For Quick Alerts
  ALLOW NOTIFICATIONS  
  For Daily Alerts

  Bigg Boss Kannada Season 9 Launch Live: ಮನೆ ಸೇರಿದ 18 ಮಂದಿ! ಯಾರ್ಯಾರಿದ್ದಾರೆ ಒಳಗೆ?

  |

  ಬಿಗ್‌ಬಾಸ್ ಕನ್ನಡ ಒಟಿಟಿ ಮುಗಿದು ವಾರವಷ್ಟೆ ಆಗಿದೆ ಅಷ್ಟರಲ್ಲೇ ಬಿಗ್‌ಬಾಸ್‌ ಟಿವಿ ಆರಂಭವಾಗುತ್ತಿದೆ. ಇಂದು (ಸೆಪ್ಟೆಂಬರ್ 24) ಸಂಜೆ 6 ಗಂಟೆಗೆ ಬಿಗ್‌ಬಾಸ್ ಕನ್ನಡ ಸೀಸನ್ 9 ಅದ್ಧೂರಿಯಾಗಿ ಪ್ರಾರಂಭವಾಗಲಿದೆ.

  ಈ ಬಾರಿಯ ಬಿಗ್‌ಬಾಸ್ ಸೀಸನ್ ಕಳೆದ ಕೆಲವು ಸೀಸನ್‌ಗಳಿಗಿಂತಲೂ ಭಿನ್ನವಾಗಿರಲಿದೆ. ಹಳೆಯ ಬಿಗ್‌ಬಾಸ್ ಸ್ಪರ್ಧಿಗಳ ಜೊತೆಗೆ ಕೆಲವು ಹೊಸ ಸ್ಪರ್ಧಿಗಳು ಹಾಗೂ ಒಟಿಟಿ ಸೀಸನ್‌ನಲ್ಲಿ ಗೆದ್ದ ಕೆಲವು ಸ್ಪರ್ಧಿಗಳು ಸಹ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಪಡೆಯಲಿದ್ದಾರೆ.

  ಎಂದಿನಂತೆ ಸುದೀಪ್ ಈ ಬಾರಿಯ ಬಿಗ್‌ಬಾಸ್ ಸೀಸನ್ 9 ಅನ್ನು ನಿರೂಪಣೆ ಮಾಡಲಿದ್ದು, ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಯಾರು ಹೋಗುತ್ತಾರೆ? ಯಾರು ಹೇಗೆ ಆಡುತ್ತಾರೆ? ಹಳಬರು ಗೆಲ್ಲುತ್ತಾರೊ? ಹೊಸಬರು ಗೆಲ್ಲುತ್ತಾರೊ ಅಥವಾ ಒಟಿಟಿ ಬಿಗ್‌ಬಾಸ್ ಆಡಿದ ಅನುಭವಿ ಆಟಗಾರರು ಗೆಲ್ಲುತ್ತಾರೊ ಕುತೂಹಲ ಮೂಡಿದೆ.

  • Sep 24, 2022 11:36 PM

   ಹತ್ತೊಂಬತ್ತು ಮಂದಿ ಸ್ಪರ್ಧಿಗಳು ಮನೆಯ ಒಳಗೆ ಸೇರಿದ್ದಾರೆ. ಅಲ್ಲಿಗೆ ಬಿಗ್‌ಬಾಸ್ ಮನೆ ತುಂಬಿದೆ. ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್ ಮುಗಿದಿದ್ದು, ಮುಂದಿನ ಒಂದು ವಾರ ಬಿಗ್‌ಬಾಸ್ ಮನೆಯ ಸ್ಪರ್ಧಿಗಳು ಪರಸ್ಪರ ಆಟ ಆಡಲಿದ್ದಾರೆ. ಮುಂದಿನ ವಾರಾಂತ್ಯಕ್ಕೆ ಸುದೀಪ್ ಮತ್ತೆ ಬರಲಿದ್ದಾರೆ.

  • Sep 24, 2022 11:19 PM

   ಬಿಗ್‌ಬಾಸ್‌ ಸೀಸನ್‌ 9 ರ 18ನೇ ಸ್ಪರ್ಧಿಯಾಗಿ ನಟಿ ಅನುಪಮಾ ಆನಂದ್‌ಕುಮಾರ್ ಬಂದಿದ್ದಾರೆ. ಐದನೇ ಸೀಸನ್‌ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದರು. ಅನುಪಮಾ ಧಾರಾವಾಹಿಯಲ್ಲಿ ನಟಿಸಿದ್ದಾರೆ, ಸಿನಿಮಾದಲ್ಲಿ ನಟಿಸಿದ್ದಾರೆ, ನಿರೂಪಣೆ ಸಹ ಮಾಡಿದ್ದಾರೆ.

