»   » ಎಡವಟ್ಟಿನ ಮೇಲೆ ಎಡವಟ್ಟು ಮಾಡಿದ ಕ್ಯಾಪ್ಟನ್ ಸಮೀರಾಚಾರ್ಯ.!

ಎಡವಟ್ಟಿನ ಮೇಲೆ ಎಡವಟ್ಟು ಮಾಡಿದ ಕ್ಯಾಪ್ಟನ್ ಸಮೀರಾಚಾರ್ಯ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸಮೀರ್ ಆಚಾರ್ಯಗೆ ಶಿಕ್ಷೆ ಆದದ್ಯಾಕೆ? | Filmibeat Kannada

'ಬಿಗ್ ಬಾಸ್' ಮನೆಯಲ್ಲಿ ಈ ವಾರ ಸಮೀರಾಚಾರ್ಯ ಕ್ಯಾಪ್ಟನ್ ಆಗಿ ಆಯ್ಕೆ ಆದಾಗಿನಿಂದಲೂ ಒಂದಲ್ಲ ಒಂದು ರೀತಿಯ ಎಡವಟ್ಟು ಮಾಡ್ತಾನೆ ಇದ್ದಾರೆ.

ನಿನ್ನೆಯ (ಶುಕ್ರವಾರ) ಎಪಿಸೋಡ್ ನಲ್ಲಂತೂ ಸಮೀರ್ ಅವರು ಪದೇ ಪದೇ ಗೊಂದಲಕ್ಕೀಡಾದರು. ಇದರಿಂದ ಮನೆಯ ಸದಸ್ಯರಿಗೂ ಕಿರಿಕಿರಿಯಾಗಿದ್ದಲ್ಲದೇ, ಮನಸ್ತಾಪ ಕೂಡ ಉಂಟಾಯಿತು.

ಮನೆಯ ಕ್ಯಾಪ್ಟನ್ ಸಮೀರಾಚಾರ್ಯ ಅವರು ಮಾಡಿದ ತಪ್ಪಿಗೆ 'ಬಿಗ್ ಬಾಸ್' ಕೂಡ ಶಿಕ್ಷೆ ಕೊಟ್ಟರು. ಹಾಗಿದ್ರೆ, ಸಮೀರಾಚಾರ್ಯ ಮಾಡಿದ ಎಡವಟ್ಟೇನು? ಮುಂದೆ ಓದಿ......

ಉತ್ತಮ ಪ್ರದರ್ಶನ ಆಯ್ಕೆಯಲ್ಲಿ ಗೊಂದಲ!

ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಅಂತ್ಯವಾಗಿದ್ದು, ಈ ವಾರದ ಉತ್ತಮ ಪ್ರದರ್ಶನ ಮತ್ತು ಕಳಪೆ ಪ್ರದರ್ಶನ ಆಯ್ಕೆ ಮಾಡಬೇಕಿತ್ತು. ಈ ವೇಳೆ ಮನೆಯ ಕ್ಯಾಪ್ಟನ್ ಸಮೀರ್ ಅವರು ತಪ್ಪು ಆಯ್ಕೆ ಮಾಡಿದರು.

ಮೊದಲು ಅನುಪಮ ಅಂದ್ರು

ಉತ್ತಮ ಪ್ರದರ್ಶನ ನೀಡಿದ್ದು ಅನುಪಮ ಗೌಡ ಅವರು ಎಂದು ಮನೆಯ ನಾಯಕ ಸಮೀರ್ ಅವರು ಘೋಷಿಸಿದರು. ಅದಕ್ಕೆ ಸೂಕ್ತ ಕಾರಣವೂ ಕೊಟ್ಟರು. ಆದ್ರೆ, ಅದನ್ನ ಮತ್ತೆ ಬದಲಾಯಿಸಿದರು.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಎರಡನೇ ಸಲ ಚಂದನ್ ಶೆಟ್ಟಿ ಅಂದ್ರು

ಅನುಪಮಾ ಗೌಡ ಅವರನ್ನ ಉತ್ತಮ ಪ್ರದರ್ಶನ ಎಂದು ಆಯ್ಕೆ ಮಾಡಿದ್ದಕ್ಕೆ ದಿವಾಕರ್, ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಚಂದನ್ ಶೆಟ್ಟಿ ಈ ವಾರದ ಬೆಸ್ಟ್ ಫರ್ಫಾಮರ್ ಎಂದರು. ನಂತರ ಕ್ಯಾಪ್ಟನ್ ಸಮೀರ್ ಅವರು ಅನುಪಮ ಬದಲು ಚಂದನ್ ಗೆ ಉತ್ತಮ ಪ್ರದರ್ಶಕ ಎಂದು ಆಯ್ಕೆ ಮಾಡಿದರು.

