For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ 'ಬಿಗ್ ಬಾಸ್'ನಲ್ಲಿ ಇವರೆಲ್ಲಾ ಇರ್ತಾರ.?

  By Bharath Kumar
  |

  ಕನ್ನಡ ಬಿಗ್ ಬಾಸ್ 6ನೇ ಆವೃತ್ತಿ ಶುರುವಾಗೋಕೆ ಇನ್ನು ಸಮಯ ಇದೆ. ಈ ಮಧ್ಯೆ ತೆಲುಗಿನಲ್ಲಿ ಬಿಗ್ ಬಾಸ್ ಎರಡನೇ ಆವೃತ್ತಿ ಆರಂಭವಾಗಿದೆ. ಇದರ ಹಿಂದೆ ಚೊಚ್ಚಲ ಬಾರಿಗೆ ಮಲಯಾಳಂನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮೂಡಿ ಬರ್ತಿದೆ.

  ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸಾರಥ್ಯದಲ್ಲಿ ಬಿಗ್ ಬಾಸ್ ಮೊದಲ ಆವೃತ್ತಿ ಬರಲಿದ್ದು, ಈಗಾಗಲೇ ಪ್ರೋಮೋಗಳು ಬಿಡುಗಡೆಯಾಗಿದೆ. ಈ ನಡುವೆ ಮಾಲಿವುಡ್ ಬಿಗ್ ಮನೆಗೆ ಯಾರೆಲ್ಲಾ ಹೋಗಬಹುದು ಎಂಬ ಕುತೂಹಲ ಕಾಡುತ್ತಿದೆ.

  ನೂರು ದಿನ, 60 ಕ್ಯಾಮೆರಾಗಳು, 16 ಜನ ಸ್ಪರ್ಧಿಗಳು....ಇದು ಬಿಗ್ ಬಾಸ್. ಹಾಗಿದ್ರೆ, ಮಲಯಾಳಂ ಬಿಗ್ ಬಾಸ್ ನಲ್ಲಿ ಯಾರೆಲ್ಲಾ ಇರ್ತಾರೆ ಎಂಬುದು ಸದ್ಯದ ಪ್ರಶ್ನೆ. ಸುದ್ದಿಯಲ್ಲಿರೋ, ಸುದ್ದಿನೆ ಇಲ್ಲದವರು, ಕಾಂಟ್ರುವರ್ಸಿ ವ್ಯಕ್ತಿಗಳು, ಸ್ಟಾರ್ ಗಳ ಹೆಸರು ಹರಿದಾಡುತ್ತಿದೆ. ಯಾರ ಹೆಸರು ಚಾಲನೆಯಲ್ಲಿದೆ ಎಂಬುದನ್ನ ತಿಳಿಯಲು ಮುಂದೆ ಓದಿ...

  ಕಣ್ಸನ್ನೆ ಹುಡುಗಿ

  ಕಣ್ಸನ್ನೆ ಹುಡುಗಿ

  ಕಣ್ಸನ್ನೆ ಮೂಲಕ ಆನ್ ಲೈನ್ ಜಗತ್ತಿನಲ್ಲಿ ಹವಾ ಹುಟ್ಟುಹಾಕಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಅವರ ಹೆಸರು ಮಲಯಾಳಂ ಬಿಗ್ ಬಾಸ್ ನಲ್ಲಿ ಕೇಳಿಬರುತ್ತಿದೆ. ಚೊಚ್ಚಲ ಸಿನಿಮಾ ಬಿಡುಗಡೆಯಾಗುವುದಕ್ಕೆ ಮುಂಚೆಯೇ ದೊಡ್ಡ ಮಟ್ಟದ ಪ್ರಚಾರ ಪಡೆದುಕೊಂಡಿರುವ ನಟಿ ಬಿಗ್ ಮನೆಗೆ ಹೋಗ್ತಾರ.? ಕಾದು ನೋಡಬೇಕು.

  ಕ್ರಿಕೆಟಿಗ ಶ್ರೀಶಾಂತ್

  ಕ್ರಿಕೆಟಿಗ ಶ್ರೀಶಾಂತ್

  ಭಾರತ ಕ್ರಿಕೆಟ್ ತಂಡದ ಆಟಗಾರ ಎಸ್.ಶ್ರೀಶಾಂತ್ ಹೆಸರು ಕೂಡ ಬಿಗ್ ಬಾಸ್ ಮಲಯಾಳಂನಲ್ಲಿ ಹರಿದಾಡುತ್ತಿದೆ. ಫಿಕ್ಸಿಂಗ್ ಆರೋಪದಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಶ್ರೀಶಾಂತ್ ವಿವಾದಕ್ಕೆ ಗುರಿಯಾಗಿದ್ದರು. ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ನಟನೆ ಮಾಡುತ್ತಿದ್ದಾರೆ. ಬಟ್, ಬಿಗ್ ಬಾಸ್ ಗೆ ಹೋಗ್ತಾರಾ.? ಕುತೂಹಲ ಮೂಡಿಸಿದೆ.

