For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಗೆದ್ದ ಮಣಿಕುಟ್ಟನ್: 75 ಲಕ್ಷದ ಫ್ಲ್ಯಾಟ್ ಬಹುಮಾನ

  |

  ಮಲಯಾಳಂ ಬಿಗ್ ಬಾಸ್ ಮೂರನೇ ಆವೃತ್ತಿಯ ಫಿನಾಲೆಯಲ್ಲಿ ಮಣಿಕುಟ್ಟನ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ (ಆಗಸ್ಟ್ 1) ಪ್ರಸಾರವಾದ ಫಿನಾಲೆಯಲ್ಲಿ ಮಣಿಕುಟ್ಟನ್ ಬಿಗ್ ಬಾಸ್‌ ವಿನ್ನರ್ ಎನ್ನುವುದು ಅಧಿಕೃತವಾಗಿದೆ.

  ಕಳೆದ ವಾರದಲ್ಲಿ ಮಣಿಕುಟ್ಟನ್ ಬಿಗ್ ಬಾಸ್ ಜಯಗೊಳಿಸಿರುವ ಸುದ್ದಿ ಹೊರಬಿದ್ದಿತ್ತು. ಬಿಗ್ ಬಾಸ್ ಟ್ರೋಫಿಯೊಂದಿಗೆ ಮಣಿಕುಟ್ಟನ್ ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ, ಅಧಿಕೃತವಾಗಿ ಮಣಿಕುಟ್ಟನ್ ಬಿಗ್ ಬಾಸ್ ವಿಜಯಮಾಲೆ ಧರಿಸಿರುವುದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.

  ಬಿಗ್‌ಬಾಸ್‌ನಲ್ಲಿ ಬೆತ್ತಲೆ ಯೋಗ: ದಿನಕ್ಕೆ 50 ಲಕ್ಷ ಕೇಳಿದ ಯೋಗ ಗುರು!ಬಿಗ್‌ಬಾಸ್‌ನಲ್ಲಿ ಬೆತ್ತಲೆ ಯೋಗ: ದಿನಕ್ಕೆ 50 ಲಕ್ಷ ಕೇಳಿದ ಯೋಗ ಗುರು!

  ಬಿಗ್ ಬಾಸ್ ಗೆದ್ದ ಬಳಿಕ ಮಾತನಾಡಿದ ಮಣಿಕುಟ್ಟನ್, 'ನನ್ನ ಗೆಲುವಿಗಾಗಿ ವೋಟ್ ಹಾಕಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಧನ್ಯವಾದ'' ಎಂದಿದ್ದಾರೆ. ''ಈ ಶೋನಲ್ಲಿ ನಾನು ಎಲ್ಲ ರೀತಿಯಾಗಿ ತೊಡಗಿಕೊಂಡಿದ್ದೇನೆ. ಕಳೆದ 16 ವರ್ಷಗಳಿಂದ ಸಿನಿ ಇಂಡಸ್ಟ್ರಿಯಲ್ಲಿದ್ದೇನೆ. ಸಿನಿಮಾ ಇಲ್ಲದೇ ಖಾಲಿ ಇದ್ದಾಗ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ, ವರ್ಲ್ಡ್‌ಕ್ಲಾಸ್ ಸಿನಿಮಾಗಳಿಂದ ಸಾಕಷ್ಟು ಕಲಿತಿದ್ದೇನೆ. ಇದೆಲ್ಲವೂ ಬಿಗ್ ಬಾಸ್‌ನಲ್ಲಿ ನನಗೆ ಸಹಕಾರಿಯಾಗಿದೆ'' ಎಂದು ಮಣಿಕುಟ್ಟನ್ ತಿಳಿಸಿದ್ದಾರೆ.

  16 ವರ್ಷದ ವೃತ್ತಿ ಜೀವನದಲ್ಲಿ ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸಿನಿಮಾಗಳಲ್ಲಿಯೂ ಅಭಿನಯಿಸಿದ್ದಾರೆ. ಮೋಹನ್ ಲಾಲ್ ಜೊತೆಗೆ ಐದು ಚಿತ್ರಗಳಲ್ಲಿ ನಟಿಸಿದ್ದಾರೆ. ಮಮ್ಮುಟ್ಟಿ ಜೊತೆಗೆ 'ಮಾಮಾಂಗಂ' ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಇದಷ್ಟೇ ಅಲ್ಲದೇ ಹಲವು ಚಿತ್ರಗಳಲ್ಲಿ ಸಣ್ಣ ಪಾತ್ರವೂ ಮಾಡಿದ್ದಾರೆ, ದೊಡ್ಡ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ಬಿಗ್ ಬಾಸ್ ಮಲಯಾಳಂ ಮೂರನೇ ಆವೃತ್ತಿ ಗೆದ್ದ ಮಣಿಕುಟ್ಟನ್ 75 ಲಕ್ಷದ ಫ್ಲ್ಯಾಟ್ ಹಾಗೂ ಟ್ರೋಫಿ ಬಹುಮಾನವಾಗಿ ಸಿಕ್ಕಿದೆ. ಆಗಸ್ಟ್ 1 ರಂದು ಮಲಯಾಳಂ ಬಿಗ್ ಬಾಸ್ ಫಿನಾಲೆ ಸಂಚಿಕೆ ಪ್ರಸಾರವಾಗಿದೆ.