  • Sep 24, 2022 11:01 PM

   ಮಂಗಳಗೌರಿ ಧಾರಾವಾಹಿಯಲ್ಲಿ ನಟಿಸಿರುವ ನಟಿ ಕಾವ್ಯಾಶ್ರೀ ಬಿಗ್‌ಬಾಸ್ ಬಾಸ್ ಮನೆಗೆ ಹದಿನೇಳನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ. ಜರ್ನಲಿಸ್ಟ್‌ ಕಲಿತಿರುವ ಕಾವ್ಯಾ ಕೆಲವು ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಆಡಿಷನ್‌ಗಳನ್ನು ಎದುರಿಸಿ ಧಾರಾವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಯಾವಾಗಲೂ ಅಳುತ್ತಿರುತ್ತೀನಿ, ಆದರೆ ನನ್ನ ನಿಜ ವ್ಯಕ್ತಿತ್ವ ಅದಲ್ಲ. ನನ್ನ ಅದೇ ವ್ಯಕ್ತಿತ್ವ ಬಿಗ್‌ಬಾಸ್‌ನಲ್ಲಿ ಹೊರಗೆ ಬರಲಿದೆ.

  • Sep 24, 2022 10:42 PM

   ಮಹಿಳಾ ಬೈಕರ್ ಐಶ್ವರ್ಯಾ ಪಿಸೆ ಬಿಗ್‌ಬಾಸ್‌ ಸೀಸನ್‌ 9 ರ ಕೊನೆಯ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಐಶ್ವರ್ಯಾ ಪಿಸೆ ಬೈಕರ್ ಆಗಿದ್ದು, ಹಲವು ರಾಷ್ಟ್ರೀಯ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಮೂಲದವರೇ ಆದ ಐಶ್ವರ್ಯಾ ಬೈಕಿಂಗ್ ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ. ಆಫ್ ರೋಡ್‌ನಲ್ಲಿ ನ್ಯಾಷನಲ್ ಕಪ್‌ ಗೆದ್ದಿದ್ದಾರೆ ಸಹ. ಐಶ್ವರ್ಯಾ ಅವರ ಸಾಧನೆ ಕೇಳಿ ಸುದೀಪ್ ಸಹ ಸಂತಸ ಪಟ್ಟರು, ನಿಮ್ಮ ಜೊತೆ ನಿಂತಿರುವುದು ಹೆಮ್ಮೆ ಎಂದರು.

  • Sep 24, 2022 10:31 PM

   ಬಿಗ್‌ಬಾಸ್‌ ಸೀಸನ್‌ 09ನ ಹದಿನಾಲ್ಕು ಮತ್ತು ಹದಿನೈದನೇ ಸ್ಪರ್ಧಿಯಾಗಿ ಆರ್ಯವರ್ಧನ್, ರಾಕೇಶ್ ಅಡಿಗ ಒಟ್ಟಿಗೆ ಮನೆ ಪ್ರವೇಶಿಸಿದರು. ಇಂಟೆನ್ಸಿಟಿ, ಎಕ್ಸ್‌ಪ್ರೆಸಿವ್ ಆಗಿರಬೇಕು ಎನಿಸುತ್ತಿದೆ. ಓಪನ್ ಆಗಿರಬೇಕು ಎಂದು ರಾಕೇಶ್ ಅಡಿಗ, ಸುದೀಪ್ ಅವರ ಬಳಿ ಹೇಳಿದರು. ಹದಿನಾಲ್ಕನೇ ಸ್ಪರ್ಧಿಯಾಗಿ ರಾಕೇಶ್, ಹದಿನೈದನೇ ಸ್ಪರ್ಧಿಯಾಗಿ ಆರ್ಯವರ್ಧನ್ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು.

  • Sep 24, 2022 10:00 PM

   ಬಿಗ್‌ಬಾಸ್ ಸೀಸನ್ 9 ರ ಹದಿಮೂರನೇ ಸ್ಪರ್ಧಿಯಾಗಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಈ ಹಿಂದೆ ರಿಯಾಲಿಟಿ ಶೋನಲ್ಲಿಯೂ ರೂಪೇಶ್ ಭಾಗವಹಿಸಿದ್ದರು. ಚಾನೆಲ್ ಒಂದರ ನಿರೂಪಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ರೂಪೇಶ್ ರಾಜಣ್ಣ ನಟಿಸಿದ್ದರು.

