For Quick Alerts
  ALLOW NOTIFICATIONS  
  For Daily Alerts

  ಕರಣ್ ಚೋಹರ್ ಹಾಟ್ ಒಟಿಟಿ 'ಬಿಗ್ ಬಾಸ್'ನಲ್ಲಿ ಶಿಲ್ಪಾ ಶೆಟ್ಟಿ ಸಹೋದರಿ?

  |

  ಹಿಂದಿ ಬಿಗ್ ಬಾಸ್ ಸೀಸನ್ 15 ಪ್ರಾರಂಭವಾಗುತ್ತಿದೆ. ಈ ಬಾರಿ ವಿಭಿನ್ನವಾಗಿ ಮೂಡಿಬರುತ್ತಿರುವ ಹಿಂದಿ ಬಿಗ್ ಬಾಸ್ ವಿಶೇಷ ಗಮನ ಸೆಳೆಯುತ್ತಿದೆ. ಟಿವಿಯಲ್ಲಿ ಪ್ರಸಾರವಾಗುವ ಜೊತೆಗೆ ಒಟಿಟಿಯಲ್ಲೂ ಹಿಂದಿ ಬಿಗ್ ಬಾಸ್ ಪ್ರಸಾರವಾಗಲಿದೆ. ಟಿವಿಯಲ್ಲಿ ಪ್ರಸಾರವಾಗುವುದಕ್ಕೂ ಮುಂಚೆ ಒಟಿಟಿಯಲ್ಲಿ ಆರು ವಾರಗಳ ಮೊದಲೇ ಪ್ರಸಾರವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟಿಟಿ ಬಿಗ್ ಬಾಸ್ ಸಂಚಿಕೆಯನ್ನು ಕರಣ್ ಜೋಹರ್ ನಿರೂಪಣೆ ಮಾಡಲಿದ್ದು, ಟಿವಿ ಸಂಚಿಕೆಗಳನ್ನು ಸಲ್ಮಾನ್ ಖಾನ್ ಮುಂದುವರಿಸಲಿದ್ದಾರೆ.

  ಹಿಂದಿ ಬಿಗ್ ಬಾಸ್ ಒಟಿಟಿಯ ಹೊಸ ಪ್ರೋಮೋ ಮಂಗಳವಾರ (ಆಗಸ್ಟ್ 3) ಬಿಡುಗಡೆಯಾಗಿದ್ದು, 15ನೇ ಆವೃತ್ತಿ ಸಖತ್ ಬೋಲ್ಡ್ ಹಾಗೂ ಹಾಟ್ ಆಗಿರಲಿದೆ ಎಂದು ಸುಳಿವು ಸಿಕ್ಕಿದೆ. ಈ ಪ್ರೋಮೋ ನೋಡಿದ್ಮೇಲೆ ಈ ಸಲ ಬಿಗ್ ಬಾಸ್ ಸಾಮಾನ್ಯ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡಬಹುದು. ಈ ಶೋ ವಯಸ್ಕರಿಗಾಗಿ ಮಾಡಿರುವುದು ಎನ್ನುವುದು ಗೊತ್ತಾಗುತ್ತಿದೆ. ಇಲ್ಲಿ ಸ್ಪರ್ಧಿಗಳು ಬೆತ್ತಲಾಗುತ್ತಾರೆ, ಅರೆನಗ್ನವಾಗಿ ಕಾಣಿಸಿಕೊಳ್ಳುತ್ತಾರೆ. ಇದನ್ನು ಸ್ವತಃ ಕರಣ್ ಜೋಹರ್ ಅವರೇ ಹೇಳಿದ್ದಾರೆ.

  ಬಿಗ್ ಬಾಸ್ ಒಟಿಟಿ ಸಖತ್ ಹಾಟ್: ಮಕ್ಳು ನೋಡೋಕೆ ಆಗಲ್ಲ, ವಯಸ್ಕರೇ ಟಾರ್ಗೆಟ್ಬಿಗ್ ಬಾಸ್ ಒಟಿಟಿ ಸಖತ್ ಹಾಟ್: ಮಕ್ಳು ನೋಡೋಕೆ ಆಗಲ್ಲ, ವಯಸ್ಕರೇ ಟಾರ್ಗೆಟ್

  ಇಂಥ ಬಿಗ್ ಬಾಸ್ ನಲ್ಲಿ ಈ ಬಾರಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಬಿಗ್ ಬಾಸ್ ಗೆ ಆಯ್ಕೆ ಮಾಡಲು ಸುದ್ದಿಯಲ್ಲಿರುವ ಸೆಲೆಬ್ರಿಟಿಗಳಿಗೆ ಮೊದಲು ಆದ್ಯತೆಯಾಗಿರುತ್ತದೆ. ಸದ್ಯ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಸದ್ಯ ಭಾವ ರಾಜ್ ಕುಂದ್ರ ಬಂಧನದಿಂದ ಸುದ್ದಿಯಲ್ಲಿದ್ದಾರೆ. ಶಮಿತಾಗೆ ಮಣೆ ಹಾಕಿರುವ ಬಿಗ್ ಬಾಸ್ ಈಗಾಗಲೇ ಶಮಿತಾ ಶೆಟ್ಟಿ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ವಿಶೇಷ ಪವರ್ ಮೂಲಕ ಶಮಿತಾ ಶೆಟ್ಟಿ ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ.

