಿದ್ದಾರೆ.

  English summary
  Bigg Boss Kannada Season 9 Contestant No 18: Anupama Gowda age, biography, photos, personal details
  Saturday, September 24, 2022, 23:27
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X