  • Sep 24, 2022 9:33 PM

   ಬಿಗ್‌ಬಾಸ್ ಸೀಸನ್ 9 ರ ಹನ್ನೆರಡನೇ ಸ್ಪರ್ಧಿಯಾಗಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ನೇಹಾ ಗೌಡ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 'ಸಿಪಾಯಿ' ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿ ಬಿಗ್‌ಬಾಸ್ ವೇದಿಕೆ ಏರಿದರು ಸ್ನೇಹಾ ಗೌಡ. ಈ ಹಿಂದೆ ಹಲವು ಬಾರಿ ಇವರ ಹೆಸರು ಬಿಗ್‌ಬಾಸ್ ಸಂಭಾವ್ಯ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಆದರೆ ಮೊದಲ ಬಾರಿಗೆ ಇವರು ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಾರೆ.

  • Sep 24, 2022 9:21 PM

   ಕಾಮಿಡಿ ರಿಯಾಲಿಟಿ ಶೋನ 'ಮಜಾಭರತ'ದ ವಿನೋದ್ ಗೊಬ್ಬರ ಬಿಗ್‌ಬಾಸ್ ಮನೆಯ ಹನ್ನೊಂದನೆ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದಾರೆ. ಹೋಗುವ ಮುನ್ನವೇ ಕಿಚ್ಚ ಸುದೀಪ್ ಒಂದೊಳ್ಳೆ ಟಾಸ್ಕ್‌ ನೀಡಿದ್ದಾರೆ.

  • Sep 24, 2022 9:02 PM

   ಬಿಗ್‌ಬಾಸ್‌ ಮನೆಯ ಒಂಬತ್ತು ಹಾಗೂ ಹತ್ತನೆ ಸ್ಪರ್ಧಿಗಳಾಗಿ ನಟ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಅವರುಗಳು ಮನೆ ಪ್ರವೇಶ ಮಾಡಿದರು. ವೇದಿಕೆ ಮೇಲೆ ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಕಾಲೆಳೆದರು ಸುದೀಪ್.

  • Sep 24, 2022 8:40 PM

   ಬಿಗ್‌ಬಾಸ್ 9 ರ ಎಂಟನೇ ಸ್ಪರ್ಧಿಯಾಗಿ ಕಮಲಿ ಧಾರಾವಾಹಿಯ ನಟಿ ಅಮೂಲ್ಯ ಮನೆ ಪ್ರವೇಶಿಸಿದ್ದಾರೆ. ಜನಪ್ರಿಯತೆ ಗಳಿಸಬೇಕೆಂಬ ಆಸೆಯಿತ್ತು ಹಾಗಾಗಿ ಬಿಗ್‌ಬಾಸ್‌ಗೆ ಬಂದೆ ಎಂದಿದ್ದಾರೆ ಅಮೂಲ್ಯ ಗೌಡ. ಮಾಡ್ರನ್ ಪಾತ್ರಕ್ಕೆ ಸೂಟ್ ಆಗ್ತಾರೆ ಎಂಬ ಅಭಿಪ್ರಾಯ ನನ್ನ ಬಗ್ಗೆ ಇದೆ. ಆದರೆ ನಾನು 'ಓಲ್ಡ್ ಸ್ಕೂಲ್' ಇಷ್ಟಪಡುವವಳು. ಬಿಗ್‌ಬಾಸ್ ಮನೆಯಲ್ಲಿ ನನ್ನ ಕೋಪ ನನಗೆ ಹಿನ್ನೆಡೆ ಉಂಟು ಮಾಡಬಹುದು ಎಂದಿದ್ದಾರೆ ಈ ನಟಿ.