'ಬಿಗ್ ಬಾಸ್' ಮನೆಯಿಂದ ಹೊರ ಬರುತ್ತಿದ್ದಂತೆಯೇ ಚಂದನ್ ಮದುವೆ.!

ಕಳಪೆ ಪ್ರದರ್ಶನದಲ್ಲೂ ಯಡವಟ್ಟು

ಇನ್ನು ಕಳಪೆ ಪ್ರದರ್ಶನ ನೀಡಿದವರನ್ನ ಆಯ್ಕೆ ಮಾಡಿದ ಸಮೀರ್ ಅವರು ಮೊದಲು ಸಿಹಿ ಕಹಿ ಚಂದ್ರು ಅವರನ್ನ ಸೂಚಿಸಿದರು. ಆದ್ರೆ, ಅವರ ಆಯ್ಕೆಗೆ ಕೊಟ್ಟ ಕಾರಣವನ್ನ ಯಾರೂ ಒಪ್ಪಲಿಲ್ಲ.

'ಬಿಗ್ ಬಾಸ್' ಮನೆಯಲ್ಲಿ ಆದ ಎಡವಟ್ಟಿಗೆ ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು

ಎರಡನೇ ಆಯ್ಕೆ ಜಯಶ್ರೀನಿವಾಸನ್

ಮತ್ತೆ ಎರಡನೇ ಹೆಸರನ್ನ ಸೂಚಿಸಿದ ಸಮೀರಾಚಾರ್ಯ ಅವರು ಜಯಶ್ರೀನಿವಾಸನ್ ಅವರನ್ನ ಆಯ್ಕೆ ಮಾಡಿಕೊಂಡರು.

'ದೊಡ್ಮನೆ'ಯ 'ಹೆಬ್ಬುಲಿ' ಜಯಶ್ರೀನಿವಾಸನ್ ಡೈಲಾಗ್ ಗಳು ಒಂದಾ ಎರಡಾ.. ಅಬ್ಬಬ್ಬಾ.!

ಬಹುಮಾನ ನೀಡುವಲ್ಲಿ ತಪ್ಪು

ಈ ವಾರ ಉತ್ತಮ ಪ್ರದರ್ಶನ ನೀಡಿದವರಿಗೆ ಮೂರು ಐಸ್ ಕ್ರೀಮ್ ಕಳುಹಿಸಲಾಗಿತ್ತು. ಆದ್ರೆ, ಅದನ್ನ ತಪ್ಪಾಗಿ ಅರ್ಥೈಸಿಕೊಂಡ ಸಮೀರ್ ಅವರು, ಮೂರು ಐಸ್ ಕ್ರೀಮ್ ನ್ನ ಮೂರು ಜನ ಉತ್ತಮ ಪ್ರದರ್ಶಕರಿಗೆ ಎಂದು ತಿಳಿದುಕೊಂಡು ನೀಡಿದರು. ನಂತರ ಅದು ತಪ್ಪು ಎಂದು ಇತರೆ ಸದಸ್ಯರು ತಿಳಿ ಹೇಳಿದರು.

'ಬಿಗ್ ಬಾಸ್' ಕೊಟ್ಟ ಶಿಕ್ಷೆ.!

ಉತ್ತಮ ಪ್ರದರ್ಶನ ನೀಡಿದವರಿಗೆ ನೀಡಿದ ಐಸ್ ಕ್ರೀಮ್ ನ್ನ ಸಮರ್ಪಕವಾಗಿ ನೀಡುವಲ್ಲಿ ಕ್ಯಾಪ್ಟನ್ ತಪ್ಪು ಮಾಡಿದ್ದರಿಂದ ಬಿಗ್ ಬಾಸ್ ಶಿಕ್ಷೆ ಕೊಟ್ಟರು. ''ಬಿಗ್ ಬಾಸ್ ನೀಡಿದ ಆದೇಶವನ್ನ ನಾನು ಪಾಲಿಸದೆ ತಪ್ಪು ಮಾಡಿದ್ದೇನೆ'' ಎಂದು 100 ಸಲ ಬೋರ್ಡ್ ಮೇಲೆ ಬರೆಯಬೇಕೆಂದು ಸೂಚಿಸಿದರು.

'ಬಿಗ್' ಶಾಕ್: 'ಪುಟ್ಟಗೌರಿ' ಮುಂದೆ 'ಬಿಗ್ ಬಾಸ್' ಆಟ ನಡೆಯಲಿಲ್ಲ.!

English summary
Bigg Boss Kannada 5: Bigg Boss Punished Captain sameer acharya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X