  ರಂಜನಿ ಹರಿದಾಸ್

  ರಂಜನಿ ಹರಿದಾಸ್

  ಮಲಯಾಳಂ ಭಾಷೆಯ ಕಿರುತೆರೆ ನಟಿ ರಂಜನಿ ಹರಿದಾಸ್ ಅವರ ಹೆಸರು ಕೂಡ ಬಿಗ್ ಬಾಸ್ ಗೆ ಹೋಗುವವರ ಪಟ್ಟಿಯಲ್ಲಿದೆ. ಸ್ಟಾರ್ ಸಿಂಗರ್, ಹೀರೋ ಐ.ಎಸ್.ಎಲ್ ಶೋಗಳನ್ನ ನಿರೂಪಣೆ ಮಾಡಿರುವ ಖ್ಯಾತಿ ಹರಿದಾಸ್ ಅವರದ್ದು.

  ರಿಯಾಲಿಟಿ ಶೋ ಜೋಡಿ

  ರಿಯಾಲಿಟಿ ಶೋ ಜೋಡಿ

  'ಎಂಗ್ ವಿಟೈ ಮಾಪಿಳ್ಳೈ' ಕಾರ್ಯಕ್ರಮದ ಮೂಲಕ ಖ್ಯಾತಿ ಗಳಿಸಿಕೊಂಡಿರುವ ಇಬ್ಬರು ಯುವ ನಟಿಯರ ಹೆಸರು ವರದಿಯಾಗಿದೆ. ಶ್ರೀಯಾ ಮತ್ತು ಸೀತಾಲಕ್ಷ್ಮಿ ಸುರೇಂದ್ರನ್ ಇಬ್ಬರು ಮಾಡೆಲ್ ಲೋಕದಲ್ಲಿ ಹೆಸರು ಮಾಡಿದ್ದಾರೆ.

  ಅರ್ಚನಾ ಸುಶೀಲನ್

  ಅರ್ಚನಾ ಸುಶೀಲನ್

  ನಿರೂಪಕಿ ಮತ್ತು ನಟಿ ಅರ್ಚನಾ ಸುಶೀಲನ್ ಕೂಡ ಮಲಯಾಂ ಬಿಗ್ ಬಾಸ್ ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಲಯಾಳಂ ಟಿವಿ ಲೋಕದಲ್ಲಿ ಅಭಿನಯಿಸಿ ಚಿರಪರಿಚತರಾಗಿರುವ ಅರ್ಚನಾ ಬಂದ್ರೆ ಶೋ ಮತ್ತಷ್ಟು ಡೆವಿಲ್ ಆಗಲಿದೆ.

  ತೆಲುಗು 'ಬಿಗ್ ಬಾಸ್' ಶುರು: ಯಾರೆಲ್ಲಾ ಇದ್ದಾರೆ ನೋಡಿತೆಲುಗು 'ಬಿಗ್ ಬಾಸ್' ಶುರು: ಯಾರೆಲ್ಲಾ ಇದ್ದಾರೆ ನೋಡಿ

  ಇನ್ನುಳಿದಂತೆ ಯಾರು.?

  ಇನ್ನುಳಿದಂತೆ ಯಾರು.?

  ಉಳಿದಂತೆ ಮಲಯಾಳಂ ಬಿಗ್ ಬಾಸ್ ನಲ್ಲಿ ಕನಿ ಕಸ್ತೂರಿ, ದೀಪನ್ ಮುರಳಿ, ರಮೇಶ್, ಗೋವಿಂದ್ ಪದ್ಮಸೂರ್ಯ ಅವರ ಹೆಸರುಗಳು ಇವೆ. ಆದ್ರೆ, ಇವರೆಲ್ಲ ಬಿಗ್ ಮನೆಗೆ ಹೋಗ್ತಾರ ಎಂಬುದು ಅಧಿಕೃತವಾಗಿ ಹೊರಬಿದ್ದಿಲ್ಲ. ಜೂನ್ 24 ರಂದು ಬಿಗ್ ಬಾಸ್ ಆರಂಭವಾಗಲಿದ್ದು, ಆ ದಿನವೇ ಇದಕ್ಕೆ ಉತ್ತರ ಸಿಗಲಿದೆ.

  English summary
  The list of contestants who could be seen on the reality show Big Boss malayalam. but, waiting for the official confirmation.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X