  • Sep 24, 2022 8:13 PM

   ಈ ಹಿಂದೆ ಬಿಗ್‌ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರ್ಗಿ ಏಳನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಸೀಸನ್ 9ರ ಮನೆ ಪ್ರವೇಶ ಮಾಡಿದ್ದಾರೆ. ಕಳೆದ ಬಾರಿ ಗೆದ್ದಿರಲಿಲ್ಲ. ಈ ಬಾರಿ ಗೆಲ್ಲಲೇ ಬೇಕು ಎಂದುಕೊಂಡು ಹೋಗುತ್ತಿದ್ದೀನಿ. ಈ ಬಾರಿ ಕೋಪ ಮಾಡಿಕೊಳ್ಳಬಾರದು ಎಂದುಕೊಂಡಿದ್ದೇನೆ. ಕೋಪ ಮಾಡಿಕೊಳ್ಳಲ್ಲ ಎಂದು ಪ್ರಮಾಣ ಮಾಡಿದ್ದೀನಿ ಎಂದು ಸಂಬರ್ಗಿ ಬಿಗ್‌ಬಾಸ್ ವೇದಿಕೆ ಮೇಲೆ ಹೇಳಿದ್ದಾರೆ.

  • Sep 24, 2022 8:01 PM

   ಬಿಗ್‌ಬಾಸ್ ಆರನೇ ಸ್ಪರ್ಧಿಯಾಗಿ ನಟ, ನವ್ಯೂದ್ಯಮ ದರ್ಶ್ ಚಂದ್ರಪ್ಪ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಕೆಲವು ಧಾರಾವಾಹಿಗಳಲ್ಲಿ ದರ್ಶ್ ನಟಿಸಿದ್ದಾರೆ. ಸಾರಿ ಹೆಸರಿನ ಫ್ಯಾಷನ್ ಬ್ರ್ಯಾಂಡ್‌ ಕಟ್ಟಿಕೊಂಡಿದ್ದಾರೆ. ಬ್ಯುಸಿನೆಸ್ ಜೊತೆಗೆ ನಟನೆಯನ್ನೂ ದರ್ಶನ್ ಮಾಡುತ್ತಿದ್ದಾರೆ.

  • Sep 24, 2022 7:42 PM

   ಬಿಗ್‌ಬಾಸ್ ಮನೆಯ ಐದನೇ ಸ್ಪರ್ಧಿಯಾಗಿ ದಿವ್ಯಾ ಉರುಡಗ ಪ್ರವೇಶ ಪಡೆದಿದ್ದಾರೆ. ದಿವ್ಯಾ ಈ ಮುಂಚೆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದರು. ದಿವ್ಯಾ ಹಾಗೂ ಅರವಿಂದ್‌ರ ಲವ್‌ ಸ್ಟೋರಿ ಆಗ ಬಹಳ ಜನಪ್ರಿಯತೆ ಗಳಿಸಿತ್ತು. ಕಳೆದ ಬಾರಿ ತಪ್ಪುಗಳನ್ನು ಈ ಬಾರಿ ಮಾಡುವುದಿಲ್ಲ ಎಂಬ ಭರವಸೆಯೊಂದಿಗೆ ದಿವ್ಯಾ ಮನೆ ಪ್ರವೇಶಿಸಿದ್ದಾರೆ.

  • Sep 24, 2022 7:27 PM

   ಭಿನ್ನ ಶೈಲಿಯಲ್ಲಿ ಸಿನಿಮಾ ವಿಮರ್ಶೆ ಮಾಡುವ 'ಸೈಕ್ ನವಾಜ್' ಬಿಗ್‌ಬಾಸ್‌ನ ನಾಲ್ಕನೇ ಸ್ಪರ್ಧಿಯಾಗಿ ಒಳಗೆ ಬಂದಿದ್ದಾರೆ. ಸಖತ್ ತಮಾಷೆ ಮೂಡ್‌ನಲ್ಲಿ ವೇದಿಕೆ ಮೇಲೆ ಮಾತನಾಡಿದ ನವಾಜ್. ಗೆದ್ದೇ ಗೆಲ್ಲುತ್ತೇನೆ ಎನ್ನುವ ನಂಬಿಕೆಯೊಂದಿಗೆ ಮನೆಯ ಒಳಗೆ ಹೋಗಿದ್ದಾರೆ. https://kannada.filmibeat.com/features/bigg-boss-kannada-season-9-contestant-no-4-nawaz-age-biography-photos-personal-details-061590.html