  ಬಾಲಿವುಡ್ ನ ಮತ್ತೋರ್ವ ಖ್ಯಾತ ನಟಿ ಮಲ್ಲಿಕಾ ಶರಾವತ್ ಅವರನ್ನು ಬಿಗ್ ಬಾಸ್ ತಂಡ ಸಂಪರ್ಕ ಮಾಡಿದೆ ಎನ್ನುವ ಸುದ್ದಿ ಇದೆ. ಆದರೆ ಮಲ್ಲಿಕಾ ಬಿಗ್ ಬಾಸ್ ಗೆ ಬರಲು ನಿರಾಕರಿಸಿದ್ದಾರೆ. ಬಿಗ್ ಬಾಸ್ 13ರ ಸಂಚಿಕೆಯ ವಾರಾಂತ್ಯದ ವಿಶೇಷದಲ್ಲಿ ಮಲ್ಲಿಕಾ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.

  ಅಂದಹಾಗೆ ಶಮಿತಾ ಶೆಟ್ಟಿ ಈಗಾಗಲೇ ಬಿಗ್ ಬಾಸ್ 9ರ ಭಾಗವಾಗಿದ್ದರು. ಆದರೆ ಈ ಬಾರಿ ಒಟಿಟಿಯಲ್ಲಿ ಬರುವ ಬಿಗ್ ಬಾಸ್ ಗೆ ಮತ್ತೆ ಎಂಟ್ರಿ ಕೊಡುತ್ತಿರುವುದು ವಿಶೇಷ. ಅಂದಹಾಗೆ ರಾಜ್ ಕುಂದ್ರ ಬಂಧನದಿಂದ ಶಿಲ್ಪಾ ಶೆಟ್ಟಿ ತುಂಬಾ ಮುಜುಗರ ಅನುಭವಿಸುವಂತಾಗಿದೆ. ಹಾಗಾಗಿ ಶಿಲ್ಪಾ ಸಹೋದರಿ ಶಮಿತಾ ಕೂಡ ಭಾವನ ಬಂಧನದಿಂದ ಮುಜುಗರಕ್ಕೀಡಾಗಿದ್ದಾರೆ. ಶಮಿತಾರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಹೀಗಿರುವಾಗ ಶಮಿತಾ ಬಿಗ್ ಬಾಸ್ ಗೆ ಬರ್ತಾರಾ ಎನ್ನುವುದು ಅನುಮಾನ ಮೂಡಿಸಿದೆ.

  ಇನ್ನು ಉಳಿದಂತೆ ಈ ಬಾರಿ ಬಿಗ್ ಬಾಸ್ ನಲ್ಲಿ ರಿಧಿಮಾ ಪಂಡಿತ್, ದಿವ್ಯಾ ಅಗರ್ ವಾಲ್, ಅಕ್ಷರ ಸಿಂಗ್, ಮುಸ್ಕಾನ್ ಜಟ್ಟಾನ, ಉರ್ಫಿ ಜಾವೇದ್, ಜೀಶನ್ ಖಾನ್ ಹೆಸರುಗಳು ಬಲವಾಗಿ ಕೇಳಿಬರುತ್ತಿದೆ. ಈ ಬಾರಿಯ ಒಟಿಟಿ ಬಿಗ್ ಬಾಸ್ ಸಖತ್ ಹಾಟ್ ಆಗಿ ಇರಲಿದೆ ಎಂದು ಕರಣ್ ಜೋಹರ್ ಹೇಳಿರುವುದರಿಂದ ಹೇಗಿರಲಿದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆಮಾಡಿದೆ.

  ಒಟಿಟಿ ಬಿಗ್ ಬಾಸ್ ಬಗ್ಗೆ ಕರಣ್ ಜೋಹರ್ ಮಾತನಾಡಿ, ''ಬಿಗ್ ಬಾಸ್‌ ಕಾರ್ಯಕ್ರಮದ ಅಭಿಯಾನಿಯಾಗಿ ನಾನು ಸಹ ತುಂಬಾ ಉತ್ಸುಕನಾಗಿದ್ದೇನೆ. ಬಿಗ್ ಬಾಸ್ ಒಟಿಟಿ ಪರಿಚಯ ಮಾಡ್ತಿರುವ ಹೊಸ ಅಂಶಗಳ ಬಗ್ಗೆ ನನಗೆ ಹೆಚ್ಚು ಖುಷಿ ಇದೆ. ಇಲ್ಲಿ ಸ್ಪರ್ಧಿಗಳಿಗೆ ಪ್ರೇಕ್ಷಕರು ಶಿಕ್ಷೆ ಕೊಡಬಹುದು. ಯಾವ ರೀತಿ ಶಿಕ್ಷೆಯನ್ನು ಕೊಡ್ತಾರೆ ಎನ್ನುವುದನ್ನು ತಿಳಿಯಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ'' ಎಂದು ಹೇಳಿದ್ದರು.

  English summary
  Bigg Boss OTT: Shilpa Shetty Sister Shamita Shetty To Enter Karan Johar's Show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X