  ಟಿವಿಗೂ ಮೊದಲೇ ಒಟಿಟಿಯಲ್ಲಿ 'ಬಿಗ್ ಬಾಸ್' ಪ್ರಸಾರಟಿವಿಗೂ ಮೊದಲೇ ಒಟಿಟಿಯಲ್ಲಿ 'ಬಿಗ್ ಬಾಸ್' ಪ್ರಸಾರ

  ಅಂದ್ಹಾಗೆ, ಬಿಗ್ ಬಾಸ್ ಮಲಯಾಳಂ ಸೀಸನ್ 3 ಫೆಬ್ರವರಿ 24 ರಂದು ಆರಂಭವಾಗಿತ್ತು. ಒಟ್ಟು 14 ಜನ ಸ್ಪರ್ಧಿಗಳು ಭಾಗವಹಿಸಿದ್ದರು. ಸುಮಾರು 97 ದಿನಗಳನ್ನು ಪೂರೈಸಿದ್ದ ಶೋ ಕೊರೊನಾ ವೈರಸ್ ಎರಡನೇ ಅಲೆಯ ಭೀತಿಯಿಂದ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಕೊರೊನಾ ಪ್ರೊಟೋಕಾಲ್ ಅನ್ವಯ ಉಳಿದ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕಳುಹಿಸಿ, ವಿನ್ನರ್ ಘೋಷಣೆ ಮಾಡುವುದಾಗಿ ಪ್ರಕಟಿಸಿದ್ದರು. ಹೇಳಿದಂತೆ ಆನ್‌ಲೈನ್ ಪೋಲ್ ಆಯೋಜನೆ ಮಾಡಿ ಬಿಗ್ ಬಾಸ್ ವಿನ್ನರ್ ನಿರ್ಧರಿಸಿದ್ದಾರೆ. ಅತಿ ಹೆಚ್ಚು ಮತಗಳನ್ನು ಪಡೆದ ಮಣಿಕುಟ್ಟನ್ ದೊಡ್ಮನೆ ಆಟದಲ್ಲಿ ಅದೃಷ್ಟವಂತನಾಗಿ ಆಯ್ಕೆಯಾಗಿದ್ದಾರೆ.

  Bigg Boss Malayalam 3 Winner Manikuttan wins Rs 75 lakhs flat

  ವರದಿಗಳ ಪ್ರಕಾರ, ಜುಲೈ 24 ರಂದು ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮ ಚಿತ್ರೀಕರಣ ಮಾಡಲಾಗಿತ್ತು. ಸಾಯಿ ವಿಷ್ಣು ಮೊದಲ ರನ್ನರ್ ಅಪ್ ಆಗಿ ಘೋಷಿಸಲಾಗಿದ್ದು, ಡಿಂಪಲ್ ಭಾಲ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಇದು ಮೂರನೇ ಆವೃತ್ತಿಯ ಬಿಗ್ ಬಾಸ್. ಮೊದಲನೇಯ ಬಿಗ್ ಬಾಸ್‌ನಲ್ಲಿ ಕಿರುತೆರೆ ಹಾಗು ಸಿನಿಮಾ ನಟ ಸಾಬುಮನ್ ಅಬ್ದುಸಮ್ಮದ್ ವಿಜೇತರಾಗಿದ್ದರು. ಎರಡನೇ ಸೀಸನ್ ನಲ್ಲಿ ಕೋವಿಡ್ -19 ಕಾರಣ ಫಲಿತಾಂಶ ಪ್ರಕಟವಾಗಿಲ್ಲ.

  ಮತ್ತೊಂದೆಡೆ ಕನ್ನಡದಲ್ಲಿ ಅರ್ಧಕ್ಕೆ ನಿಲ್ಲಿಸಿದ್ದ ಬಿಗ್ ಬಾಸ್ ಮತ್ತೆ ಮರು ಚಾಲನೆ ಕೊಟ್ಟು ಮುಂದುವರಿಸಲಾಗಿದೆ. ಕೊನೆಯವಾರ ಪ್ರಸಾರವಾಗುತ್ತಿದ್ದು, ಈ ವಾರಾಂತ್ಯಕ್ಕೆ ವಿನ್ನರ್ ಯಾರೆಂದು ಪ್ರಕಟವಾಗಲಿದೆ. ಕನ್ನಡದಲ್ಲಿ ಬಿಗ್ ಬಾಸ್ ಗೆದ್ದ ಸ್ಪರ್ಧಿಗೆ 50 ಲಕ್ಷ ಬಹುಮಾನ ನೀಡಲಾಗುವುದು.

  ತೆಲುಗಿನಲ್ಲಿ ಬಿಗ್ ಬಾಸ್ ಐದನೇ ಆವೃತ್ತಿ ಆರಂಭವಾಗುತ್ತಿದೆ. ಅದಾಗಲೇ ನಾಲ್ಕು ಸೀಸನ್ ಯಶಸ್ವಿಯಾಗಿ ಮುಗಿದ್ದು, ಐದನೇ ಆವೃತ್ತಿಗೆ ಎಲ್ಲಾ ಸಿದ್ದತೆ ನಡೆದಿದೆ. ಶೀಘ್ರದಲ್ಲಿ ಹೊಸ ಆವೃತ್ತಿ ಆರಂಭವಾಗುವ ಸಾಧ್ಯತೆ ಇದೆ. ತಮಿಳಿನಲ್ಲೂ ಬಿಗ್ ಬಾಸ್ ಸೀಸನ್ 4 ನಡೆಯಬೇಕಿದೆ. ಕಮಲ್ ಹಾಸನ್ ಸಾರಥ್ಯದಲ್ಲಿ ಶೋ ಸಿದ್ಧತೆ ನಡೆಸುತ್ತಿದೆ.

  English summary
  Bigg Boss Malayalam3 winner: Manikuttan wins the trophy and a flat worth Rs 75 lakhs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X