  • Sep 24, 2022 7:06 PM

   ಬಿಗ್‌ಬಾಸ್ ಸೀಸನ್ 9 ರ ಮೂರನೇ ಸ್ಪರ್ಧಿಯಾಗಿ ನಟಿ ದೀಪಿಕಾ ದಾಸ್ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ದೀಪಿಕಾ ದಾಸ್ 105 ದಿನಗಳು ಬಿಗ್‌ಬಾಸ್ ಮನೆಯಲ್ಲಿದ್ದರು. ಬಿಗ್‌ಬಾಸ್ 7 ನಲ್ಲಿ ದೀಪಿಕಾ ಭಾಗವಹಿಸಿದ್ದರು. ಇದೀಗ ಮತ್ತೆ ಬಿಗ್‌ಬಾಸ್‌ಗೆ ಬಂದಿದ್ದಾರೆ ದೀಪಿಕಾ ದಾಸ್. ನಾಗಿಣಿ ಧಾರಾವಾಹಿಯಿಂದ ಜನಪ್ರಿಯರಾಗಿರುವ ದೀಪಿಕಾ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  • Sep 24, 2022 6:18 PM

   ನಾನು ಗೆಲ್ಲಲೇ ಬೇಕು ಎಂದುಕೊಂಡು ಬಿಗ್‌ಬಾಸ್‌ ಒಳಗೆ ಹೋಗುತ್ತಿದ್ದೇನೆ. ನನ್ನ ಕುಟುಂಬದವರನ್ನು ಬಿಟ್ಟು ಇರಲು ಕಷ್ಟ ಆದರೆ ಕುಟುಂಬದವರೇ ನನಗೆ ಬೆಂಬಲ ನೀಡಿ ಕಳಿಸುತ್ತಿದ್ದಾರೆ ಎಂದರು. ಅರುಣ್ ಮಗಳು, ಆಚಾರವಿಲ್ಲದ ನಾಲಗೆ ಹಾಡು ಹಾಡಿ ಅಪ್ಪನನ್ನು ಒಳಗೆ ಕಳಿಸಿಕೊಟ್ಟರು.

  • Sep 24, 2022 6:16 PM

   ನಾನು ಗೆಲ್ಲಲೇ ಬೇಕು ಎಂದುಕೊಂಡು ಬಿಗ್‌ಬಾಸ್‌ ಒಳಗೆ ಹೋಗುತ್ತಿದ್ದೇನೆ. ನನ್ನ ಕುಟುಂಬದವರನ್ನು ಬಿಟ್ಟು ಇರಲು ಕಷ್ಟ ಆದರೆ ಕುಟುಂಬದವರೇ ನನಗೆ ಬೆಂಬಲ ನೀಡಿ ಕಳಿಸುತ್ತಿದ್ದಾರೆ ಎಂದರು.

  • Sep 24, 2022 6:08 PM

   ಬಿಗ್‌ಬಾಸ್ ಸೀಸನ್ 9 ಆರಂಭವಾಗಿದೆ. ಮೊದಲ ಸ್ಪರ್ಧಿಯಾಗಿ ನಟ ಅರುಣ್ ಸಾಗರ್ ಬಂದಿದ್ದಾರೆ. ಸುದೀಪ್‌ರ ಆತ್ಮೀಯ ಗೆಳೆಯರೂ ಆಗಿರುವ ಅರುಣ್ ಸಾಗರ್. ಇವರು ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದರು. ಒಂದು ವಿಚಿತ್ರ ಹಾಡು ಹಾಡಿ ರಂಜಿಸಿದರು ಅರುಣ್ ಸಾಗರ್.

  • Sep 24, 2022 4:19 PM

   ಬಿಗ್‌ಬಾಸ್‌ನಲ್ಲಿ ನಟ ಅರುಣ್ ಸಾಗರ್ ಭಾಗವಹಿಸುವುದು ಖಾತ್ರಿಯಾಗಿದೆ. ಬಿಗ್‌ಬಾಸ್ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದ ಅರುಣ್ ಸಾಗರ್ ಈಗ ಒಂಬತ್ತನೇ ಸೀಸನ್‌ಗೆ ಮತ್ತೆ ಮನೆ ಒಳಗೆ ಪ್ರವೇಶ ಮಾಡಿದ್ದಾರೆ. ಅರುಣ್ ಸಾಗರ್ ಮನೆಯೊಳಗೆ ಪ್ರವೇಶಿಸುತ್ತಿರುವ ಪ್ರೋಮೊವನ್ನು ಕಲರ್ಸ್ ಚಾನೆಲ್ ಇದಾಗಲೇ ಬಿಡುಗಡೆ ಮಾಡಿದೆ.

  • Sep 24, 2022 12:21 PM

   ಬಿಗ್‌ಬಾಸ್ ಸೀಸನ್ 09 ರ ಸಂಭಾವ್ಯ ಸ್ಪರ್ಧಿಗಳ ಹೆಸರು ಇಲ್ಲಿದೆ; ವೈಷ್ಣವಿ ಗೌಡ, ದೀಪಿಕಾ ದಾಸ್ , ಅನುಪಮ ಗೌಡ , ಪ್ರಶಾಂತ್ ಸಂಬರ್ಗಿ , ಅರುಣ್ ಸಾಗರ್ , ಮಯೂರಿ, ದಿವ್ಯ ಉರುಡುಗ, ವಿನೋದ್ ಗೊಬ್ರ, ಮಂಗಳ ಗೌರಿ ಕಾವ್ಯ ಶ್ರೀ , ನವಾಜ್ , ನೇಹಾ ಗೌಡ , ರೂಪೇಶ್ ರಾಜಣ್ಣ , ಬೈಕರ್ ಐಶ್ವರ್ಯಾ ರಾಯ್ , ಅಕ್ಷಯ್ ಬೈರಮುಡಿ , ರೂಪೇಶ್ ಶೆಟ್ಟಿ , ರಾಕೇಶ್ ಅಡಿಗ, ಆರ್ಯವರ್ಧನ್ , ಸಾನ್ಯಾ ಅಯ್ಯರ್,

  • Sep 24, 2022 12:21 PM

   ಈ ಬಾರಿ ಬಿಗ್‌ಬಾಸ್‌ಗೆ ಹೋಗಲಿರುವ ಏಳು ಜನರ ಹೆಸರು ಈಗಾಗಲೇ ಪಕ್ಕಾ ಆಗಿದೆ. ಒಟಿಟಿಯಿಂದ ಆಯ್ಕೆ ಆಗಿರುವ ರೂಪೇಶ್ ಶೆಟ್ಟಿ, ಸಾನ್ಯಾ ಐಯ್ಯರ್, ರಾಕೇಶ್ ಅಡಿಗ, ಆರ್ಯವರ್ಧನ್ ಅವರುಗಳು ಬಿಗ್‌ಬಾಸ್ ಮನೆ ಒಳಗೆ ಹೋಗುವುದು ಖಾತ್ರಿಯಾಗಿದೆ. ಜೊತೆಗೆ ಹಳೆಯ ಸ್ಪರ್ಧಿಗಳಾದ ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್, ಅನುಪಮಾ ಅವರುಗಳು ಸಹ ಬಿಗ್‌ಬಾಸ್ ಮನೆ ಸೇರಲಿದ್ದಾರೆ.

  • Sep 24, 2022 12:15 PM

   ಸಂಜೆ ಆರು ಗಂಟೆಗೆ ಬಿಗ್‌ಬಾಸ್ ಸೀಸನ್ 9 ರ ಲಾಂಚ್ ಕಾರ್ಯಕ್ರಮ ಟಿವಿಯಲ್ಲಿ ಪ್ರಸಾರವಾಗಲಿದ್ದು, ನಟ ಸುದೀಪ್ ಎಂದಿನಂತೆ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

  • Sep 24, 2022 12:14 PM

   ಬಿಗ್‌ಬಾಸ್ ಉದ್ಘಾಟನಾ ಕಾರ್ಯಕ್ರಮದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಕಾರ್ಯಕ್ರಮದ ಪ್ರೋಮೋ ಸಹ ಬಿಡುಗಡೆ ಆಗಿದೆ. ಪ್ರೋಮೋ ನಲ್ಲಿ ಬಿಗ್‌ಬಾಸ್ ಒಟಿಟಿ ಯಿಂದ ಆಯ್ಕೆಯಾದ ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಒಟ್ಟಿಗೆ ಮನೆ ಒಳಗೆ ಪ್ರವೇಶಿಸಿದ್ದಾರೆ. ನಂತರ ಸಾನ್ಯಾ ಐಯ್ಯರ್ ಹಾಗೂ ರೂಪೇಶ್ ಶೆಟ್ಟಿ ಸಹ ಬಿಗ್‌ಬಾಸ್ ಮನೆ ಒಳಗೆ ಪ್ರವೇಶಿಸಿದ್ದಾರೆ.

  English summary
  Bigg Boss Kannada Season 9 Grand Launch Live Updates and Highlights : Check Contestants List With Photos, Bigg Boss Kannada Season 9 Live News, Kichcha Sudeep will be hosting the show, which will stream on Colors Kannada.
  Sunday, September 25, 2022, 13:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X